CRPF (ಸೆಂಟ್ರಲ್ರಿಸರ್ವ್ಪೊಲೀಸ್ಫೋರ್ಸ್) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಿ ಆರ್ ಪಿ ಎಫ್ ನೇಮಕಾತಿ 2022 (CRPF Recruitment 2022) ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (CRPF) ನ ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ನಡೆಯಲಿದ್ದು,ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 21700 ರಿಂದ ರೂ. 69100 ವೇತನ ನೀಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೇ, ಅಭ್ಯರ್ಥಿಯು ಛತ್ತೀಸ್ಗಢದ ಸ್ಥಳೀಯ ಭಾಷೆಯನ್ನು ಬರೆಯುವ ಅಥವಾ ಮಾತನಾಡುವ ಜ್ಞಾನ ಹೊಂದಿರಬೇಕು. ಒಟ್ಟು 400 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಕೃತ ವೆಬ್‌ಸೈಟ್ crpf.gov.inಮೂಲಕ ಅರ್ಜಿ ಸಲ್ಲಿಸಬಹುದು.









Got a Questions?
Find us on Socials or Contact Us and we’ll get back to you as soon as possible.