ಕ್ಯಾಡ್‌ನೆಸ್ಟ್‌ನಿಂದ ಹತ್ತು ದಿನಗಳ ಉದ್ಯೋಗಾಧರಿತ ಕೋರ್ಸ್‌ಗಳ ಉಚಿತ ಕಲಿಕೆಗೆ ಅವಕಾಶ, ಈಗಲೇ ಜಾಯಿನ್ ಆಗಿ

By | 22/06/2021

ಕೋವಿಡ್‌-೧೯ ಅನ್‌ಲಾಕ್‌ ಬಳಿಕ ಇದೇ ಮೊದಲ ಬಾರಿಗೆ ಹತ್ತು ದಿನಗಳ ವಿಶೇಷ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಆರಂಭಿಸಿದೆ. ಈ ಅವಧಿಯಲ್ಲಿ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಮತ್ತು ಇತರರು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು.

ಯಾವೆಲ್ಲ ಕೋರ್ಸ್‌ಗಳು ಉಚಿತ

ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌, ಟ್ಯಾಲಿ ಪ್ರೈಮ್‌, ಆಟೋಕ್ಯಾಡ್‌ ಮೆಕ್ಯಾನಿಕಲ್‌ ಈ ನಾಲ್ಕು ಕೋರ್ಸ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಇವುಗಳಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌ ಮತ್ತು ಟ್ಯಾಲಿ ಪ್ರೈಮ್‌ ಕೋರ್ಸ್‌ಗಳು ಪ್ರತಿದಿನ ಎರಡು ಸೆಸನ್‌ ಇರುತ್ತದೆ. ಆಟೋಕ್ಯಾಡ್‌ ಕೋರ್ಸ್ ದಿನಕ್ಕೆ ಒಂದುಗಂಟೆ ಇರುತ್ತದೆ ಎಂದು ಕ್ಯಾಡ್‌ನೆಸ್ಟ್‌ ಸ್ಥಾಪಕರಾದ ಪ್ರಕಾಶ್‌ ಗೌಡ ಮಾಹಿತಿ ನೀಡಿದ್ದಾರೆ.

ಕೋವಿಡ್‌ ಅನ್‌ಲಾಕ್‌ ಬಳಿಕ ನಾವು ಈಗಾಗಲೇ ಆನ್‌ಲೈನ್‌ ಕ್ಲಾಸ್‌ ಆರಂಭಿಸಿದೆವು. ಸಾಕಷ್ಟು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಇದರ ಯಶಸ್ಸಿನ ಖುಷಿಗೆ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುವ ಯೋಜನೆ ಮಾಡಿದೆವು. ಇದರಿಂದ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಯೋಜವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಉಚಿತ ಕ್ಲಾಸ್‌ಗೆ ನೋಂದಣಿ ಹೇಗೆ?

ಆಸಕ್ತ ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌ನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ ಕಚೇರಿಗಳನ್ನು ಸಂಪರ್ಕಿಸಬಹುದು. ಆನ್‌ಲೈನ್‌ ಕ್ಲಾಸ್‌ನಲ್ಲಿ ರಾಜ್ಯದ ಯಾವುದೇ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

CADD NEST RAJAJINAGAR 9740444363
CADD NEST BASAVANAGUDI 9972177744
CADD NEST SHESHADRIPURAM 9535666300
CADD NEST MALLESWARAM 9606666480
Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Leave a Reply

Your email address will not be published. Required fields are marked *