Category Archives: ವ್ಯಕ್ತಿತ್ವ ವಿಕಸನ

ಕರಿಯರ್ ಆಗಿ ಪರಿವರ್ತಿಸಬಹುದಾದ 7 ಹವ್ಯಾಸಗಳು

By | 08/09/2018

ಬಿಡುವಿನ ವೇಳೆಯಲ್ಲಿ ಅಥವಾ ಸಮಯ ಕಳೆಯಲೆಂದು ಆರಂಭಿಸಿದ ನಮ್ಮ ಹವ್ಯಾಸವೇ ಕರಿಯರ್ ಆಗಿ ಬದಲಾದರೆ ಜೀವನಪೂರ್ತಿ ಹವ್ಯಾಸದೊಂದಿಗೆ ವೃತ್ತಿ ಜೀವನ ನಡೆಸಬಹುದು. ಎಲ್ಲಾ ಹವ್ಯಾಸಗಳು ಈಗಿನ ದುಬಾರಿ ಜಗತ್ತಿನಲ್ಲಿ ಹೊಟ್ಟೆ ತುಂಬಿಸಲು ಸಾಕಾಗದು. ಆದರೆ, ಕೆಲವು ಹವ್ಯಾಸಗಳನ್ನು ಸಮರ್ಥ ಕರಿಯರ್ ಆಗಿ ಪರಿವರ್ತಿಸಿಕೊಂಡರೆ ಕೈತುಂಬಾ ಹಣ ಸಂಪಾದಿಸಬಹುದು. ಕ್ರೀಡೆ ದಿನ ಶಾಲೆ, ಕಾಲೇಜು ಮುಗಿಸಿ ಬಂದು ಕ್ರಿಕೆಟ್ ಆಡಲು ಓಡುವವರು ಅಥವಾ ಶಾಲಾ ಕಾಲೇಜುಗಳಲ್ಲಿಯೇ ಕ್ರಿಕೆಟ್ ಆಡುವವರು ನೀವಾಗಿರಬಹುದು. ಇದೇ ರೀತಿ ಹಾಕಿ, ಫುಟ್ಬಾಲ್ ಆಟಗಾರರೂ ಆಗಿರಬಹುದು. ಕ್ರೀಡೆಯನ್ನು ಕರಿಯರ್ ಆಗಿ… Read More »

ವ್ಯಕ್ತಿತ್ವ ವಿಕಸನ: ಬಾಯಿ ಸುಮ್ಮನಿದ್ದರೂ, ದೇಹ ಸುಮ್ಮನಿರುವುದಿಲ್ಲ!

By | 01/09/2018

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ಮಾತನ್ನು ಚಾಚುತಪ್ಪದೆ ಪಾಲಿಸುವವರು ನೀವಾಗಿರಬಹುದು. ಮಾತನಾಡುವಾಗ ಎಚ್ಚರಿಕೆ ವಹಿಸಲು ಕಲಿತಿದ್ದೀರಿ. ಅತ್ಯುತ್ತಮ ಸಂವಹನ ಕೌಶಲಗಳನ್ನು ಅನುಸರಿಸುತ್ತಿದ್ದೀರಿ. ಆದರೆ, ಇದನ್ನು ಕೇವಲ ಮೌಖಿಕ ಸಂವಹನಕ್ಕೆ ಸೀಮಿತಗೊಳಿಸಬೇಡಿ. ನೀವು ಆಡದೆ ಇದ್ದರೂ, ನಿಮ್ಮ ಆಂಗಿಕ ಭಾಷೆಯು ಮಾತನಾಡಬಹುದು. ಹೀಗಾಗಿ ಅಮೌಖಿಕ ಸಂವಹನದತ್ತಲೂ ಗಮನಹರಿಸಿರಿ. ವಿದ್ಯಾರ್ಥಿಗಳು ಕಾಲೇಜಿನಲ್ಲಿ, ಅಭ್ಯರ್ಥಿಗಳು ಉದ್ಯೋಗ ಸಂದರ್ಶನದಲ್ಲಿ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೌಖಿಕ ಸಂವಹನದಷ್ಟೇ ಅಮೌಖಿಕ ಸಂವಹನದ ಕುರಿತೂ ಗಮನ ನೀಡಬೇಕು. ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಬಾರದೇ.. ಒಂದು ಅಧ್ಯಯನದ ಪ್ರಕಾರ… Read More »