ವ್ಯಕ್ತಿತ್ವ ವಿಕಸನ: ಬಾಯಿ ಸುಮ್ಮನಿದ್ದರೂ, ದೇಹ ಸುಮ್ಮನಿರುವುದಿಲ್ಲ!

Non Verbal Communication Tips

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ಮಾತನ್ನು ಚಾಚುತಪ್ಪದೆ ಪಾಲಿಸುವವರು ನೀವಾಗಿರಬಹುದು. ಮಾತನಾಡುವಾಗ ಎಚ್ಚರಿಕೆ ವಹಿಸಲು ಕಲಿತಿದ್ದೀರಿ. ಅತ್ಯುತ್ತಮ ಸಂವಹನ ಕೌಶಲಗಳನ್ನು ಅನುಸರಿಸುತ್ತಿದ್ದೀರಿ. ಆದರೆ, ಇದನ್ನು ಕೇವಲ ಮೌಖಿಕ ಸಂವಹನಕ್ಕೆ ಸೀಮಿತಗೊಳಿಸಬೇಡಿ. ನೀವು ಆಡದೆ ಇದ್ದರೂ, ನಿಮ್ಮ ಆಂಗಿಕ ಭಾಷೆಯು ಮಾತನಾಡಬಹುದು. ಹೀಗಾಗಿ ಅಮೌಖಿಕ ಸಂವಹನದತ್ತಲೂ ಗಮನಹರಿಸಿರಿ.

ವಿದ್ಯಾರ್ಥಿಗಳು ಕಾಲೇಜಿನಲ್ಲಿ, ಅಭ್ಯರ್ಥಿಗಳು ಉದ್ಯೋಗ ಸಂದರ್ಶನದಲ್ಲಿ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೌಖಿಕ ಸಂವಹನದಷ್ಟೇ ಅಮೌಖಿಕ ಸಂವಹನದ ಕುರಿತೂ ಗಮನ ನೀಡಬೇಕು.

ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಬಾರದೇ..

ಒಂದು ಅಧ್ಯಯನದ ಪ್ರಕಾರ ಸಂವಹನದಲ್ಲಿ ಶೇಕಡ 43.4ರಷ್ಟು ಜನರು ಮಾತ್ರ ಐ ಕಾಂಟ್ಯಾಕ್ಟ್ ಅಥವಾ ಕಣ್ಣಲ್ಲಿ ಕಣ್ಣಿಟ್ಟು ಸಂವಹನ ನಡಸುತ್ತಾರೆ. ಉಳಿದವರು ಮಾತನಾಡುವಾಗ ಅವರ ದೃಷ್ಟಿ ಬೇರೆಲ್ಲೋ ಇರುತ್ತದೆ.
ಟಿಪ್ಸ್: ನೀವು ಯಾರೊಂದಿಗೆ ಮಾತನಾಡುವಾಗಲೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ. ಕಣ್ಣು ತಪ್ಪಿಸಿ ಮಾತನಾಡಬೇಡಿ.

ಹತ್ತಿರ, ಇನ್ನೂ ಹತ್ತಿರ ಬಾ!

ನಿಮ್ಮಲ್ಲಿ ನಿಮ್ಮ ಬಾಸ್ ಅಥವಾ ಇನ್ಯಾರಾದರೂ ಮಾತನಾಡುವಾಗ ಅವಶ್ಯಕತೆಗಿಂತ ಹೆಚ್ಚು ಅಂತರ ಕಾಯ್ದುಕೊಳ್ಳಬೇಡಿ. ಹಲವು ಅಧ್ಯಯನಗಳ ಪ್ರಕಾರ ಹತ್ತಿರ ನಿಂತುಕೊಳ್ಳುವುದು ಮತ್ತು ಎದುರು ಇರುವ ವ್ಯಕ್ತಿಯತ್ತ ಕೊಂಚ ಬಾಗುವುದರಿಂದ ಸಾಮೀಪ್ಯ ಮತ್ತು ಆತ್ಮೀಯತೆ ಹೆಚ್ಚುತ್ತದೆ.
ಟಿಪ್ಸ್: ನೀವು ಯಾರ ಜೊತೆಯಾದರೂ ಮಾತನಾಡುವಾಗ ಅವರ ಹತ್ತಿರದಲ್ಲಿ ಇರಿ. ಗಮನವಿಟ್ಟು ಕೇಳುವಿರಿ ಎನ್ನುವುದನ್ನು ತಿಳಿಸಲು ಕೊಂಚ ಬಾಗಿರಿ.

ಬಳ್ಳಿಯಂತೆ ಬಳುಕದಿರಿ

ಕೆಲವರು ಮಾತನಾಡಲು ನಿಂತಾಗ ದೇಹದಲ್ಲಿ ಎಲುಬು ಇಲ್ಲದಂತೆ ಕುಗ್ಗಿ ನಿಂತುಕೊಳ್ಳುತ್ತಾರೆ. ಇದು ಸಹ ಅತ್ಯುತ್ತಮ ವಿಧಾನವಲ್ಲ. ಸೈಕೊಲಜಿಕಲ್ ಸೈನ್ಸ್ ಅಸೋಸಿಯೇಷನ್ನತ ಅಧ್ಯಯನದ ಪ್ರಕಾರ ಪ್ರತಿದಿನ ದೃಢವಾಗಿ ನಿಲ್ಲುವ ಮೂಲಕ ದೇಹದ ಟೆಸ್ಟೋಸ್ಟೆರೊನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ವ್ಯಕ್ತಿಗಳಲ್ಲಿ ಭರವಸೆ ಹೆಚ್ಚುತ್ತದೆ.
ಟಿಪ್ಸ್: ಪ್ರತಿದಿನ ಸೊಂಟದ ಮೇಲೆ ಎರಡು ಕೈಯಿಟ್ಟು ದೃಢವಾಗಿ ನಿಲ್ಲುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಹೌದು ಬಸವ ಹೌದು, ಅಲ್ಲ ಬಸವ ಅಲ್ಲ

ಮಾಲಿಕನ ಅಣತಿಗೆ ತಕ್ಕಂತೆ ತಲೆ ಅಲ್ಲಾಡಿಸುವ ಬಸವನ ಬಗ್ಗೆ ನಿಮಗೆ ಗೊತ್ತಿರಬಹುದು. ಇದೇ ರೀತಿ ವ್ಯಕ್ತಿಯೊಬ್ಬರು ಮಾತನಾಡುವಾಗ ನೀವು ಅವಶ್ಯಕತೆ ಇಲ್ಲದ ಸಮಯದಲ್ಲಿಯೂ ತಲೆ ಅಲ್ಲಾಡಿಸುತ್ತಾ ಇರಬೇಡಿ. ನಿಮಗೆ ಸಮ್ಮತಿ ಇಲ್ಲದ ವಿಷಯಕ್ಕೆ `ಆಗದು’ ಎಂದು ತಲೆ ಅಲ್ಲಾಡಿಸಲು ಮರೆಯಬೇಡಿ.
ಟಿಪ್ಸ್: ಮುಕ್ತ ಮನಸ್ಸಿನಿಂದ ಇರಿ. ನೀವು ಒಪ್ಪುವ ವಿಷಯಕ್ಕೆ ಮಾತ್ರ ತಲೆಯಲ್ಲಾಡಿಸಿ.

ಅಂಟೆನ್ಷನ್! ನೇರವಾಗಿ ನಿಲ್ಲಿ

ತೋಳುಗಳನ್ನು ಬಾಗಿಸಿಕೊಂಡು ಸತ್ವವಿಲ್ಲದಂತೆ ನಿಲ್ಲುವುದು ಸೂಕ್ತವಲ್ಲ. ಈ ರೀತಿ ನೇರವಾಗಿ ನಿಲ್ಲದೆ ಇದ್ದರೆ ನೀವು ಅಭದ್ರತೆಯಿಂದ ಇರುವಂತೆ ಮತ್ತು ಸಾಮರ್ಥ್ಯ ಹೊಂದಿಲ್ಲದೆ ಇರುವಂತೆ ಎದುರಿನಲ್ಲಿರುವವರಿಗೆ ಭಾಸವಾಗುತ್ತದೆ.
ಟಿಪ್ಸ್: ತೋಳುಗಳನ್ನು ಮುಂದಿಟ್ಟುಕೊಂಡು, ಬೆನ್ನು ಬಾಗಿಸದೆ ನೇರವಾಗಿ ನಿಲ್ಲಿ.

ಕೈಗಳು ಸುಮ್ಮನಿರಲು ಬಿಡಬೇಡಿ

ಮಾತಿಗೆ ತಕ್ಕಂತೆ ಕೈಗಳಲ್ಲಿ ಸಂಜ್ಞೆ ಮಾಡುವವರ ಸಂವಹನವು ಹೆಚ್ಚು ಆತ್ಮೀಯತೆಯಿಂದ, ಒಪ್ಪತಕ್ಕಂತೆ ಮತ್ತು ಶಕ್ತಿಯುತವಾಗಿ ಇರುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಟಿಪ್ಸ್: ನಿಮ್ಮ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ, ಭಾಷಣ ಮಾಡುವಾಗ ನೀವು ಹೇಳುವ ಅಂಶದ ಕುರಿತು ಹೆಚ್ಚು ಒತ್ತು ನೀಡಲು ಕೈಗಳಲ್ಲಿ ಸಂಜ್ಞೆ ಮಾಡಿರಿ.

ನಗು ನಗುತ್ತಾ…

ಸಂವಹನ ಸಮಯದಲ್ಲಿ ಮುಗುಳ್ನಗೆಯು ನಿಮ್ಮನ್ನು ಹೆಚ್ಚು ಆಕರ್ಷಕವಾಗಿಸುತ್ತದೆ ಮತ್ತು ನಿಮ್ಮ ಸುತ್ತಮುತ್ತಲು ಇರುವವರ ಭಾವನೆಗಳನ್ನು ಉತ್ತಮಗೊಳಿಸುತ್ತದೆ.
ಟಿಪ್ಸ್: ವಿಷಯದ ಗಂಭೀರತೆಗೆ ತಕ್ಕಂತೆ ನಿಮ್ಮ ಮುಖದಲ್ಲಿ ನಗುವಿರಲಿ.

ಉತ್ಸಾಹವಿರಲಿ, ಉಲ್ಲಾಸವಿರಲಿ

ವರ್ಕ್‍ಫೋರ್ಸ್ ಡೆವಲಪ್ಮೆಂಸಟ್ ಅಧ್ಯಯನದ ಪ್ರಕಾರ ಸದಾ ಉತ್ಸಾಹದಿಂದ ಇರುವವರು ಹೆಚ್ಚು ಗಮನ ಸೆಳೆಯುತ್ತಾರೆ. ನೀವು ನಿವೃತ್ತಿಗೆ ತಲುಪಿದಾಗಲೂ ಆಗಷ್ಟೇ ಕೆಲಸಕ್ಕೆ ಸೇರಿದ ಫ್ರೆಷರ್ಸ್ ರೀತಿ ಉತ್ಸಾಹದಿಂದ ಇರಿ. ಉಡುಗೆತೊಡುಗೆ, ಬಾಡಿ ಸ್ಪ್ರೇ ಇತ್ಯಾದಿಗಳತ್ತವೂ ಗಮನ ನೀಡಿ.
ಟಿಪ್ಸ್: ನೀವು ಬಿಸ್ನೆಸ್ ಪರಿಸ್ಥಿತಿಗೆ ತಕ್ಕಂತೆ ನಿಮ್ಮನ್ನು ನೀವು ಹೇಗೆ ಪ್ರಸೆಂಟ್ ಮಾಡುವಿರಿ ಎನ್ನುವುದರ ಕುರಿತು ಗಮನ ನೀಡಿ.

ಕೈಗಳು ಬದಿಯಲ್ಲಿರಲಿ

ನಿಮ್ಮ ಮಾತಿಗೂ ನೀವು ನಿಂತಿರುವ ಭಂಗಿಗೂ ನೀವು ಕೈ ಇಟ್ಟುಕೊಂಡಿರುವ ರೀತಿಗೂ ಹೊಂದಾಣಿಕೆ ಆಗದೆ ಇದ್ದರೆ ನೀವು ಅ`Àದ್ರತೆಯಲ್ಲಿರುವಂತೆ ಕಾಣಿಸುತ್ತದೆ.
ಟಿಪ್ಸ್: ನಿಮ್ಮ ಪ್ಯಾಂಟ್ ಕಿಸೆಗೆ ಸಮೀಪದಲ್ಲಿ ನೇರವಾಗಿ ನಿಮ್ಮ ಕೈ ಇರಲಿ.

ಊಟ ನಿಮಗಾಗಿ, ಉಡುಗೆ ಇತರರಿಗಾಗಿ

ನೀವು ಧರಿಸುವ ಉಡುಗೆತೊಡುಗೆಯೂ ಅಮೌಖಿಕ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇರುವ ಉಡುಗೆತೊಡುಗೆಯನ್ನು ಇಸ್ತ್ರಿ ಹಾಕಿ ಧರಿಸಿ. ನಿಮ್ಮ ಬಗ್ಗೆ ನೀವು ತೊಟ್ಟ ಉಡುಗೆಯೂ ಒಳ್ಳೆಯ ಅಥವಾ ಕೆಟ್ಟ ಅಭಿಪ್ರಾಯಮೂಡಿಸುತ್ತದೆ.
ಟಿಪ್ಸ್: ನೀವು ದುಡಿದ ಒಂದಿಷ್ಟು ಮೊತ್ತವು ಡ್ರೆಸ್ ಖರೀದಿಗೆ ಇರಲಿ. ಆದಷ್ಟು ನಿಮ್ಮ ವೃತ್ತಿಗೆ ಸೂಕ್ತವಾದ ಬಟ್ಟೆಬರೆ ಖರೀದಿಸಿ.

ಕೈಕುಲುಕುವಾಗ ದೃಢತೆ ಇರಲಿ

ಶೇಕ್ಹ್ಯಾಂ ಡ್ ಮಾಡುವುದೂ ಒಂದು ಕಲೆ. ನೀವು ಯಾವ ರೀತಿ ಶೇಕ್ ಹ್ಯಾಂಡ್ ಮಾಡುವಿರೋ ಅದರ ಮೂಲಕ ನೀವು ದುರ್ಬಲರೋ, ಉನ್ನತ ವ್ಯಕ್ತಿತ್ವದವರೋ, ದೃಢತೆ ಇರುವವರೋ ಎಂದು ತಿಳಿದುಕೊಳ್ಳಬಹುದು.
ಟಿಪ್ಸ್: ಸಮರ್ಪಕವಾಗಿ ಶೇಕ್ಹ್ಯಾಂ ಡ್ ಮಾಡಿ. ಮುಂಗೈಯ ಬೆರಳುಗಳನ್ನು ಮಾತ್ರ ನೀಡಿ ಕೈಕುಲುಕಬೇಡಿ.

ಮುಖಭಾವದ ಕಡೆಗೂ ಗಮನವಿರಲಿ

ನೀವು ಯಾರ ಜೊತೆಯಾದರೂ ಮಾತನಾಡುವ ಮೊದಲು ನಿಮ್ಮ ನಡುವೆ ಸಂವಹನಕ್ಕೆ ಸೂಕ್ತ ವಾತಾವರಣ ಕಲ್ಪಿಸುವಲ್ಲಿ ಮುಖಭಾವ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಮೀಕ್ಷೆಯೊಂದರಲ್ಲಿ ಶೇಕಡ 60ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಸ್: ನೀವು ಯಾವುದಾದರೂ ವಿಷಯದ ಕುರಿತು ಮಾತನಾಡುವಾಗ ಅದಕ್ಕೆ ತಕ್ಕಂತೆ ನಿಮ್ಮ ಮುಖದ ಹಾವಭಾವ ಇರಲಿ.

ಏನಿದು ಅಮೌಖಿಕ ಸಂವಹನ?

ನೀವು ಇತರರ ಜೊತೆಗೆ ಸಂವಹನ ನಡೆಸುವಾಗ, ಅವರ ಮಾತುಗಳನ್ನು ಆಲಿಸುವಾಗ, ಅವರೊಂದಿಗೆ ನಡೆದಾಡುವಾಗ, ಪ್ರತಿಕ್ರಿಯೆ ನೀಡುವಾಗ ನೀವು ಗೊತ್ತಿಲ್ಲದೆ ನಡೆಸುವ ಆಂಗಿಕ ಚಲನೆಯನ್ನು ಅಮೌಖಿಕ ಸಂವಹನ ಎನ್ನಬಹುದು.

ಈ ಅಂಶಗಳ ಕುರಿತು ಗಮನನೀಡಿ

  • ಮುಖಭಾವ ಮನುಷ್ಯರ ಮುಖವು ಹೆಚ್ಚು ಅಭಿವ್ಯಕ್ತಿಯನ್ನು ಹೊಂದಿದೆ. ಯಾವುದೇ `Áವನೆಯೂ ಮುಖದಲ್ಲಿ ವ್ಯಕ್ತವಾಗುತ್ತದೆ. ಮಾತನಾಡುವಾಗ ಇದರ ಗಮನನೀಡಿ.
  • ದೇಹದ ಚಲನೆ: ಬಾಯಿ ಮಾತನಾಡುತ್ತಿರುವಾಗ, ಕೈ, ಕಾಲು ಸೊಂಟ, ತಲೆ ಸುಮ್ಮನಿರುವುದಿಲ್ಲ. ಅವುಗಳು ಅವುಗಳಷ್ಟಕ್ಕೆ ಇನ್ನೆನ್ನಾದರೂ ವರ್ತನೆಯಲ್ಲಿ ತೊಡಗಲು ಕಾಯುತ್ತಿರುತ್ತವೆ. ಅವುಗಳ ಮೇಲೆ ನಿಯಂತ್ರಣ ಇರಲಿ.
  • ಸಂಜ್ಞೆಗಳು: ಉದ್ದೇಶಪೂರ್ವಕವಾಗಿ ಅಲ್ಲದೆಯೂ ನೀವು ಮಾಡಿದ ಸಂಜ್ಞೆಯು ಇತರರಿಗೆ ಬೇರೆ ಅರ್ಥ ಮೂಡಿಸಬಹುದು.
  • ಐ ಕಾಂಟ್ಯಾಕ್ಟ್: ಸಂವಹನದಲ್ಲಿ ನಿಮ್ಮ ಎರಡು ಪುಟ್ಟಕಣ್ಣು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
  • ಧ್ವನಿ- ನೀವು ಮಾತನಾಡುವ ಧ್ವನಿಯ ದೃಢತೆ, ಏರಿಳಿತದ ಕುರಿತೂ ಗಮನ ನೀಡಿ. ಇದು ಸಂವಹನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.

Click Here: Karnataka Best All Personality Development Stories

[amazon_link asins=’0070993602,0199459746,B00I47VVQ8,0007272618,9350261634,B07B2W2WQ1,9350570351,9350571307,9350570955,B00JBJTACU’ template=’ProductGrid’ store=’jobsnewsindia-21′ marketplace=’IN’ link_id=’cda3bf61-add5-11e8-b417-a5e7b0f0937d’]