Category Archives: after sslc what next

2021ರ ಬಹುಬೇಡಿಕೆಯ ಡಿಜಿಸ್ಕಿಲ್: ಯಶಸ್ಸು ನೀಡುವ ಕೋರ್ಸ್ ಕಲಿಯಿರಿ

By | 27/12/2020

ಈ ವರ್ಷ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಸವಾಲಿನ ವರ್ಷ. ಸ್ಟಡಿ ಫ್ರಮ್‍ ಹೋಮ್‍, ಶಾಲೆ, ಕಾಲೇಜಿಗೆ ಹೋಗುವ ಕಷ್ಟವಿಲ್ಲ… ಇತ್ಯಾದಿಗಳು ಒಂದು ರೀತಿಯ ಖುಷಿ ನೀಡಿದ್ದರೂ, ಇದರ ಪರಿಣಾಮ ನಿರೀಕ್ಷೆಗಿಂತ ಭೀಕರವಾಗಿಯೇ ಇದೆ. ಮೊದಲನೆಯದಾಗಿ ಕೋರ್ಸ್‍ಗಳನ್ನು ಮುಗಿಸಿಕೊಂಡು ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈಗಾಗಲೇ ಪರಿಣಿತಿ ಪಡೆದ ಉದ್ಯೋಗಿಗಳ ಜಾಬ್‍ ಕಟ್‍ ಮಾಡಿ ತಣ್ಣಗೆ ಕುಳಿತ ಕಂಪನಿಗಳು ಹೊಸ ಹುಡುಗರನ್ನು ನೇಮಕ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರ ದೊರಕಬೇಕಿದೆ. ಉದ್ಯೋಗ ತಜ್ಞರ ಪ್ರಕಾರ, ಈಗ ಜಗತ್ತು… Read More »

ಅನಿಮೇಷನ್ ಕಲಿಕೆಗೆ ಬಾಲ್ಕ್ ಬೆಂಗಳೂರು ಬೆಸ್ಟ್

By | 19/10/2020

ಈಗ ಇಂಟರ್‌ನೆಟ್‌ ಅತ್ಯಂತ ಪ್ರವರ್ಧಮಾನದಲ್ಲಿರುವುದರಿಂದ ವಿಡಿಯೋ ಗೇಮ್‌, ಸೋಷಿಯಲ್‌ ಮೀಡಿಯಾ ಗೇಮ್‌, ವಿಡಿಯೋ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ಷೇತ್ರದ ವಿಶಾಲ ವ್ಯಾಪ್ತಿ ಮತ್ತು ಕರಿಯರ್‌ ಅವಕಾಶಗಳನ್ನು ಮನಗಂಡು ಈಗಿನ ದಿನಗಳಲ್ಲಿ ಬಹುತೇಕರು ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಯಲು ಆಸಕ್ತಿವಹಿಸುತ್ತಿದ್ದಾರೆ. ಅನಿಮೇಷನ್‌ ವೃತ್ತಿಪರರಿಗೆ ಇರುವ ಅತ್ಯುತ್ತಮ ವೇತನ, ಕರಿಯರ್‌ನಲ್ಲಿ ಪ್ರಗತಿ ಕಾಣುವ ಅವಕಾಶಗಳನ್ನು ಮನಗಂಡು ೨ಡಿ, ೩ಡಿ ಅನಿಮೇಷನ್‌ ಸೇರಿದಂತೆ ವಿವಿಧ ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ. ಒಂದು ನಿರ್ಜೀವ ವಸ್ತುವಿಗೆ ಆಕಾರ ಮತ್ತು ಜೀವ ನೀಡುವ ಮಹೋನ್ನತ ಕಲೆಯನ್ನು ಅನಿಮೇಷನ್‌ ಎನ್ನಬಹುದು. ಮನರಂಜನೆ… Read More »

ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

By | 16/07/2020

ಏನು ಓದಿದರೆ, ಯಾವ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು? ಈಗಿನ ಬೇಡಿಕೆಯ ಉದ್ಯೋಗಗಳು ಯಾವುವು? ಇತ್ಯಾದಿ ಶಿಕ್ಷಣ-ಕರಿಯರ್ ಮಾಹಿತಿಯನ್ನು ಯುವಜನತೆಗೆ ಒದಗಿಸುವ ಸಲುವಾಗಿ ಈ ಡಿಜಿಟಲ್‌ ಕೈಪಿಡಿಯನ್ನು ರಚಿಸಲಾಗಿದೆ. ವಿವಿಧ ಹುದ್ದೆಗಳು, ಶೈಕ್ಷಣಿಕ ಆಯ್ಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲಾಗಿದೆ. ನಿಮ್ಮ ಕರಿಯರ್ ರೂಪಿಸಿಕೊಳ್ಳಲು ವೃತಿಪರ ಸಹಾಯದ ಅಗತ್ಯಬಿದ್ದರೆ ಇಂತಹ ಸೇವೆಯನ್ನು ಒದಗಿಸುವ ಯೋಗ್ಯ, ತಜ್ಞ ವ್ಯಕ್ತಿಗಳಿಂದ ಪಡೆಯಬೇಕು. ಭವಿಷ್ಯ ಬದಲಾಯಿಸಬಹುದು! ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು… Read More »

ಸೈಬರ್ ಸೆಕ್ಯೂರಿಟಿ: ಸೈಬರ್ ಕ್ಷೇತ್ರಕ್ಕೆ ಕಾವಲುಗಾರರಾಗಿ

By | 25/03/2020

ಪ್ರತಿನಿತ್ಯ ಮಾಧ್ಯಮಗಳಲ್ಲಿ ಸೈಬರ್ ಮೋಸಕ್ಕೆ ಈಡಾದವರ ಸುದ್ದಿಗಳು ಹೆಚ್ಚಾಗುತ್ತಿವೆ. ಸೈಬರ್ ವಂಚಕರಿಂದ ಕೆಲವು ಲಕ್ಷಗಳಿಂದ ಹಲವು ಕೋಟಿ ರೂ. ಕಳೆದುಕೊಂಡವರಿದ್ದಾರೆ. ಹೊಸ ತಂತ್ರಜ್ಞಾನಗಳು ಮತ್ತು ಸಂಪರ್ಕ ಸಾಧನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸೈಬರ್ ಅಟ್ಯಾಕ್, ಹ್ಯಾಕಿಂಗ್ ಇತ್ಯಾದಿಗಳು ಹೆಚ್ಚಾಗುತ್ತಿರುವುದರಿಂದ ಈಗ ಸೈಬರ್ ಭದ್ರತಾ ತಜ್ಞರಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೀಗ ಮೊಬೈಲ್‍ನಲ್ಲಿ ಇಂಟರ್‍ನೆಟ್ ಬಳಕೆ ಹೆಚ್ಚುತ್ತಿದೆ. ಸೋಷಿಯಲ್, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟರ್, ಇಂಟರ್‍ನೆಟ್ ಆಫ್ ಥಿಂಗ್ಸ್‍ಗಳ ಬಳಕೆ ಹೆಚ್ಚಿರುವುದರಿಂದ ನೆಟ್‍ವರ್ಕ್ ಸೆಕ್ಯೂರಿಟಿ ಎಂಜಿನಿಯರ್‍ಗಳಿಗೆ ಹೊಸ ಸವಾಲು ಎದುರಾಗಿದೆ. “ಕೆಟ್ಟ ಹುಡುಗನಿಂದ… Read More »

ಕ್ರಿಮಿನಾಲಜಿ ಕಲಿಯಿರಿ, ಕ್ರಿಮಿನಲ್ ಗಳನ್ನು ಹಿಡಿಯಿರಿ

By | 01/03/2020

ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಇದರಿಂದ ಕ್ರಿಮಿನಾಲಜಿ ಓದಿರುವವರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಕ್ರಿಮಿನಾಲಜಿ ಕ್ಷೇತ್ರವು ಸವಾಲಿನಿಂದ ಕೂಡಿದ್ದು, ಆಸಕ್ತಿದಾಯಕ ಉದ್ಯೋಗವೂ ಹೌದು. ಕ್ರಿಮಿನಾಲಜಿ ಎನ್ನುವುದು ವಿಜ್ಞಾನದ ಒಂದು ಶಾಖೆಯಾಗಿದ್ದು ಅಪರಾಧಗಳ ಪತ್ತೆ ಮತ್ತು ಅಪರಾಧಗಳ ತಡೆಗಟ್ಟುವಿಕೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಫೋರೆನ್ಸಿಕ್ ಸೈನ್ಸ್ ಬಗ್ಗೆ ಗೊತ್ತಿರಬಹುದು. ಇದು ಕ್ರಿಮಿನಾಲಜಿಯ ಒಂದು ಭಾಗವಷ್ಟೇ. ಎಸ್‌ ಎಸ್‌ ಎಲ್‌ ಸಿ/ ಪಿಯುಸಿ ಬಳಿಕ ಮುಂದೇನು ಎಂದು ಕೋರ್ಸ್‌ಗಳ ಹುಡುಕಾಟದಲ್ಲಿರುವವರಿಗೆ ಕ್ರಿಮಿನಾಲಜಿ ಅತ್ಯುತ್ತಮ ಆಯ್ಕೆಯಾಗಬಲ್ಲದು ಕ್ರಿಮಿನಾಲಜಿ ಎನ್ನುವುದು ಸಾಕ್ಷ್ಯಾಧಾರಗಳ ವಿಜ್ಞಾನ,… Read More »

ಆ್ಯಪ್ ಡೆವಲಪರ್‌ ಆಗುವುದು ಹೇಗೆ?

By | 01/12/2019

ಇಂದು ಸ್ಮಾರ್ಟ್‍ಫೋನ್ ಎಲ್ಲರಿಗೂ ಅನಿವಾರ್ಯ ಸಾಧನವಾಗಿಬಿಟ್ಟಿದೆ. ವಿವಿಧ ಕಂಪನಿಗಳಿಗೆ, ಬಿಸ್ನೆಸ್‍ಗಳಿಗೆ ಗ್ರಾಹಕರನ್ನು ತಲುಪಲು ಮೊಬೈಲ್ ಆ್ಯಪ್ ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಸಾಧನಗಳು, ಅಪ್ಲಿಕೇಷನ್‍ಗಳು ನಮ್ಮ ಸಂವಹನದ ರೀತಿಯನ್ನೇ ಬದಲಾಯಿಸಿಬಿಟ್ಟಿದೆ. ಇದೇ ಕಾರಣಕ್ಕೆ ಮೊಬೈಲ್ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸುವುದು ಅತ್ಯುತ್ತಮ ಬೇಡಿಕೆಯ ಮತ್ತು ವೇಗವಾಗಿ ಪ್ರಗತಿ ಕಾಣುತ್ತಿರುವ ಐಟಿ ಕರಿಯರ್ ಆಗಿದೆ. ಈ ಉದ್ಯೋಗವನ್ನು ಪ್ರಿಲ್ಯಾನ್ಸ್ ಆಗಿಯೂ ಮಾಡಬಹುದು. ಆ್ಯಪ್ ಅಭಿವೃದ್ಧಿಪಡಿಸಬೇಕಾದರೆ ಮೊದಲು ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯಬೇಕು. ಸಿ, ಸಿಪ್ಲಸ್‍ಪ್ಲಸ್, ಜಾವಾ ಇತ್ಯಾದಿಗಳನ್ನು ಕಲಿಯಬೇಕು. ಗೂಗಲ್ ಆಂಡ್ರಾಯ್ಡ್, ಆಪಲ್ ಐಒಎಸ್‍ಗೆ ತಕ್ಕಂತೆ ನೀವು ಕೌಶಲ ಕಲಿಯಬೇಕು.… Read More »