ಪಿಜಿಸಿಇಟಿ 2021: ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

By | 10/09/2021

2021-22 ನೇ ಶೈಕ್ಷಣಿಕ ಸಾಲಿನ ಮೊದಲ ವರ್ಷದ /1 ನೇ ಸೆಮಿಸ್ಟರ್ ಗಳ ( ಪೂರ್ಣಾವಧಿ/ಅರೆಕಾಲಿಕ) ಎಂಬಿಎ/ಎಂಸಿಎ/ಎಂಇ/ಎಂಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಪಿಜಿಸಿಇಟಿ-2021 ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2021 ಗೆ ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 17, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕೇತರ ಅಭ್ಯರ್ಥಿಗಳನ್ನು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರಕಾರಕ್ಕೆ ಬಿಟ್ಟುಕೊಡುವ ಸೀಟುಗಳಿಗೆ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.

ಗೇಟ್ ಅಭ್ಯರ್ಥಿಗಳಿಗೆ ಸೂಚನೆ

ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳು ಎಂಇ/ಎಂ.ಟೆಕ್/ಎಂ‌.ಆರ್ಕ್ ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2021 ಹಾಜರಾಗಬೇಕಿಲ್ಲ‌. ಆದರೆ ಅಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು.

ವಿದ್ಯಾರ್ಹತೆ : ಎಂಬಿಎ/ಎಂಸಿಎ/ಎಂಇ/ಎಂಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕೆ ವಿವರವಾದ ವಿದ್ಯಾರ್ಹತೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದು.

ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪ್ರತಿ ಕೋರ್ಸಿಗೆ 650/- ರೂ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ – 1 ಕ್ಕೆ ಸೇರಿದ ಕರ್ನಾಟಕದ ಅಭ್ಯರ್ಥಿಗಳು 500/- ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪ್ರಮುಖ ದಿನಾಂಕ : ಪಿಜಿಸಿಇಟಿ 2021 ಮಾಹಿತಿ ಪುಸ್ತಕ ಪ್ರಕಟಣೆ ದಿನಾಂಕ : ಸೆಪ್ಟೆಂಬರ್ 3,2021 ಮಧ್ಯಾಹ್ನ 4.00 ರ ನಂತರ

ಅರ್ಜಿಗಳನ್ನು ಆನ್ಲೈನ್ ನಲ್ಲಿ ದಾಖಲಿಸಲು ಆರಂಭ ದಿನಾಂಕ : ಸೆಪ್ಟೆಂಬರ್ 3, 2021, 4.00 ರಿಂದ
ಅರ್ಜಿಗಳನ್ನು ದಾಖಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 17,2021 ಸಂಜೆ 5.30 ರವರೆಗೆ
ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 18, 2021
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ದಿನಾಂಕ : ಅಕ್ಟೋಬರ್ 12, 2021 ಸಂಜೆ 4ಗಂಟೆ

ಪಿಜಿಸಿಇಟಿ ಪರೀಕ್ಷೆಯನ್ನು ಅಕ್ಟೋಬರ್ 22, 2021 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಅಕ್ಟೋಬರ್ 23, 2021 ರಂದು ಎಸಿಎ ಕೋರ್ಸ್ ಗಳಿಗೆ ಬೆಳಿಗ್ಗೆ 10:30 ರಿಂದ 12.30 ರವರೆಗೆ ಹಾಗೂ ಎಂಬಿಎ‌ನ ಕೋರ್ಸ್ ಗಳಿಗೆ ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ.

ನೋಟಿಫಿಕೇಶನ್

Leave a Reply

Your email address will not be published. Required fields are marked *