ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು? ಇಲ್ಲಿದೆ ಕಂಪ್ಲಿಟ್‌ ಗೈಡ್

By | 18/12/2021
smart young female student looking away thoughtfully during lesson in college

ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದರೆ ಯಶಸ್ಸು ಕೈಗೆಟುಕದಷ್ಟು ದೂರದಲ್ಲಿರುತ್ತದೆ.

ಪ್ರತಿವರ್ಷ ರೈಲ್ವೆ, ಬ್ಯಾಂಕ್, ಕೆಪಿಎಸ್‍ಸಿ, ಯುಪಿಎಸ್‍ಸಿ, ಪಿಡಿಒ, ಪೊಲೀಸ್ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು `ಸರಕಾರಿ ಜಾಬ್ಸ್ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ.

ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ  ನೌಕರಿಗಿರುವ ಸೆಳೆತ ಅಂತಹದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದಾಗಿದೆ.

ಸ್ಟಡಿ ಮೆಟಿರಿಯಲ್ಸ್

adult blur books close up
Photo by Pixabay on Pexels.com

ಅಭ್ಯರ್ಥಿಗಳು ಇತ್ತೀಚಿನ ಮತ್ತು ಪರಿಷ್ಕøತ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಿ ತಯಾರಿ ನಡೆಸಬೇಕು. ಅಂದರೆ, ಅಧ್ಯಯನ ನಡೆಸುವ ಮಾಹಿತಿಗಳು ಈಗಿನ ಪರೀಕ್ಷಾ ರೀತಿ ಮತ್ತು ಸಿಲೆಬಸ್‍ಗೆ ಹೊಂದಿಕೊಳ್ಳುವಂತೆ ಇರಬೇಕು. ಆಯಾ ಅಸೂಚನೆಗಳಲ್ಲಿ ಸಿಲೆಬಸ್ ಮಾಹಿತಿ ಇರುತ್ತದೆ. ಯಾವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದ ಮಾಹಿತಿ ಇರುತ್ತದೆ. ಇದೆಲ್ಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಅಧ್ಯಯನ ನಡೆಸಿ.

ಪರೀಕ್ಷಾ ಮಾರ್ಗದರ್ಶಿಗಳು

white ceramic mug on white paper
Photo by cottonbro on Pexels.com

ಪ್ರತಿಯೊಂದು ಪರೀಕ್ಷೆಗಳು ಸಹ ವಿಶೇಷ ವಿಧಾನಗಳನ್ನು ಒಳಗೊಂಡಿರುತ್ತವೆ. ಅಂದರೆ, ಅವುಗಳಲ್ಲಿ ನೀಡಲಾಗುವ ಪ್ರಶ್ನೆಗಳ ಸಂಖ್ಯೆ, ಪ್ರಶ್ನೆಗಳ ರೀತಿ, ಪರೀಕ್ಷಾ ಅವ, ನೆಗೆಟಿವ್ ಮಾಕ್ರ್ಸ್ ಇತ್ಯಾದಿಗಳು ಇರುತ್ತವೆ. ಇವೆಲ್ಲವನ್ನು ತಿಳಿದುಕೊಂಡು ಇದಕ್ಕೆ ತಕ್ಕಂತೆ ಅಧ್ಯಯನ ನಡೆಸಬೇಕು. ಇದಕ್ಕಾಗಿ ನಿಮಗೆ ಎಗ್ಸಾಂ ಗೈಡ್‍ಗಳು ಉಪಯುಕ್ತ. ಗೈಡ್‍ಗಳನ್ನು ನೋಡಿಕೊಂಡು ನಿಗದಿತ ಸಮಯದೊಳಗೆ ಸಮರ್ಪಕ ಉತ್ತರ ಬರೆಯುವ ಸಾಮಥ್ರ್ಯವನ್ನು ಪರಿಶೀಲಿಸಿಕೊಳ್ಳಬಹುದು.

ವೇಳಾಪಟ್ಟಿಯಂತೆ ಅಧ್ಯಯನ

ಬದುಕಿನಲ್ಲಿ ಶಿಸ್ತು ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಟೈಂಟೇಬಲ್ ರಚಿಸಿಕೊಳ್ಳಿ. ದಿನದಲ್ಲಿ ಇಷ್ಟು ಗಂಟೆ ಎಗ್ಸಾಂ ತಯಾರಿಗೆ ಎಂದು ಮೀಸಲಿಟ್ಟು ಶ್ರದ್ಧೆಯಿಂದ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.

silver imac on desk
Photo by Pixabay on Pexels.com

ರಿವಿಜನ್ ಮಾಡಿ

ಓದಿದ ವಿಚಾರಗಳನ್ನು ಮೆಲುಕು ಹಾಕುವ ಅಭ್ಯಾಸ ಇರಲಿ. ಅಂದರೆ, ಇಸವಿಗಳು, ಫಾರ್ಮುಲಾಗಳು, ವ್ಯಾಖ್ಯಾನಗಳನ್ನು ಆಗಾಗ ನೆನಪಿಸುತ್ತ ಇರಿ. ಹಗಲುಕನಸನ್ನು ಪಕ್ಕಕ್ಕೆ ಇರಿಸಿ ಸಮಯ ಸಿಕ್ಕಾಗಲೆಲ್ಲ ಓದಿದ ವಿಚಾರಗಳನ್ನು ನೆನಪಿಸಿಕೊಳ್ಳುತ್ತ ಇರಿ.

ಟಿಪ್ಪಣಿ ಬರೆಯುವುದು

ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‍ನಲ್ಲಿ ಬರೆದಿಟ್ಟುಕೊಳ್ಳಿ. ಮರೆತು ಹೋಗಬಹುದಾದ ಸಂಗತಿಗಳನ್ನು ಹೀಗೆ ಬರೆದಿಟ್ಟರೆ ಆಗಾಗ ಓದಿಕೊಳ್ಳಬಹುದು. ಪರೀಕ್ಷೆಗೆ ಕೆಲವು ದಿನಗಳಿರುವಾಗ ಇಂತಹ ನೋಟ್ಸ್ ಮೇಲೆ ಕಣ್ಣಾಡಿಸುತ್ತಿದ್ದರೆ ಸಾಕು.

ಪರಿಣತರಿಂದ ಮಾಹಿತಿ

ನೀವು ಏಕಲವ್ಯನಂತೆ ಸಾಧನೆ ಮಾಡಬಹುದು ಅಥವಾ ಕಾಂಪಿಟೀಟಿವ್ ಎಗ್ಸಾಂನಲ್ಲಿ ಪರಿಣತಿ ಪಡೆದ ತಜ್ಞರಿಂದ ತರಬೇತಿ ಪಡೆಯಬಹುದು. ತಜ್ಞರ ಮಾರ್ಗದರ್ಶನವಿದ್ದರೆ ಪರೀಕ್ಷೆ ಬರೆಯುವ ಟೆಕ್ನಿಕ್ ತಿಳಿಯುತ್ತದೆ.

crop faceless multiethnic interviewer and job seeker going through interview
Photo by Alex Green on Pexels.com

ಸುದ್ದಿ ಪತ್ರಿಕೆಗಳನ್ನು ಓದಿ

ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ಮಾಹಿತಿಯನ್ನು ಪರೀಕ್ಷೆಯಲ್ಲಿ ಕೇಳಬಹುದೇ ಎಂದು ಯೋಚಿಸುತ್ತ ಪತ್ರಿಕೆಗಳನ್ನು ಓದಿರಿ. ದಿನಪತ್ರಿಕೆಗಳಲ್ಲಿ ಪ್ರಮುಖವೆನಿಸುವ ಮಾಹಿತಿಗಳನ್ನು ನೋಟ್ ಮಾಡಿಟ್ಟುಕೊಳ್ಳಿ. ಅಂದರೆ, ಪ್ರಮುಖರ ನೇಮಕ, ಪ್ರಮುಖ ಒಪ್ಪಂದಗಳು, ಅಂತಾರಾಷ್ಟ್ರೀಯ ಸಂಬಂಧ ಸೇರಿದಂತೆ ಪ್ರಚಲಿತ ವಿದ್ಯಾಮಾನಗಳ ಮಾಹಿತಿಯನ್ನು ಪಡೆಯುತ್ತಿರಿ.

ಹಳೆಯ ಪ್ರಶ್ನೆಪತ್ರಿಕೆಗಳು

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಈ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಆನ್‍ಲೈನ್‍ನಲ್ಲಿ ಲಭ್ಯವಿರುತ್ತವೆ.  ಅವುಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ತಿಳಿದುಕೊಳ್ಳಿ.

ತಂತ್ರಜ್ಞಾನದ ಸದ್ಭಳಕೆ

ಇಂಟರ್‍ನೆಟ್ ಅನ್ನು ನಿಮ್ಮ ಜ್ಞಾನ ಹೆಚ್ಚಿಸುವ ಸಾ`Àನವಾಗಿ ಬಳಸಿ.  ಸ್ಮಾರ್ಟ್‍ಫೆÇೀನ್‍ನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿ ಬಳಸಿ. ಪ್ರಮುಖ ವಿಷಯಗಳನ್ನು ಬುಕ್‍ಮಾರ್ಕ್ ಮಾಡಿಟ್ಟುಕೊಳ್ಳಿ. ಇಂಟರ್‍ನೆಟ್‍ನಲ್ಲಿ ಲಭ್ಯವಿರುವ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಇಂಟರ್‍ನೆಟ್‍ನಲ್ಲಿ ಸಮಯ ಹಾಳು ಮಾಡುವ ವಿಷಯಗಳಿಂದ ದೂರವಿರಿ.

Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Leave a Reply

Your email address will not be published. Required fields are marked *