ಎಸ್ ಸಿ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ ಇ ಕಾರ್ಡ್ ವಿತರಣೆ

By | 16/07/2021

ಮೆಟ್ರಿಕ್ ನಂತರ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಗ್ಗೆ ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಜಾರಿಗೆ ತರುವ ಮೊದಲ ರಾಜ್ಯ ಕರ್ನಾಟಕ ಎಂದು ಆಡಳಿತ ಸುಧಾರಣಾ ಮತ್ತು ಸಿಬ್ಬಂದಿ ಇಲಾಖೆ ( ಇ ಆಡಳಿತ ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಗುರುವಾರ ಹೇಳಿದರು.

ಪರಿಶಿಷ್ಟ ಜಾತಿ ( ಎಸ್ ಸಿ) ವಿದ್ಯಾರ್ಥಿಗಳ ಮೆಟ್ರಿಕ್ ನಂತರ ಆಧಾರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಅಂತಿಮ ಬೋರ್ಡ್ ಪರೀಕ್ಷೆಯ ನೋಂದಣಿ ಸಂಖ್ಯೆ ಬಳಸಿಕೊಂಡು ಫ್ರೀ ( ಉಚಿತ) ಸ್ಕಾಲರ್ಶಿಪ್ ಇ- ಕಾರ್ಡ್ ಗಳನ್ನು ರಾಜ್ಯ ಸರಕಾರ ಆದಷ್ಟು ಬೇಗ ವಿತರಿಸಲಿದೆ.

ಕಾಗದ ರಹಿತ‌ ವ್ಯವಸ್ಥೆಯನ್ನು ಅರ್ಹ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಸ್ಕಾಲರ್ ಶಿಪ್ ವಿತರಣೆ, ವಿವರಗಳ ನಮೂದನೆ, ಪರಿಶೀಲನೆ, ಅಡ್ಮಿಷನ್, ವಿದ್ಯಾರ್ಥಿಗಳ ಪತ್ತೆ ಎಲ್ಲವೂ ಸ್ವಯಂ ಚಾಲಿತವಾಗಿರುತ್ತದೆ ಎಂದು ಹಿರಿಯ ಐಎಎಸ್ ಅಧಿಕಾರಿ ಹೇಳಿದ್ದಾರೆ.

ವಿದ್ಯಾರ್ಥಿಗಳು ರಾಜ್ಯ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ( ಎಸ್ ಎಸ್ ಪಿ) ಲಾಗಿನ್ ಆಗಿ, ಮೂರು ಪ್ರಮಾಣಪತ್ರಗಳನ್ನು ಲಗತ್ತಿಸಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಇದನ್ನು ಡೌನ್‌ಲೋಡ್ ಮಾಡಿಕೊಂಡು, ಸರಕಾರ ಶುಲ್ಕ ಪಾವತಿಯ ಖಾತರಿಗೆ ಅಡ್ಮಿಷನ್ ಗಾಗಿ ಇದನ್ನು ಕಾಲೇಜಿಗೆ ತೋರಿಸಬಹುದು.ಈ ಸ್ಕಾಲರ್ಶಿಪ್ ಗೆ ಶೇ.75 ರಷ್ಟು ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದೆ. ಅನರ್ಹ ಅಭ್ಯರ್ಥಿಗಳು ಈ ಸವಲತ್ತನ್ನು ಪಡೆಯದಂತೆ ನಿರ್ಬಂದಿಸಲಾಗಿದೆ.

Leave a Reply

Your email address will not be published. Required fields are marked *