ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಖರೀದಿಸಲು ಯಾರಿಗೆ ಎಷ್ಟು ಸಬ್ಸಿಡಿ ; ಸಂಪೂರ್ಣ ಸುದ್ದಿ ಇಲ್ಲಿದೆ

By | 18/09/2021

ಇತ್ತೀಚಿನ ಕಾಲದಲ್ಲಿ ಬಾಡಿಗೆ ಮನೆಗಿಂತ ಸ್ವಂತ ಮನೆ ಲಾಭದಾಯಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದು ಹೇಗೆ ಎಂಬುದಾಗಿ ನೀವು ಕೇಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ ಸಬ್ಸಿಡಿಯಡಿ ವ್ಯಕ್ತಿ ಸ್ವಂತ ಮನೆಗಾಗಿ ಆಕರ್ಷಕ ಬಡ್ಡಿಯ ಸಬ್ಸಿಡಿ ಪಡೆಯಬಹುದು.

ಈ ಯೋಜನೆ ಕುಟುಂಬದ ವಾರ್ಷಿಕ ಆದಾಯದ ಆಧಾರದಲ್ಲಿ ಅರ್ಜಿದಾರರನ್ನು ಈ ಕೆಳಗಿನಂತೆ ವಿಭಾಗಿಸುತ್ತದೆ.

‌ನಿಮ್ಮ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಇದ್ದರೆ ಆಗ ನೀವು ಆರ್ಥಿಕವಾಗಿ ಹಿಂದುಳಿದ ವರ್ಗ ( EWS) ವಿಭಾಗದಡಿ ಬರುತ್ತೀರಿ. ಒಂದು ವೇಳೆ 3 ಲಕ್ಷದಿಂದ 6 ಲಕ್ಷದ ನಡುವೆ ಇದ್ದರೆ ಆಗ ನೀವು ಕಡಿಮೆ ಆದಾಯದ ಗುಂಪುಗಳು ( LIGs) ವಿಭಾಗಕ್ಕೆ ಬರುತ್ತೀರಿ‌. 6 ರಿಂದ 12 ಲಕ್ಷದವರೆಗೆ ಇದ್ದರೆ ಎಂಐಜಿ- 1 ವಿಭಾಗದಡಿ ಬರುತ್ತಾರೆ. 12 ರಿಂದ 18 ಲಕ್ಷ ರೂ‌ ಆಗಿದ್ದರೆ, ಎಂಐಜಿ-2 ವಿಭಾಗದಡಿ ಬರುತ್ತಾರೆ.

EwS ಹಾಗೂ LIG : ಸಾಲದ ಮೊತ್ತ ಮೊದಲ 6 ಲಕ್ಷದ ಮೇಲೆ ವಾರ್ಷಿಕ ಶೇ. 6.50 ಬಡ್ಡಿ ಸಬ್ಸಿಡಿ ರೂಪದಲ್ಲಿ ಪಡೆದುಕೊಳ್ಳಬಹುದು. ಇದು ಗರಿಷ್ಠ 2.67 ಲಕ್ಷದವರೆಗೂ ಇರುತ್ತದೆ.

ಎಂಐಜಿ -1 : ಪ್ರತಿ ವರ್ಷ ಶೇ. 4 ಬಡ್ಡಿಯ ಸಬ್ಸಿಡಿ ಪಡೆಯಬಹುದು. ಸಾಲ ಮೊತ್ತದ ಮೊದಲ ರೂ. 9 ಲಕ್ಷ ಮೇಲೆ ರೂ.2.35 ಲಕ್ಷ ತನಕ ಬಡ್ಡಿ ಸಬ್ಸಿಡಿ ಪಡೆಯಬಹುದು. ಆದರೆ ಗಮನವಿರಲಿ ಮನೆಯ‌ ಕಾರ್ಪೆಟ್ ಏರಿಯಾ ಗರಿಷ್ಠ 1291 ಚದರಡಿ ಇರಬೇಕು.

ಎಐಜಿ – 2 : ವಾರ್ಷಿಕ 3 ಸಬ್ಸಿಡಿ ಲಾಭ ಪಡೆಯಬಹುದು. ಸಾಲ ಮೊತ್ತದ ಮೊದಲ ರೂ.12 ಲಕ್ಷದ ಮೇಲೆ ರೂ.2.30 ಲಕ್ಷದ ತನಕ ಬಡ್ಡಿ ಸಬ್ಸಿಡಿ ಪಡೆಯಬಹುದು. ಆದರೆ, ಮನೆಯ ಕಾರ್ಪೆಟ್ ಏರಿಯ 1614 ಚರದರಡಿಯದ್ದೇ ಇರಬೇಕು.

ಮುಖ್ಯಾಂಶಗಳು : ಖರೀದಿಸುವ ಮನೆಯ ಮೌಲ್ಯ ಅಥವಾ ಪಡೆದುಕೊಳ್ಳುವ ಸಾಲದ ಮೇಲೆ ನಿರ್ಬಂಧ ಇರುವುದಿಲ್ಲ. ಇಡಬ್ಲ್ಯೂ ಎಸ್ / ಎಲ್ ಐಜಿ ವಿಭಾಗದಡಿ ಮನೆ ತೆಗೆದುಕೊಳ್ಳುವುದಾದರೆ ಅದರ ಮಾಲೀಕರು ಅಥವಾ ಸಹ ಮಾಲೀಕರು ಮಹಿಳೆಯೇ ಆಗಿರಬೇಕು. ಮನೆ ನವೀಕರಣ ಅಥವಾ ವಿಸ್ತರಣೆ ಮಾಡುವುದಾದರೆ ಮನೆಯ ಕಾರ್ಪೆಟ್ ಏರಿಯಾ ಗರಿಷ್ಠ 323 ಚದರಡಿ ( ಇಡಬ್ಲ್ಯುಎಸ್ ) ಎಲ್ ಐಜಿ ( 645) ಚದರಡಿ ಇರಬೇಕು. ಈ ಯೋಜನೆ ಕುಟುಂಬದಲ್ಲಿ ಮೊದಲ ಮನೆ ನಿರ್ಮಿಸುವವರಿಗೆ ಅನ್ವಯವಾಗುತ್ತದೆ.

ಈ ಯೋಜನೆ ಸಬ್ಸಿಡಿ ಪಕ್ಕ ಮನೆಗಳು ಮತ್ತು ನಗರ ಪ್ರದೇಶಗಳಲ್ಲಿ ಇರುವಂತವುದಕ್ಕೆ ಮಾತ್ರ ಉಪಲಬ್ದವಿದೆ. ನಿಮ್ಮ ಮನೆಯು ಪಿಎಂಎವೈ ಅನುಮೋದಿ ಸ್ಥಳದಲ್ಲಿ ಬರುತ್ತದೆಯೇ ಎಂದು ತಿಳಿಯಲು www.pmaymis.gov.in. ಲಾಗಿನ್ ಮಾಡಿ.

ಸಬ್ಸಿಡಿ ಕ್ಲೈಮ್ ಮಾಡುವುದು ಹೇಗೆ ?

ಗೃಹ ಸಾಲ ಪಡೆದ ನಂತರ ಅವಶ್ಯಕ ಕೆಲವು ದಸ್ತಾವೇಜು ಗಳೊಂದಿಗೆ ಒಂದು ಘೋಷಣೆ ಯನ್ನು ಸಲ್ಲಿಸುವಂತೆ ಮಾರಾಟಾಧಿಕಾರಿ ಕೇಳುತ್ತಾರೆ. ನಿಮ್ಮ‌ಪರವಾಗಿ ಲೋನ್ ಸಂಸ್ಥೆ ಸಬ್ಸಿಡಿಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಗೆ ಸಲ್ಲಿಸುತ್ತಾರೆ.

ಕ್ಲೈಮ್ ಹೇಗೆ ಪಡೆಯುವುದು ?

ನಿಮ್ಮ ಕ್ಲೈಮ್ ನ್ನು ಲೋನ್ ಸಂಸ್ಥೆ ನೇರವಾಗಿ ಸ್ವೀಕರಿಸುತ್ತದೆ. ಅದನ್ನು ನಿಮ್ಮ ಸಾಲದ ಅಸಲು ಮೊತ್ತಕ್ಕೆ ಸರಿ ಹೊಂದಿಸಲಾಗುತ್ತದೆ. ಇದರಿಂದ ನಿಮ್ಮ‌ ಸಾಲದ ಅವಧಿ ಮತ್ತು ಕಂತಿನ ಮೊತ್ತ ಕಡಿಮೆಯಾಗುತ್ತದೆ.

ಈಗ ಕ್ಲೈಮ್ ಒಂದೇ ಸಲಕ್ಕೆ ಸಿಗುತ್ತಾ ಅಥವಾ ಹಂತ ಹಂತವಾಗಿ ಸಿಗುತ್ತಾ ?

ಕ್ಲೈಮ್ ನಿಮ್ಮ ಸಾಲ ವಿತರಣೆ ಸ್ಥಿತಿಯ ಆಧಾರದಲ್ಲಿರುತ್ತದೆ. ನಿಮ್ಮ ಸಾಲ‌ ಒಮ್ಮೆಲೆ ಸಂಪೂರ್ಣವಾಗಿ ವಿತರಿಸಲ್ಪಟ್ಟರೆ, ನೀವು ಆಯ್ಕೆ ಮಾಡಿದರೆ ಸಬ್ಸಿಡಿ ಲಾಭಗಳನ್ನು ಭಾಗಗಳಲ್ಲಿ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *