TCS: ಮಹಿಳೆಯರಿಗೆ ವೃತ್ತಿ ಅವಕಾಶ

By | 12/09/2021

ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ( ಟಿಸಿಎಸ್) ಉದ್ಯೋಗ ಹುಡುಕುತ್ತಿರುವ ಪ್ರತಿಭಾವಂತ ಮಹಿಳೆಯರಿಗೆ ದೊಡ್ಡ ಆಫರ್ ನೀಡಿದೆ. ಐಟಿ ವೃತ್ತಿಯಲ್ಲಿ ಕನಿಷ್ಠ ಎರಡು ವರ್ಷವಾದರೂ ಅನುಭವ ಹೊಂದಿರುವ ಮಹಿಳೆಯರ ಅತಿ ದೊಡ್ಡ ನೇಮಕಾತಿಗೆ ಟಿಸಿಎಚ್ ಮುಂದಾಗಿದೆ.

ಪ್ರತಿಭಾವಂತ ಮತ್ತು ಸಾಮರ್ಥ್ಯವುಳ್ಳ ಮಹಿಳೆಯರು ಯಾವಾಗಲೂ ಸ್ಪೂರ್ತಿಯ ಚಿಲುಮೆಯಾಗಿರುತ್ತಾರೆ. ಅಂಥ ಪ್ರತಿಭಾವಂತ ಮಹಿಳೆಯರಿಗೆ ಇದು ಉತ್ತಮ ಅವಕಾಶ. ಈ ಆಫರ್ ಸದುಪಯೋಗ ಪಡೆದುಕೊಳ್ಳಿ ಮತ್ತು ಟಿಸಿಎಸ್ ನೊಂದಿಗೆ ಪಾಲುದಾರಿಕೆದಾರರಾಗಿ ‘ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ.

ಪ್ರತಿವರ್ಷ ಟಿಸಿಎಸ್ 40,000 ಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳುತ್ತಿದ್ದು, ಈ ವಿತ್ತೀಯ ವರ್ಷದಲ್ಲೂ ಟಿಸಿಎಸ್ 40,000 ಹೊಸಬರನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ.

ದೇಶದ ತಂತ್ರಜ್ಞಾನ ಉದ್ಯೋಗದಾತರ ಪಟ್ಟಿಯಲ್ಲಿ ಟಿಸಿಎಸ್ ಎರಡನೇ ಸ್ಥಾನದಲ್ಲಿದ್ದು, 5.37 ಲಕ್ಷ ಉದ್ಯೋಗಿಗಳೊಂದಿಗೆ ಅಕ್ಸೆಂಚರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಉದ್ಯೋಗಿಗಳು ತಮ್ಮ ಕೆಲಸವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಈ ಸಮಯದಲ್ಲಿ, ಹೊಸಬರನ್ನು ನೇಮಕಾತಿ ಮಾಡಿಕೊಳ್ಳುವ ಬದಲು, ಅನುಭವಗಳನ್ನು ನೇಮಿಸಿಕೊಂಡು ತರಬೇತಿ ನೀಡಿ, ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದರೆ ಕಂಪನಿಗೆ ಲಾಭವಿದೆ” ಎಂದು ಸಿಇಒ ಎನ್ ಗಣಪತಿ ಸುಬ್ರಹ್ಮಣ್ಯಂ ಹೇಳಿದ್ದಾರೆ.

Leave a Reply

Your email address will not be published. Required fields are marked *