ಸಾರಸ್ವತ್ ಬ್ಯಾಂಕ್ ನಲ್ಲಿ ಉದ್ಯೋಗ : ಜೂನಿಯರ್ ಆಫೀಸರ್ ಗಳ ನೇಮಕ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು – ಸುದ್ದಿಜಾಲ ನ್ಯೂಸ್

By | 22/12/2021

ಸಾರಸ್ವತ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳನ್ನು ಮಾರ್ಕೆಟಿಂಗ್ ಮತ್ತು ಆಪರೇಷನ್ಸ್ ( ಕ್ಲೆರಿಕಲ್ ಕೇಡರ್) ವಿಭಾಗಗಳಲ್ಲಿ ನೇಮಕ ಮಾಡಲಿದೆ.

ಹುದ್ದೆಯ ಹೆಸರು : ಜೂನಿಯರ್ ಆಫೀಸರ್

ಹುದ್ದೆ ಸಂಖ್ಯೆ : 300

ವಿದ್ಯಾರ್ಹತೆ : ಯಾವುದೇ ಪದವಿ ಪಾಸ್ ಆಗಿರಬೇಕು.

ಕಾರ್ಯಾನುಭವ : ಯಾವುದೇ ಬ್ಯಾಂಕ್/ ಸಬ್ ಸಿಡಿಯರಿ ಬ್ಯಾಂಕ್ / ಎನ್ ಬಿಎಫ್ ಸಿ / ಡಿಎಸ್ ಎ/ ಕ್ರೆಡಿಟ್ ಸೊಸೈಟಿಯಲ್ಲಿ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು.

ಪ್ರಥಮ ಶ್ರೇಣಿಯಲ್ಲಿ ಪದವಿ ಅಥವಾ ದ್ವಿತೀಯ ಶ್ರೇಣಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕಾಮರ್ಸ್, ವಿಜ್ಞಾನ ಅಥವಾ ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ ಪಾಸ್ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ : ದಿನಾಂಕ 01-12-2021 ಕ್ಕೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 22-12-2021

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2021

ಈ ಹುದ್ದೆಗಳನ್ನು ಮುಂಬೈ ಮತ್ತು ಪುಣೆಯ ಬ್ರ್ಯಾಂಚ್ ಗಳಲ್ಲಿ ನಿಯೋಜಿಸಲಾಗುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಾರಸ್ವತ್ ಕೋ ಅಪರೇಟಿವ್ ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು‌.

Leave a Reply

Your email address will not be published. Required fields are marked *