Tag Archives: SSLC

SSLC ಪರೀಕ್ಷಾ ಪ್ರವೇಶಗಳಿಗೆ ಸಮಸ್ಯೆಗಳಿಗೆ ಸಂಪರ್ಕಿಸಲು ದೂರವಾಣಿ ಸಂಖ್ಯೆ

By | 16/07/2021

2020-21 ನೇ ಸಾಲಿನ ಜುಲೈ -2021 ರಲ್ಲಿ ನಡೆಯಲಿರುವ ‌ಎಸ್.ಎಸ್.ಎಲ್.ಸಿ ವಾರ್ಷಿಕ ‌ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ( ಅದರಲ್ಲೂ ವಿಶೇಷವಾಗಿ ವಲಸೆ ವಿದ್ಯಾರ್ಥಿಗಳಿಗೆ) ಪರೀಕ್ಷಾ ಪ್ರವೇಶ ಪ್ರಕಾರ ಕುರಿತು ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಜಿಲ್ಲಾ ನೋಡಲ್ ಅಧಿಕಾರಿಗಳನ್ನು/ ಜಿಲ್ಲಾ‌ಉಪನಿರ್ದೇಶಕರು‌( ಆಡಳಿತ) ರವರನ್ನು ಕೆಳಕಂಡ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಪರಿಹಾರ ಪಡೆಯಲು ತಿಳಿಸಿದೆ.

SSLC Exam 2021: ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ

By | 15/07/2021

ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಜುಲೈ 19 ಮತ್ತು ಜುಲೈ 22 ರಂದು ನಿಗದಿಯಾಗಿದೆ. ಪೂರ್ಣ ಶುಲ್ಕ ಕಟ್ಟದ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಪ್ರವೇಶ ಪತ್ರವನ್ನು ಅವರಿಗೆ ನಿರಾಕರಿಸುವಂತಿಲ್ಲ ಎಂದು ಹೇಳಿದ್ದಾರೆ. ಪರೀಕ್ಷೆಗೆ ಎಲ್ಲಾ ಸಿದ್ಧತೆಗಳು ನಡೆದಿದೆ. ಇದರ ಮಧ್ಯೆ ಪರೀಕ್ಷಾ ಶುಲ್ಕ ಪಾವತಿ ಮಾಡದಿದ್ದರೆ ಹಾಲ್ ಟಿಕೆಟ್ ನೀಡಲಾಗುವುದಿಲ್ಲ ಎಂಬ ಮಾತಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಕ್ರಮ ವಹಿಸಬೇಕೆಂದು ಕರ್ನಾಟಕ ಮಾಧ್ಯಮಿಕ ಶಿಕ್ಷಣ… Read More »

SSLC ಪರೀಕ್ಷೆ : ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

By | 01/07/2021

2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ವಿವರಗಳು ಈ ಕೆಳಗಿನಂತಿವೆ ಜುಲೈ 19 ( ಸೋಮವಾರ) – ಗಣಿತ, ವಿಜ್ಞಾನ, ಸಮಾಜ‌ ವಿಜ್ಞಾನ ಪರೀಕ್ಷೆ ಬೆಳಿಗ್ಗೆ 10.30 ರಿಂದ 1.30 ರವರೆಗೆ. ಜುಲೈ 19 ( ಸೋಮವಾರ) – ಮಧ್ಯಾಹ್ನ ಕಿರಿಯ ತಾಂತ್ರಿಜ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜುಲೈ 22 ( ಗುರುವಾರ)- ಬೆಳಿಗ್ಗೆ 10.30 ರಿಂದ 1.30 ರವರೆ್ಎ ಭಾಷಾ ವಿಷಯಗಳ (ಪ್ರಥಮ ಭಾಷೆ ಕನ್ನಡ, ಪ್ರಥಮ… Read More »

ಈ ಬಾರಿ SSLC ಪರೀಕ್ಷೆ ಸರಳೀಕರಣ : ಮಾಹಿತಿ ಇಲ್ಲಿದೆ

By | 19/06/2021

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಈ ಬಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳೀಕರಿಸಿ ಎರಡು ದಿನದಲ್ಲಿ ನಡೆಸಲು ತೀರ್ಮಾನ ಮಾಡಿದ್ದ ಶಿಕ್ಷಣ ಇಲಾಖೆ ಈಗ ಈ ಬಗ್ಗೆ ಅಧಿಕೃತವಾಗಿ ಆದೇಶ ಮಾಡಿದೆ. ಭಾಷಾ ವಿಭಾಗದ ಮೂರು ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಕೆ ಮತ್ತು ಕೋರ್ ವಿಷಯಗಳಿಗೆ ಮತ್ತೊಂದು ಪ್ರಶ್ನೆ ಪತ್ರಿಕೆ ಸೇರಿ ಎರಡು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಎರಡು ದಿನದಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಇಲಾಖೆಯು ನಿರ್ಧರಿಸಿದೆ. ಹಾಗಾಗಿ ಆರು ವಿಷಯಗಳಿಗೆ ಪ್ರತ್ಯೇಕವಾಗಿ 6 ದಿನ ಪರೀಕ್ಷೆ ಇರುವುದಿಲ್ಲ. ಪ್ರತಿ ವಿಷಯಕ್ಕೆ 40 ಅಂಕಗಳಿಗೆ ಪ್ರಶ್ನೆ… Read More »

SSLC ಒಎಂಆರ್ ಶೀಟ್ ಹಾಗೂ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

By | 17/06/2021

ರಾಜ್ಯ ಸರಕಾರ ನಡೆಸಲಿರುವ ಜುಲೈ 3 ನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸುವ ಬಗ್ಗೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಒಎಂಆರ್ ಶೀಟ್ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಪ್ರತಿಯೊಂದು ಪುಟದಲ್ಲೂ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರತ್ಯೇಕ ಮಾಹಿತಿ ಇದೆ. ಮೂರೂ ಪುಟದಲ್ಲೂ ವಿದ್ಯಾರ್ಥಿಯ ಫೊಟೋ ಮತ್ತು ಸಹಿ ಹಾಕಬೇಕು. ಮೂರು ಪುಟದಲ್ಲೂ ಬಣ್ಣಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ.ಮೂರು ವಿಷಯದ ಪ್ರಶ್ನೆಗಳು ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆಯನ್ನು… Read More »

ಎಸ್ ಎಟಿಎಸ್ ಪೋರ್ಟಲ್ ನಲ್ಲಿ ನಮೂದಿಸಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ ಅಂಕ ಮಾಯ !

By | 15/06/2021

ಎಸ್ ಎಟಿಎಸ್ ( ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ ) ಪೋರ್ಟಲ್ ನಲ್ಲಿ ನಮೂದಿಸಿದ್ದ ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳು ಮಾಯ ! ರಾಜ್ಯದಾದ್ಯಂತ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪಡೆದ ಅಂಕಗಳನ್ನು ಈ ಪೋರ್ಟಲ್ ನಲ್ಲಿ ನಮೂದಿಸುವಂತೆ ಇದೇ 7 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಕ್ಕೆ ಈ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದರು.… Read More »