ಎಸ್ ಎಟಿಎಸ್ ಪೋರ್ಟಲ್ ನಲ್ಲಿ ನಮೂದಿಸಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ ಅಂಕ ಮಾಯ !

ಎಸ್ ಎಟಿಎಸ್ ( ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ ) ಪೋರ್ಟಲ್ ನಲ್ಲಿ ನಮೂದಿಸಿದ್ದ ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳು ಮಾಯ !

ರಾಜ್ಯದಾದ್ಯಂತ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪಡೆದ ಅಂಕಗಳನ್ನು ಈ ಪೋರ್ಟಲ್ ನಲ್ಲಿ ನಮೂದಿಸುವಂತೆ ಇದೇ 7 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಕ್ಕೆ ಈ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದರು.

ಅಂಕಗಳು ಸಂಪೂರ್ಣವಾಗಿ ಅಳಿಸಿ ಹೋಗಿರುವ ವಿಷಯವು ಇಲಾಖೆಯ ನಿರ್ದೇಶಕಿ ಸ್ನೇಹಲ್ ಶನಿವಾರ ಮಧ್ಯಾಹ್ನ ಝೂಮ್ ಮೂಲಕ ಎಲ್ಲ ಜಿಲ್ಲೆಗಳ ಉಪ‌ನಿರ್ದೇಶಕರ ತುರ್ತು ಸಭೆಯಿ ನಡೆಸಿ, ಇನ್ನೊಮ್ಮೆ ಅಂಕಗಳನ್ನು ನಮೂದಿಸಲು ಸೂಚಿಸಿದ್ದಾರೆ.

ಅಂಕಗಳನ್ನು ಮತ್ತೆ ನಮೂದಿಸುವಂತೆ‌, ಪರಿಶೀಲನಾ ಪಟ್ಟಿ ತಯಾರಿಸುವಂತೆ ಎಲ್ಲ ಜಿಲ್ಲೆಗಳ ಉಪ‌ನಿರ್ದೇಶಕರು ತಮ್ಮ ವ್ಯಾಪ್ತಿಯ ಕಾಲೇಜು ಪ್ರಾಂಶುಪಾಲರಿಗೆ ವ್ಯಾಟ್ಸ್ ಅಪ್ ಸಂದೇಶ ರವಾನಿಸಿದ್ದಾರೆ.

ಇನ್ನೊಮ್ಮೆ ಚೆಕ್ ಲಿಸ್ಟ್ ಡೌನ್‌ಲೋಡ್ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲಿಸಿ ಅನುಮೋದನೆ ಸಲ್ಲಿಸಬೇಕು‌ ಈಗಾಗಲೇ ಡೌನ್ ಲೋಡ್ ಮಾಡಿಕೊಂಡಿರುವ ಚೆಕ್ ಲಿಸ್ಟ್ ಗಳೆ ತೆಗೆದುಕೊಂಡು ಬಂದರೆ ಅದಕ್ಕೆ ಅನುಮೋದನೆ ಕೊಡಲು ಸಾಧ್ಯವಿಲ್ಲ. ಹಾಗೂ ಇದರಲ್ಲಿ ಲೋಪಗಳೇನಾದರೂ ಆದರೆ ಆಯಾ ಕಾಲೇಜುಗಳ ಪ್ರಾಂಶುಪಾಲರೇ ಹೊಣೆಯಾಗುತ್ತಾರೆ ಎಂದು ಉಪ ನಿರ್ದೇಶಕರು ಸಂದೇಶದಯ ಎಚ್ಚರಿಸಿದ್ದಾರೆ.

ಹಲವು ಪ್ರಾಂಶುಪಾಲರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತರಾತುರಿಯಲ್ಲಿ ಹಾಗೂ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕು. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ ಇದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಾಗೂ ವಿದ್ಯುತ್ ವ್ಯತ್ಯಯ ಇರುವ ಕಾರಣ ಅಂಕ ನಮೂದಿಸಲು ಸಮಸ್ಯೆ ಆಗಬಹುದು. ಹಾಗಾಗಿ ಅಂಕ ನಮೂದಿಸಲಯ ನಿಗದಿಪಡಿಸಿದ ಕಾಲಾವಧಿ ವಿಸ್ತರಿಸಲು ಆಗ್ರಹಿಸುತ್ತಿದ್ದಾರೆ.

error: Content is protected !!