ಸುದ್ದಿಜಾಲ.ಕಾಂನ ವಿದ್ಯಾರ್ಥಿ ಓದುಗ ಬಳಗಕ್ಕೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಬಯಸುವ ಓದುಗ ಬಳಗಕ್ಕೆ ಕರಿಯರ್ ಮಾರ್ಗದರ್ಶಿ ಲೇಖನಗಳಲ್ಲಿ ಇಂದು ಬಹುಬೇಡಿಕೆಯ ಹತ್ತು ಸಾಫ್ಟ್ ಸ್ಕಿಲ್‌ಗಳ ಮಾಹಿತಿ ನೀಡಲಾಗಿದೆ. 2021 ಮತ್ತು 2022ರಲ್ಲಿ ಕರಿಯರ್‌ನಲ್ಲಿ ಪ್ರಗತಿ ಕಾಣಲು ನಿಮಗೆ ಈ ಕೌಶಲ್ಯಗಳು ಅಗತ್ಯವಾಗಿ ಬೇಕಿರುತ್ತದೆ. ಡಿಜಿಟಲ್ ಕಲಿಕಾ ತಾಣ ಉದೆಮಿ ಪಟ್ಟಿ ಮಾಡಿದ ಸಾಫ್ಟ್‌ಸ್ಲಿಲ್ ಇದಾಗಿದ್ದು, ಸುದ್ದಿಜಾಲ.ಕಾಂ ಈ ಕೌಶಲ್ಯಗಳ ಮಾಹಿತಿಯನ್ನು ವಿವರವಾಗಿ ಇಲ್ಲಿ ನೀಡಿದೆ.
ಏನಿದು ಸಾಫ್ಟ್ ಸ್ಕಿಲ್?

ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂತ ಸಂವಹನದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವುದೇ ಸಾಫ್ಟ್ ಸ್ಕಿಲ್. ಇದು ಸಂವಹನ ಕಲೆಯಾಗಿರಬಹುದು, ಯಾರಾದರೂ ಹೇಳುವುದನ್ನು ಗಮನವಿಟ್ಟು ಕೇಳುವ ಕಲೆಯಾಗಿರಬಹುದು, ವಿಷಯ ಮಂಡನೆ ಕಲೆಯಾಗಿರಬಹುದು, ಸಮಯ ನಿರ್ವಹಣೆ, ಆ್ಯಟಿಟ್ಯೂಡ್, ವರ್ತನಾ ವಿಧಾನ, ಸಮಸ್ಯೆ ಬಗೆಹರಿಸುವ ಕಲೆ, ತಂಡದ ಜೊತೆ ಸೇರಿ ಕೆಲಸ ಮಾಡುವುದು, ಗುರಿ ನಿಗದಿ ಪಡಿಸುವುದು ಇತ್ಯಾದಿಗಳ ತರಬೇತಿಯಾಗಿರಬಹುದು. ಕೆಲಸ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅಥವಾ ಭಾವನೆಯನ್ನು ನಿಯಂತ್ರಿಸುವುದು ಸಹ ಸಾಫ್ಟ್ ಸ್ಕಿಲ್ ಕಲಿಕೆಯಲ್ಲಿ ಸೇರಿದೆ.
ಸಾಫ್ಟ್ ಸ್ಕಿಲ್ 1- ಪ್ರಗತಿಯ ಮನೋಭಾವ Growth mindset
Growth mindset ಎನ್ನುವುದು ಎಲ್ಲರಲ್ಲಿಯೂ ಇರಬೇಕಾದ ಅತ್ಯಂತ ಅಗತ್ಯವಾದ ಸಾಫ್ಟ್ ಸ್ಕಿಲ್ ಆಗಿದೆ. `ನಿರಂತರ ಕಲಿಕೆ ಮತ್ತು ಕೆಲಸದ ಸ್ಥಳದಲ್ಲಿನ ಬದಲಾವಣೆಗಳಿಗೆ ತೆರೆದುಕೊಳ್ಳುವ ಗ್ರೂಥ್ ಮೈಂಡ್‍ಸೆಟ್ (ಪ್ರಗತಿಯ ಮನೋಭಾವ) ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ’ ಎಂದು ಉದೆಮಿ ವರದಿ ಹೇಳಿದೆ.
ಸಿಬ್ಬಂದಿಗಳ ಸ್ಥಿರ ಮತ್ತು ಪ್ರಗತಿಯ ಮನೋಸ್ಥಿತಿಯ ಕುರಿತು ಕಂಪನಿಗಳು ಇಂದು ಹೆಚ್ಚು ಗಮನ ನೀಡುತ್ತಿವೆ. ಗ್ರೋಥ್ ಮೈಂಡ್‍ಸೆಟ್ ಇರುವ ಜನರು ಫೀಡ್‍ಬ್ಯಾಕ್‍ನೊಂದಿಗೆ ಹೊಸತನ್ನು ಕಲಿಯಲು ಮತ್ತು ಸುಧಾರಿಸಿಕೊಳ್ಳಲು ಗಮನ ನೀಡುತ್ತಾರೆ. ಕೌಶಲ, ವರ್ತನೆ, ಮನೋಭಾವವನ್ನು ವೇಗವಾಗಿ ಕಲಿಯಲು ಮತ್ತು ಬದಲಿಸಲು ಗಮನ ನೀಡುತ್ತಾರೆ. ತಂಡದ ಪ್ರತಿಯೊಬ್ಬ ಸಹೋದ್ಯೋಗಿಗಳನ್ನೂ ಹುರಿದುಂಬಿಸುತ್ತಾರೆ. ತಮ್ಮ ಜ್ಞಾನ ಹಂಚಿಕೊಳ್ಳಲು ಮತ್ತು ಇತರರ ಯಶಸ್ಸಿಗೆ ಸಹಾಯ ಮಾಡುತ್ತಾರೆ.

ಸಾಫ್ಟ್ ಸ್ಕಿಲ್ 2. ಕ್ರಿಯೆಟಿವಿಟಿ ಅಥವಾ ಕ್ರಿಯಾಶೀಲತೆ
ಇದು ಕ್ರಿಯೇಟಿವಿಟಿ ಬಯಸುವ ಜಗತ್ತು. ಬಹುಬೇಡಿಕೆಯಲ್ಲಿರುವ ಸಾಫ್ಟ್ ಸ್ಕಿಲ್‍ಗಳಲ್ಲಿ ಸೃಜನಶೀಲತೆ ಅಥವಾ ಕ್ರಿಯೆಟಿವಿಟಿಯು ಒಂದಾಗಿದೆ. ಸೃಜನಶೀಲತೆ ಎನ್ನುವುದು ಯಾರೋ ಒಬ್ಬರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲಿಯೂ ತಮ್ಮದೇ ಆದ ಕ್ರಿಯೆಟಿವಿಟಿ ಇದ್ದೇ ಇರುತ್ತದೆ. ಯಾರು ತಮ್ಮ ಕ್ರಿಯೆಟಿವಿಟಿಯನ್ನು ಕೆಲಸದ ಸ್ಥಳದಲ್ಲಿ ಬಳಸುತ್ತಾರೋ ಅವರಿಗೆ ಕಂಪನಿಗಳು ಆದ್ಯತೆ ನೀಡುತ್ತವೆ. ತಂಡದಲ್ಲಿರುವ ಪ್ರತಿಯೊಬ್ಬರ ಸೃಜನಶೀಲತೆಯನ್ನು ಒರೆಗೆ ಹಚ್ಚಿ ಕೆಲಸ ತೆಗೆಯುವುದು ಅತ್ಯಂತ ಅವಶ್ಯಕ. ಕ್ರಿಯೆಟಿವಿಟಿ ಥಿಂಕಿಂಗ್ ಅಥವಾ ಸೃಜನಶೀಲ ಯೋಚನೆ ಹೊಂದಿರುವವರಿಗೆ ಈ ವರ್ಷ ಬೇಡಿಕೆ ಉತ್ತಮವಾಗಿರಲಿದೆ.
ಸಾಫ್ಟ್ ಸ್ಕಿಲ್ 3. ಗಮನ ಕೇಂದ್ರೀಕರಣ (Focus Mastery: Master Your Attention, Ignore Distractions)
Focus Mastery ಎನ್ನುವುದು ಬಹುಬೇಡಿಕೆಯ ಸಾಫ್ಟ್ ಸ್ಕಿಲ್. ನೀವು ಮಾಡುವ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಚಿತ್ತವನ್ನು ಕೆಡಿಸಲು ವಾಟ್ಸ್‍ಆ್ಯಪ್, ಫೇಸ್‍ಬುಕ್ ನೋಟಿಫಿಕೇಷನ್‍ಗಳೇ ಸಾಕು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಬಿಡದ ಇಂತಹ ಹಲವು ಅಂಶಗಳಿಂದ ಅಂತರ ಕಾಯ್ದುಕೊಂಡು ಕಂಪನಿ ನೀಡಿದ ಕೆಲಸದ ಮೇಲೆ ಸಮರ್ಥವಾಗಿ ಗಮನ ಕೇಂದ್ರೀಕರಿಸುವುದು ಅವಶ್ಯವಾಗಿದೆ.

ಸಾಫ್ಟ್ ಸ್ಕಿಲ್ 4. ಅನ್ವೇಷಣೆ- Innovation Skills for the Future
ಇನ್ನೋವೇಷನ್ ಎನ್ನುವುದೂ ಒಂದು ಸಾಫ್ಟ್ ಸ್ಕಿಲ್ ಆಗಿದೆ. ಮುಂದಿನ ದಿನಗಳಲ್ಲಿ ಈ ಸಾಫ್ಟ್ ಸ್ಕಿಲ್‍ಗೆ ಬೇಡಿಕೆ ಅಕವಾಗಿರಲಿದೆ. ಕ್ರಿಯೆಟಿವಿಟಿಯು ಇನ್ನೋವೇಷನ್‍ನ ತಾಯಿ ಇದ್ದಹಾಗೆ. ತಾಂತ್ರಿಕ ಕೌಶಲ ಕಲಿಯುವುದರ ಜೊತೆಗೆ ಬದಲಾಗುತ್ತಿರುವ ವರ್ತನೆಯ ಕಡೆಗೂ ಗಮನ ನೀಡಿ. ನೀವು ಕಲಿತು ಬಂದ ತಾಂತ್ರಿಕ ಕೌಶಲಗಳನ್ನು ಮಾತ್ರ ಕಂಪನಿಗಳು ನೋಡುವುದಿಲ್ಲ. ಪ್ರತಿದಿನ ಕೆಲಸ ಮಾಡುವಾಗ ಯಾವುದಾದರೂ ಅನ್ವೇಷಣೆ ಮಾಡಿ ಕಂಪನಿಯ ಪ್ರಗತಿಗೆ ನೆರವಾಗುತ್ತೀರಾ ಎಂದು ಗಮನಿಸುತ್ತವೆ. ನಿಮ್ಮ ಅನ್ವೇಷಣಾ ಮನೋಭಾವವನ್ನು ಸಮರ್ಥವಾಗಿ ಬಳಸಿಕೊಂಡರೆ ಇತರಿಗಿಂತ ಬೇಗ ಪ್ರಗತಿ ಕಾಣುವಿರಿ.
ಸಾಫ್ಟ್ ಸ್ಕಿಲ್ 5.ಸಂವಹನ ಕೌಶಲ- Communication Skills
ಪ್ರತಿ ಸಮಯದಲ್ಲಿಯೂ ಅವಶ್ಯವಾಗಿರುವ ಸಾಫ್ಟ್ ಸ್ಕಿಲ್ ಆಗಿದೆ. ಕಂಪನಿಗಳು ಅತ್ಯುತ್ತಮವಾಗಿ ಮಾತನಾಡುವವರಿಗೆ ಮಣೆ ಹಾಕುತ್ತವೆ. ಉತ್ತಮ ಮಾತುಗಾರಿಕೆ ಎಲ್ಲರಲ್ಲೂ ಇರಬೇಕಾದ ಅವಶ್ಯ ಕೌಶಲವಾಗಿದೆ. ಸಂವಹನ ಕೌಶಲಗಳಲ್ಲಿ ಪರಿಣಾಮಕಾರಿಯಾಗಿ ಮಾತನಾಡುವುದು, ಸಂಕ್ಷಿಪ್ತವಾಗಿ ಬರೆಯುವುದು, ಗಮನವಿರಿಸಿ ಕೇಳುವುದು, ಯೋಚನೆಗಳನ್ನು ವ್ಯಕ್ತಪಡಿಸುವುದು, ಗುಂಪುಚರ್ಚೆಯಲ್ಲಿ ಪರಿಣತರಾಗಿರುವುದು, ಸಮರ್ಪಕ ಫೀಡ್‍ಬ್ಯಾಕ್ ನೀಡುವುದೂ ಸೇರಿವೆ.

ಸಾಫ್ಟ್ ಸ್ಕಿಲ್ 6. ಸ್ಟೋರಿಟೆಲ್ಲಿಂಗ್ ಅಥವಾ ಕತೆ ಹೇಳುವುದು storytelling soft skills
ಕತ ಹೇಳುವುದು ಎಂದರೆ ನಿಮಗೆ ನೀಡಿದ ಕೆಲಸ ಮಾಡದೆ ಸಬೂಬು ಹೇಳುವುದಲ್ಲ. ಈಗಿನ ಡಿಜಿಟಲ್ ಜಗತ್ತಿನಲ್ಲಿ ಜನರಿಗೆ ಅರ್ಥವಾಗುವಂತೆ ಉತ್ಪನ್ನಗಳು, ಸೇವೆಗಳ ವಿವರಗಳನ್ನು ಪ್ರಕಟಿಸಬೇಕು. ಡಿಜಿಟಲ್ programme ಮ್ಯಾನೇಜರ್‍ಗಳು, ಕಂಟೆಟ್ ಮಾಕ್ಟೆರ್‍ಗಳು, ಎಸ್‍ಇಒ ಸ್ಟ್ರಾಟರ್ಜಿ ಮಾಡುವವರು, ಸಾಫ್ಟ್‍ವೇರ್ ಡೆವಲಪರ್‍ಗಳು ಸ್ಟೋರಿ ಟೆಲ್ಲಿಂಗ್ ಎಂಬ ಅನನ್ಯ ಸಾಫ್ಟ್ ಸ್ಕಿಲ್ ಹೊಂದಿರುವುದು ಅತ್ಯಂತ ಅವಶ್ಯ.

ಸಾಫ್ಟ್ ಸ್ಕಿಲ್ 7. ಕಲ್ಚರ್ ಅವರ್ನೆಸ್ cultural awareness
Is cultural awareness a soft skill? ಹೌದು. ಸಂಸ್ಕಂತಿಯ ಕುರಿತು ತಿಳಿವಳಿಕೆಯೂ ಉದ್ಯೋಗಿಗಳಿಗೆ ಅವಶ್ಯ. ಅದು ಕಂಪನಿಯ ಕಲ್ಚರ್ ಆಗಿರಬಹುದು, ತಾವು ಕೆಲಸ ಮಾಡುವ ದೇಶದ ಕಲ್ಚರ್ ಆಗಿರಬಹುದು. ಪ್ರತಿಯೊಬ್ಬರೂ ತಮ್ಮ ಕಂಪನಿಯ ಕೆಲಸದ ಸಂಸ್ಕತಿಯನ್ನು ಅರಿತು ಕೆಲಸ ಮಾಡಬೇಕು.
ಸಾಫ್ಟ್ ಸ್ಕಿಲ್ 8. ಕ್ರಿಟಿಕಲ್ ಥಿಂಕಿಂಗ್
ಮುಕ್ತವಾಗಿ, ತೆರೆದ ಮನಸ್ಸಿನಿಂದ ಚಿಂತನೆ ಮಾಡುವುದನ್ನು ಕ್ರಿಯೇಟಿವ್ ಥಿಂಕಿಂಗ್ ಎನ್ನಬಹುದು. ಚಿಂತನೆ ಮಾಡುವ ಕುರಿತು ಯಾವುದೇ ನಿರ್ಬಂಧಗಳು ಇರುವುದಿಲ್ಲ. Critical thinking is the intellectually disciplined process of actively and skillfully conceptualizing, applying, analyzing, synthesizing, and/or evaluating information gathered from, or generated by, observation, experience, reflection, reasoning, or communication, as a guide to belief and action.
- ಹೊಸ ಮತ್ತು ವಿಭಿನ್ನ ಆಲೋಚನೆಗಳ ಕುರಿತು ಪ್ರಶ್ನೆಗಳನ್ನು ಕೇಳುವುದು. ಎಲ್ಲಾ ಐಡಿಯಾಗಳ ಕುರಿತು ಮಾತನಾಡುವುದು ಮತ್ತು ಕೇಳುವುದು. ಕೆಲವೊಂದು ಸಾಧ್ಯವಿಲ್ಲದ ಐಡಿಯಾಗಳ ಕುರಿತೂ ಆಲೋಚಿಸುವುದು.
- ಯೋಜಿತ ನಿರ್ಧಾರವನ್ನು ಬದಲಾಯಿಸಿ ಹೊಸ ವಿಧಾನದಲ್ಲಿ ಮಾಡುವುದು.
- ಕೆಲವೊಂದು ನಿಗದಿತ ಕೆಲಸವನ್ನು ಮಾಡಲು ಹೊಸ ವಿಧಾನವನ್ನು ವಿನ್ಯಾಸ ಮಾಡುವುದು.
- ಸಾಧ್ಯವಿರುವ, ಅಸಾಧ್ಯವಾದ ಅಥವಾ ತಿಳಿಯದೆ ಇರುವ ಐಡಿಯಾ ಕುರಿತು ಆಲೋಚಿಸುವುದು.
ಸಾಫ್ಟ್ ಸ್ಕಿಲ್ 9. ನಾಯಕತ್ವ Leadership
Leadership ಕೂಡ ಪ್ರತಿ ಸಮಯದಲ್ಲಿಯೂ ಬೇಡಿಕೆಯಲ್ಲಿರುವ ಸಾಫ್ಟ್ ಸ್ಕಿಲ್ ಆಗಿದೆ. ತಂಡವನ್ನು ಉತ್ತೇಜಿಸಿ ಕೆಲಸ ತೆಗೆಸುವುದು, ಖಚಿತ ನಿರ್ಧಾರ ಬತೆಗೆದುಕೊಳ್ಳುವುದು, ಸಾಮರ್ಥ್ಯ ಮತ್ತು ದೌರ್ಬಲ್ಯದ ಅರಿವು ಸೇರಿದಂತೆ ಹಲವು ಅಂಶಗಳು ಲೀಡರ್ ಗೆ ಅವಶ್ಯ.

ಸಾಫ್ಟ್ ಸ್ಕಿಲ್ 10. ಭಾವನಾತ್ಮಕ ಬುದ್ಧಿಮತ್ತೆ emotional intelligence
ಇಮೋಷನಲ್ ಇಂಟಲಿಜೆನ್ಸ್ ಎನ್ನುವುದು ಬಹುಬೇಡಿಕೆಯ ಸಾಫ್ಟ್ ಸ್ಕಿಲ್ ಆಗಿರಲಿದೆ ಎಂದು ಉದೆಮಿ ತಿಳಿಸಿದೆ. ಕೆಲವೊಮ್ಮೆ ನಮ್ಮ ಭಾವನೆಗಳ ಮೇಲೆ ಸರಿಯಾದ ನಿಯಂತ್ರಣ ಅಗತ್ಯವಾಗಿರುತ್ತದೆ. ಭಾವನೆ ಎನ್ನುವುದು ಬುದ್ಧಿವಂತಿಕೆ ಆಗಿದ್ದು, ನಿಮ್ಮ ಕರಿಯರ್ ಯಶಸ್ಸಿಗೆ ಅತ್ಯಂತ ಅಗತ್ಯವಾಗಿದೆ.

ಸುದ್ದಿಜಾಲ.ಕಾಂ ಕೀವರ್ಡ್
Must have soft skills, Soft skills kannada, job skills, soft skills jobs, career soft skills, Soft Skills Vs Hard Skills, Communication skills, ಸಂವಹನ ಕೌಶಲ್ಯ, Self-Motivation, ಸ್ವಯಂ ಸ್ಫೂರ್ತಿ, Leadership, ನಾಯಕತ್ವ ಕೌಶಲ್ಯ, Teamwork, ತಂಡದ ಜೊತೆಗೆ ಕೆಲಸ, Problem Solving, ಸಮಸ್ಯೆ ಬಗೆ ಹರಿಸುವ ಕೌಶಲ್ಯ

















Got a Questions?
Find us on Socials or Contact Us and we’ll get back to you as soon as possible.