ಲಾಫಿಂಗ್ ಬುದ್ಧನ ಮೂಲಕ ಮನೆ, ಆಫೀಸ್, ಬಿಸ್ನೆಸ್ ಸ್ಥಳಗಳಲ್ಲಿ ಸಮೃದ್ಧಿ, ಸಂತೋಷ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

ಸುದ್ದಿಜಾಲ ಫೆಂಗ್‍ಶುಯಿ ವಾಸ್ತು ಸಲಹೆ

ಬಹಳಷ್ಟು ಜನರು ತಮ್ಮ ಬದುಕಿನ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಿಸಿಕೊಳ್ಳುವ ಸಲುವಾಗಿ ವಿವಿಧ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇವುಗಳು ತಮ್ಮ ಅದೃಷ್ಟವನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆ. ವಾಸ್ತುಶಾಸ್ತ್ರ ಅಥವಾ ಫೆಂಗ್‍ಶುಯಿ ಪ್ರಕಾರವೂ ಕೆಲವೊಂದು ವಸ್ತುಗಳಿಗೆ ವಿಶೇಷ ಮಹತ್ವವಿದೆ. ಅವುಗಳಲ್ಲಿ ಲಾಫಿಂಗ್ ಬುದ್ಧನಿಗೆ ವಿಶೇಷ ಸ್ಥಾನ.

ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ನಗುವ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. ಆಫೀಸ್, ಮನೆ, ಹೋಟೆಲ್, ರೆಸ್ಟೋರೆಂಟ್ ಮುಂತಾದ ಕಡೆ ಲಾಫಿಂಗ್ ಬುದ್ಧನ ಪುಟ್ಟ ಪ್ರತಿಮೆಯನ್ನು ಇಟ್ಟಿರುವುದನ್ನು ನೋಡಿರಬಹುದು. ಉಡುಗೊರೆ ನೀಡುವುದಕ್ಕೂ ಇದು ಜನರ ನೆಚ್ಚಿನ ಆಯ್ಕೆ.

ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ಬುದ್ಧನನ್ನು ಮನೆಯ ಹೊರಗೆ ಇಡುವುದು ತರವಲ್ಲ. ವಾಸದ ಕೋಣೆಯು ಬುದ್ಧನ ಪ್ರತಿಮೆ ಇಡಲು ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ನಾವು ನಿಂತುಕೊಂಡಾಗ ನಮ್ಮ ಕಣ್ಣಿನಿಂದ ಮೇಲ್ಮಟ್ಟದಲ್ಲಿರುವಂತೆ ಪ್ರತಿಮೆ ಇಡುವುದು ಸೂಕ್ತ. ಮೇಲಿನಿಂದ ಬಗ್ಗಿ ಪ್ರತಿಮೆ ನೋಡುವಂತೆ ಇರಬಾರದು. ಮನೆಯ ಪ್ರವೇಶದ್ವಾರದ ಹತ್ತಿರ ಇರಿಸಿದರೆ ಉತ್ತಮ.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಲಾಫಿಂಗ್‌ ಬುದ್ಧ ಹೇಗಿರಬೇಕು?

ನೀವೇನಾದರೂ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರೆ ಅಥವಾ ನಿಮ್ಮ ಉದ್ಯಮದಲ್ಲಿ ವಿತ್ತೀಯ ತೊಂದರೆಗಳನ್ನು ಎದುರಿಸುತ್ತಿದ್ದರೆ. ಎರಡೂ ಕೈಗಳನ್ನು ಮೇಲೆ ಮಾಡಿರುವ ಲಾಫಿಂಗ್ ಬುದ್ಧನನ್ನು ಕಚೇರಿಯಲ್ಲಿನ ನಿಮ್ಮ ಟೇಬಲï ಮುಂದೆ ಇಟ್ಟುಕೊಳ್ಳಿ. ಇದರಿಂದಾಗಿ ನಿಮ್ಮ ಉದ್ಯಮದಲ್ಲಿನ ದೊಡ್ಡ ನಷ್ಟಗಳು ತಪ್ಪಲಿವೆ.

ಸಾಲದ ಸುಳಿಯಿಂದ ಪಾರು ಮಾಡುವ ಲಾಫಿಂಗ್‌ ಬುದ್ಧ

ನೀವೇನಾದರೂ ಸಾಲದ ಸುಳಿಯಲ್ಲಿ ಸಿಕ್ಕಿ ಅದರಿಂದ ನಿಮ್ಮ ಮನಶಾಂತಿ ಹಾಳಾಗಿದ್ದರೆ ಅಥವಾ ನೀವು ಹಣಕಾಸಿನ ತೊಂದರೆ ಎದುರಿಸುತ್ತಿದ್ದರೆ ಮಲಗಿರುವ ಲಾಫಿಂಗ್ ಬುದ್ಧನನ್ನು ಹಣದ ಕಂತೆಗಳ ಪಕ್ಕದಲ್ಲಿ ಅಥವಾ ಹಣವಿಡುವ ಜಾಗದಲ್ಲಿ ಇಡಿ. ಈ ರೀತಿ ಮಾಡುವುದರಿಂದ ಹಣಕಾಸಿನ ತೊಂದರೆ ಸರಿಹೋಗಿ ಸಾಲದ ಸಮಸ್ಯೆ ಪರಿಹಾರವಾಗುತ್ತದೆ.

ಸಂತಾನ ಪ್ರಾಪ್ತಿಗೆ ಲಾಫಿಂಗ್ ಬುದ್ಧ

ಮಕ್ಕಳೊಂದಿಗೆ ಆಡುತ್ತಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಸಾಕಷ್ಟು ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ ಎಂದು ಫೆಂಗ್ ಶುಯಿ ವಾಸ್ತುವು ಹೇಳುತ್ತದೆ. ಈ ರೀತಿಯ ಬುದ್ಧನನ್ನು ಮನೆಯ ಮಲಗುವ ಕೋಣೆಯಲ್ಲಿಟ್ಟುಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ..

ವ್ಯಾಪಾರ ಉತ್ತಮ ಪಡಿಸಿಕೊಳ್ಳುವ ಲಾಫಿಂಗ್‌ ಬುದ್ಧ

ನಿಮ್ಮ ಉದ್ಯಮ ಅಥವಾ ಅಂಗಡಿ ವ್ಯಾಪಾರ ಸರಿಯಾಗಿ ನಡೆಯದಿದ್ದರೆ ಅಥವಾ ಒಳ್ಳೆಯ ಮಾರಾಟ ಇಲ್ಲದಿದ್ದರೆ ಚೀಲದಲ್ಲಿ ಹಣ ಹಿಡಿದಿರುವ ಲಾಫಿಂಗ್ ಬುದ್ಧನನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಿ. ಇದರಿಂದ ನಿಮ್ಮ ಅಂಗಡಿಗೆ ಗಿರಾಕಿಗಳು ಹೆಚ್ಚಾಗುತ್ತಾರೆ. ಉದ್ಯಮದಲ್ಲಿ ಲಾಭವಾಗಲಿದೆ.

ಕೆಟ್ಟ ದೃಷ್ಟಿ ತೆಗೆಯುವ ಲಾಫಿಂಗ್ ಬುದ್ಧ

`ನಿಮ್ಮ ಮೇಲೆ ಅಥವಾ ನಿಮ್ಮ ಉದ್ಯಮದ ಅಭಿವೃದ್ಧಿ ಮೇಲೆ ಕೆಟ್ಟ ಕಣ್ಣು ಬಿದ್ದಿದ್ದರೆ ಅದನ್ನು ತಪ್ಪಿಸಲು ಡ್ರ್ಯಾಗನ್ ಮೇಲೆ ಕುಳಿತಿರುವ ಲಾಫಿಂಗ್ ಬುದ್ಧನನ್ನು ಮನೆ ಹಾಗೂ ಕಚೇರಿಯಲ್ಲಿ ಇಡಿ. ಇದರಿಂದ ಋಣಾತ್ಮಕ ಶಕ್ತಿಯು ನಿಮ್ಮಿಂದ ದೂರವಾಗುತ್ತದೆ. ಜೊತೆಗೆ ಯಾರೇ ಕಣ್ಣು ಹಾಕಿದರೂ ಅದು ನಿಮಗೆ ತಾಗುವುದಿಲ್ಲ.

ಶಾಂತಿ ಮತ್ತು ನೆಮ್ಮದಿಗೆ ಲಾಫಿಂಗ್‌ ಬುದ್ಧ

`ನಿಮ್ಮ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಯಾಗಬೇಕೆಂದರೆ. ಹಾಗೂ ಆ ನೆಮ್ಮದಿ ಯಾವಾಗಲೂ ದೂರವಾಗಬಾರದೆಂದರೆ ಕೈಯಲ್ಲಿ ಬಟ್ಟಲು ಹಿಡಿದಿರುವ ಲಾಫಿಂಗï ಬುದ್ಧನನ್ನು ಮನೆಗೆ ತನ್ನಿ. ಇದರಿಂದಾಗಿ ನಿಮ್ಮ ದುಃಖಗಳು ದೂರವಾಗಿ. ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಜೊತೆಗೆ ನಿಮ್ಮ ಕುಟುಂಬದವರ ಮಧ್ಯೆ ಪರಸ್ಪರ ಪ್ರೇಮ, ಅನ್ಯೋನ್ಯತೆ, ಬಾಂಧವ್ಯ ಇರುತ್ತದೆ.

ಧ್ಯಾನಸ್ಥಿತಿಯಲ್ಲಿರುವ ಬುದ್ಧ

ಶಾಂತ ಜೀವನಕ್ಕಾಗಿ  ಧ್ಯಾನಸ್ಥಿತಿಯಲ್ಲಿರುವ ಪ್ರತಿಮೆಯನ್ನು ಮನೆಗೆ ತನ್ನಿ. ಜೀವನದಲ್ಲಿ ಯಾವುದೇ ರೀತಿಯ ಒತ್ತಡ ಬಂದರೂ ಸಮಸ್ಥಿತಿಯಲ್ಲಿ ಇರಲು ನೆರವಾಗುತ್ತದೆ. ಇದನ್ನು ಪ್ರಾರ್ಥನಾ ಕೊಠಡಿ, ಮಲಗುವ ಕೋಣೆ, ಅಧ್ಯಯನ ಕೊಠಡಿ ಅಥವಾ ಈಗಿನ ಪರಿಸ್ಥಿತಿಯಲ್ಲಿ ವರ್ಕ್‍ಫ್ರಮ್ ಹೋಮ್ ಮಾಡುವ ಮನೆಯ ಆಫೀಸ್‍ನಲ್ಲಿ ಇಡಬಹುದು.

ಡ್ರ್ಯಾಗನ್ ಆಮೆಯ ಮೇಲೆ ಕುಳಿತ ಲಾಫಿಂಗ್ ಬುದ್ಧ

`ಡ್ರ್ಯಾಗನ್ ಆಮೆಯ ಮೇಲೆ ಕುಳಿತ ಲಾಫಿಂಗ್ ಬುದ್ಧನು ಶಕ್ತಿಯನ್ನು ಸೂಚಿಸುತ್ತಾನೆ. ಕಚೇರಿಯಲ್ಲಿ ಮೇಜಿನಲ್ಲಿ ಇಟ್ಟರೆ ವ್ಯವಹಾರದ ಪ್ರಗತಿಗೆ ನೆರವಾಗುತ್ತದೆ. ವೃತ್ತಿ ಅಥವಾ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಪಡೆಯಲು, ಸ್ಟಡಿ ಟೇಬಲ್ ಅಥವಾ ಆಫೀಸ್ ಮೇಜಿನ ಮೇಲೆ ನಗುವ ಬುದ್ಧನ ಪ್ರತಿಮೆಯನ್ನು ಇರಿಸಿ.

ನಗುವ ಬುದ್ಧ

ವಾಸ್ತುಶಾಸ್ತ್ರದ ಪ್ರಕಾರ ನಗುವ ಬುದ್ಧನನ್ನು ಮನೆಯ ಪೂರ್ವದಿಕ್ಕಿನಲ್ಲಿ ಇಡಬೇಕು. ಪೂರ್ವದಲ್ಲಿ ಇಡುವುದರಿಂದ ಇಡೀ ಮನೆಗೆ ಸಂತೋಷ, ಸಾಮರಸ್ಯ ತರುತ್ತದೆ. ವಾದಗಳು, ಆಂತರಿಕ ಕಲಹಗಳನ್ನು ತಡೆಯುತ್ತದೆ.

`ಭುಜದ ಮೇಲೆ ಚೀಲ ಹೊತ್ತುಕೊಂಡಿರುವ ಪ್ರತಿಮೆಯು ಅದೃಷ್ಟದ ಸಂಕೇತ. ಈ ಪ್ರತಿಮೆಯನ್ನು ವಾಸದ ಕೋಣೆಯಲ್ಲಿ ಇಡುವ ಮೂಲಕ ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸಬಹುದು. ಪ್ರತಿಮೆ ಚಿನ್ನದ ಬಣ್ಣ ಅಥವಾ ಹೊಳೆಯುವ ಬಣ್ಣ ಹೊಂದಿದ್ದರೆ ಸಾಕಷ್ಟು ಸಕಾರಾತ್ಮಕ ಕಂಪನಗಳನ್ನು ಸೃಷ್ಟಿಸುತ್ತದೆ.

ಲಾಫಿಂಗ್‌ ಬುದ್ಧನನ್ನು ಎಲ್ಲಿಡಬಾರದು ?

`ಅಡುಗೆ ಮನೆ, ಸ್ನಾನಗೃಹ ಅಥವಾ ಶೌಚಾಲಯದಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆ ಇಡಬೇಡಿ. ಹಾಗೆಯೇ, ಲಾಫಿಂಗ್ ಬುದ್ಧನನ್ನು ಎಂದಿಗೂ ಮನೆಯ ನೆಲದ ಮೇಲೆ ಇಡಬಾರದು.

error: Content is protected !!