tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ!

By | 02/11/2021

ಟೊಮೆಟೊ ಇದ್ದರೆ ಬಹುಬಗೆಯ ರೆಸಿಪಿ ಮಾಡಬಹುದು. ಉಪ್ಪಿನಕಾಯಿ ಪ್ರಿಯರು ಟೊಮೆಟೊ ಉಪ್ಪಿನಕಾಯಿ (tomato pickle) ಮಾಡಬಹುದು. ಗೊಜ್ಜು ಪ್ರಿಯರು ಟೊಮೆಟೊ ಗೊಜ್ಜು ಮಾಡಿ ಅನ್ನದೊಂದಿಗೆ ಬೆರೆಸಿ ಊಟ ಮಾಡಲು ಬಯಸಬಹುದು. ಟೊಮೆಟೊದಲ್ಲಿ ಉಪ್ಪಿನಕಾಯಿ ಮಾಡಬಹುದೇ? ಎಂಬ ಪ್ರಶ್ನೆ ಹೆಚ್ಚಿನ ಜನರಲ್ಲಿ ಇರುತ್ತದೆ. ಖಂಡಿತವಾಗಿಯೂ ಮಾಡಬಹುದು, ಟೊಮೆಟೊ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುವಂತಹ ರೆಸಿಪಿಯಾಗಿದ್ದು, ಈಗಲೇ ಟ್ರೈ ಮಾಡಿ.

ಟೊಮೆಟೊ ಉಪ್ಪಿನಕಾಯಿ (tomato pickle in kannada) ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು


ಟೊಮೆಟೊ ಹುಳಿಯಾದ್ರೂ ಟೊಮೆಟೊ ಉಪ್ಪಿನಕಾಯಿಗೆ ಹುಣಸಹಣ್ಣು ಬೇಕು. 30 ಗ್ರಾಂ ಹುಣಸೆ ಹಣ್ಣು ತೆಗೆದುಕೊಳ್ಳಿ. ಒಂದು ಕೆ.ಜಿ. ಅತ್ಯುತ್ತಮವಾದ ಟೊಮೆಟೊ ಹಣ್ಣುಗಳನ್ನು ತೆಗೆದುಕೊಳ್ಳಿ. ಸಾಂಬಾರ್‌ಗಾದ್ರೆ ಯಾವುದೇ ರೀತಿಯ ಟೊಮೆಟೊ ಆಗಬಹುದು. ಆದರೆ, ಉಪ್ಪಿನಕಾಯಿಗೆ ಉತ್ತಮವಾದ ಟೊಮೆಟೊ ಹಣ್ಣುಗಳನ್ನು ತೆಗೆದುಕೊಳ್ಳಿ. ಒಂದು ಟೀ ಚಮಚ ಮೆಂತೈ ಕಾಳು, ಒದು ಟೇಬಲ್‌ ಚಮಚ ಸಾಸಿವೆ ಪುಡಿ, ಇನ್ನೂರು ಗ್ರಾಂ ಎಣ್ಣೆ, ಒಂದು ಟೇಬಲ್‌ ಚಮಚ ಸಾಸಿವೆ, ಹತ್ತು ಎಸಲು ಬೆಳ್ಳುಳ್ಳಿ, ಐವತ್ತು ಗ್ರಾಂ ಕೆಂಪು ಮೆಣಸಿನ ಪುಡಿ, ಒಂದು ಟೇಬಲ್‌ ಚಮಚ ಇಂಗು, ರುಚಿಗೆ ತಕ್ಕಷ್ಟು ಉಪ್ಪು ಸಿದ್ಧವಾಗಿಟ್ಟುಕೊಳ್ಳಿ. ಇಷ್ಟು ಕಡಿಮೆ ಸಾಮಾಗ್ರಿಗಳಲ್ಲಿ ರುಚಿಕರವಾದ ಟೊಮೆಟೊ ಉಪ್ಪಿನಕಾಯಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಟೊಮೆಟೊ ಉಪ್ಪಿನಕಾಯಿ (tomato pickle in kannada) ಮಾಡುವ ವಿಧಾನ ತಿಳಿದುಕೊಳ್ಳೋಣ


ಟೊಮೆಟೊ ಉಪ್ಪಿನಕಾಯಿ ಮಾಡುವುದು ಸುಲಭ. ಇದಕ್ಕಾಗಿ ಮೊದಲು ಟೊಮೆಟೊ ಮತ್ತು ಹುಣಸೆಯನ್ನು ಬೇಯಿಸಿಕೊಳ್ಳಬೇಕು. ಇಡ್ಲಿ ಪಾತ್ರೆಯಲ್ಲಿ ಟೊಮೆಟೊ, ಹುಣಸೆ ಮೆತ್ತಗಾಗುವವರೆಗೆ ಬೇಯಸಿಕೊಳ್ಳಿ. ಬೇಯಿಸಿದ ಟೊಮೆಟೊದ ಸಿಪ್ಪೆ ಬಿಡಿಸಿ, ಈ ರೀತಿ ಬಿಡಿಸಿದ ಸಿಪ್ಪೆಯನ್ನು ಬೇರೊಂದು ಪಾತ್ರೆಗೆ ಹಾಕಿ ಸ್ಮ್ಮಾಷ್‌ ಮಾಡಿಟ್ಟುಕೊಳ್ಲೀ. ಇದನ್ನು ಸಿಪ್ಪೆ ತೆಗೆದ ಟೊಮೆಟೊ ಮತ್ತು ಹುಣಸೆ ಹಣ್ಣಿನೊಂದಿಗೆ ಮಿಶ್ರ ಮಾಡಿಕೊಳ್ಳಿ. ನೋಡಲು ಗ್ರೇವಿಯಂತೆ ಕಾಣುವಂತೆ ಇವುಗಳನ್ನು ಮಿಶ್ರ ಮಾಡಿ.

ಮೆಂತೆ ಮತ್ತು ಸಾಸಿವೆಯನ್ನು ಚಿಟಾಪಟ್‌ ಹುರಿದು ಮಿಕ್ಸರ್‌ನಲ್ಲಿ ಪೌಡರ್‌ ಮಾಡಿ. ಗ್ಯಾಸ್‌ ಸ್ಟವ್‌ ನ್‌ ಮಾಡಿ. ಕಡಾಯಿ ಇಡಿ. ಅದಕ್ಕೆ ಎಣ್ಣೆ ಹಾಕಿ. ಅದಕ್ಕೆ ಸಾಸಿವೆ ಕಾಳು ಸೇರಿಸಿ. ಸಾಸಿವೆ ಸಿಡಿಯುತ್ತಿದ್ದಂತೆ, ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಸೇರಿಸಿ, ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ, ಅದಕ್ಕೆ ಕೆಂಪು ಮೆಣಸಿನ ಪುಡಿ ಹಾಕಿ. ಬಳಿಕ ಅದಕ್ಕೆ ಟೊಮೆಟೊ ಗ್ರೇವಿ ಹಾಕಿ. ಮಿಕ್ಸರ್‌ನಲ್ಲಿ ಪುಡಿ ಮಾಡಿಟ್ಟ ಪೌಡರ್‌ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಇಂಗು ಹಾಕಿ ಮಿಶ್ರ ಮಾಡಿ. ಎಣ್ಣೆ ಬಿಡುವ ತನಕ ಗ್ರೇವಿಯನ್ನು ಬೇಯಿಸಿ. ನೀರು ಹಾಕಬೇಡಿ. ರುಚಿಕರವಾದ ಟೊಮೆಟೊ ಉಪ್ಪಿನಕಾಯಿ ರೆಡಿ.

ಈ ರೆಸಿಪಿಯನ್ನು ಭರಣಿ ಅಥವಾ ಜಾಡಿ ಅಥವಾ ಗಾಜಿನ ಬಾಟಲ್‌ನಲ್ಲಿ ತುಂಬಿಡಿ. ಊಟದ ಜತೆಗೆ ಈ ಟೊಮೆಟೊ ಉಪ್ಪಿನಕಾಯಿ ಇದ್ದರೆ ನಾಲ್ಕು ತುತ್ತು ಅನ್ನ ಹೆಚ್ಚು ಹೊಟ್ಟೆಗಿಳಿಯುವುದು ಗ್ಯಾರಂಟಿ.

Read All Kannada Recipe Click Here

  • ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ, ಫೆಬ್ರವರಿ 10ರೊಳಗೆ ಅರ್ಜಿ ಸಲ್ಲಿಸಿ

  • MANMUL Recruitment 2022- ಮಂಡ್ಯ ಹಾಲು ಒಕ್ಕೂಟ ದಲ್ಲಿ ಭರ್ಜರಿ ನೇಮಕಾತಿ, 187 ಹುದ್ದೆಗಳಿಗೆ ಅರ್ಜಿ ಆಹ್ವಾನ

  • KPTCL Recruitment 2022- ಕರ್ನಾಟಕ ವಿದ್ಯುತ್‌ ನಿಗಮದಲ್ಲಿ ಭರ್ಜರಿ ನೇಮಕ, 1492 ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *