ತೂಕ ಇಳಿಸಿಕೊಳ್ಳಬೇಕಾ? ಇಲ್ಲಿದೆ ನೋಡಿ ಟಿಪ್ಸ್

By | 04/09/2021

ಅಯ್ಯೋ ನಾನು ಇಷ್ಟು ದಪ್ಪಗಾಗಿದ್ದೇನೆ. ನನ್ನ ಫಿಸಿಕ್ಕು ಸರಿನೇ ಇಲ್ಲ.ಈ ನೋವು ಇಂದು ಸರ್ವೇ ಸಾಮಾನ್ಯ. ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರೂ ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಹೆಚ್ಚೇನೂ ಕಷ್ಟ ಪಡದೆ ಸಿಂಪಲ್ಲಾಗಿ ತೂಕ ಇಳಿಸೋ ಟಿಪ್ಸ್ ಇಲ್ಲಿದೆ ನೋಡಿ.

1.ಕುಂಬಳಕಾಯಿ ಜ್ಯೂಸ್ ತೂಕ ಇಳಿಸಲು ಬಹಳ ಸಹಕಾರಿ. ಬೂದು ಕುಂಬಳಕಾಯಿಯನ್ನು ಕತ್ತರಿಸಿ ಒಳಭಾಗದಲ್ಲಿರುವ ಬೀಜಗಳನ್ನು ಬೇರ್ಪಡಿಸಿ. ಸಾಕಷ್ಟು ನೀರಿನಂಶವಿರುವ ಕುಂಬಳಕಾಯಿಯ ಮೃದು ಭಾಗದಲ್ಲಿ ತಯಾರಿಸಿದ ಜ್ಯೂಸ್ ಬೊಜ್ಜು ಕರಗಿಸುವುದಲ್ಲದೆ, ತೂಕ ಕಡಿಮೆ ಮಾಡುತ್ತದೆ. ಕುಂಬಳಕಾಯಿ ಜೊತೆಗೆ ಬೆಳ್ಳುಳ್ಳಿ ಸೇರಿಸಿ ತಯಾರಿಸಿದ ಸೂಪ್ ಸೇವನೆ ಮಾಡಿದರೂ ಪ್ರಯೋಜನಕಾರಿ. ಕಡಿಮೆ ಕ್ಯಾಲೋರಿ ಇರುವುದರಿಂದಾಗಿ ಸುಲಭವಾಗಿ ಜೀರ್ಣವಾಗುತ್ತದೆ. ತೂಕ ನಷ್ಟಕ್ಕೆ ಸಹಕಾರಿಯಾಗುತ್ತದೆ.

  1. ಸೋರೆಕಾಯಿ ಜ್ಯೂಸ್ ಅಥವಾ ಸೂಪ್ ದೇಹದ ಬೊಜ್ಜನ್ನು ಕರಗಿಸಲು ಸಹಕಾರಿಯಾಗಿದೆ. ಇದೂ ಕಡಿಮೆ ಕ್ಯಾಲೋರಿ ಹೊಂದಿದ್ದು ಜೀರ್ಣಿಸಿಕೊಳ್ಳಲು ಸಹಕಾರಿ. ಸೋರೆಕಾಯಿ ಜ್ಯೂಸ್ /ಸೂಪ್ ಕುಡಿಯುವುದರಿಂದ ಅಸಿಡಿಟಿ ಕಡಿಮೆಯಾಗುವುದರ ಜೊತೆಗೆ ಅಜೀರ್ಣ ಸಮಸ್ಯೆ ನೀಗುತ್ತದೆ.
  2. ಕ್ಯಾರೆಟ್ ಒಂದು ಉತ್ತಮ ಆರೋಗ್ಯವರ್ಧಕ ತರಕಾರಿ. ವಿಟಮಿನ್ ಎ ಅಂಶ ಹೇರಳವಾಗಿರುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಕ್ಯಾರೆಟ್ ಸೂಪ್ ನಿತ್ಯ ಸೇವಿಸುವುದರಿಂದ ನಿಮ್ಮ ದೇಹಾರೋಗ್ಯ ವೃದ್ಧಿಸುವುದಲ್ಲದೆ, ದೇಹ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತದೆ.

4.ಪಾಲಕ್ ಒಂದು ಪರಿಪೂರ್ಣ ಆಹಾರ. ಇದೊಂದು ಪೌಷ್ಟಿಕಾಂಶ ಹೇರಳವಾಗಿರುವ ಸೊಪ್ಪು. ದೇಹದ ಅನಗತ್ಯ ಬೊಜ್ಜನ್ನು ಕಡಿಮೆಗೊಳಿಸಿ ತೂಕ ಇಳಿಕೆ ಮಾಡಲು ಪಾಲಕ್ ಸೊಪ್ಪು ಸಹಕಾರಿಯಾಗುತ್ತದೆ. ಪಾಲಕ್ ಸೊಪ್ಪಿನ ಸೂಪ್ ಸೇವನೆ ಮಾಡಿದರೆ ದೇಹದ ಬೊಜ್ಜು ಕಡಿಮೆಯಾಗುವುದರೊಂದಿಗೆ ತೂಕವೂ ಇಳಿಯುತ್ತದೆ.

  1. ಕ್ಯಾಬೇಜ್ ತೂಕ ನಷ್ಟಕ್ಕೆ ಉತ್ತಮ ತರಕಾರಿ. ಸಾವಯವ ರೀತಿಯಲ್ಲಿ ಬೆಳೆದ ಕ್ಯಾಬೇಜ್ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸುವುದರ ಜೊತೆಗೆ ದೇಹಾರೋಗ್ಯ ವೃದ್ಧಿಸುತ್ತದೆ. ಊಟದೊಂದಿಗೆ ಇದನ್ನು ಬಳಸಬಹುದಾಗಿದೆ.

Leave a Reply

Your email address will not be published. Required fields are marked *