ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾಸನ ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 04/09/2021

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಸನ‌ ವಿಭಾಗ ಹಾಸನ ವ್ಯಾಪ್ತಿಯ ತಾಲ್ಲೂಕು ಪ್ರಯೋಗಾಲಯಕ್ಕೆ ಕೆಳಕಂಡ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ :

  1. ಅರಸೀಕೆರೆ ತಾಲ್ಲೂಕು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾರರು ( Analyst)

ಸಂಖ್ಯೆ : 01

ವಿದ್ಯಾರ್ಹತೆ : ಬಿಎಸ್ಸಿ ವಿತ್ ಕೆಮಿಸ್ಟ್ರಿ / ಎಂಎಸ್ಸಿ ಇನ್ ಕೆಮಿಸ್ಟ್ರಿ/ ಬಯೋಕೆಮೆಸ್ಟ್ರಿ

ವಯೋಮಿತಿ : 45 ವರ್ಷಗಳು ಮೀರಿರಬಾರದು.

  1. ನೀರಿನ ಮಾದರಿ ಸಂಗ್ರಹಗಾರರು ( water sample collector)

ಹುದ್ದೆ ಸಂಖ್ಯೆ : 01

ವಿದ್ಯಾರ್ಹತೆ : ಪಿಯುಸಿ( PCM)

ವಯೋಮಿತಿ : 45 ವರ್ಷಗಳು ಮೀರಿರಬಾರದು.

ವೇತನ : 13,000+3000( TA/DA)

ವಿಶೇಷ ಸೂಚನೆ : ವಿಶ್ಲೇಷಣೆಗಾರರಿಗೆ ಕಡ್ಡಾಯವಾಗಿ ನೀರು ಪರೀಕ್ಷೆಯಲ್ಲಿ ಅನುಭವ ಉಳ್ಳತಕ್ಕದ್ದು ಮತ್ತು NABL ಮಾನ್ಯತೆ ಪಡೆದ ನೀರು ಪರೀಕ್ಷಾ ಪ್ರಯೋಗಾಲಯದಲ್ಲಿ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು. ನೀರಿನ ಮಾದರಿ ಸಂಗ್ರಹಗಾರರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ದ್ವಿಚಕ್ರ ವಾಹನ, ವಾಹನವನ್ನು ಚಲಾಯಿಸುವ ಪರವಾನಗಿ ( DL) ಮತ್ತು Android mobile phone ನ್ನು ಕಡ್ಡಾಯವಾಗಿ ಹೊಂದತಕ್ಕದ್ದು.

ಅರ್ಹ ಅಭ್ಯರ್ಥಿಗಳು ಅಂಕಪಟ್ಟಿ ಹಾಗೂ ದಾಖಲೆಗಳೊಂದಿಗೆ ದಿನಾಂಕ 15/09/2021 ರ ಸಂಜೆ 5.30 ಒಳಗೆ ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಹಾಸನ ವಿಭಾಗ, ಜಿಲ್ಲಾ ಪ್ರಯೋಗಾಲಯ ಮತ್ತು ಜಿಲ್ಲಾ ಪಂಚಾಯತ ಕಟ್ಟಡ ಹಾಸನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *