Daily Archives: 22/10/2018

ನೀತಿಕತೆ: ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

By | 22/10/2018

ಒಬ್ಬ ವ್ಯಕ್ತಿಯು ಕತ್ತೆಯೊಂದನ್ನು ಸಾಕಿದ್ದ. ಅದು ಅವನ ಪ್ರೀತಿಯ ಕತ್ತೆಯಾಗಿತ್ತು. ಒಂದು ದಿನ ದಾರಿಯಲ್ಲಿ ಬರುತ್ತಿರುವಾಗ ಆ ಕತ್ತೆ ಪುಟ್ಟ ಬಾವಿಯೊಂದಕ್ಕೆ ಬಿದ್ದುಬಿಟ್ಟಿತು. ಎಷ್ಟೇ ಕಷ್ಟಪಟ್ಟರೂ ಆ ಕತ್ತೆಯನ್ನು ಅಲ್ಲಿಂದ ಹೊರತೆಗೆಯುವ ದಾರಿ ಅವನಿಗೆ ಹೊಳೆಯಲಿಲ್ಲ. ಸುತ್ತಲೂ ಜನರು ಗುಂಪುಗೂಡಿದ್ದರು. ಇದನ್ನು ಇಲ್ಲೇ ಬಿಟ್ಟು ಹೋದರೆ ಪಾಪ ತುಂಬಾ ಕಷ್ಟಪಡುತ್ತದೆ. ಅದಕ್ಕಾಗಿ ಈ ಪುಟ್ಟ ಬಾವಿಗೆ ಮಣ್ಣು ತುಂಬಿ ಅದನ್ನು ಕೊಂದು ಬಿಡಿ ಎಂಬ ಅಭಿಪ್ರಾಯ ಬಂತು. ತನ್ನ ಪ್ರೀತಿಯ ಕತ್ತೆಯನ್ನು ಸಾಯಿಸಲು ಅವನಿಗೆ ಮನಸ್ಸು ಬರಲಿಲ್ಲ. ಆದರೆ, ಬಾವಿಯೊಳಗೆ ನರಳಿ… Read More »

ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

By | 22/10/2018

ಇಪ್ಪತ್ನಾಲ್ಕು ವರ್ಷ ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು.  ಸ್ವಲ್ಪ ಹೊತ್ತಿನಲ್ಲಿ ಆ ತರುಣ `ಅಪ್ಪ, ಮೋಡಗಳೂ ನಮ್ಮೊಂದಿಗೆ ಸಾಗುತ್ತಿವೆ’ ಎಂದ. ಈಗ ನವದಂಪತಿಗಳಿಗೆ ತಡೆಯಲಾಗಲಿಲ್ಲ. ಆ ಯುವಕನ ತಂದೆಗೆ `ಇವನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’ ಎಂದರು.  ಅದಕ್ಕೆ ಹಿರಿಯ ವ್ಯಕ್ತಿ ನಕ್ಕು… Read More »

ಸ್ಫೂರ್ತಿದಾಯಕ ಕತೆ: ಇಂದ್ರಾ ನೂಯಿ ಯಶಸ್ಸಿನ ಕತೆ

By | 22/10/2018

ಪೆಪ್ಸಿಕೊ ಕಂಪನಿಯ ಸಿಇಒ ಮತ್ತು ಮುಖ್ಯಸ್ಥೆ ಇಂದ್ರಾ ನೂಯಿ ಅವರ ಯಶಸ್ಸಿನ ಹಿಂದಿರುವ ಕತೆಗಳನ್ನು ಕೇಳಿದಾಗ `ನಮ್ಮತನ’ಕ್ಕೆ ಇರುವ ಶಕ್ತಿಯ ಅರಿವಾದೀತು. ಜಗತ್ತಿನ ಬೃಹತ್ ಆಹಾರ ಮತ್ತು ಪಾನೀಯ ಕಂಪನಿಯ ಉನ್ನತ್ತ ಸ್ಥಾನದಲ್ಲಿದ್ದ ಇವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟಂಪ್ ಅವರಿಗೆ ಆರ್ಥಿಕ ಸಲಹೆಗಾರ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.  ನೀವು ಮಾಡಬೇಕಾದ ಒಂದು ಪ್ರಮುಖ ಧೈರ್ಯದ ಕಾರ್ಯವೆಂದರೆ ನಿಮ್ಮತನವನ್ನು ಗುರುತಿಸಿಕೊಳ್ಳುವುದು. ನೀವು ಯಾರೆಂದು, ನೀವು ಏನನ್ನು ನಂಬಿದ್ದೀರಿ ಮತ್ತು ನೀವು ಏನಾಗಬಯಸುವಿರಿ ಎನ್ನುವುದನ್ನು ಕಂಡುಕೊಳ್ಳುವುದಾಗಿದೆ’ ಎನ್ನುವುದು ಜನಪ್ರಿಯ ಸೂಕ್ತಿ. ನೂಯಿ ಪುಟಾಣಿ ಬಾಲಕಿಯಾಗಿದ್ದಾಗ ಅವರ… Read More »