Monthly Archives: November 2018

Blogging Guide: ಬ್ಲಾಗ್ ಲೇಖನ ರಚನೆ ಹೇಗೆ?

By | 26/11/2018

ಸೋಷಿಯಲ್ ಮೀಡಿಯಾ ಉತ್ತುಂಗದಲ್ಲಿರುವ ಈ ಕಾಲದಲ್ಲಿ ಬ್ಲಾಗಿಂಗ್ ಎಂದರೆ ಕೆಲವರು ಮೂಗು ಮುರಿಯುತ್ತಾರೆ.  ಆದರೆ, ನೀವು ಗಮನಿಸಿರಬಹುದು. ಈಗ ಬ್ಲಾಗಿಂಗ್ ಎನ್ನುವುದು ವೆಬ್ ಸೈಟ್ ಗಳ ರೂಪದಲ್ಲಿ ಹೊಸ ರೂಪ ಪಡೆದಿದೆ. ಡೊಮೈನ್ ಹೆಸರು ಖರೀದಿ, ಹೋಸ್ಟಿಂಗ್ ಖರೀದಿ ಮಾಡಿ ಸ್ವಂತ ಸರಳ ವೆಬ್ ಸೈಟ್ ರಚಿಸಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ. ನೀವು ಸಹ ಬ್ಲಾಗ್ ಪೋಸ್ಟ್ ಬರೆಯಲು ಇಚ್ಚಿಸಿದ್ದರೆ ಒಂದಿಷ್ಟು ಮಾಹಿತಿ ಇಲ್ಲಿದೆ. ವೆಬ್ ಸೈಟ್ ರೂಪದಲ್ಲಿ ಬ್ಲಾಗ್ ಬರೆಯುವ ಮೊದಲು ನಿಮ್ಮಲ್ಲಿ ಒಂದು ಬ್ಲಾಗ್ ಇರಬೇಕು. ನೀವು ಇನ್ನೂ… Read More »

Book Review: ಮಾವೋನ ಕೊನೆಯ ನರ್ತಕ

By | 24/11/2018

ಲೀ ಕುನ್ ಕ್ಸಿನ್ ಆತ್ಮಕತೆಯನ್ನು ಕೊಂಚ ತಡವಾಗಿ ಓದಿದೆ. ಪುಸ್ತಕ ಓದುವ ಅಭ್ಯಾಸವನ್ನು ಇತ್ತೀಚೆಗೆ ಪುನರಾಂಭಿಸಿದ್ದು ಇದಕ್ಕೆ ಕಾರಣ. ಈ ಪುಸ್ತಕದಲ್ಲಿ ಇಷ್ಟವಾದ ಒಂದಿಷ್ಟು ಸಂಗತಿಗಳನ್ನು ನಿಮ್ಮ ಮುಂದಿಡುತ್ತೇನೆ. ನೆನಪಿಡಿ, ಇದು  ವಿಮರ್ಶೆಯಲ್ಲ. ಪುಸ್ತಕದ ಕುರಿತು ಟಿಪ್ಪಣಿ ಎಂದುಕೊಳ್ಳಬಹುದು. ಪುಸ್ತಕದ ಹೆಸರು: ಲೀ ಕುನ್ ಕ್ಸಿನ್ ಆತ್ಮಕತೆ, ಮಾವೋನ ಕೊನೆಯ ನರ್ತಕ ಅನುವಾದ: ಜಯಶ್ರೀಭಟ್ ಅನುವಾದದ ಗುಣಮಟ್ಟ: ಅತ್ಯುತ್ತಮ ಮೊದಲ ಮುದ್ರಣ: 2012 ಓದಿದ ರೀತಿ: ನರ್ತಕಿಯರ ಬಗ್ಗೆ ಗೊತ್ತು. ಆದರೆ, …. ನರ್ತಕ ಎಂಬ ಹೆಸರಿನ  ಪುಸ್ತಕವೊಂದು ಸ್ನೇಹ ಬುಕ್… Read More »

ಕನಕಮಜಲು: ಕರಾವಳಿಯಲ್ಲೊಂದು ಕಲಾಗ್ರಾಮ

By | 20/11/2018

ಕರಾವಳಿ ಸೇರಿದಂತೆ ಕರ್ನಾಟಕದಲ್ಲಿ ಗ್ರಾಮಕ್ಕೊಂದು ಯುವಕಮಂಡಲ-ಯುವತಿ ಮಂಡಲಗಳು ಸಾಮಾನ್ಯ. ಪ್ರತಿ ಯುವ ಸಂಘಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಂತಹ ವ್ಯತ್ಯಾಸಗಳು ಇರುವುದಿಲ್ಲ. ಆಗಾಗ ಗ್ರಾಮೀಣ ನಾಟಕ, ಯಕ್ಷಗಾನ, ಹಾಡು ನೃತ್ಯ, ಒಂದಿಷ್ಟು ಗ್ರಾಮೀಣ ಕ್ರೀಡೆಗಳು, ಶ್ರಮದಾನ…. ಹೀಗೆ ಒಂದೇ ತೆರನಾದ ಚಟುವಟಿಕೆಗಳು. ನನ್ನ ಪಕ್ಕದೂರು ಕನಕಮಜಲು ಹಾಗಲ್ಲ. ನನ್ನ ಕಾಲೇಜು ದಿನಗಳಲ್ಲಿಯೇ ವಿನೂತನ ಕಾರ್ಯಕ್ರಮಗಳಿಂದ ಗಮನಸೆಳೆಯುತ್ತಿತ್ತು.ಊರು ಬಿಟ್ಟು ಬಂದು ಹತ್ತು ವರ್ಷ ಕಳೆದರೂ ಅಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಸುದ್ದಿ ಸುದ್ದಿಪತ್ರಿಕೆಗಳಮೂಲಕವೇ ನನಗೆ ತಲುಪುತ್ತಿದೆ. ಇತ್ತೀಚೆಗೆ ಅಲ್ಲಿ ಕಲಾ ಕಾರ್ಯಕ್ರಮವೊಂದು ನಡೆದಾಗ ಆ… Read More »

Moral Story: ಪರೀಕ್ಷೆ ತಪ್ಪಿಸಿದ ಹುಡುಗರು

By | 18/11/2018

ನಾಲ್ವರು ಕಾಲೇಜು ಹುಡುಗರಿದ್ದರು. ಅವರಿಗೆ ಮರುದಿನ ಪರೀಕ್ಷೆ ಇತ್ತು. ಆದರೆ, ಹಿಂದಿನ ದಿನ ಸ್ನೇಹಿತನ ಹುಟ್ಟುಹಬ್ಬವೆಂದು ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದರು. ಮರುದಿನ ಪರೀಕ್ಷೆಯ ವಿಷಯವೇ ಅವರಿಗೆ ಮರೆತು ಹೋಗಿತ್ತು. ಅವರು ಏನೂ ಅಧ್ಯಯನ ಮಾಡಿರಲಿಲ್ಲ. ಮರುದಿನ ಪರೀಕ್ಷೆ. ಈ ಪರೀಕ್ಷೆ ತಪ್ಪಿಸಲು ಏನಾದರೂ ಐಡಿಯಾ ಮಾಡಬೇಕು ಎಂದುಕೊಂಡರು. ನಾವು ನಿನ್ನೆ ರಾತ್ರಿ ಒಂದು ಮದುವೆಗೆ ಹೋಗಿದಾಗ ಒಂದು ಘಟನೆ ನಡೆಯಿತು.  ಬರುವಾಗ ಕಾರಿನ ಒಂದು ಟೈರ್ ಸ್ಪೋಟಗೊಂಡು ರಸ್ತೆಯಲ್ಲಿಯೇ ರಾತ್ರಿಯಿಡಿ ಕಳೆಯಬೇಕಾಯಿತು ಎಂಬ ಸುಳ್ಳನ್ನು ಪ್ರಾಂಶುಪಾಲರ ಬಳಿ ಹೇಳಿದರು. ಇವರ ಮಾತುಗಳನ್ನು… Read More »

Moral Story: ದಾರಿಯ ನಡುವೆ ಇರುವ ದೊಡ್ಡ ಕಲ್ಲು

By | 18/11/2018

ಒಬ್ಬ ರಾಜನಿದ್ದ. ಒಂದು ದಿನ ಆತ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟ. ಒಂದು ರಸ್ತೆಯಲ್ಲಿ ದೊಡ್ಡ ಕಲ್ಲೊಂದನ್ನು ಇಟ್ಟು ಅಡಗಿ ಕುಳಿತ. ದಾರಿಗೆ ಅಡ್ಡವಾದ ಆ ಕಲ್ಲನ್ನು ಯಾರಾದರೂ ಬದಿಗೆ ಸರಿಸುತ್ತಾರೋ ಎಂದು ಕಾದುಕುಳಿತ.  ಆ ರಾಜನ ರಾಜ್ಯದ ಶ್ರೀಮಂತರು ಮತ್ತು ವರ್ತಕರು ರಸ್ತೆಯಲ್ಲಿ ಬಂದರು. ಆ ಕಲ್ಲನ್ನು ನೋಡಿದರೂ ನೋಡದಂತೆ ಮುಂದೆ ಸಾಗಿದರು. ಮತ್ತೆ ಹಲವು ಮಂದಿ ಬಂದರೂ ಯಾರೂ ಕಲ್ಲನ್ನು ಪಕ್ಕಕ್ಕೆ ಸರಿಸುವ ಯೋಚನೆ ಮಾಡಲಿಲ್ಲ. ಕೊನೆಗೆ ಒಬ್ಬಾತ ಬಂದ. ಆತನ ಕೈ ತುಂಬಾ ತರಕಾರಿ ಇತ್ತು. ನೋಡಲು… Read More »

Moral Story: ಚಿಟ್ಟೆಮರಿ ಮತ್ತು ಪರೋಪಕಾರಿ ಹುಡುಗ

By | 17/11/2018

ಅವನು ತುಂಬಾ ಹೃದಯವಂತ. ಯಾರೇ ಕಷ್ಟದಲ್ಲಿದ್ದರೂ ಸಹಾಯ ಮಾಡುವ ಪರೋಪಕಾರಿ. ಒಂದಿನ ಹೂದೋಟಕ್ಕೆ ಹೋದಾಗ ಅಲ್ಲೊಂದು ಚಿಟ್ಟೆಯ ಗೂಡು ಕಂಡ. ರೇಷ್ಮೆ ಹುಳುಗಳ ಗೂಡು ರೀತಿ ಹುಳು ಚಿಟ್ಟೆಯಾಗುವ ಮುನ್ನ ಇಂತಹದೊಂದು ಗೂಡಿನಿಂದ ಹೊರಬರಬೇಕು. ಒಂದಿನ ಈ ಯುವಕ ಆ ಚಿಟ್ಟೆಯ ಗೂಡು ಕಂಡ. ಅದು ಕೊಂಚ ತೆರೆದಿರುವುದನ್ನು ನೋಡಿದ. ತುಂಬಾ ಗಂಟೆ ಅಲ್ಲೇ ಕುಳಿತ.  ಆ ಚಿಟ್ಟೆ ಹುಳು ಪಾಪ ಆ ಗೂಡಿನಿಂದ ತನ್ನ ದೇಹವನ್ನು ಹೊರಗೆ ಹಾಕಲು ತುಂಬಾ ಕಷ್ಟಪಡುತ್ತಿತ್ತು.  ಆ ಯುವಕ ಹೀಗೆ ನೋಡುತ್ತಲೇ ಇದ್ದ. ಪಾಪ… Read More »