Category Archives: after sslc what next

ಆನ್ ಲೈನ್ ಕಲಿಕೆ: ಡಿಜಿಟಲ್ ಮಾರ್ಕೆಟಿಂಗ್ ಕಂಪ್ಲಿಟ್ ಗೈಡ್

By | 03/09/2018

ಇದು ಡಿಜಿಟಲ್ ಯುಗ. ಯಾವುದೇ ಉತ್ಪನ್ನವನ್ನು ಮಾರಾಟ ಮಾಡಬೇಕಾದರೂ ಡಿಜಿಟಲ್ ಕೌಶಲ ಅತ್ಯಂತ ಅಗತ್ಯ. ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಕಲಿತವರಿಗೆ ಉತ್ತಮ ಬೇಡಿಕೆಯಿದೆ. ಡಿಜಿಟಲ್ ವ್ಯವಹಾರ ನಡೆಸುವವರೂ ತಮ್ಮ ಬಿಡುವಿನ ವೇಳೆಯನ್ನು ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಮೀಸಲಿಡಬಹುದು. ನೆನಪಿಡಿ, ಇದು ಸ್ಪರ್ಧಾತ್ಮಕ ಯುಗ. ನೀವು ಕೌಶಲ ಕಲಿತಿದ್ದರೆ ಮಾತ್ರ ಆನ್ ಲೈನ್ ನಲ್ಲಿ ನಿಮ್ಮ ಕಂಪನಿ, ಬ್ರಾಂಡ್ ಅನ್ನು ಜನಪ್ರಿಯಗೊಳಿಸಬಹುದು. ಜೊತೆಗೆ, ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಬಹುದು. ಏನಿದು ಡಿಜಿಟಲ್ ಮಾರ್ಕೆಟಿಂಗ್? ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇಂಟರ್ ನೆಟ್ ಬಳಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದನ್ನು… Read More »

ಮಹಾಭಾರತದಿಂದ ಉದ್ಯೋಗಿಗಳು ಏನು ಕಲಿಯಬಹುದು?

By | 10/08/2018

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ ಮಹಾಭಾರತ ಮತ್ತು ಮ್ಯಾನೇಜ್ಮೆಂಟ್ ಪಾಠಗಳ ಕುರಿತು ಒಂದು ಪುಟ್ಟ ಲೇಖನ ದೊರಕಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನವನ್ನು ವಿಸ್ತರಿಸಿ ಬರೆಯಲಾಗಿದೆ ಮತ್ತು ಒಂದಿಷ್ಟು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಭಾರತದ ಧಾರ್ಮಿಕ, ತಾತ್ವಿಕ, ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದಲ್ಲಿ ಹಲವು ಪಾಠಗಳು ಅಡಗಿವೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರು ಮಹಾಭಾರತ ಬೋಧಿಸುವ ತತ್ವಗಳನ್ನು `ಕರಿಯರ್ ಪಾಠ’ವಾಗಿ ಸ್ವೀಕರಿಸಬಹುದು.  ಗಮನ ಕೇಂದ್ರಿಕರಿಸಿದರೆ ಯಶಸ್ಸು ಗುರು  ದ್ರೋಣಾಚಾರ್ಯರಿಂದ ಪಾಂಡವರು ಮತ್ತು ಕೌರವವರು ಅಸ್ತ್ರ ವಿದ್ಯೆ ಅಥವಾ ಬಿಲ್ವಿದ್ಯೆ ಕಲಿಯುತ್ತಿರುತ್ತಾರೆ.… Read More »

ಬ್ಯಾಂಕ್ ಉದ್ಯೋಗವನ್ನು ಎಲ್ಲರೂ ಯಾಕೆ ಇಷ್ಟಪಡುತ್ತಾರೆ?

By | 05/08/2018

ನಿಮಗೆ ಯಾವ ಉದ್ಯೋಗ ಇಷ್ಟವೆಂದು ಯಾರಲ್ಲಿಯಾದರೂ ಕೇಳಿನೋಡಿ. ಸರಕಾರಿ ಜಾಬ್, ಎಂಜಿನಿಯರ್, ಡಾಕ್ಟರ್, ಬ್ಯಾಂಕ್ ಜಾಬ್ ಎಂಬೆಲ್ಲ ಉತ್ತರ ಸಿಗಬಹುದು. ಇವೆಲ್ಲ ಎಂದೆಂದಿಗೂ ಎವರ್ಗ್ರೀನ್ ಜಾಬ್‍ಗಳಾಗಿ ಪರಿಣಮಿಸಿವೆ. ಇವುಗಳಲ್ಲಿ ಬ್ಯಾಂಕಿಂಗ್ ಉದ್ಯೋಗ ಬಹುತೇಕರ ಹಾಟ್ ಫೇವರಿಟ್. ಹಲವು ರಿಕ್ರೂಟ್‍ಮೆಂಟ್ ಸಂಸ್ಥೆಗಳ ಅಂಕಿಅಂಶಗಳೂ ಇದನ್ನು ಖಚಿತಪಡಿಸಿವೆ. ನೀವೂ ಬ್ಯಾಂಕಿಂಗ್ ಉದ್ಯೋಗ ಇಷ್ಟಪಡುವರಾಗಿದ್ದರೆ ಕರ್ನಾಟಕ ಬೆಸ್ಟ್.ಕಾಂ ಈ ಕುರಿತು ಇನ್ನಷ್ಟು ವಿವರವನ್ನು ಇಲ್ಲಿ ನೀಡಿದ್ದು, ಓದಬಹುದು. ಮೊದಲಿಗೆ ಒಂದು ಪ್ರಶ್ನೆ ನಿಮ್ಮ ಮುಂದೆ ಮೂಡಬಹುದು. ಉದ್ಯೋಗಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ? ಅಥವಾ… Read More »

ಕನ್ನಡದಲ್ಲಿಯೂ ಲಭ್ಯವಿರುವ ಕರಿಯರ್ ಮತ್ತು ಶಿಕ್ಷಣ ಆ್ಯಪ್‍ ಗಳು

By | 20/07/2018

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಕನ್ನಡ ಭಾಷೆಯಲ್ಲಿ ಲಭ್ಯವಿರುವ ಆ್ಯಪ್‍ಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಆ್ಯಪ್‍ಗಳು, ಇಂಟರ್‍ನೆಟ್ ತಾಣಗಳು ಲಭ್ಯ ಇವೆ. ಆದರೆ, ಕನ್ನಡದಲ್ಲಿ ಓದಲು ಬಯಸುವವರಿಗೆ ಇಂತಹ ಅವಕಾಶಗಳ ಲಭ್ಯತೆ ಕೊಂಚ ಕಡಿಮೆ ಇದೆ ಎಂದು ಹೇಳಬಹುದು. ಆದರೆ, ತೀರಾ ಕಡಿಮೆ ಏನಿಲ್ಲ.  ನೀವು ಸ್ಮಾರ್ಟ್‍ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಹುಡುಕಿದರೆ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡುವ ಆ್ಯಪ್‍ಗಳು ಸಾಕಷ್ಟು ದೊರಕುತ್ತವೆ. ಇಲ್ಲಿ ನೀಡಲಾದ ಕೀವರ್ಡ್ ಅನ್ನು… Read More »

ಸರ್ಟಿಫಿಕೇಷನ್: ವೆಬ್ ಡಿಸೈನರ್ ಆಗುವುದು ಹೇಗೆ?

By | 14/06/2018

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.    ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು ವೆಬ್ ಡೆವಲಪರ್,… Read More »

ಏರ್ ಟ್ರಾಫಿಕ್ ಕಂಟ್ರೋಲರ್: ಉದ್ಯೋಗ ಪಡೆಯುವುದು ಹೇಗೆ?

By | 10/06/2018

ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್’ ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ. ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್’ ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ… Read More »