ಬ್ಯಾಂಕ್ ಉದ್ಯೋಗವನ್ನು ಎಲ್ಲರೂ ಯಾಕೆ ಇಷ್ಟಪಡುತ್ತಾರೆ?

Bank jobs india

ನಿಮಗೆ ಯಾವ ಉದ್ಯೋಗ ಇಷ್ಟವೆಂದು ಯಾರಲ್ಲಿಯಾದರೂ ಕೇಳಿನೋಡಿ. ಸರಕಾರಿ ಜಾಬ್, ಎಂಜಿನಿಯರ್, ಡಾಕ್ಟರ್, ಬ್ಯಾಂಕ್ ಜಾಬ್ ಎಂಬೆಲ್ಲ ಉತ್ತರ ಸಿಗಬಹುದು. ಇವೆಲ್ಲ ಎಂದೆಂದಿಗೂ ಎವರ್ಗ್ರೀನ್ ಜಾಬ್‍ಗಳಾಗಿ ಪರಿಣಮಿಸಿವೆ. ಇವುಗಳಲ್ಲಿ ಬ್ಯಾಂಕಿಂಗ್ ಉದ್ಯೋಗ ಬಹುತೇಕರ ಹಾಟ್ ಫೇವರಿಟ್. ಹಲವು ರಿಕ್ರೂಟ್‍ಮೆಂಟ್ ಸಂಸ್ಥೆಗಳ ಅಂಕಿಅಂಶಗಳೂ ಇದನ್ನು ಖಚಿತಪಡಿಸಿವೆ. ನೀವೂ ಬ್ಯಾಂಕಿಂಗ್ ಉದ್ಯೋಗ ಇಷ್ಟಪಡುವರಾಗಿದ್ದರೆ ಕರ್ನಾಟಕ ಬೆಸ್ಟ್.ಕಾಂ ಈ ಕುರಿತು ಇನ್ನಷ್ಟು ವಿವರವನ್ನು ಇಲ್ಲಿ ನೀಡಿದ್ದು, ಓದಬಹುದು.

ಮೊದಲಿಗೆ ಒಂದು ಪ್ರಶ್ನೆ ನಿಮ್ಮ ಮುಂದೆ ಮೂಡಬಹುದು. ಉದ್ಯೋಗಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ? ಅಥವಾ ಖಾಸಗಿ ಬ್ಯಾಂಕ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆ? ಎಂದು.

ಸಾರ್ವಜನಿಕ ವಲಯದ ಬ್ಯಾಂಕ್ ಜಾಬ್ ಹೆಚ್ಚು ಸೆಕ್ಯೂರ್ಡ್ ಎಂದು ಬಹುತೇಕರು ಪಿಎಸ್‍ಯುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಗವನ್ಮೆಂಟ್ ಜಾಬ್‍ಗೆ ಪರ್ಯಾಯ ಎಂದು ಬಹುತೇಕರು ಭಾವಿಸುತ್ತಾರೆ. ಇಲ್ಲಿನ ಸೌಲಭ್ಯಗಳು, ವೇತನ ಹೆಚ್ಚಿನವರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ, ಈಗ ಖಾಸಗಿ ಬ್ಯಾಂಕ್‍ಗಳೂ ತಮ್ಮ ಉದ್ಯೋಗಿಗಳಿಗೆ ಕೈತುಂಬಾ ವೇತನ ನೀಡುತ್ತಿರುವುದು ಸುಳ್ಳಲ್ಲ. ಕೆಲವು ಬ್ಯಾಂಕ್‍ಗಳು ಇದಕ್ಕೆ ಅಪವಾದ ಇರಬಹುದು. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದಲ್ಲಿ ಉತ್ತಮ ಬಡ್ತಿ ಪಡೆಯುವ ಅವಕಾಶವು ಖಾಸಗಿ ಬ್ಯಾಂಕ್‍ಗಳಲ್ಲಿ ಹೆಚ್ಚಿರುತ್ತದೆ ಎಂದು ಉದ್ಯೋಗ ತಜ್ಞರು ಅಭಿಪ್ರಾಯಪಡುತ್ತಾರೆ.

ಬ್ಯಾಂಕ್‍ನಲ್ಲಿ ಯಾವೆಲ್ಲ ಉದ್ಯೋಗಗಳಿವೆ?

ಹಣದ ಮುಂದೆ ಕುಳಿತು ಗ್ರಾಹಕರಿಗೆ ಸೇವೆ ಸಲ್ಲಿಸುವ ಕ್ಯಾಷಿಯರ್ ಜಾಬ್‍ನಿಂದ ಹಿಡಿದು, ಬ್ಯಾಂಕ್ ಮ್ಯಾನೇಜರ್, ಎಕ್ಸಿಕ್ಯೂಟಿವ್, ಕಸ್ಟಮರ್ ಸರ್ವೀಸ್ ಸೇರಿದಂತೆ ಹಲವು ಬಗೆಯ ಉದ್ಯೋಗಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿದೆ. ಖಾಸಗಿ ಬ್ಯಾಂಕ್‍ಗಳಲ್ಲಿ ಹೆಚ್ಚಾಗಿ ಮ್ಯಾನೇಜ್‍ಮೆಂಟ್ ಗ್ರಾಜುವೆಟ್ಸ್, ಚಾರ್ಟೆಡ್ ಅಕೌಟೆಂಟ್ಸ್, ಫೈನಾನ್ಶಿಯಲ್ ಅಸಿಸ್ಟೆಂಟ್ ಸೇರಿದಂತೆ ಹಲವು ಹುದ್ದೆಗಳಿವೆ. ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಕೆಲಸಕ್ಕೆ ಸೇರಲು ಐಬಿಪಿಎಸ್ ಇತ್ಯಾದಿ ಆಲ್ ಇಂಡಿಯಾ ಬ್ಯಾಂಕಿಂಗ್ ಎಗ್ಸಾಮಿನೇಷನ್ ಬರೆಯಬೇಕಾಗುತ್ತದೆ.

ಸ್ಥಿರ ಠೇವಣಿಗಳು, ಉಳಿತಾಯ ಖಾತೆಗಳು ಸೇರಿದಂತೆ ವಿವಿಧ ಖಾತೆಗಳ ಮಾರುಕಟ್ಟೆಯ ಬಾಧ್ಯತೆಗೆ ಸಂಬಂಧಪಟ್ಟ ಉದ್ಯೋಗಗಳು ಬ್ಯಾಂಕ್‍ನಲ್ಲಿವೆ. ವಾಹನ ಸಾಲ, ಗೃಹ ಸಾಲ, ಚಿನ್ನದ ಸಾಲ, ಕ್ರೆಡಿಟ್ ಕಾರ್ಡ್, ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ ಸೇರಿದಂತೆ ಸ್ವತ್ತಿಗೆ ಸಂಬಂಧಪಟ್ಟ ಹಲವು ಉದ್ಯೋಗಗಳೂ ಇವೆ. ಗ್ರಾಹಕರ ದೂರುಗಳಿಗೆ ಸ್ಪಂದಿಸುವ, ಹೊಸ ಖಾತೆ ತೆರೆಯಲು ನೆರವಾಗುವ ಹಲವು ಸೇವೆಗಳನ್ನು ನೀಡಲು ಅಪರೇಷನ್ ಸಿಬ್ಬಂದಿಗಳನ್ನೂ ಬ್ಯಾಂಕ್‍ಗಳು ನೇಮಕ ಮಾಡಿಕೊಳ್ಳುತ್ತವೆ. ವಿದೇಶಿ ವಿನಿಮಯ ಸೇವೆ, ಕಾರ್ಪೊರೇಟ್ ಕ್ರೆಡಿಟ್, ಟ್ರೆಸರಿ ಸೇರಿದಂತೆ ಹಲವು ಸೇವೆಗಳನ್ನು ನೀಡಲು ವಿವಿಧ ತಜ್ಞರನ್ನೂ ಬ್ಯಾಂಕ್‍ಗಳು ನೇಮಕ ಮಾಡಿಕೊಳ್ಳುತ್ತವೆ. ಬ್ಯಾಂಕಿಂಗ್‍ಗೆ ಸಂಬಂಧಪಟ್ಟ ಆಡಳಿತ ಮತ್ತು ಐಟಿ ಕೆಲಸಗಳನ್ನು ಮಾಡುವ ಬ್ಯಾಕ್ ಆಫೀಸ್ ಸಪೋರ್ಟ್ ಹುದ್ದೆಗಳೂ ದೊರಕುತ್ತವೆ.

ಹುದ್ದೆಗಳ ಕುರಿತು ಇನ್ನಷ್ಟು ವಿವರ

ನೀವು ಯಾವುದಾದರೂ ಬ್ಯಾಂಕ್‍ಗೆ ಉದ್ಯೋಗ ಸೇರುವುದಾದರೆ ಅಲ್ಲಿ ಲಭ್ಯವಿರುವ ನಾಲ್ಕು ಮುಖ್ಯ ಕೆಡರ್‍ಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 1. ಕ್ಲರ್ಕ್. 2. ಪ್ರೊಬೆಷನರಿ ಆಫೀಸರ್. 3. ಸ್ಪೆಷಲಿಸ್ಟ್ ಆಫೀಸರ್. 4. ಮ್ಯಾನೇಜರ್‍ಗಳು ಮತ್ತು ಅದಕ್ಕಿಂತ ಮೇಲ್ಮಟ್ಟದ ಹುದ್ದೆಗಳು.

ಕ್ಲರಿಕಲ್ ಹುದ್ದೆಗಳು: ಕ್ಲರ್ಕ್ ಕಂ ಕ್ಯಾಷಿಯರ್/ಆಫೀಸ್ ಅಸಿಸ್ಟೆಂಟ್ ಇತ್ಯಾದಿ ಹುದ್ದೆಗಳಿವೆ. ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಬ್ಯಾಂಕ್‍ಗಳಲ್ಲಿ ಕ್ಲರಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‍ನ ಪ್ರಧಾನ ಕಚೇರಿಗಳಲ್ಲಿ, ಶಾಖೆಗಳಲ್ಲಿ ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುವ ಕಾರ್ಯ ಕ್ಲರಿಕಲ್ ಕೇಡರ್‍ನದ್ದು. ಗ್ರಾಹಕರಿಂದ ಹಣ ಪಡೆಯುವುದು, ಗ್ರಾಹಕರಿಗೆ ಹಣ ನೀಡುವುದು, ಚೆಕ್ ಕ್ಲಿಯರ್ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಇವರು ಮಾಡಬೇಕಾಗುತ್ತದೆ. ಕೆಲವು ವರ್ಷದ ನಂತರ ಕ್ಲರಿಕಲ್ ಕೇಡರ್‍ನವರು ಆಫೀಸರ್ ಹುದ್ದೆಗೆ ಬಡ್ತಿ ಪಡೆಯಬಹುದಾಗಿದೆ.

ಪ್ರೊಬೆಷನರಿ ಆಫೀಸರ್‍ಗಳು: ಯಾವುದೇ ವಿಷಯದಲ್ಲಿ ಪದವಿ ಪಡೆದವರು ಪ್ರೊಬೆಷನರಿ ಹಂತದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರೊಬೆಷನರಿ ಆಫೀಸರ್ ಆಗಿ ಬ್ಯಾಂಕ್‍ಗೆ ಸೇರಿ ಬ್ಯಾಂಕ್‍ನ ವ್ಯವಸ್ಥಾಪಕ, ಸಿಇಒ ಹುದ್ದೆಗೂ ಹಲವು ಜನರು ಹೋಗಿದ್ದಾರೆ. ಪ್ರೊಬೆಷನರಿ ಆಫೀಸರ್‍ಗಳಿಗೆ ಬ್ಯಾಂಕ್‍ನ ಎಲ್ಲಾ ವಿ`Áಗಗಳಲ್ಲಿಯೂ ತರಬೇತಿ ನೀಡಲಾಗುತ್ತದೆ. ಈ ಅಧಿಕಾರಿಗಳು ತಮ್ಮ ಮ್ಯಾನೇಜರ್‍ಗಳು ನೀಡಿದ ಕಾರ್ಯವನ್ನು ಮಾಡುತ್ತಾರೆ.

ಸ್ಪೆಷಲಿಸ್ಟ್ ಆಫೀಸರ್ಸ್:  ಬ್ಯಾಂಕ್‍ನ ಎಂಜಿನಿಯರಿಂಗ್, ಸಿಸ್ಟಮ್ಸ್, ಮಾರ್ಕೆಟಿಂಗ್, ಮ್ಯಾನೇಜ್‍ಮೆಂಟ್, ಪಬ್ಲಿಕ್ ರಿಲೇಷನ್ ಇತ್ಯಾದಿ ವಿಶೇಷ ವಿ`Áಗಗಳಲ್ಲಿ ಕಾರ್ಯ ನಿರ್ವಹಿಸುವ ತಜ್ಞರ ಪಡೆ ಇದಾಗಿದೆ. ಈ ಹುದ್ದೆಗಳಿಗೆ ಆಯಾ ವಿಷಯಗಳಲ್ಲಿ ವಿಶೇಷ ಶಿಕ್ಷಣ ಪಡೆದವರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಉದಾಹರಣೆಗೆ ಬ್ಯಾಂಕ್‍ನ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಪಡೆಯಲು ಕಂಪ್ಯೂಟರ್ ವಿಷಯದಲ್ಲಿ ಬಿ.ಇ ಪದವಿ ಪಡೆದಿರಬೇಕು. ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಕೃಷಿ ಅಕಾರಿ ಹುದ್ದೆಯೂ ಇರುತ್ತದೆ. ಕೃಷಿ/ತೋಟಗಾರಿಕೆ ಇತ್ಯಾದಿ ಶೈಕ್ಷಣಿಕ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್: ಬ್ಯಾಂಕ್‍ಗಳಲ್ಲಿ ವ್ಯವಸ್ಥಾಪಕ ಹಂತದ ವಿವಿ`À ಹುದ್ದೆಗಳು ಇರುತ್ತವೆ. ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದವರು ಹಲವು ವರ್ಷದ ಬಳಿಕ ಮ್ಯಾನೇಜರ್ ಹಂತಕ್ಕೆ ಪ್ರಮೋಷನ್ ಪಡೆಯಬಹುದು. ಎಂಬಿಎ ಪದವಿ ಪಡೆದವರು ಅಥವಾ ಯಾವುದೇ ಪದವಿ ಪಡೆದು ಸಂಬಂಧಪಟ್ಟ ಕ್ಷೇತ್ರದಲ್ಲಿ 3-5 ವರ್ಷ ಅನುಭವ ಇರುವವರನ್ನು ಈ ಹುದ್ದೆಗಳಿಗೆ ಬ್ಯಾಂಕ್‍ಗಳು ನೇಮಕ ಮಾಡಿಕೊಳ್ಳುತ್ತವೆ. ಖಾಸಗಿ ಬ್ಯಾಂಕ್‍ಗಳಿಗೂ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೂ ನೇಮಕಾತಿ ವಿಧಾನದಲ್ಲಿ ಮತ್ತು ಮಾನದಂಡಗಳಲ್ಲಿ ಸಾಕಷ್ಟು ಭಿನ್ನತೆಗಳು ಇರುತ್ತವೆ.

ಬ್ಯಾಂಕ್‍ಗಳು ಹೇಗೆ ನೇಮಕ ಮಾಡಿಕೊಳ್ಳುತ್ತವೆ?

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್) ನಡೆಸುವ ಸಾಮಾನ್ಯ ಲಿಖಿತ ಪರೀಕ್ಷೆ(ಸಿಡಬ್ಲ್ಯುಇ) ಮತ್ತು ಸಂದರ್ಶನಗಳ ಮೂಲಕ ಪ್ರೊಬೆಷನರಿ ಆಫೀಸರ್‍ಗಳನ್ನು, ಸ್ಪೆಷಲಿಸ್ಟ್ ಆಫೀಶರ್‍ಗಳನ್ನು, ಕ್ಲರಿಕಲ್ ಕೇಡರ್‍ನ ಹುದ್ದೆಗಳನ್ನು ದೇಶದ 20 ಸಾರ್ವಜನಿಕ ವಲಯದ ಬ್ಯಾಂಕ್‍ಗಳು (ಎಸ್‍ಬಿಐ ಮತ್ತು ಅದರ ಅಂಗಸಂಸ್ಥೆಗಳನ್ನು ಹೊರತುಪಡಿಸಿ)  ಮತ್ತು ಗ್ರಾಮೀಣ ಬ್ಯಾಂಕ್‍ಗಳು ಭರ್ತಿ ಮಾಡಿಕೊಳ್ಳುತ್ತವೆ. ಪದವಿ ಪಡೆದವರು ಈ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಈ ಪರೀಕ್ಷೆ ಬರೆಯಲು ಸಿಲೆಬಸ್ ಮತ್ತು ಇತರ ಮಾಹಿತಿಗಳನ್ನು ಐಬಿಪಿಎಸ್ ಉದ್ಯೋಗ ಅಸೂಚನೆಯಲ್ಲಿ ನೀಡುತ್ತದೆ. ಪರೀಕ್ಷೆ ಬರೆಯುವ ಸ್ಥಳ, ಹಾಲ್ ಟಿಕೇಟ್ ಇತ್ಯಾದಿಗಳನ್ನೂ ಐಬಿಪಿಎಸ್ ವೆಬ್‍ಸೈಟ್‍ನಿಂದಲೇ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

2013-14ರಲ್ಲಿಯೇ ದೇಶದಲ್ಲಿ ಸುಮಾರು 22 ಲಕ್ಷ ಜನರು ಸಿಡಬ್ಲ್ಯುಇ-3 ಪರೀಕ್ಷೆ ಬರೆದಿದ್ದಾರೆ. ಇದು ಈ ಪರೀಕ್ಷೆಯ ಜನಪ್ರಿಯತೆಗೆ ಸಾಕ್ಷಿ. ಐಬಿಪಿಎಸ್ ಸಿಡಬ್ಲ್ಯುಇನಲ್ಲಿ ಆಬ್ಜೆಕ್ಟೀವ್ ಮಾದರಿಯ ಆನ್‍ಲೈನ್ ಪರೀಕ್ಷೆ ನಡೆಸಲಾಗುತ್ತದೆ. ತಪ್ಪು ಉತ್ತರಗಳನ್ನು ಬರೆದವರಿಗೆ ನೆಗೆಟಿವ್ ಅಂಕ ಕಡಿತವೂ ಇರುತ್ತದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆ`Áರದಲ್ಲಿ ಅರ್ಹ ಅಭ್ಯರ್ಥಿಗಳನ್ನು ಐಬಿಪಿಎಸ್ ಸಂದರ್ಶನಕ್ಕೆ ಕರೆಯುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆ`Áರದಲ್ಲಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಅಧೀನ ಬ್ಯಾಂಕ್‍ಗಳು ಪ್ರತ್ಯೇಕ ಪರೀಕ್ಷೆ ನಡೆಸುತ್ತವೆ. ಹೀಗಾಗಿ ಐಬಿಪಿಎಸ್ ನಡೆಸುವ ಪರೀಕ್ಷೆ ಬರೆದರೆ ಎಸ್‍ಬಿಐ ಬ್ಯಾಂಕ್ ಜಾಬ್ ಪಡೆಯಲಾಗುವುದಿಲ್ಲ. ಕೋ-ಅಪರೇಟಿವ್ ಬ್ಯಾಂಕ್‍ಗಳು ಸಹ ಪ್ರತ್ಯೇಕ ಪರೀಕ್ಷೆ ನಡೆಸುತ್ತವೆ. ಖಾಸಗಿ ವಲಯದ ಬ್ಯಾಂಕ್‍ಗಳು ವಿವಿ`À ಕ್ಯಾಂಪಸ್‍ಗಳಿಂದ ನೇಮಕಾತಿ ಡ್ರೈವ್‍ಗಳನ್ನು ನಡೆಸುತ್ತವೆ. ಬ್ಯಾಂಕ್‍ಗಳಲ್ಲಿ ಸಿಎಎಸ್‍ಎ ಎಕ್ಸಿಕ್ಯೂಟಿವ್, ರಿಕವರಿ ಆಫೀಸರ್, ಪ್ರೊಬೆಷನರಿ ಆಫೀಸರ್, ಬ್ರಾಂಚ್ ಕಸ್ಟಮರ್ ರಿಲೇಷನ್ ಎಕ್ಸಿಕ್ಯೂಟಿವ್, ಬ್ರಾಂಚ್ ಅಪರೇಷನ್ ಕ್ಲರ್ಕ್ ಇತ್ಯಾದಿ ಹುದ್ದೆಗಳು ಹೆಚ್ಚು ಜನಪ್ರಿಯವಾಗಿವೆ.

ಐಬಿಪಿಎಸ್ ಬ್ಯಾಂಕ್ ಗೆ ಲಿಂಕ್ ಇಲ್ಲಿದೆ

Buy Banking Books Online

[amazon_link asins=’938633996X,B01MY22VNJ,938803614X,9386339978,B077VP8T1B,B071CY79WN,8193350405,B01MYG6FY4,B07DV93GX2,9386323494′ template=’ProductGrid’ store=’jobsnewsindia-21′ marketplace=’IN’ link_id=’edb79c67-98a1-11e8-a775-fb488b58c7aa’]

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಮುಖ್ಯ ಉಪಸಂಪಾದಕ (ಪ್ರಿನ್ಸಿಪಾಲ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯುಸರ್‌). ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.