ಕನ್ನಡದಲ್ಲಿಯೂ ಲಭ್ಯವಿರುವ ಕರಿಯರ್ ಮತ್ತು ಶಿಕ್ಷಣ ಆ್ಯಪ್‍ ಗಳು

Kannada Apps for students education and career

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಕನ್ನಡ ಭಾಷೆಯಲ್ಲಿ ಲಭ್ಯವಿರುವ ಆ್ಯಪ್‍ಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಆ್ಯಪ್‍ಗಳು, ಇಂಟರ್‍ನೆಟ್ ತಾಣಗಳು ಲಭ್ಯ ಇವೆ. ಆದರೆ, ಕನ್ನಡದಲ್ಲಿ ಓದಲು ಬಯಸುವವರಿಗೆ ಇಂತಹ ಅವಕಾಶಗಳ ಲಭ್ಯತೆ ಕೊಂಚ ಕಡಿಮೆ ಇದೆ ಎಂದು ಹೇಳಬಹುದು. ಆದರೆ, ತೀರಾ ಕಡಿಮೆ ಏನಿಲ್ಲ.  ನೀವು ಸ್ಮಾರ್ಟ್‍ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಹುಡುಕಿದರೆ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡುವ ಆ್ಯಪ್‍ಗಳು ಸಾಕಷ್ಟು ದೊರಕುತ್ತವೆ. ಇಲ್ಲಿ ನೀಡಲಾದ ಕೀವರ್ಡ್ ಅನ್ನು ನಿಮ್ಮ ಮೊಬೈಲ್‍ನ ಗೂಗಲ್ ಪ್ಲೇಸ್ಟೋರ್‍ನಲ್ಲಿ ನಮೋದಿಸಿ ಹುಡುಕಾಟ ನಡೆಸಿರಿ.

ಹೊಸ ಬೆಳಕು

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಆ್ಯಪ್ ಹುಡುಕುವವರ ಮೊಗದಲ್ಲಿ ಹೊಸ ಬೆಳಕು ಮೂಡಿಸುವಂತಹ ಆ್ಯಪ್ ಇದಾಗಿದೆ. ಕೆಪಿಎಸ್‍ಸಿ, ಯುಪಿಎಸ್‍ಸಿ ಇತ್ಯಾದಿ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಹೊಸಬೆಳಕು ಆ್ಯಪ್ ಸಹಾಯ ನೀಡುತ್ತದೆ. ಇದರಲ್ಲಿ ಓದಿರಿ, ರಸಪ್ರಶ್ನೆಗಳು, ಲೇಖನಗಳು ಮತ್ತು ಟಿಪ್ಪಣಿಗಳು, ಕೆಪಿಎಸ್‍ಸಿ, ಯುಪಿಎಸ್‍ಸಿ ಬ್ಲಾಗ್ ವಿಭಾಗಗಳಿವೆ. ಇತಿಹಾಸ, ಭೂಗೋಳ, ವಿಜ್ಞಾನ, ಸಾಮಾನ್ಯ ಜ್ಞಾನ ಇತ್ಯಾದಿ ವಿವಿಧ ಹಲವು ವಿಷಯಗಳ ಕುರಿತು ಜ್ಞಾನ ಪಡೆದುಕೊಳ್ಳಬಹುದು.

ಕೀವರ್ಡ್: hosabelaku kpsc upsc kannada gk

ಶಿಕ್ಷಣ ಲೋಕ

ಬಹುತೇಕರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಹಳೆಯ ಪ್ರಶ್ನೆಪತ್ರಿಕೆಗಳನ್ನು ಹುಡುಕುತ್ತಿರುತ್ತಾರೆ. ಹಳೆಯ ಪ್ರಶ್ನೆಪತ್ರಿಕೆಗಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಸಾಮಾಗ್ರಿಗಳು ಶಿಕ್ಷಣ ಲೋಕ ಎಂಬ ಆ್ಯಪ್‍ನಲ್ಲಿದೆ.

ಕೀವರ್ಡ್: shikshanaloka

ಇಂಗ್ಲಿಷ್ ಕಲಿಕೆ

ಸಂದರ್ಶನ, ಪರೀಕ್ಷೆ ಇತ್ಯಾದಿಗಳನ್ನು ಇಂಗ್ಲಿಷ್‍ನಲ್ಲಿ ಬರೆಯುವ ಅವಶ್ಯಕತೆ ಇರುತ್ತದೆ. ಇಂಗ್ಲಿಷ್ ಗೊತ್ತಿಲ್ಲದವರಿಗೆ ಸರಳವಾಗಿ ಇಂಗ್ಲಿಷ್ ಕಲಿಸುವ ಸಾಕಷ್ಟು ಆ್ಯಪ್‍ಗಳು ಆ್ಯಪ್ ಸ್ಟೋರ್‍ನಲ್ಲಿವೆ. ಸ್ಪೋಕನ್ ಇಂಗ್ಲಿಷ್, ಇಂಗ್ಲಿಷ್ ಗ್ರಾಮರ್, ಲರ್ನ್ ಇಂಗ್ಲಿಷ್ ಇತ್ಯಾದಿ ಕೀವರ್ಡ್‍ಗಳನ್ನು ನೀಡಿ ಹುಡುಕಿಕೊಳ್ಳಿ. ಹಲೋ ಇಂಗ್ಲಿಷ್, ಇಂಗ್ಲಿಷ್ ಕೋರ್ಸ್ ಇತ್ಯಾದಿ ಹಲವು ಆ್ಯಪ್‍ಗಳು ಇವೆ. ಹೆಚ್ಚು ಸ್ಟಾರ್ ರೇಟಿಂಗ್ ಪಡೆದಿರುವ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿರಿ.

ಸಾಮಾನ್ಯ ಜ್ಞಾನ

ಡೈಲಿ ಕನ್ನಡ ಜಿಕೆ 2017: ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯಲು ಸೂಕ್ತವಾದ ಆ್ಯಪ್.

ಕೀವರ್ಡ್: daily kannada g.k. 2017

ಕನ್ನಡ ಜಿಕೆ 2017: ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಕನ್ನಡದಲ್ಲಿರುವ ಇನ್ನೊಂದು ಆ್ಯಪ್ ಇದಾಗಿದೆ. ವಿವಿಧ ಟಿಪ್ಪಣಿಗಳು, ಆಬ್ಜೆಕ್ಟೀವ್ ಮಾದರಿಯ ಪ್ರಶ್ನೆಗಳು ಸೇರಿದಂತೆ ಹಲವು ವಿಭಾಗಗಳು ಇದರಲ್ಲಿವೆ. ಎಲ್ಲಾ ಬಗೆಯ ಪರೀಕ್ಷೆಗಳಿಗೂ ಉಪಯುಕ್ತ.

ಕೀವರ್ಡ್: kannada gk 2017.. ಜಿಕೆ ವಿಭಾಗದಲ್ಲಿ ಇನ್ನೂ ಹತ್ತು ಹಲವು ಆ್ಯಪ್‍ಗಳು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯ ಇವೆ.

ಕೆಎಎಸ್ ಕನ್ನಡ ಜಿಕೆ: ಅತ್ಯುತ್ತಮ ವಿನ್ಯಾಸ ಹೊಂದಿರುವ ಈ ಆ್ಯಪ್‍ನಲ್ಲಿ  ವಿವಿಧ ಪ್ರಶ್ನೋತ್ತರಗಳಿವೆ. ಭೂಗೋಳ, ವಿಜ್ಞಾನ, ಕರ್ನಾಟಕ ಜ್ಞಾನ, ರೀಸನಿಂಗ್ ಇತ್ಯಾದಿ ಹಲವು ವಿಭಾಗಗಳಿವೆ. ಕೀವರ್ಡ್: kas kannada gk

ಆನ್‍ಲೈನ್ ಪರೀಕ್ಷೆ

ಕೆಪಿಎಸ್‍ಸಿ, ಪಿಡಿಒ, ಎಫ್‍ಡಿಎ, ಎಸ್‍ಡಿಎ ಸಿಇಟಿ ಮತ್ತು ಇತರೆ ಪರೀಕ್ಷೆಗಳನ್ನು ಬರೆಯುವವರಿಗೆ ಮ್ಯಾಡ್‍ಗೈ ಲ್ಯಾಬ್ಸ್ ಎಂಬ ಆ್ಯಪ್ ಸೂಕ್ತ. ಆನ್‍ಲೈನ್ ಪರೀಕ್ಷೆಗಳು, ವಿಡಿಯೋ ಪಾಠಗಳು, ಪ್ರಶ್ನೆ ಕೇಳಿರಿ ಉತ್ತರ ಪಡೆಯಿರಿ ಇತ್ಯಾದಿ ಹಲವು ಆಯ್ಕೆಗಳು ಇಲ್ಲಿವೆ. ಕೀವರ್ಡ್: MadGuy Labs – Karnataka KPSC KAS, PDO, FDA SDA CET

ಪಠ್ಯ ಪುಸ್ತಕಗಳು

1ನೇ ತರಗತಿಯಿಂದ 10 ನೇ ತರಗತಿವರೆಗಿನ ಕರ್ನಾಟಕ ಪಠ್ಯಪುಸ್ತಕಗಳನ್ನು  ಈ ಆ್ಯಪ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಬಹುತೇಕ ಪರೀಕ್ಷೆಗಳಲ್ಲಿ  1ರಿಂದ 10 ನೇ ತರಗತಿಯವರೆಗಿನ ವಿಷಯಗಳ ಕುರಿತು ಪ್ರಶ್ನೆಗಳು ಹೆಚ್ಚಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಇದು ಉಪಯುಕ್ತ. ಕೀವರ್ಡ್: karnataka text book 1st to 10 std

ಕನ್ನಡ ವಿಶ್ವಕೋಶ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಕನ್ನಡ ಜ್ಞಾನ ಬಂಡಾರದ ಆ್ಯಪ್ ಇದಾಗಿದೆ. ಕನ್ನಡ ಕವನಗಳು, ಗಾದೆಗಳು, ವಚನಗಳು, ಕತೆಗಳು ಸೇರಿದಂತೆ ಹಲವು ಮಾಹಿತಿ ಲಭ್ಯ. ಕೀವರ್ಡ್: Kannada Vishwakosha

ಸ್ವಾಧ್ಯಾಯ: ಹತ್ತು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್ ಸಿದ್ಧಗೊಳಿಸಲಾಗಿದೆ. ಕೀವರ್ಡ್: swadhyaya

ಇಷ್ಟು ಮಾತ್ರವಲ್ಲದೆ ಇನ್ನೂ ಹತ್ತು ಹಲವು ಕನ್ನಡ ಆ್ಯಪ್‍ಗಳು ಲಭ್ಯ ಇವೆ. ಎಸ್‍ಬಿಐ ಕ್ಲರ್ಕ್ ಎಗ್ಸಾಂ, ಎಸ್‍ಬಿಐ ಪಿಒ ಎಗ್ಸಾಂ, ಎಸ್‍ಬಿಐ ಸ್ಪೆಷಲಿಸ್ಟ್ ಆಫೀಸರ್ಸ್ ಎಗ್ಸಾಂ, ಐಬಿಪಿಎಸ್ ಕ್ಲರ್ಕ್ ಎಗ್ಸಾಂ, ಐಬಿಪಿಎಸ್ ಪಿಒ/ಎಂಟಿ ಎಗ್ಸಾಂ ಮತ್ತು ಐಬಿಪಿಎಸ್ ಸ್ಪೆಷಲಿಸ್ಟ್ ಆಫೀಸರ್ಸ್ ರಿಕ್ರೂಟ್‍ಮೆಂಟ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಆಂಡ್ರಾಯ್ಡ್ ಪ್ಲೇ ಸ್ಟೋರ್‍ನಲ್ಲಿ `ಬ್ಯಾಂಕಿಂಗ್ ಎಗ್ಸಾಂ’ ಎಂದು ಸರ್ಚ್ ನೀಡಿ. ಇದೇ ರೀತಿ, ರೈಲ್ವೆ ಉದ್ಯೋಗ, ಬ್ಯಾಂಕ್ ಉದ್ಯೋಗ, ಸರಕಾರಿ ಉದ್ಯೋಗ, ಕರ್ನಾಟಕ ಉದ್ಯೋಗ ಎಂದೆಲ್ಲ ವಿವಿಧ ಕೀವರ್ಡ್‍ಗಳನ್ನು ಬಳಸಿ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಹುಡುಕಾಟ ನಡೆಸಿರಿ. ಹೆಚ್ಚು ಸ್ಟಾರ್ ರೇಟಿಂಗ್ ಇರುವ ಆ್ಯಪ್‍ಗಳನ್ನೇ ಡೌನ್‍ಲೋಡ್ ಮಾಡಿಕೊಳ್ಳಿರಿ.

ನೀವು ಇದೇ ರೀತಿ, ರೈಲ್ವೆ ಉದ್ಯೋಗ, ಬ್ಯಾಂಕ್ ಉದ್ಯೋಗ, ಸರಕಾರಿ ಉದ್ಯೋಗ, ಕರ್ನಾಟಕ ಉದ್ಯೋಗ ಎಂದೆಲ್ಲ ವಿವಿಧ ಕೀವರ್ಡ್‍ಗಳನ್ನು ಬಳಸಿ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಹುಡುಕಾಟ ನಡೆಸಿರಿ. ಹೆಚ್ಚು ಸ್ಟಾರ್ ರೇಟಿಂಗ್ ಇರುವ ಆ್ಯಪ್‍ಗಳನ್ನೇ ಡೌನ್‍ಲೋಡ್ ಮಾಡಿಕೊಳ್ಳಿರಿ. ಸ್ಮಾರ್ಟ್‍ಫೋನ್ ನಲ್ಲಿ ಡೌನ್‍ಲೋಡ್ ಮಾಡಿಕೊಂಡಿರುವ ಆ್ಯಪ್ ಬಳಸಿ ಮುಗಿದ ನಂತರ ಅಥವಾ ಹೆಚ್ಚು ಉಪಯೋಗಕಾರಿಯಾಗಿಲ್ಲವೆಂದು ಎನಿಸಿದರೆ ಡಿಲೀಟ್ ಮಾಡಿ.

Download kannada apps from playstore

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.