Category Archives: Education

SSLC ಪರೀಕ್ಷೆ : ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

By | 01/07/2021

2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ವಿವರಗಳು ಈ ಕೆಳಗಿನಂತಿವೆ ಜುಲೈ 19 ( ಸೋಮವಾರ) – ಗಣಿತ, ವಿಜ್ಞಾನ, ಸಮಾಜ‌ ವಿಜ್ಞಾನ ಪರೀಕ್ಷೆ ಬೆಳಿಗ್ಗೆ 10.30 ರಿಂದ 1.30 ರವರೆಗೆ. ಜುಲೈ 19 ( ಸೋಮವಾರ) – ಮಧ್ಯಾಹ್ನ ಕಿರಿಯ ತಾಂತ್ರಿಜ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜುಲೈ 22 ( ಗುರುವಾರ)- ಬೆಳಿಗ್ಗೆ 10.30 ರಿಂದ 1.30 ರವರೆ್ಎ ಭಾಷಾ ವಿಷಯಗಳ (ಪ್ರಥಮ ಭಾಷೆ ಕನ್ನಡ, ಪ್ರಥಮ… Read More »

ಪಿಯು ರಿಸಲ್ಟ್ ಜು.31 ರೊಳಗೆ

By | 25/06/2021

ಜುಲೈ 31 ರೊಳಗೆ ಎಲ್ಲ ರಾಜ್ಯಗಳ ಶಿಕ್ಷಣ ಮಂಡಳಿಗಳು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಬೇಕೆಂದು ಗುರುವಾರ ಸುಪ್ರೀಂಕೋರ್ಟ್ ಸೂಚಿಸಿದೆ. ಇದೇ ವೇಳೆ ಕೆಲವು ಪಾಲಕರ, ವಿದ್ಯಾರ್ಥಿಗಳ ಕೋರಿಕೆಯಾದ ಭೌತಿಕವಾಗಿ ಪರೀಕ್ಷೆ ನಡೆಸಬೇಕೆನ್ನುವುದನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಮೌಲ್ಯಾಂಕನ ವಿಧಾನ ಆಯಾ ಮಂಡಳಿಗೆ ಬಿಟ್ಟ ವಿಷಯ. ಹತ್ತು ದಿನದಲ್ಲಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಾಂಕನ‌ ವಿಧಾನ ಪೂರೈಸಿದರೆ ಜುಲೈ 31 ರೊಳಗೆ ಫಲಿತಾಂಶವನ್ನು ಪ್ರಕಟಿಸಲು ಕಷ್ಟವಾಗದು. ಜುಲೈ 31 ರೊಳಗೆ ಸಿಬಿಎಸ್ ಇ ಮತ್ತು ಸಿಐಎಸ್ ಸಿಇ ವುಗಳು 2 ವಾರದಲ್ಲಿ ಮೌಲ್ಯಾಂಕನ ವಿಧಾನ… Read More »

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ : ಪಿಹೆಚ್‌ಡಿ ಪ್ರವೇಶಾತಿ ಪರಿಷ್ಕೃತ ಅಧಿಸೂಚನೆ

By | 23/06/2021

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇಲ್ಲಿ ಶೈಕ್ಷಣಿಕ ವರ್ಷ 2020-21 ನೇ ಸಾಲಿಗೆ ನಡೆಯಬೇಕಾಗಿದ್ದ ಪಿಹೆಚ್‌ಡಿ ಪ್ರವೇಶ ಪರೀಕ್ಷೆಗಳನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಕಾರಣದಿಂದ, ಸ್ನಾತಕೋತ್ತರ ಕೇಂದ್ರಗಳಾದ ವಿಜಯಪುರ, ಬಾಗಲಕೋಟ, ಜಮಖಂಡಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿವಿಧ ವಿಭಾಗದಲ್ಲಿ ಪಿಹೆಚ್‌ಡಿ ಅಧ್ಯಯನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈಗಾಗಲೇ 2020-21 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ… Read More »

ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

By | 23/06/2021

430 ಸರಕಾರಿ ಪ್ರಥಮ ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್ ಹಾಗೂ 14 ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲು ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆಯಡಿ ಸರಕಾರ ಟ್ಯಾಬ್ ಪಿಸಿ ವಿತರಿಸಲಿದೆ. ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಾಂಕೇತಿಕವಾಗಿ ವಿಧಾನಸೌಧದಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಿದ್ದು, ಆ ಬಳಿಕ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ವಿತರಣೆ ಮಾಡಲಿದ್ದಾರೆ. ಕೆಲ ವಿದ್ಯಾರ್ಥಿಗಳು ಕೂಡ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ‌… Read More »

ಕ್ಯಾಡ್‌ನೆಸ್ಟ್‌ನಿಂದ ಹತ್ತು ದಿನಗಳ ಉದ್ಯೋಗಾಧರಿತ ಕೋರ್ಸ್‌ಗಳ ಉಚಿತ ಕಲಿಕೆಗೆ ಅವಕಾಶ, ಈಗಲೇ ಜಾಯಿನ್ ಆಗಿ

By | 22/06/2021

ಕೋವಿಡ್‌-೧೯ ಅನ್‌ಲಾಕ್‌ ಬಳಿಕ ಇದೇ ಮೊದಲ ಬಾರಿಗೆ ಹತ್ತು ದಿನಗಳ ವಿಶೇಷ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಆರಂಭಿಸಿದೆ. ಈ ಅವಧಿಯಲ್ಲಿ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಮತ್ತು ಇತರರು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು. ಯಾವೆಲ್ಲ ಕೋರ್ಸ್‌ಗಳು ಉಚಿತ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌, ಟ್ಯಾಲಿ ಪ್ರೈಮ್‌, ಆಟೋಕ್ಯಾಡ್‌ ಮೆಕ್ಯಾನಿಕಲ್‌ ಈ ನಾಲ್ಕು ಕೋರ್ಸ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಇವುಗಳಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌ ಮತ್ತು ಟ್ಯಾಲಿ ಪ್ರೈಮ್‌ ಕೋರ್ಸ್‌ಗಳು ಪ್ರತಿದಿನ… Read More »

ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಡಿಡಿ ಚಂದನಾದಲ್ಲಿ ವೀಡಿಯೋ ಪಾಠ

By | 22/06/2021

ಹೊಸದಾಗಿ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳು ಬಲಿಷ್ಠವಾಗಬೇಕು ಎಂಬ ನಿಟ್ಟಿನಲ್ಲಿ ತರಬೇತಿ ಹಾಗೂ ಸಂಶೋಧನಾ ಸಂಸ್ಥೆಗಳು ಶಿಕ್ಷಣ ಗುಣಮಟ್ಟ ಸುಧಾರಣೆಗೆ ಹೆಚ್ಚು ಗಮನಹರಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಡಿಎಸ್ ಇಆರ್ ಟಿ ಸಂಸ್ಥೆಯು ಶಿಕ್ಷಣ ಸಂಶೋಧನೆಯಲ್ಲಿ ಪ್ರಧಾನವಾದ ಜವಾಬ್ದಾರಿ ಹೊಂದಿದ್ದು, ಈ ಸ್ವಾಯತ್ತ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಂಶೋಧನಾ ವಿದ್ವಾಂಸರ ಸೇವೆಯನ್ನು ಪಡೆಯಲು ಆಲೋಚಿಸಲಾಗಿದೆ ಎಂದು ಸಚಿವರು ಹೇಳಿದರು. ಜುಲೈ 1 ರಿಂದ ದೂರದರ್ಶನದ ಚಂದನಾ ವಾಹಿನಿಯ ಮೂಲಕ… Read More »