ಪಿಯು ರಿಸಲ್ಟ್ ಜು.31 ರೊಳಗೆ

ಜುಲೈ 31 ರೊಳಗೆ ಎಲ್ಲ ರಾಜ್ಯಗಳ ಶಿಕ್ಷಣ ಮಂಡಳಿಗಳು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಬೇಕೆಂದು ಗುರುವಾರ ಸುಪ್ರೀಂಕೋರ್ಟ್ ಸೂಚಿಸಿದೆ.

ಇದೇ ವೇಳೆ ಕೆಲವು ಪಾಲಕರ, ವಿದ್ಯಾರ್ಥಿಗಳ ಕೋರಿಕೆಯಾದ ಭೌತಿಕವಾಗಿ ಪರೀಕ್ಷೆ ನಡೆಸಬೇಕೆನ್ನುವುದನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಮೌಲ್ಯಾಂಕನ ವಿಧಾನ ಆಯಾ ಮಂಡಳಿಗೆ ಬಿಟ್ಟ ವಿಷಯ. ಹತ್ತು ದಿನದಲ್ಲಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಾಂಕನ‌ ವಿಧಾನ ಪೂರೈಸಿದರೆ ಜುಲೈ 31 ರೊಳಗೆ ಫಲಿತಾಂಶವನ್ನು ಪ್ರಕಟಿಸಲು ಕಷ್ಟವಾಗದು. ಜುಲೈ 31 ರೊಳಗೆ ಸಿಬಿಎಸ್ ಇ ಮತ್ತು ಸಿಐಎಸ್ ಸಿಇ ವುಗಳು 2 ವಾರದಲ್ಲಿ ಮೌಲ್ಯಾಂಕನ ವಿಧಾನ ರೂಪಿಸಿ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ.

error: Content is protected !!