Category Archives: Real Estate

Guide to Buying a Resale Flats: ಹಳೆಯ ಅಪಾರ್ಟ್‌ಮೆಂಟ್‌ ಖರೀದಿಸಬಹುದೇ? ಮರುಮಾರಾಟಕ್ಕಿಟ್ಟ ಮನೆ ಖರೀದಿಸಬಹುದೇ?

By | 05/03/2021

ರಿ-ಸೇಲ್‌ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದರೆ ಹಲವು ಲಾಭಗಳ ಜೊತೆ ಕೆಲವೊಂದು ತೊಂದರೆಗಳೂ ಉಂಟಾಗಬಹುದು. ಹೀಗಾಗಿ, ಮರುಮಾರಾಟಕ್ಕಿಟ್ಟ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸುವ ಮೊದಲು ಸಾಕಷ್ಟು ರಿಸರ್ಚ್‌ ಅಗತ್ಯ ಎನ್ನುತ್ತಾರೆ ತಜ್ಞರು. ಹೊಸ ಅಪಾರ್ಟ್‌ಮೆಂಟ್‌ ಖರೀದಿಸಲು ಹೋದಾಗ ಕೆಲವೊಂದು ಹಳೆ ಅಪಾರ್ಟ್‌ಮೆಂಟ್‌ಗಳು ಮಾರಾಟಕ್ಕಿಟ್ಟಿರುವುದು ನಿಮ್ಮ ಗಮನಕ್ಕೆ ಬೀಳಬಹುದು. ಕೆಲವು ವ್ಯಕ್ತಿಗಳು ಮರುಮಾರಾಟಕ್ಕಾಗಿಯೇ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿಡುವುದುಂಟು. ಈಗ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಹೊಸ ಪ್ರಾಜೆಕ್ಟ್ಗಳಿಗೆ ನಗರಗಳಲ್ಲಿ ಸಾಕಷ್ಟು ಸ್ಥಳಾವಕಾಶವೂ ದೊರಕುವುದಿಲ್ಲ. ಇದೇ ಕಾರಣಕ್ಕೆ ನಗರದ ಹೊರವಲಯಗಳಲ್ಲಿ ಅಪಾರ್ಟ್‌ಮೆಂಟ್‌ ಪ್ರಾಜೆಕ್ಟ್ಗಳು ಹೆಚ್ಚುತ್ತಿವೆ. ಕೆಲವರಿಗೆ ನಗರದೊಳಗೆ ಮನೆ ಬೇಕೆಂದಿರುತ್ತದೆ. ಆದರೆ,… Read More »

Avoid Property Purchase Mistakes: ಆಸ್ತಿ ಖರೀದಿಯ ಸಮಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ

By | 04/03/2021

ದೇಶದಲ್ಲೀಗ ಕೊರೊನಾ ಆತಂಕ ತಗ್ಗಿದ್ದು, ಗೃಹಸಾಲ ಬಡ್ಡಿದರ ಹೆಚ್ಚಳ, ಮನೆ ದರ ಹೆಚ್ಚಳ, ನಗರಕ್ಕೆ ಸಮೀಪದಲ್ಲಿ ನಿವೇಶನಗಳ ಲಭ್ಯತೆ ಕಡಿಮೆಯಾಗುತ್ತಿರುವ ನಡುವೆಯೇ ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಬಹುತೇಕರು ಲಾಭ ಗಳಿಸುವ ದೃಷ್ಟಿಯಿಂದ ಮತ್ತು ಹೂಡಿಕೆಯ ಉದ್ದೇಶದಿಂದ ಪ್ರಾಪರ್ಟಿ ಖರೀದಿಸುತ್ತಾರೆ. ಆದರೆ, ಪ್ರಾಪರ್ಟಿಯೊಂದರಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮತ್ತು ಸಂಪೂರ್ಣ ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳದೆ ಖರೀದಿಸಿದರೆ ತೊಂದರೆಯಾಗಬಹುದು. ಇದರಿಂದ ನಿಮಗೆ ನೀವು ಬಯಸಿದ ಲಾಭ ಬರದೆ ಹೋಗಬಹುದು ಅಥವಾ ನಷ್ಟ ಅನುಭವಿಸಬೇಕಾಗಬಹುದು.ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದೆಂದರೆ… Read More »

How to Register Property: ಆಸ್ತಿ ನೋಂದಣಿ ಹೇಗೆ? ಯಾವೆಲ್ಲ ದಾಖಲೆ ಸಲ್ಲಿಸಬೇಕು? ಸಂಪೂರ್ಣ ವಿವರ

By | 03/03/2021

ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಆಸ್ತಿ ನೋಂದಣಿ ಮಾಡುವ ಸಮಯದಲ್ಲಿ ವಹಿಸಬೇಕಾದ ಎಚ್ಚರವೇನು? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ? ಆನ್‌ಲೈನ್‌ ಮೂಲಕ ನೋಂದಣಿ ಹೇಗೆ? ಇತ್ಯಾದಿ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ದೇಶದಲ್ಲಿ ನೂರು ರೂ.ಗಿಂತ ದುಬಾರಿಯಾದ ಆಸ್ತಿ ಖರೀದಿಸಬೇಕಿದ್ದರೆ ಅದನ್ನು ನೋಂದಾಯಿಸುವುದು ಕಡ್ಡಾಯ. ನೋಂದಣಿ ಕಾಯಿದೆ, 1908ರ ಸೆಕ್ಷನ್‌ 17ರ ಪ್ರಕಾರ ಸ್ಥಿರಾಸ್ತಿಯ ಮಾರಾಟ ಮತ್ತು ಖರೀದಿ ಸಮಯದಲ್ಲಿ ನೋಂದಣಿ ಮಾಡಬೇಕಿರುತ್ತದೆ. ಪ್ರಾಪರ್ಟಿ ಖರೀದಿಯಂತೆ ನೋಂದಣಿಯೂ ಒಂದಿಷ್ಟು ಕ್ಲಿಷ್ಟಕರ ಪ್ರಕ್ರಿಯೆ. ಈಗ ಕರ್ನಾಟಕದ ಕಾವೇರಿ ಆನ್‌ಲೈನ್‌ ಪೋರ್ಟಲ್‌ ಸೇರಿದಂತೆ ದೇಶದ ವಿವಿಧ… Read More »

How to save money on home: ಮನೆಯಲ್ಲಿ ಹಣ ಉಳಿತಾಯ ಮಾಡಿ

By | 03/03/2021

ಹೊಸ ಮನೆ ಖರೀದಿಸಿ, ಇಂಟೀರಿಯರ್‌ ವಿನ್ಯಾಸ ಮಾಡಿದ ಬಳಿಕ ಬಹುತೇಕರ ಕಿಸೆ ಖಾಲಿಯಾಗಿರುತ್ತದೆ. ಹೊಸ ಮನೆಯಲ್ಲಿ ನೆಲೆಸಲು ಆರಂಭಿಸಿದ ಬಳಿಕ ಹಣಕ್ಕೆ ತತ್ವಾರವಾಗಬಹುದು. ಇಂತಹ ಸಂದರ್ಭದಲ್ಲಿ ಮನೆ ನಿರ್ವಹಣೆಯಲ್ಲಿ ಹಣ ಉಳಿತಾಯ ಮಾಡುವ ಕಲೆ ಕಲಿತರೆ ಯಾವುದೇ ಸಮಸ್ಯೆಯಾಗದು. — ಮನೆ ನಿರ್ಮಾಣವು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇದು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಬಯಸುವ ನಿರ್ಧಾರವೂ ಹೌದು. ನಿವೇಶನ ಖರೀದಿಸಿ ಮನೆ ಕಟ್ಟಲು ಅಥವಾ ಸಿದ್ಧವಾಗಿರುವ ಅಪಾರ್ಟ್‌ಮೆಂಟ್‌ ಖರೀದಿಸಲು ಹತ್ತು ಹಲವು ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಬ್ಯಾಂಕ್‌ನಿಂದ ಗೃಹಸಾಲ… Read More »

benefits of registry in female name: ಆಸ್ತಿ ಖರೀದಿಗೆ ಸಾಲ ಪಡೆಯಲು ಬಯಸುವ ಮಹಿಳೆಯರಿಗೆ ಸಲಹೆ

By | 08/03/2020

ಮನೆ ಖರೀದಿಸುವ ಮಹಿಳೆಯರು ಗೃಹಸಾಲ ಬಡ್ಡಿದರ ಕಡಿತ, ಮುದ್ರಾಂಕ ಶುಲ್ಕ ಕಡಿತ, ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮನೆಯ ಮಹಿಳಾ ಸದಸ್ಯರ ಹೆಸರಿನಲ್ಲಿ ಪ್ರಾಪರ್ಟಿ ಖರೀದಿಸುವುದು ಅಥವಾ ಪ್ರಾಪರ್ಟಿ ಖರೀದಿಸುವಾಗ ಮಹಿಳೆಯರನ್ನು ಜಂಟಿ-ಪಾಲುದಾರರನ್ನಾಗಿ ಮಾಡಿಕೊಳ್ಳುವುದರಿಂದಲೂ ಹಲವು ಪ್ರಯೋಜನಗಳು ಇವೆ. ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗಸ್ಥ ಪುರುಷರು, ಮಹಿಳೆಯರು ಸ್ವಂತ ಪ್ರಾಪರ್ಟಿ ಹೊಂದಲು ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ವಿಶೇಷವಾಗಿ ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌, ವಿಲ್ಲಾ ಖರೀದಿಸಿ ಬಾಡಿಗೆ ಮನೆಯಿಂದ ಮುಕ್ತಿ ಪಡೆಯುವುದು ನಗರದ ಬಹುತೇಕ ಮಹಿಳೆಯರ ಬಯಕೆಯಾಗಿರುತ್ತದೆ. ಒಂದೋ ತಾವು ಉಳಿತಾಯ… Read More »