ಕನ್ನಡದಲ್ಲಿ IBPS ಪರೀಕ್ಷೆ : ಹೆಚ್.ಡಿ.ಕುಮಾರಸ್ವಾಮಿ ಸ್ವಾಗತ

By | 11/06/2021

ಐಬಿಪಿಎಸ್ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್ ( ಆರ್ ಆರ್ ಬಿ) ನೇಮಕಾತಿಯ ಪೂರ್ವಬಾವಿ ಮತ್ತು ಮುಖ್ಯ ಪರೀಕ್ಷೆ ಈ ಬಾರಿ ಕನ್ನಡದಲ್ಲಿಯೂ ನಡೆಯಲಿದೆ ಎಂಬ ಐಬಿಪಿಎಸ್ ನಡೆಯನ್ನು ಮಾಜಿ ಸಿ ಎಂ ಹೆಚ್ ಕುಮಾರಸ್ವಾಮಿ ಸ್ವಾಗರಿಸಿದರು.

2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನು ಜಾರಿಗೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.

ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ತುಂಬಾ ಸಹಕಾರಿ ಹಾಗೂ ಅತ್ಯಗತ್ಯ. ,2014 ಕ್ಕೆ ಮುನ್ನ ಕರ್ನಾಟಕದಲ್ಲಿ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕೆಂಬ ನಿಯಮವಿತ್ತು. ನಂತರ ಇದನ್ನು ತೆಗೆದು ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಕನ್ನಡ ಕಲಿಯಬೇಕೆಂದು ತಿಳಿಸಲಾಯಿತು. ಇದರಿಂದಾಗಿ ರಾಜ್ಯದ ಬ್ಯಾಂಕ್ ಗಳಲ್ಲಿ ಕನ್ನಡ ಗೊತ್ತಿಲ್ಲದವರೇ ಇದ್ದಾರೆ. ಇ ಕನ್ನಡಿಗರಿಗೆ ಸಮಸ್ಯೆ ಜೊತೆಗೆ ಅಪಮಾನ ಕೂಡ ಆಗಿದೆ. ಕನ್ನಡಿಗರನ್ನು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತನಾಡುವಂತೆ ಒತ್ತಾಯ ಮಾಡುವುದು, ಕನ್ನಡಿಗರ ಬಗ್ಗೆ ನಿರ್ಲಕ್ಷ್ಯ ಪ್ರಕರಣಗಳು ನಡೆಯುತ್ತಲೇ ಇದೆ ಎಂದು ಹೇಳಿದ್ದಾರೆ.

ಇದಕ್ಕೆಲ್ಲಾ ಏಕೈಕ ಪರಿಹಾರ 2014 ಕ್ಕೆ ಮೊದಲಿದ್ದ ಐಬಿಪಿಎಸ್ ಕಟ್ಟಲೆಗಳನ್ನು ಮರಳಿ ಜಾರಿಗೆ ತರುವುದು. ಬ್ಯಾಂಕಿಂಗ್ ವಲಯ ಅತ್ಯಗತ್ಯ ಸೇವೆಯಾಗಿದೆ. ಇಲ್ಲಿ ಕನ್ನಡಿಗರಿರಬೇಕು. ಈ ಬಾರಿ ಐಬಿಪಿಎಸ್ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಒಂದೂ ಹುದ್ದೆ ಇಲ್ಲ. ರಾಜ್ಯಯ ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರದಲ್ಲಿಯೂ ಕೆವಿಜಿ, ಕೆವಿಜಿಬಿ ಬ್ಯಾಂಕ್ ಗಳಿವೆ. ಆದರೂ ಒಂದು ಹುದ್ದೆ ಇಲ್ಲದಿರುವುದು ಆಶ್ಚರ್ಯ ತಂದಿದೆ.

ಈ‌ ಬಾರಿ ಕನ್ನಡದಲ್ಲಿ ಪರೀಕೆ ಬರೆದು ತೇರ್ಗಡೆ ಹೊಂದುವ ಕನ್ನಡಿಗ ಅಭ್ಯರ್ಥಿಗಳು ಬೇರೆ ರಾಜ್ಯದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿಯು ಹುದ್ದೆ ನಿಗದಿ ಮಾಡಿ ಮರು ಅರ್ಜು ಆಹ್ವಾನಿಸುವುದು ಸೂಕ್ತ. ಈ ಬಗ್ಗೆ ರಾಜ್ಯದ ಎಲ್ಲರೂ ದನು ಎತ್ತುವುದು ಅಗತ್ಯ. ಕನ್ನಡಿಗ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *