ಜುಲೈ 1 ರಿಂದ ಶಾಲೆ ಶುರು

By | 12/06/2021

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2021-22 ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಾರ್ವಜನಿಕ ‌ಶಿಕ್ಷಣ ಇಲಾಖೆ, ಜುಲೈ 1 ರಿಂದ ಶಾಲೆ ಪ್ರಾರಂಭಿಸಿ ಕೋವಿಡ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಆನ್ಲೈನ್ ಹಾಗೂ ಆಫ್ ಲೈನ್ ವಿಧಾನಗಳ ಮೂಲಕ ತರಗತಿಯನ್ನು ನಡೆಸಲು ಕಾರ್ಯಯೋಜನೆಯನ್ನು ಮಾಡಿದೆ. ಬೋಧನಾ ತಂತ್ರಾಂಶ ಹೊಂದಿರುವ ಮತ್ತು ಹೊಂದಿರದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಧಾನವನ್ನು ಅನುಸರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಣೆಗೆ ಸೂಚಿಸಿದೆ. ಶೈಕ್ಷಣಿಕ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಿದ ಇಲಾಖೆ ಕೊರೊನಾ ಕಾರಣದಿಂದ ಭೌತಿಕ ತರಗತಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲಭ್ಯವಿರುವ ಸ್ಥಳೀಯ ಹಾಗೂ ಶಾಲಾ ಸಂಪನ್ಮೂಲ, ಸೌಲಭ್ಯದ ಆಧಾರದಲ್ಲಿ ಆನ್ಲೈನ್ ಪಾಠ, ಆಫ್ ಲೈನ್, ದೂರದರ್ಶನ ಮೂಲಕ, ರೇಡಿಯೋ ಪಾಠ ಇತ್ಯಾದಿಗಳನ್ನು ಅಳವಡಿಸಿ ತರಗತಿ ಪ್ರಾರಂಭಿಸಲು ತಿಳಿಸಲಾಗಿದೆ.

ಜೂನ್.15 ರಿಂದ 30 ರ ಅವಧಿಯಲ್ಲಿ ಶಾಲಾ ಹಂತದಿಂದ ಜಿಲ್ಲಾ ಮಟ್ಟದವರೆಗೆ ‌ಅಗತ್ಯ ಯೋಜನೆ ರೂಪಿಸಿ, ಶಾಲಾ ಶಿಕ್ಷಕರು, ಜನಪ್ರತಿ‌ನಿಧಿಗಳು, ಎಸ್ ಡಿಎಂಸಿ ಸದಸ್ಯರು, ಗ್ರಾಪಂ, ತಾ.ಪಂ, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ, ಸಮುದಾಯ ಸಹಭಾಗಿತ್ವದೊಂದಿಗೆ ಯೋಜನೆ ರೂಪಿಸಿ‌ ಕಾರ್ಯಗತಗೊಳಿಬೇಕು ಎಂದು ಹೇಳಲಾಗಿದೆ.

ದೂರದರ್ಶನ ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂಬುದನ್ನು ಇಲಾಖೆ ತಿಳಿಸಿದೆ. ಜು.30 ರವರೆಗೆ ಸೇತುಬಂಧ ಕಾರ್ಯಕ್ರಮ, ಅ.1 ರಿಂದ ತರಗತಿವಾರು ಪಠ್ಯ ವಸ್ತು ಬೋಧನೆ ಪ್ರಾರಂಭಿಸಬೇಕು ಎಂದು ಸೂಚಿಸಲಾಗಿದೆ.

ಶಾಲಾ ಶಿಕ್ಷಕರಿಂದ ಉಪನಿರ್ದೇಶಕರವರೆಗಿನ ಅಧಿಕಾರಿಗಳು, ಆನ್ಲೈನ್ ‌ಮೂಲಕ ಆಗಾಗ ಸಭೆ ಕರೆದಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕು. ಶಾಲಾ‌ ಹಂತದಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಒಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ಮಾಡಬೇಕು. ಅಗತ್ಯಕ್ಕೆ ಅನುಸಾರ ಆನ್ಲೈನ್ ಸಭೆ ನಡೆಸಿ‌ ಸಂಬಂಧಿಸಿದ ಅಧಿಕಾರಿಗಳಿಂದ ಮೇಲ್ವಿಚಾರಣೆ ನಡೆಸಬೇಕು.

Leave a Reply

Your email address will not be published. Required fields are marked *