Hugging: ಅಪ್ಪಿಕೊಳ್ಳುವುದರಿಂದ ನರಮಂಡಲಕ್ಕೆ 5 ಲಾಭಗಳಿವೆ ಗೊತ್ತಾ?

By | 17/09/2021

ಅಪ್ಪುಗೆಗಳು ಮಾನವರ ಸಹಜ ಕ್ರಿಯೆಯಾಗಿದ್ದು, ಇದು ನಿಮ್ಮೊಂದಿಗೆ ಮತ್ತು ಇತರರೊಂದಿಗೆ ಸಂಪರ್ಕ ಹೊಂದುತ್ತದೆ. ಅಪ್ಪುಗೆಗಳು 75% ಪ್ಯಾರಾಸಿಂಪಥೆಟಿಕ್ ಫೈಬರ್ ಗಳಿಂದ ಮಾಡಲ್ಪಟ್ಟ ವಾಗಸ್ ನರವನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಸಕ್ರಿಯಗೊಳಿಸುತ್ತವೆ.

ಅಪ್ಪುಗೆಗಳುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ  

ಮೃದುವಾದ ಸ್ಪರ್ಶದ ನಮ್ಮ ದೇಹದ ಚಲವಲನಗಳನ್ನು ಹೆಚ್ಚು ಮುಕ್ತವಾಗಿಸುತ್ತದೆ. ಜೊತೆಗೆ ದೇಹ ಚಟುವಟಿಕೆಗಳನ್ನು ಗ್ರಹಿಕೆ ಮಾಡುತ್ತದೆ. ಈ ಗ್ರಹಿಕೆಗಳು ಅನಾರೋಗ್ಯ ಮತ್ತು ಸೋಂಕಿನ ಮಟ್ಟ ಮತ್ತು ಅದರ ತೀವ್ರತೆ  ಕಡಿಮೆ ಮಾಡುತ್ತದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

 ಅಪ್ಪುಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ನೀವು ತಬ್ಬಿಕೊಂಡಾಗ, ಇದು ಸಿ-ಟ್ಯಾಕ್ಟೈಲ್ ಅಫೆರೆಂಟ್ ನರಗಳನ್ನು ಉತ್ತೇಜಿಸುತ್ತದೆ, ನಿಮ್ಮ ಚರ್ಮದಿಂದ ಸಂಕೇತಗಳನ್ನು ಸೂಚಿಸುವ ಮೂಲಕ ನಿಮ್ಮ ಮೆದುಳಿನ ಭಾವನಾತ್ಮಕ ಪ್ರಕ್ರಿಯೆಯ ಸಹಾಯ ಮಾಡುತ್ತದೆ. ಇದು ಆಕ್ಸಿಟೋಸಿನ್ ಬಿಡುಗಡೆಯನ್ನು ಸಕ್ರಿಯಗೊಳಿಸುತ್ತದೆ, ಹೃದಯ ಬಡಿತ, ರಕ್ತದೊತ್ತಡವನ್ನು ನಿಧಾನಗೊಳಿಸುತ್ತದೆ ಮತ್ತು ಆತಂಕದ ಮಟ್ಟ ಕಡಿಮೆ ಮಾಡುತ್ತದೆ.

ಅಪ್ಪುಗೆಗಳು ಮೌನವನ್ನು ಹೆಚ್ಚಿಸುತ್ತವೆ

ಒಂದು ಅಪ್ಪುಗೆ ನಿಮ್ಮ ನಡುವಿನ ಕೋಪ, ಜಗಳವನ್ನು ಕಡಿಮೆ ಮಾಡುತ್ತದೆ. ನಿಮ್ಮ ನಡುವಿನ ಸಂಬಂಧವನ್ನು ಹೆಚ್ಚಿಸುತ್ತದೆ. ಈ ಬಗ್ಗೆ ನಿಮ್ಮಲ್ಲಿ ಒಂದು ಭಾವನತ್ಮಕ ಆಕರ್ಷಣೆಯನ್ನು ಉಂಟು ಮಾಡುತ್ತದೆ. 

ಅಪ್ಪುಗೆಗಳು ನಿದ್ರೆಯನ್ನು ನಿಯಂತ್ರಿಸುತ್ತದೆ

ಅಪ್ಪುಗೆ  ದೇಹಕ್ಕೆ ಸ್ಫೂರ್ತಿಯನ್ನು ನೀಡುತ್ತದೆ. ಅಪ್ಪುಗೆ ಅಂತಹ ಶಕ್ತಿಯನ್ನು ಹೊಂದಿದೆ. ಅಪ್ಪುಗೆಯಿಂದ ನಿದ್ದೆ ಕಡಿಮೆ ಮಾಡಬಹುದು. ಪ್ರತಿದಿನ ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಇದರಿಂದ ಪ್ರತಿದಿನ ಬೇಗ ಎಚ್ಚರಗೊಳ್ಳಬಹುದು.

Leave a Reply

Your email address will not be published. Required fields are marked *