Self Improvement: ನಿಮಗಾಗಿ ಏನು ಮಾಡುವಿರಿ?

Featured post on IndiBlogger, the biggest community of Indian Bloggers

ಈ ಒಂದು ವರ್ಷ ನಾನು ಮಾಡಿದ ಪ್ರಮುಖ ಖರ್ಚುಗಳು ಯಾವುವು? 15 ಸಾವಿರ ರೂಪಾಯಿ ಕೊಟ್ಟು ರೆಡ್ ಮಿ ಎ1 ಸ್ಮಾರ್ಟ್ ಫೋನ್ ತೆಗೆದುಕೊಂಡೆ. 18 ಸಾವಿರ ರೂ.ನ ಫರ್ನಿಚರ್ಸ್ ಖರೀದಿಸಿದೆ. 2 ಸಾವಿರ ರೂ.ನ ವಯರ್ಲೆಸ್ ಹೆಡ್ ಫೋನ್ ತೆಗೆದುಕೊಂಡೆ. 8 ಸಾವಿರ ರೂಪಾಯಿನ ಕ್ಯಾಶಿಯೊ ಜಿ-ಶಾಕ್ ವಾಚ್ ನನ್ನದಾಗಿದೆ. ಕುಟುಂಬದ ಕಾರ್ಯಕ್ರಮಕ್ಕಾಗಿ ಹತ್ತು ಹಲವು ಸಾವಿರ ರೂಪಾಯಿ ಖರ್ಚಾಗಿದೆ. ಹೀಗೆ… ಮಾಡಿದ ಖರ್ಚುಗಳ ಲೆಕ್ಕ ಲೆಕ್ಕವಿಡುವುದು ಕಷ್ಟ.

ಆದರೆ, ಇವೆಲ್ಲ ನನ್ನ ಸ್ವಯಂ ಅಭಿವೃದ್ಧಿಗೆ ಮಾಡಿದ ಹೂಡಿಕೆಗಳಲ್ಲ. ಇದೇ ಹಣದಲ್ಲಿ ನಾನು ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಗೆ ಸೇರಬಹುದಿತ್ತು. ಯಾವುದಾದರೂ ಹೊಸ ಸ್ಕಿಲ್ಸ್ ಕಲಿಯಬಹುದಿತ್ತು. ಸಾಕಷ್ಟು ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಖರೀದಿಸಬಹುದಿತ್ತು. ಇವುಗಳಲ್ಲಿ ಒಂದಿಷ್ಟು ವಿಷಯಗಳನ್ನು ನಾನು ಈ ವರ್ಷ ಮಾಡಿದ್ದೇನೆ. ಸ್ವಯಂ ಅಭಿವೃದ್ಧಿ ಎಂದರೆ ನಮ್ಮ ಅಭಿವೃದ್ಧಿಗೆ ನಾವು ಮಾಡುವ ಹೂಡಿಕೆ ಮತ್ತು ನಾವು ಮಾಡಬೇಕಾದ ಕೆಲಸ.

ಸ್ಪೋಕನ್ಇಂಗ್ಲಿಷ್


Photo by Diomari Madulara on Unsplash

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಲು ಗೊತ್ತಿರಬೇಕು ಎಂಬ ವಾತಾವರಣ ಇದೆ. ನಿಮ್ಮಇಂಗ್ಲಿಷ್ ಭಾಷಾ ಕೌಶಲ ಹೆಚ್ಚಿಸಲು ಒಂದಿಷ್ಟು ಹಣ ವಿನಿಯೋಗಿಸಬಹುದು. ಇದಕ್ಕಾಗಿ ಸ್ಪೋಕನ್ ಇಂಗ್ಲಿಷ್ಗೆ ಸೇರಬಹುದು. ಇಂತಹ ಸ್ಪೋಕಲ್ ಇಂಗ್ಲಿಷ್ ಕ್ಲಾಸ್ ಗೆ ಸೇರಿದರೆ ಇಂಗ್ಲಿಷ್ ಮಾತನಾಡಲು ಬರುತ್ತಾ ಎಂಬಪ್ರಶ್ನೆ ನಿಮ್ಮಲ್ಲಿರಬಹುದು. ಅಲ್ಲಿಗೆ ಹೋಗೋದು ವೇಸ್ಟ್ ಎನ್ನುವವರೂ ಇರಬಹುದು. ಆದರೆ, ನಾವು ಮಾಡುವವ್ಯರ್ಥ ಖರ್ಚುಗಳಿಗೆ ಹೋಲಿಸಿದರೆ ನಮ್ಮ ಅಭಿವೃದ್ಧಿಗಾಗಿ ಮಾಡುವ ಇಂತಹ ವೆಚ್ಚಗಳಿಂದ ಖಂಡಿತಾ ಲಾಭವಿದೆ.

ವ್ಯಕ್ತಿತ್ವವಿಕಸನ

ಈಗ ನಮ್ಮ ಆಂತರಿಕ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಅತ್ಯುತ್ತಮ ಸಂವಹನ ಕೌಶಲ, ಮೌಖಿಕ ಮತ್ತು ಅಮೌಖಿಕಸಂವಹನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟ ಎಲ್ಲಾ ಕೌಶಲಗಳನ್ನು ಕಲಿತರೆ ನಮ್ಮ ವ್ಯಕ್ತಿತ್ವ ಅತ್ಯುತ್ತಮವಾಗುತ್ತದೆ.ಸದಾ ಸಕಾರಾತ್ಮಕ ವರ್ತನೆಯಲ್ಲಿ ಇರುವುದು ನಮ್ಮ ಪ್ರಗತಿಗೆ ನೆರವಾಗುತ್ತದೆ. ಇದಕ್ಕಾಗಿ ವ್ಯಕ್ತಿತ್ವವಿಕಸನ ಪುಸ್ತಕಗಳನ್ನು ಖರೀದಿಸಿ, ಯೂಟ್ಯೂಬ್ ಗಳಲ್ಲಿರುವ ಸ್ಫೂರ್ತಿದಾಯಕ ವಿಡಿಯೋಗಳನ್ನು ನೋಡಿ, ವ್ಯಕ್ತಿತ್ವವಿಕಸನ ತರಬೇತಿಗಳಿಗೆ ಸೇರಿರಿ.

ಜಿಮ್ ಅಥವಾ ವ್ಯಾಯಾಮ

ಆರೋಗ್ಯ ಅತ್ಯುತ್ತಮವಾಗಿದ್ದರೆ ಮಾತ್ರ ನೆಮ್ಮದಿ. ಎಷ್ಟೇ ಹಣವಿದ್ದರೂ ಆರೋಗ್ಯ ಭಾಗ್ಯವಿಲ್ಲದೆ ಇದ್ದರೆ ಅದಕ್ಕಿಂತ ಬೇಸರದ ಸಂಗತಿ ಬೇರೆ ಯಾವುದೂ ಇರಲಿಕ್ಕಿಲ್ಲ. ನೀವು ನಿಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಅತ್ಯಂತ ಅವಶ್ಯ. ಜಿಮ್ ಗೆ ಹೋಗಿ ಕಸರತ್ತು ಮಾಡಬಹುದು ಅಥವಾ ಯಾವುದಾದರೂ ವ್ಯಾಯಾಮ ಶಾಲೆಗೆ ಹೋಗಿ ಒಂದಿಷ್ಟು ಆಸನಗಳನ್ನು ಕಲಿಯಬಹುದು.

ವಾಕಿಂಗ್ ಅಥವಾ ನಡಿಗೆ

ಮುಂಜಾನೆಯ ಚುಮುಚುಮು ಚಳಿಯಲ್ಲಿ ರಗ್ಗು ಹೊದ್ದು ಮಲಗಿದರೆ ಸ್ವರ್ಗ ಸುಖ. ಇಂತಹ ಸಮಯದಲ್ಲಿ ಸವಿನಿದ್ದೆಯ ಜೋಗುಳದಿಂದಎದ್ದೇಳಲು ಮನಸ್ಸೇ ಬಾರದು. ಈ ಸುಖನಿದ್ದೆಯಿಂದ ಎದ್ದು ವಾಕಿಂಗ್ ಹೋಗಿ ಎಂದರೆ ಮುಸುಕು ಹಾಕಿ ಮಲಗಿರುವಲ್ಲಿಂದಲೇ“ಹೂಂ, ಹೂಂ’’ ಎನ್ನುವಿರಿ ತಾನೇ. ಚಳಿಗಾಲವಿರಲಿ, ಬೇಸಿಗೆ, ಮಳೆಗಾಲವಿರಲಿ… ವಾಕಿಂಗ್  ಹೋಗುವುದು ತುಂಬಾ ಅಗತ್ಯ.

ಬಹುತೇಕ ಪಾರ್ಕ್ ಗಳಲ್ಲಿ ನಾನು ನೋಡಿದಂತೆ ಅಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹಿರಿಯರು, ಅಂಕಲ್, ಆಂಟಿಯರು ಕಾಣಿಸುತ್ತಾರೆ. ಯುವ ಜನರ ಸಂಖ್ಯೆ ಬೆರಳೆಣಿಕೆಯಷ್ಟು. ಫ್ಯಾಟ್ ಭಯಕ್ಕೆ ಬಿದ್ದ ಹೆಂಗಳೆಯರು ನಿಧಾನವಾಗಿ ಉಸ್ಸಪ್ಪ ಎಂದು ನಡೆಯುವುದು ಕಾಣಿಸುತ್ತದೆ. ಇನ್ನಷ್ಟು ಹೆಚ್ಚು ವರ್ಷ ಬದುಕುವ ಆಸೆಯಿಂದ ಅಜ್ಜ –ಅಜ್ಜಿಯರು ಕಾಣ ಸಿಗುತ್ತಾರೆ.

Image credit: unsplash

ಇವರಲ್ಲಿ ಬಹುತೇಕರು ಡಾಕ್ಟರ್ ಸಲಹೆ ಮೇರೆಗೆ ಅಥವಾ ಆರೋಗ್ಯ ಸಮಸ್ಯೆ ಬಗೆಹರಿಸಲು ಬಂದಿರುತ್ತಾರೆ. ಅಲ್ಲಿ ಹರಟೆ ಹೊಡೆಯಲು ಬರುವ ಗುಂಪುಗಳೂ ಇವೆ. ಕೆಲವು ಯುವಕ ಯುವತಿಯರು ಮೊಬೈಲಿನಲ್ಲಿ ಹರಟುತ್ತ ಬೆಳ್ಳಂಬೆಳ್ಳಗೆ ಯಾರದ್ದೋ ತಲೆ ತಿನ್ನುತ್ತಿರುವಂತೆ ಕಾಣಿಸುತ್ತದೆ.

ವಾಕಿಂಗ್ ಹೋಗಬೇಕು ಯಾಕೆಂದರೆ,

  • ಮುಂಜಾನೆಯ ವಾತಾವರಣ ನಿಮ್ಮ ಮನಸ್ಸನ್ನು ಪ್ರಶಾಂತ, ಪ್ರಫುಲ್ಲಗೊಳಿಸುತ್ತದೆ.
  • ನಗರದ ಜೀವನದಲ್ಲಿ ಚಟುವಟಿಕೆರಹಿತವಾಗಿರುವ ದೇಹಕ್ಕೆ ಹೊಸ ಉಲ್ಲಾಸ ನೀಡುತ್ತದೆ.
  • 35-40 ವರ್ಷಕ್ಕೆ ಆರಂಭವಾಗುವ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸುತ್ತದೆ.
  • ಉಸಿರಾಟದ ಸಮಸ್ಯೆ, ಹೃದಯದ ಸಮಸ್ಯೆಗಳು ಬಾರದಂತೆ ತಡೆಯುತ್ತದೆ.

ವಾಕಿಂಗ್ ಹೋಗುವುದರಿಂದ ನನಗೆ ಆಗುವ ಪ್ರಮುಖ ಲಾಭ ಹೆಚ್ಚುವರಿ ಸಮಯ ದೊರಕುವುದು. ಬೆಳಗ್ಗೆ 6ರಿಂದ 7 ಗಂಟೆಯ ತನಕ ವಾಕಿಂಗ್ ಮಾಡಿದರೆ ಮತ್ತೆ 9 ಗಂಟೆಯವರೆಗೆ ಎಷ್ಟು ಸಮಯ ಸಿಕ್ಕಂತೆ ಆಗುತ್ತದೆ. ಲೇಟಾಗಿ ಎದ್ದರೆ ಈ ಸಮಯ ವ್ಯರ್ಥವಾಗುತ್ತದೆ. ಈ ಸಮಯವನ್ನು ನಮ್ಮ ಕ್ರಿಯೆಟಿವಿಟಿಗೆ ಸಂಬಂಧಪಟ್ಟ (ನಾನು ಬರವಣಿಗೆಗೆ ಬಳಸುತ್ತೇನೆ) ವಿಷಯಗಳಿಗೆ ಬಳಸಬಹುದು.

ಆನ್ಲೈನ್ ನಲ್ಲಿ ಯಾವುದಾದರೂ ಕೋರ್ಸ್ ಕಲಿಯಿರಿ

ಬಿಡುವಿನ ವೇಳೆಯಲ್ಲಿ ನಮ್ಮ ಕರಿಯರ್ ಕ್ಷೇತ್ರಕ್ಕೆ ಸಂಬಂಧಪಟ್ಟ ಅಥವಾ ಸಂಬಂಧಪಟ್ಟಿರದೆ ಇರುವ ಯಾವುದಾದರೂ ಕೋರ್ಸ್ಗಳನ್ನು ಕಲಿಯಬಹುದು. ಈಗ ಆನ್ ಲೈನ್ ಗಳಲ್ಲಿ ಸಾಕಷ್ಟು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಕೋರ್ಸ್ ಗಳುದೊರಕುತ್ತವೆ. ವಿಡಿಯೋ ಅಥವಾ ಪಿಡಿಎಫ್ ಗಳ ಮೂಲಕ ವಿವಿಧ ಕೋರ್ಸ್ ಗಳನ್ನು ಕಲಿಯಬಹುದು.

Image credit: unsplash

ನಿಮಗೆ ಗೊತ್ತೆ, ನಾನು ಪದವಿಯಲ್ಲಿ ಓದಿರುವುದು ಬಿಎ, ಸ್ನಾತಕೋತ್ತರ ಪದವಿಯಲ್ಲಿ ಓದಿರುವುದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ. ಆದರೆ, ನಾನು ಚೆನ್ನಾಗಿ ವೆಬ್ ಡಿಸೈನ್ ಮಾಡಬಲ್ಲೆ. ವೆಬ್ ಸೈಟ್ ವಿನ್ಯಾಸ ಮಾಡಬಲ್ಲೆ.ಕೊಂಚ ಕೋಡಿಂಗ್ ಸಹ ಗೊತ್ತು. ನಾನು ಓದಿರುವುದೇ ಬೇರೆ, ಆದರೆ, ಇಂತಹ ಕೌಶಲಗಳನ್ನು ಕಲಿಯುವ ಆಸಕ್ತಿಇದ್ದರಿಂದ ನನಗೆ ಕಲಿಯಲು ಸಾಧ್ಯವಾಯಿತು. ಈಗ ಗೂಗಲ್ಲೇ ಗುರು. ಹೊಸ ಕೌಶಲ ಕಲಿಯಲು ಏಕಲವ್ಯನಂತೆ ಪ್ರಯತ್ನಿಸೋಣ.ಸರ್ಟಿಫಿಕೇಷನ್ ಕೋರ್ಸ್ ಗಳ ಕುರಿತು ಕರ್ನಾಟಕ ಬೆಸ್ಟ್ ಬ್ಲಾಗ್ ನಲ್ಲಿ ಹಲವು ಲೇಖನಗಳಿವೆ. ಅವುಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ.

ಹವ್ಯಾಸಗಳನ್ನುಪೋಷಿಸೋಣ

Geetha Binthodi

ನನ್ನ ಬ್ಲಾಗ್ ಬರಹಗಳಿಗೆ ಪೇಂಟಿಂಗ್, ಚಿತ್ರವನ್ನು ಬಿಡಿಸುವ ಗೀತಾ ಬಿಂತೋಡಿ ಎಂಬ ಕಲಾವಿದೆಯನ್ನೇ ನೋಡೋಣ. ಮೂಲತಃ ಆಕೆ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಬಾಲ್ಯದಿಂದಲೇ ಅವರಿಗೆ ಚಿತ್ರಕಲೆಯ ಕುರಿತು ಅತೀವ ಆಸಕ್ತಿ. ಬಿಡುವು ಸಿಕ್ಕಾಗ ಬ್ರಷ್ ಹಿಡಿದುಕೊಂಡು ಕ್ಯಾನ್ವಸ್ ನಲ್ಲಿ ಚಿತ್ರಗಳನ್ನುಬಿಡಿಸುತ್ತಾರೆ.

ನನಗೆ ಬ್ಲಾಗಿಂಗ್ ಇಷ್ಟ. ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ದಿನಕ್ಕೆ ಸಾವಿರಾರು ಪದಗಳ ಸುದ್ದಿ, ಲೇಖನ ಬರೆದರೂಬ್ಲಾಗಿಂಗ್ ಮಾಡುವ ಸಂತೋಷವೇ ಬೇರೆ. ನಿಮ್ಮಲ್ಲಿಯೂ ನಿಮ್ಮದೇ ಆದ ಹವ್ಯಾಸಗಳು ಇರಬಹುದು. ಬಿಡುವು ಇಲ್ಲ,ಹಣ ದೊರಕುವುದಿಲ್ಲ ಅಥವಾ ಅದರಿಂದ ಏನೂ ಲಾಭವಿಲ್ಲ ಇತ್ಯಾದಿ ಕಾರಣಗಳನ್ನು ಇಟ್ಟುಕೊಂಡು ಹವ್ಯಾಸಗಳಿಂದದೂರವಿರಬೇಡಿ. ಇಂತಹ ಹವ್ಯಾಸಗಳನ್ನು ನಮಗೆ ಗೊತ್ತಾಗದಂತೆ ಅದ್ಭುತ ಲಾಭಗಳನ್ನು ತಂದುಕೊಡುತ್ತದೆ. ನಮ್ಮವ್ಯಕ್ತಿತ್ವ ವಿಕಸನಕ್ಕೆ ಸಾಕಷ್ಟು ಕೊಡುಗೆ ನೀಡುತ್ತದೆ. ಹೀಗಾಗಿ, ಹವ್ಯಾಸಗಳು ಮತ್ತು ಕ್ರಿಯೆಟಿವಿಟಿಗಳನ್ನುಪ್ರೋಷಿಸೋಣ.

ಪುಸ್ತಕ ಖರೀದಿ ಮತ್ತು ಓದು

ಫೇಸ್ಬುಕ್ಕಾಲದಲ್ಲಿ ಬೇರೆ ಬುಕ್ಸ್ ಓದುವವರು ಅಪರೂಪವಾಗಿದ್ದಾರೆ. ಆದರೆ, ಪುಸ್ತಕ ಓದುವಾಗ ದೊರಕುವ ತಾದ್ಯತ್ಮವೇಬೇರೆ. ತಿಂಗಳಿಗೆ ಅಥವಾ ವಾರಕ್ಕೆ ಒಂದಾದರೂ ಒಳ್ಳೆಯ ಪುಸ್ತಕವನ್ನು ಓದಿ. ನಿಮಗೆ ವ್ಯಕ್ತಿತ್ವ ವಿಕಸನದಕುರಿತು ಆಸಕ್ತಿಯಿದ್ದರೆ ಅಂತಹ ಪುಸ್ತಕ ಓದಿ. ಸಾಧಕರ ಜೀವನ ಚರಿತ್ರೆಗಳನ್ನು ಓದಿರಿ. ಈಗ ಪುಸ್ತಕಗಳನ್ನುಆನ್ ಲೈನ್ ಮೂಲಕ ಖರೀದಿಸಬಹುದು. ನಿಮ್ಮ ಮನೆಬಾಗಿಲಿಗೆ ಪುಸ್ತಕ ಬಂದು ತಲುಪುತ್ತದೆ. ಉದಾಹರಣೆಗೆ ನೀವು ಮೈ ಬುಕ್ ಅಡ್ಡಾದಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಬಹುದು.

ಸೆಮಿನಾರ್ ಇತ್ಯಾದಿ

ಕೇವಲ ಮದುವೆ, ಜಾತ್ರೆಗಳಿಗೆ ಮಾತ್ರ ಹೋಗಬೇಡಿ. ನಿಮ್ಮ ಕರಿಯರ್ ಗೆ ಸಂಬಂಧಪಟ್ಟ ಸೆಮಿನಾರ್ ಮತ್ತು ವರ್ಕ್ಶಾಪ್ ಗಳಲ್ಲಿಯೂ ಪಾಲ್ಗೊಳ್ಳಿ. ಇದರಿಂದ ವೃತ್ತಿಗೆ ಸಂಬಂಧಪಟ್ಟ ನಿಮ್ಮ ಕೌಶಲಗಳು ವೃದ್ಧಿಯಾಗುತ್ತವೆ. ಸಮಾನಸಕ್ತರ ಸಂಪರ್ಕವೂ ಆಗುತ್ತದೆ. ಹೊಸ ಜನರ ಪರಿಚಯವಾಗುತ್ತದೆ.

ಆರೋಗ್ಯದ ಕುರಿತು ಕಾಳಜಿ

ಆರೋಗ್ಯವೇ ಭಾಗ್ಯ ಎಂಬ ಎರಡು ಪದದ ವಾಕ್ಯವನ್ನು ಸದಾ ನೆನಪಿನಲ್ಲಿಡಿ. ಆರೋಗ್ಯದ ಕುರಿತು ಯಾವತ್ತೂ ನೆಗ್ಲೆಕ್ಟ್ ಮಾಡಬೇಡಿ. ಸರಿಯಾದ ಸಮಯಕ್ಕೆ ಸೂಕ್ತವಾದ ಆಹಾರಗಳನ್ನು ಸದಾ ಸೇವಿಸಿ. ಹಣ್ಣು ಹಂಪಲುಗಳನ್ನು ಖರೀದಿಸಿ ತಿನ್ನಲು ಕಂಜೂಸ್ ಮಾಡಬೇಡಿ. ಅತ್ಯುತ್ತಮ ಪೋಷಕಾಂಶಗಳು ಇರುವ ಆಹಾರಗಳನ್ನು ಸೇವಿಸಿರಿ.

ಸದಾ ವಿದ್ಯಾರ್ಥಿಯಾಗಿರಿ

ಇತ್ತೀಚೆಗೆಸ್ನೇಹ ಬುಕ್ ಹೌಸ್ ನಲ್ಲಿದ್ದಾಗ ಅಲ್ಲಿ ಚಂದ್ರಶೇಖರ್ ಎಂಬ ಫೋಟೊಗ್ರಾಫರ್ ಅವರ ಪರಿಚಯವಾಯಿತು. ಅವರಕೈಯಲ್ಲಿ ಗೀಟಾರ್ ಇತ್ತು. ಅದರಲ್ಲಿ ಏನು ವಿಶೇಷ ಇದೆ ಎನ್ನುವಿರಾ? ಅವರಿಗೆ ಈಗ ವಯಸ್ಸು ಭರ್ತಿ69. ಈ ವಯಸ್ಸಿನಲ್ಲಿ ಗಿಟಾರ್ ಕಲಿಯುತ್ತಿದ್ದಾರೆ. ಅದಕ್ಕೂ ಕಾರಣವಿದೆ, ಗಿಟಾರ್ ಹೇಳಿಕೊಡು ಎಂದಾಗ“ನಿಮಗೆ ನನ್ನ ತಂದೆಯ ವಯಸ್ಸಾಗಿದೆ’ ಎಂದು ಟೀಕಿಸಿದ ವ್ಯಕ್ತಿಯ ಮಾತನ್ನೇ ಸವಾಲಾಗಿ ಸ್ವೀಕರಿಸಿ ಗಿಟಾರ್ಕಲಿಯುತ್ತಿದ್ದಾರೆ.  ಈ ವಯಸ್ಸಿನಲ್ಲಿ ಇಷ್ಟೆಲ್ಲ ಮಾಡುತ್ತಿರುವವರುತನ್ನ ಹಿಂದಿನ ವಯಸ್ಸಿನಲ್ಲಿ ಏನೆಲ್ಲ ಮಾಡಿದ್ದಾರೆ ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಅದು ಒಂದಾ,ಎರಡಾ…. ಈ ಕೆಳಗಿನ ವಿಡಿಯೋ ನೋಡಿ 🙂

ನಾವು ಸದಾ ಏನಾದರೂ ಹೊಸತನ್ನು ಕಲಿಯುತ್ತಿರಬೇಕು. ಈಗ ಕೈಯಲ್ಲಿರುವ ಮೊಬೈಲ್ ಮೂಲಕವೇ ಇಂಟರ್ನೆಟ್ ಮೂಲಕ ಏನಾದರೂಕಲಿಯಬಹುದು. ಸದಾ ವಿದ್ಯಾರ್ಥಿಗಳಾಗಿರೋಣ.

ಸಂತೋಷವಾಗಿರಲು ಪ್ರಯತ್ನಿಸಿ

ಸದಾ ನಗುನಗುತ್ತಾ ಇರಿ. ಸವಾಲುಗಳು ಬಂದಾಗ ಭಯಪಡಬೇಡಿ. ಕಷ್ಟಗಳಿಗೆ ಹೆದರಿ ಓಡಬೇಡಿ. ನೀವು ನಗುನಗುತ್ತಮಾತನಾಡಿ, ಸುತ್ತಮುತ್ತಲಿನವರಿಗೂ ನಗುವನ್ನು ಹರಡಿ.

Image credit: unsplash

ನ್ನಷ್ಟುವ್ಯಕ್ತಿತ್ವ ವಿಕಸನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಫೇಸ್ಬುಕ್, ವಾಟ್ಸಪ್, ಟ್ವಿಟರ್ ಮೂಲಕ ಷೇರ್ ಮಾಡಿ. ನಿಮ್ಮ ಅಭಿಪ್ರಾಯ,ಅನಿಸಿಕೆಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ. ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.