Personality development: ಜೇಮ್ಸ್ ಬಾಂಡ್ ಜೀವನ ಪಾಠ

ಹಾಲಿವುಡ್‍ನ ಜನಪ್ರಿಯ ಪತ್ತೆದಾರಿ ಪಾತ್ರವಾದ ಜೇಮ್ಸ್ ಬಾಂಡ್‍ನಿಂದ ಬದುಕಿನಲ್ಲಿ ಕಲಿಯಬೇಕಾದ ಸಾಕಷ್ಟು ಪಾಠಗಳಿವೆ. ಈ ಪಾಠಗಳು ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ನೆರವಾಗಬಹುದು.

* ಪ್ರವೀಣ್ ಚಂದ್ರ ಪುತ್ತೂರು

ಗತ್ತಿನ ಜನಪ್ರಿಯ ಕಾಲ್ಪನಿಕ ಪತ್ತೆದಾರಿ ಪಾತ್ರವಾದ ಜೇಮ್ಸ್ ಬಾಂಡ್ ಎಲ್ಲರಿಗೂ ಅಚ್ಚುಮೆಚ್ಚು. ನೀವೂ ಜೇಮ್ಸ್ ಬಾಂಡ್ ಸಿನಿಮಾಗಳನ್ನು ನೋಡಿರಬಹುದು. ಜೇಮ್ಸ್ ಬಾಂಡ್‍ನ ಚಾಣಾಕ್ಷ್ಯತನಕ್ಕೆ, ಸಾಹಸಕ್ಕೆ ವಾಹ್ ಎಂದಿರಬಹುದು. ನಾನೂ ಅವನಂತಾಗಬೇಕು ಎಂದು ಕನಸು ಕಂಡಿರಲೂಬಹುದು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಮ್ಮ ಕರಿಯರ್ ಪ್ರಗತಿಗೆ ನೆರವಾಗುವ ಹಲವು ಅಂಶಗಳನ್ನು ಗುರುತಿಸಿದ್ದೀರಾ? ಎಂತಹ ಪರಿಸ್ಥಿತಿ ಬಂದರೂ ಚೇತರಿಸಿಕೊಳ್ಳುವ ಗುಣವನ್ನು ನಾವು ಬಾಂಡ್‍ನಿಂದ ಕಲಿಯಬಹುದು. ಇದನ್ನು ಹೊರತುಪಡಿಸಿ ಇನ್ನಿತರ ಕರಿಯರ್ ಪಾಠಗಳ ವಿವರ ಇಲ್ಲಿದೆ.

ಜಂಟಲ್‍ಮೆನ್ ತರಹ ಡ್ರೆಸ್

ಜೇಮ್ಸ್ ಬಾಂಡ್ ಚಿತ್ರದಲ್ಲಿ ಆತನ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ನೀವು ಗಮನಿಸಿರಬಹುದು. ನೀವು ಯಾರನ್ನಾದರೂ ಭೇಟಿಯಾಗುವ ಸಂದರ್ಭದಲ್ಲಿ ಅವರು ಯಾವ ರೀತಿ ಉಡುಗೆ-ತೊಡುಗೆ ತೊಟ್ಟಿದ್ದಾರೆ ಎನ್ನುವುದನ್ನು ಮೊದಲು ಗಮನಿಸುವಿರಿ ತಾನೇ? ವ್ಯಕ್ತಿಯೊಬ್ಬರ ಬಗ್ಗೆ ಮೊದಲ ಆಕರ್ಷಣೆ ಅಥವಾ ಫಸ್ಟ್ ಇಂಪ್ರೆಷನ್ ಮೂಡಿಸುವಲ್ಲಿ ಧರಿಸಿರುವ ಡ್ರೆಸ್‍ನ ಪಾತ್ರ ಹಿರಿದಾದದ್ದು. ಮೊದಲ ಬಾರಿಗೆ ಉದ್ಯೋಗದ ಸಂದರ್ಶನಕ್ಕೆ ಹಾಜರಾದಗ ನೀವು ಧರಿಸುವ ಉಡುಗೆಯನ್ನೂ ಸಂದರ್ಶಕರು ಗಮನಿಸುತ್ತಾರೆ. ಇದು ಸಂದರ್ಶನಕ್ಕೆ ಮಾತ್ರ ಸೀಮಿತವಲ್ಲ. ನೀವು ದಿನಾ ಕೆಲಸಕ್ಕೆ ಬರುವ ಸಂದರ್ಭದಲ್ಲಿ ಹೇಗಿರುತ್ತೀರಿ? ನಿಮ್ಮ ಡ್ರೆಸ್ ಕಲ್ಚರ್ ಹೇಗಿದೆ? ಇತ್ಯಾದಿಗಳನ್ನು ಗಮನಿಸುವವರಿದ್ದಾರೆ. ಕ್ಲಯೆಂಟ್‍ಗಳನ್ನು ಭೇಟಿಯಾಗುವಾಗಲೂ ನೀವು ಧರಿಸಿದ ಉಡುಗೆ ಅವರನ್ನು ಮೊದಲ ನೋಟಕ್ಕೆ ಸೆಳೆಯುತ್ತದೆ.

ವಿಫಲತೆ ಎನ್ನುವುದು ಯಶಸ್ಸಿಗೆ ಮೆಟ್ಟಿಲು

ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ನೀವು ಆತನ ಯಶಸ್ಸಿನ ಜೊತೆ ವಿಫಲತೆಯನ್ನು ಗಮನಿಸಿರಬಹುದು. ಆತ ಹಲವು ಬಾರಿ ವಿಫಲನಾಗಿ ಕೊನೆಗೆ ಯಶಸ್ಸು ಪಡೆಯುವುದು ಸಾಮಾನ್ಯ. ನಮ್ಮ ಕರಿಯರ್ ಕ್ಷೇತ್ರವೂ ಹೀಗೆಯೇ. ಸಡನ್ ಆಗಿ ಯಶಸ್ಸು ಎಲ್ಲರಿಗೂ ದೊರಕುವುದಿಲ್ಲ. ಹಲವು ಸಲ ಸೋತರೆ ಮುಂದೆ ಗೆಲುವು ಸಿಗುತ್ತದೆ. ಈಗಾಗಲೇ ಉದ್ಯಮಗಳಲ್ಲಿ ಗೆದ್ದವರ ಆತ್ಮಚರಿತ್ರೆಯನ್ನು ಓದಿರಿ. ಅವರು ಆರಂ`Àದಲ್ಲಿ ಪಟ್ಟ ಪರಿಪಾಟಿಲು, ಕಷ್ಟಗಳನ್ನು ಗಮನಿಸಿರಿ. ಹೊಳೆಯುವ ಚಿನ್ನದ ಹಿಂದೆ ಅಕ್ಕಸಾಲಿಗನ ಸುತ್ತಿಗೆಯ ಸಾವಿರಾರು ಪೆಟ್ಟು ಇರುತ್ತದೆ. ಕಲ್ಲಿನ ಶಿಲ್ಪವೊಂದು ಮೂಡುವ ಮೊದಲು ಉಳಿಯ ಸಾವಿರಾರು ಪೆಟ್ಟುಗಳನ್ನು ಕಲ್ಲು ತಿಂದಿರುತ್ತದೆ. ಹೀಗಾಗಿ ವಿಫಲತೆಗೆ ಅಂಜಬೇಡಿ.

ಎಲ್ಲಾ ಪರಿಸ್ಥಿತಿಗಳಲ್ಲಿಯೂ ಪ್ರಶಾಂತವಾಗಿರಿ

ಜೇಮ್ಸ್‍ಬಾಂಡ್ ಯಾವುದೇ ಪರಿಸ್ಥಿತಿಯಲ್ಲಿಯೂ ಉದ್ವೇಗಕ್ಕೆ ಒಳಗಾಗುವುದಿಲ್ಲ. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಶಾಂತಚಿತ್ತ, ಸಮಚಿತ್ತದಿಂದ ಬಾಂಡ್ ವರ್ತಿಸುತ್ತಾನೆ. ಇದು ಕರಿಯರ್‍ನಲ್ಲಿ ಮಾತ್ರವಲ್ಲದೆ ನಿತ್ಯ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕಾದ ಉತ್ತಮ ಪಾಠವಾಗಿದೆ. ನಿಮ್ಮ ಉದ್ಯೋಗದಲ್ಲಿ, ಬಿಸ್ನೆಸ್‍ನಲ್ಲಿ ವಿವಿಧ  ಪರಿಸ್ಥಿತಿಗಳು ಕಂಡುಬರುವುದು ಸಾಮಾನ್ಯವಾಗಿದೆ. ಅವುಗಳಿಗೆ ಹೆದರದಿರಿ. ಸಮಚಿತ್ತದಿಂದ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ಗುಣವನ್ನು ಬೆಳೆಸಿಕೊಳ್ಳಿರಿ.

ತಂತ್ರಜ್ಞಾನದಲ್ಲಿ ಪರಿಣತರಾಗಿರಿ

ನಿಮಗೆ ಜೇಮ್ಸ್ ಬಾಂಡ್ ಬಳಕೆ ಮಾಡುವ ತಂತ್ರಜ್ಞಾನಗಳು ಅಚ್ಚರಿ ಹುಟ್ಟಿಸಿರಬಹುದು. ಈಗಿನ ಟೆಕ್ ಜಗತ್ತಿನಲ್ಲಿ ಪ್ರತಿಯೊಬ್ಬ ಉದ್ಯೋಗಿಯು ತಂತ್ರಜ್ಞಾನದಲ್ಲಿ ಪಂಟರಾಗಿರಬೇಕು. ಉದಾಹರಣೆಗೆ ನಿಮ್ಮ ಪ್ರಸಂಟೇಷನ್ ಸಲ್ಲಿಕೆ ತಡವಾಗಿರುವುದರ ಕುರಿತು ಬಾಸ್ ಹಲವು ಬಾರಿ ವಾರ್ನಿಂಗ್ ಕೊಟ್ಟಿದ್ದಾರೆ ಎಂದಿರಲಿ. ನೀವಿನ್ನೂ ಆ ಸ್ಲೈಡ್‍ಗಳನ್ನು ಜೋಡಿಸಲು ಕಷ್ಟಪಡುತ್ತ ಇದ್ದೀರಿ. ಪ್ರಯಾಣ ಮಾಡುತ್ತಿರುವ ಸಮಯದಲ್ಲಿ ಪ್ರಸಂಟೇಷನ್ ಸಿದ್ಧಪಡಿಸುತ್ತಿದ್ದ ಲ್ಯಾಪ್‍ಟಾಪ್ ಕ್ರಾಷ್ ಆಯಿತು ಎಂದಿಟ್ಟುಕೊಳ್ಳಿ. ಅದರಲ್ಲಿರುವ ಆಫೀಸ್ ಡೇಟಾಗಳನ್ನು ವಾಪಸ್ ಪಡೆಯುವುದು ಹೇಗೆ? ನಾಳೆ ಬಾಸ್‍ಗೆ ಪ್ರಸಂಟೇಷನ್ ಹೇಗೆ ನೀಡುವಿರಿ. ನಿಮ್ಮ ಸ್ಮಾರ್ಟ್‍ಫೋನ್ ತೆಗೆದುಕೊಳ್ಳಿ. ಗೂಗಲ್‍ನಲ್ಲಿ ಪಿಪಿಟಿ ಎಂದು ಹುಡುಕಿ. ನಿಮಗೆ ಬೇಕಾದ ವಿಷಯದ ಪಿಪಿಟಿ ಡೌನ್‍ಲೋಡ್ ಮಾಡಿಕೊಳ್ಳಿ. ಅದನ್ನು ಮೈಕ್ರೊಸಾಫ್ಟ್ ಆಫೀಸ್ ಆ್ಯಪ್ ಮೂಲಕ ಓಪನ್ ಮಾಡಿ. ಅದರಲ್ಲಿರುವ ಮಾಹಿತಿಗಳನ್ನು ಎಡಿಟ್ ಮಾಡಿ. ಕೆಲವೇ ನಿಮಿಷದಲ್ಲಿ ನಿಮ್ಮ ಪಿಪಿಟಿ ಸಿದ್ಧವಾಗುತ್ತದೆ. ಪಿಪಿಟಿ ಸೇವ್ ಮಾಡಿ ಮತ್ತು ಬಾಸ್‍ಗೆ ಸೆಂಡ್ ಮಾಡಿ.

ರಿಸ್ಕ್ ತೆಗೆದುಕೊಳ್ಳಲು ಕಲಿಯಿರಿ

ಸವಾಲು ತೆಗೆದುಕೊಳ್ಳಲು ಸಿದ್ಧರಿಲ್ಲದೆ ಇದ್ದರೆ ಕರಿಯರ್‍ನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಜೇಮ್ಸ್‍ಬಾಂಡ್‍ನಿಂದ ಕಲಿಯಬೇಕಾದ ಪ್ರಮುಖ ಪಾಠ. ರಿಸ್ಕ್ ಎಂದರೆ ದೀರ್ಘಕಾಲದ ಗುರಿಯನ್ನು ಸಾಸಲು ದೃಢನಿರ್ಧಾರ ತೆಗೆದುಕೊಳ್ಳುವುದು. ಲಕ್ಷ ರೂ. ಸಂಬಳದ ಕೆಲಸ ಬಿಟ್ಟು ಸ್ವಂತ ಸ್ಟಾರ್ಟ್‍ಅಪ್ ಆರಂಭಿಸುವುದು ಕರಿಯರ್‍ನಲ್ಲಿ ರಿಸ್ಕ್ ತೆಗೆದುಕೊಳ್ಳುವಿಕೆಗೆ ಉತ್ತಮ ಉದಾಹರಣೆಯಾಗಿದೆ.

ಪ್ರಯತ್ನ ಕೈಬಿಡಬೇಡಿ

ನೀವು ನಿಮ್ಮತನವನ್ನು ಮತ್ತು ಪ್ರಯತ್ನವನ್ನು ಬಿಟ್ಟುಬಿಡದೆ ಇದ್ದರೆ ಜಗತ್ತೇ ನಿಮ್ಮ ಮುಂದೆ ಮಂಡಿಯೂರಬಹುದು. ಜೇಮ್ಸ್ ಬಾಂಡ್ ಚಿತ್ರದಲ್ಲಿ ನೆವರ್ ಗೀವ್ ಅಪ್ ಎನ್ನುವುದು ನಾವು ಕಲಿಯಬೇಕಾದ ಪ್ರಮುಖ ಪಾಠ. ನಿಮಗೆ ಬಾಲ್ಯದಲ್ಲಿ ಓದಿದ ಮೊಲ ಮತ್ತು ಆಮೆಯ ಓಟದ ಕತೆ ಗೊತ್ತಿರಬಹುದು. ತಾನು ಮೊಲದಷ್ಟು ವೇಗವಾಗಿ ಓಡಲಾರೆ ಎಂದು ತಿಳಿದಿದ್ದರೂ ಆಮೆ ತನ್ನ ಪ್ರಯತ್ನ ಬಿಡಲಿಲ್ಲ. ಕೊನಗೆ ಪಂದ್ಯದಲ್ಲಿ ಗೆದ್ದದ್ದು ಆಮೆ.

ಪರಿಪೂರ್ಣತೆಯ ಮಹತ್ವ

ನೀವು ಜೇಮ್ಸ್ ಬಾಂಡ್ ಚಿತ್ರಗಳ ಪ್ರೇಮಿಗಳಾದರೆ ಅಲ್ಲಿ ಅಪರಿಪೂರ್ಣತೆ ಎಂಬ ಪದ ಹುಡುಕಿದರೂ ಸಿಗದು. ಅಲ್ಲಿ ಪರ್ಫೆಕ್ಷನ್ ನದ್ದೇ ಮೇಲಾಟ. ನಮ್ಮ ಉದ್ಯೋಗದಲ್ಲಿಯೂ ಪ್ರತಿದಿನ ಪರಿಪೂರ್ಣತೆಗೆ ಪ್ರಯತ್ನಿಸಬೇಕು.

ಕುಟುಂಬ ಮತ್ತು ಕೆಲಸ

ಬಾಂಡ್‍ಗೆ ಏನೇ ಕೆಲಸವಿರಲಿ. ತನ್ನ ಸಂಗಾತಿಗೆ ಅಥವಾ ಪ್ರೇಯಸಿಗೆ ಪ್ರೀತಿ ತೋರಲು ಆತ ಮರೆಯುವುದಿಲ್ಲ. ಇದೇ ರೀತಿ, ಪ್ರತಿಯೊಬ್ಬ ಉದ್ಯೋಗಿಯೂ ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ಸಮತೋಲನಕ್ಕೆ ಪ್ರಯತ್ನಿಸಬೇಕು. ನಮ್ಮ ಸುತ್ತಮುತ್ತಲಿನವರ ನೋವು ನಲಿವುಗಳಿಗೆ ಸ್ಪಂಸುವ ಗುಣವಿರಬೇಕು. ಇನ್ನುಳಿದಂತೆ, ತಾಳ್ಮೆ, ಚರ್ಚೆ ಮಾಡುವ ಮನೋ`Áವ ಸೇರಿದಂತೆ ಹಲವು ಸಂಗತಿಗಳನ್ನು ನಾವು ಜೇಮ್ಸ್ ಬಾಂಡ್‍ನಿಂದ ಕಲಿಯಬಹುದಾಗಿದೆ.

ಇನ್ನಷ್ಟು ವ್ಯಕ್ತಿತ್ವ ವಿಕಸನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ.