ಒಂದೇ ರಾತ್ರಿಯಲ್ಲಿ ಬರೋಲ್ವಂತೆ Success! (ಮತ್ತೆಷ್ಟು ಸಮಯ ಬೇಕು?)

ನೀವು ಈ ಮುಂದಿನ ನುಡಿಮುತ್ತುಗಳನ್ನು ಕೇಳಿರಬಹುದು. SUCCESS IS NOT OVERNIGHT IT TAKES YEARS SUCCESS IS YOURS ಅಥವಾ Overnight Success Does Not Happen Overnight ಅಥವಾ ಇದೇ ಅರ್ಥ ಬರುವ ಕೋಟ್ ಗಳನ್ನು ಕೇಳಿರಬಹುದು.

ಇಷ್ಟು ದಿನ ಹೆಸರೇ ಕೇಳಿರದ ವ್ಯಕ್ತಿಯೊಬ್ಬರು ಒಲಿಂಪಿಕ್ಸ್ ನಲ್ಲಿ ಮೆಡಲ್ ಗೆಲ್ಲುತ್ತಾರೆ. ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಅವರದ್ದೇ ಸುದ್ದಿ. ಆದರೆ, ಆ ಒಂದು ಓವರ್ ನೈಟ್ ನಲ್ಲಿ ಬಂದಿರುವ ಯಶಸ್ಸು ನಿಜಕ್ಕೂ ಒಂದೇ ದಿನದಲ್ಲಿ ಅಥವಾ ಆ ಗಳಿಗೆಯಲ್ಲಿ ಬಂದಿರುವುದಲ್ಲ. ಅದರ ಹಿಂದೆ ಅದೇಷ್ಟೋ ವರ್ಷಗಳ ತಪಸ್ಸು ಇದೆ.

ನಾನೂ ಈ ಬ್ಲಾಗ್ ಅನ್ನು ನಿಯಮಿತವಾಗಿ ಅಪ್ಡೇಟ್ ಮಾಡ್ತಾ ಇದ್ದೀನಿ. ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡ್ತಾ ಇದ್ದೀನಿ. ಆದರೆ, ಇದೇನೂ ಸಕ್ಸಸ್ ಫುಲ್ ವೆಬ್ಸೈಟ್ ಅಲ್ಲ. ಆದರೆ, ಪ್ರತಿನಿತ್ಯ ಹೊಸಬರ ಭೇಟಿಯಿಂದ ಹೆಚ್ಚುತ್ತಿರುವ ಪುಟ ಸಂಖ್ಯೆಗಳೇ ನನಗೆ ಬರೆಯಲು ಸ್ಫೂರ್ತಿ. ಕಳೆದ ಹಲವು ವರ್ಷಗಳಿಂದ ಇದನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ.

ಆದರೆ, ಬ್ಲಾಗಿಂಗ್ ಹೊರತುಪಡಿಸಿ ವೃತ್ತಿಯಲ್ಲಿ ನಾನು ಒಂದಿಷ್ಟು ಯಶಸ್ಸು ಪಡೆದಿದ್ದೇನೆ. ಈ ಯಶಸ್ಸು ನನಗೆ ತಕ್ಷಣಕ್ಕೆ ಬಂದಿರುವುದಲ್ಲಿ. ಹೈಸ್ಕೂಲ್ ನಲ್ಲೇ ನನಗೆ ಬರೆಯುವ ಹುಚ್ಚಿತ್ತು. ಪಿಯುಸಿಯಲ್ಲಿ ಕೊಂಚ ಹೆಚ್ಚಾಯಿತು. ಡಿಗ್ರಿಯಲ್ಲಿ ಹುಚ್ಚು ಜೋರಾಯಿತು. ಮುಂದೆ ಸ್ನಾತಕೋತ್ತರ ಪದವಿಯನ್ನು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿ ಪಡೆದಾಯ್ತು.

ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿ ಪಡೆದ ತಕ್ಷಣ ನಾನೂ ಯಶಸ್ಸು ಪಡೆಯಲಿಲ್ಲ. ಆದರೆ, ಯಶಸ್ಸಿಗೆ ಪ್ರಮುಖ ಮೆಟ್ಟಿಲಾಯಿತು. ನಂತರ ಟೈಮ್ಸ್ ಆಫ್ ಇಂಡಿಯಾ ಕನ್ನಡ, ವಿಜಯ ನೆಕ್ಸ್ಟ್, ಒನ್ ಇಂಡಿಯಾ, ಡ್ರೈವ್ ಸ್ಪಾರ್ಕ್, ವಿಜಯ ಕರ್ನಾಟಕ ಹೀಗೆ… ಹತ್ತು ವರ್ಷ ಕಳೆದ ಬಳಿಕ ನನ್ನ ಪತ್ರಿಕೋದ್ಯಮ ವೃತ್ತಿಯಲ್ಲಿ ಒಂದಿಷ್ಟು ಪರಿಣತಿ ಪಡೆದೆ. ಬ್ಲಾಗಿಂಗ್ ಗೂ ಇದೇ ರೀತಿ ಸಾಕಷ್ಟು ಸಮಯ ಬೇಕಾಗಬಹುದು. ಅಲ್ಲಿಯವರೆಗೆ ನಿರಂತರ ಪ್ರಯತ್ನವೊಂದೇ ನನ್ನ ಮುಂದಿರುವ ಆಯ್ಕೆ. ಹಾಗಂತ, ಹೆಚ್ಚು ಪುಟ ಸಂಖ್ಯೆ ತರುವಂತಹ ಜನಪ್ರಿಯ ವಿಧಾನಗಳನ್ನು ನಾನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ, ಕರ್ನಾಟಕ ಬೆಸ್ಟ್ ಸದಾ ಬೆಸ್ಟ್ ಆಗಿರಬೇಕು.

ಈ ಪೋಸ್ಟ್ ಮೂಲಕ ನಿಮಗೆ ಏನನ್ನು ಹೇಳುತ್ತಿದ್ದೇನೆ…

ನನಗೆ ಗೊತ್ತಿಲ್ಲ

  • ನನ್ನ ಬ್ಲಾಗ್ ಅನ್ನು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಓದುತ್ತಿರಬಹುದು… ಪಿಯುಸಿ ವಿದ್ಯಾರ್ಥಿ ಓದುತ್ತಿರಬಹುದು, ಕಾಲೇಜು ವಿದ್ಯಾರ್ಥಿ ಓದುತ್ತಿರಬಹುದು.
  • ಮುಂದೆ ಏನು ಮಾಡಬೇಕು ಎಂದು ತೋಚದೆ ಕುಳಿತಿರುವ ಹುಡುಗ ಅಥವಾ ಹುಡುಗಿ ಓದುತ್ತಿರಬಹುದು….
  • ಯಾವುದಾದರೂ ಸ್ಪೂರ್ತಿದಾಯಕ ಮಾತಿನ ಹುಡುಕಾಟದಲ್ಲಿರುವ ಸ್ನೇಹಿತರು ಓದುತ್ತಿರಬಹುದು…
  • ಉದ್ಯೋಗದಲ್ಲಿ ಸೆಟಲ್ ಆಗುತ್ತಿರುವವರು ಓದುತ್ತಿರಬಹುದು
  • ಮನೆಯಲ್ಲಿ ಮನೆ ಕೆಲಸ ಮಾಡಿ ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತಿರುವ ಗೃಹಿಣಿಯರು ಓದುತ್ತಿರಬಹುದು…
  • ವೃತ್ತಿಯಿಂದ ನಿವೃತ್ತಿಯಾಗಿ ಹೊಸತೇನಾದರೂ ಮಾಡಬೇಕು ಎಂದು ಯೋಚಿಸುತ್ತಿರುವವರು ಓದುತ್ತಿರಬಹುದು…

ಎಲ್ಲರಿಗೂ ಈ ಲೇಖನದ ಮೂಲಕ ವಿನಂತಿ ಇಷ್ಟೇ…

ನೀವು ಏನೇ ಮಾಡುವುದಿದ್ದರೂ ನಿಷ್ಠೆಯಿಂದ ಮಾಡಿ…

ಒಂದೇ ರಾತ್ರಿಯಲ್ಲಿ ಯಶಸ್ಸು ಬರುತ್ತದೆ ಎಂದು ಕಾಯಬೇಡಿ…

ಸದಾ ಪ್ರಯತ್ನ ಪಡಿ. ಒಂದು ರಾತ್ರಿಯಲ್ಲಿ ಬರುವ ಯಶಸ್ಸಿನ ಹಿಂದೆ ಹಲವು ರಾತ್ರಿ ಹಗಲಿನ ಪರಿಶ್ರಮ ಇರಬೇಕು.

ನಿಮಗೆ ಗೊತ್ತೇ?

ಚಿತ್ರಕಲೆಯಲ್ಲಿ ಸಕ್ಸಸ್ ಪಡೆದು ದೇಶ ವಿದೇಶದಲ್ಲಿ ಮಿಂಚುತ್ತಿರುವ ವಿಲಾಸ್ ನಾಯಕ್ ಅವರು ಒಂದು ಸುಂದರ ಚಿತ್ರ ಬರೆಯುವ ಮೊದಲು ನೂರಾರು ಚಿತ್ರಗಳನ್ನು ಬರೆದು ಪ್ರಯತ್ನಿಸುತ್ತಿದ್ದರು. ಈಗ ಅವರು ಕೆಲವೇ ನಿಮಿಷದಲ್ಲಿ ಬಿಡಿಸುವ ಸ್ಪೀಡ್ ಪೇಂಟಿಂಗ್ ಹಿಂದೆ ಸಾಕಷ್ಟು ಪರಿಶ್ರಮವಿದೆ.

ಅವರನ್ನು ನಾನು ವಿಜಯ ಕರ್ನಾಟಕ ಮಿನಿಗಾಗಿ ಈ ಹಿಂದೆ ಸಂದರ್ಶನ ಮಾಡಿದ್ದೆ. ಆ ಸಂದರ್ಶನದ ಲಿಂಕ್ ಇಲ್ಲಿದೆ.

ಅವರೊಬ್ಬರಿದ್ದರು.. ಅಮೆರಿಕದಲ್ಲಿ…

ಕೆಂಟುಕಿ ಚಿಕನ್ ಸ್ಥಾಪಕರು ತನ್ನ ನಿವೃತ್ತಿ ಬಳಿಕ ತನ್ನ ಮೊದಲ ರೆಸಿಪಿ ಮಾರಾಟ ಮಾಡಲು 2 ಸಾವಿರ ಜನರ ನಿರಾಕರಣೆಯನ್ನು ನೋಡಿದ್ದರು. ಸಾವಿರಾರು ಜನರು ಇವರ ರೆಸಿಪಿ ರಿಜೆಕ್ಟ್ ಮಾಡಿದ್ದರೂ ಕೊನೆಗೆ ಯಶಸ್ಸು ಕಂಡರು. ಅವರ ಯಶಸ್ಸಿನ ಕತೆ ಇಲ್ಲಿದೆ.

ಕರ್ನಾಟಕ ಬೆಸ್ಟ್ ನಲ್ಲಿ ಯಶಸ್ಸಿನ ಕತೆಗಳು, ಸ್ಪೂರ್ತಿದಾಯಕ ಕತೆಗಳು ಸಾಕಷ್ಟಿವೆ…

ಸಮಯ ಮಾಡಿಕೊಂಡು ಈ ಲಿಂಕ್ ನಲ್ಲಿರುವ ಎಲ್ಲಾ ಸ್ಪೂರ್ತಿದಾಯಕ ಕತೆಗಳನ್ನು ಓದಿ.

ಅಂದಹಾಗೆ,

ಈ ಬ್ಲಾಗ್ ನ ಹೆಡ್ ಲೈನ್ ನಲ್ಲಿ ಬ್ರಾಕೇಟ್ ನಲ್ಲಿ ನೀಡಿದಂತೆ “ಯಶಸ್ಸು ಪಡೆಯಲು ಎಷ್ಟು ರಾತ್ರಿ ಬೇಕು” ಎಂಬ ಪ್ರಶ್ನೆಗೆ ನಿಮಗೆ ಖಚಿತ ಉತ್ತರ ನೀಡಿಲ್ಲ. ಅದಕ್ಕೆ ನೂರು ರಾತ್ರಿ ಹಗಲು ಸಾಕಾಗಬಹುದು, ಅಥವಾ ಸಾವಿರಾರು ರಾತ್ರಿ ಹಗಲುಗಳು ಬೇಕಾಗಬಹುದು. ನಮ್ಮ ಪ್ರಯತ್ನ ನಿರಂತರವಾಗಿರಲಿ…

ಬ್ಲಾಗ್ ಓದಿದ ಮೇಲೆ ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಬರೆದರೆ ಖುಷಿಯಾಗುತ್ತದೆ. ಧನ್ಯವಾದ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.