Tag Archives: ಕವನ

ಕವಿತೆ: ಬಂದು ಬಿಡು ನೀನೊಮ್ಮೆ!

ಬಂದು ಬಿಡು ನೀನೊಮ್ಮೆ ನಾ ಕರೆಯುವ ಮೊದಲೇ ಒಲವ ಸೆಲೆ ಬತ್ತುವುದರೊಳಗೆ *** ಬಂದು ಬಿಡು ನೀನೊಮ್ಮೆ ನೆನಪುಗಳು ಕರಗುವ ಮೊದಲೇ ಕನಸುಗಳು ಕಮರುವುದರೊಳಗೆ *** ಬಂದು ಬಿಡು ನೀನೊಮ್ಮೆ ಮಾತು ಸಾಯುವ ಮೊದಲೇ ಮೌನ ಅಪ್ಪಿಕೊಳ್ಳುವುದರೊಳಗೆ *** ಬಂದು ಬಿಡು ನೀನೊಮ್ಮೆ ನಗು ಮಾಸುವ ಮೊದಲೇ ಅಳು ಕಾಡುವುದರೊಳಗೆ *** ಬಂದು ಬಿಡು ನೀನೊಮ್ಮೆ ಉಸಿರು ನಿಲ್ಲುವ ಮೊದಲೇ ದೇಹ ಮಣ್ಣಾಗುವುದರೊಳಗೆ

ಕವಿತೆ: ನಾನು ನಾನಾಗಿದ್ದು ಯಾವಾಗ…?

ನೀನು ನೀನಾಗಿದ್ದು ಯಾವಾಗ? ಕೇಳಿತು ಮನಸ್ಸು ಕುಟುಕುತ್ತಲೇ ಗೊತ್ತೇ ಇಲ್ಲ ನನಗೆ  ನಾನು ಯಾವಾಗ ನಾನಾಗಿದ್ದೆ…? ಮರೆತೇ ಹೋಗಿದ್ದೇ  ನನ್ನ ನಾ.. ಮಿತಿಯಿಲ್ಲದ ಸಂಬಂಧಗಳ ಸುಳಿಯೊಳಗೆ ಮುಚ್ಚಿದ  ಕೋಣೆಯ ಬಾಗಿಲೊಳಗೆ! *** ತಂದ ಬಂಗಾರ ಕಡಿಮೆ ಎಂದು ಮೂದಲಿಸಿದವರನ್ನು ಚೆಂದವಿಲ್ಲವೆಂದು ಆಡಿಕೊಂಡವರನ್ನು ಮಾತು ಮಾತಿಗೂ ಮುನಿಯುವ ಗಂಡನನ್ನು ನನ್ನೊಳಗಿನ ಕನಸನ್ನು ಕೊಂದವರನ್ನು ಮರೆವಿನ ಪಟ್ಟಿಗೆ ಸೇರಿಸಿ ನಗುವಿನ ಮುಖವಾಡ ಕಟ್ಟಿಕೊಂಡಿದ್ಯಾವಾಗ? *** ಒಗ್ಗರಣೆ ಸೌಟಿನೊಳಗಿನ ಸಾಸಿವೆ ಪಟ್ಟೆಂದು ಸಿಡಿದಾಗ, ಬಚ್ಚಲ ಒಲೆಗೆ ತುಂಬಿದ ತರಗಲೆ ಗಳ್ಳೆಂದು ಉರಿದಾಗ ಏನನ್ನೋ ಕಳೆದುಕೊಂಡಿದ್ದೇನೆ ಎಂದು… Read More »