Tag Archives: ಸಾವು

ಇದು ಮನಸ್ಸಿನ ವಿಷಯ: ಸಂಗಾತಿಯ ಸಾಂಗತ್ಯವಿಲ್ಲದ ಮೇಲೆ…

ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದರು. ಹೆಂಡತಿ ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ, ಅವರು ಮನೆಗೆ ಬರುತ್ತಿದ್ದಾರೆ ಎಂದು ಸುಳಿವು ಸಿಕ್ಕಾಗ ಮನೆಮಂದಿಯೆಲ್ಲಾ ಗಪ್ ಚುಪ್.ಅವರ ಊಟ ತಿಂಡಿ ಎಲ್ಲವೂ ಶಿಸ್ತಿನ ಪ್ರಕಾರ ನಡೆಯಬೇಕಿತ್ತು. ಅದೆಲ್ಲವೂ ಹೆಂಡತಿಯ ಕೆಲಸವಾಗಿತ್ತು. ಕಾಲಕ್ರಮೇಣ ಮಕ್ಕಳಿಗೆಲ್ಲಾ ಮದುವೆಯಾಯಿತು. ಒಂದು ದಿನ ಅವರ ಹೆಂಡತಿ ಆಕಸ್ಮಿಕವಾಗಿ ಸತ್ತು ಹೋದರು. ಹೆಂಡತಿ ಇರುವಾಗ ಎಲ್ಲರ ಮೇಲೆ ದರ್ಪ ತೋರಿಸುತ್ತಿದ್ದ ಅವರು ಹೆಂಡತಿ ಸತ್ತ… Read More »

ಕವಿತೆ: ಬಂದು ಬಿಡು ನೀನೊಮ್ಮೆ!

ಬಂದು ಬಿಡು ನೀನೊಮ್ಮೆ ನಾ ಕರೆಯುವ ಮೊದಲೇ ಒಲವ ಸೆಲೆ ಬತ್ತುವುದರೊಳಗೆ *** ಬಂದು ಬಿಡು ನೀನೊಮ್ಮೆ ನೆನಪುಗಳು ಕರಗುವ ಮೊದಲೇ ಕನಸುಗಳು ಕಮರುವುದರೊಳಗೆ *** ಬಂದು ಬಿಡು ನೀನೊಮ್ಮೆ ಮಾತು ಸಾಯುವ ಮೊದಲೇ ಮೌನ ಅಪ್ಪಿಕೊಳ್ಳುವುದರೊಳಗೆ *** ಬಂದು ಬಿಡು ನೀನೊಮ್ಮೆ ನಗು ಮಾಸುವ ಮೊದಲೇ ಅಳು ಕಾಡುವುದರೊಳಗೆ *** ಬಂದು ಬಿಡು ನೀನೊಮ್ಮೆ ಉಸಿರು ನಿಲ್ಲುವ ಮೊದಲೇ ದೇಹ ಮಣ್ಣಾಗುವುದರೊಳಗೆ