Tag Archives: ಸಂಬಂಧ

ಕವಿತೆ: ನಾನು ನಾನಾಗಿದ್ದು ಯಾವಾಗ…?

ನೀನು ನೀನಾಗಿದ್ದು ಯಾವಾಗ? ಕೇಳಿತು ಮನಸ್ಸು ಕುಟುಕುತ್ತಲೇ ಗೊತ್ತೇ ಇಲ್ಲ ನನಗೆ  ನಾನು ಯಾವಾಗ ನಾನಾಗಿದ್ದೆ…? ಮರೆತೇ ಹೋಗಿದ್ದೇ  ನನ್ನ ನಾ.. ಮಿತಿಯಿಲ್ಲದ ಸಂಬಂಧಗಳ ಸುಳಿಯೊಳಗೆ ಮುಚ್ಚಿದ  ಕೋಣೆಯ ಬಾಗಿಲೊಳಗೆ! *** ತಂದ ಬಂಗಾರ ಕಡಿಮೆ ಎಂದು ಮೂದಲಿಸಿದವರನ್ನು ಚೆಂದವಿಲ್ಲವೆಂದು ಆಡಿಕೊಂಡವರನ್ನು ಮಾತು ಮಾತಿಗೂ ಮುನಿಯುವ ಗಂಡನನ್ನು ನನ್ನೊಳಗಿನ ಕನಸನ್ನು ಕೊಂದವರನ್ನು ಮರೆವಿನ ಪಟ್ಟಿಗೆ ಸೇರಿಸಿ ನಗುವಿನ ಮುಖವಾಡ ಕಟ್ಟಿಕೊಂಡಿದ್ಯಾವಾಗ? *** ಒಗ್ಗರಣೆ ಸೌಟಿನೊಳಗಿನ ಸಾಸಿವೆ ಪಟ್ಟೆಂದು ಸಿಡಿದಾಗ, ಬಚ್ಚಲ ಒಲೆಗೆ ತುಂಬಿದ ತರಗಲೆ ಗಳ್ಳೆಂದು ಉರಿದಾಗ ಏನನ್ನೋ ಕಳೆದುಕೊಂಡಿದ್ದೇನೆ ಎಂದು… Read More »

ಲೇಖನ: ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ನನಗೆ ಪರಿಚಯದ ಹುಡುಗಿಯೊಬ್ಬಳು ಇತ್ತೀಚೆಗೆ ಡೈವೋರ್ಸ್ ಗೆ ತೆಗೆದುಕೊಂಡಳು. ಕಾರಣ ಕೇಳಬೇಕು ಎಂಬ ಕುತೂಹಲ ನನಗಿರಲಿಲ್ಲ. ಬೇಸರದಲ್ಲಿದ್ದಾಳೆ ಎಂದು ಪೋನ್ ಮಾಡಿದರೆ ಅವಳೇ ಕಾರಣಗಳನ್ನು ಹೇಳುತ್ತಾ ಸಾಗಿದಳು. ಅವಳು ಹೇಳುವ ದೂರುಗಳು ಇಂತಿವೆ; ಬೆಳಿಗ್ಗೆ ಕೆಲಸಕ್ಕೆ ಹೋದ ಗಂಡ ರಾತ್ರಿ ಮನೆಗೆ ಬರುತ್ತಾನೆ. ಬಂದ ಮೇಲೆ ನೀನು ಹೇಗಿದ್ದಿಯಾ, ಎಂದು ಕೇಳುವುದಿಲ್ಲ. ಊಟ ತಿಂದು ಮಲಗುತ್ತಾರೆ. ಇಡೀ ಹೊತ್ತು ಮನೆಯಲ್ಲಿ ಕುಳಿತುಕೊಂಡು ನನಗೂ ಬೋರ್ ಆಗಿರುತ್ತದೆ. ಒಂದು ಸ್ವಲ್ಪ ಹೊತ್ತಾದರೂ ಮಾತನಾಡಬೇಕು ಅನಿಸುತ್ತೆ. ಆದರೆ ಮಾತನಾಡುವುದು ಯಾರ  ಜತೆ? ಅವರು ಅವರ… Read More »