ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಕಾಂನಲ್ಲೇ ಪ್ಲ್ಯಾನ್ ಗಳನ್ನು ಖರೀದಿಸಬಹುದೇ?

By | 09/01/2019

ನೀವು ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ರಚಿಸುವಾಗಲೇ ಡೊಮೈನ್ ಖರೀದಿ ಮಾಡುವಂತೆ ಸೂಚನೆ ಬರುತ್ತದೆ. ಬ್ಲಾಗ್ ರಚಿಸಿದ ಬಳಿಕ ಅಪ್ ಗ್ರೇಡ್ ಮಾಡುವಂತೆ ಸೂಚನೆ ಬರುತ್ತದೆ. ಈ ಲೇಖನ ಓದಿದ ತಕ್ಷಣ ಯಾವುದೇ ಕಾರಣಕ್ಕೂ ವರ್ಡ್ ಪ್ರೆಸ್ ನಲ್ಲಿ ಯಾವುದಾದರೂ ಪ್ಲ್ಯಾನ್ ಖರೀದಿಸಲು ಹೋಗಬೇಡಿ. ಯಾಕೆಂದರೆ, ವರ್ಡ್ ಪ್ರೆಸ್ ಹೊರಗಡೆ ಇದಕ್ಕಿಂತಲೂ ಕಡಿಮೆ ದರಕ್ಕೆ ಉತ್ತಮ ಪ್ಲ್ಯಾನ್ ದೊರಕುತ್ತದೆ. ಈ ಕುರಿತು ನಾನು ಮುಂದೆ ಮಾಹಿತಿ ನೀಡುತ್ತೇನೆ. ಇಲ್ಲಿ ನೀಡಿದ ದರಗಳು 2019ರ ಜನವರಿ ತಿಂಗಳಲ್ಲಿ ನಮೂದಿಸಿರುವುದು. ಈ ದರ ಈಗ ಹೆಚ್ಚು ಕಮ್ಮಿ ಆಗಿರಬಹುದು. ಇಲ್ಲಿ ತಿಳಿಸಿರುವುದು ವರ್ಡ್ ಪ್ರೆಸ್.ಕಾಂ ಕುರಿತು ಮಾಹಿತಿ. ಇದಕ್ಕಿಂತಲೂ ವರ್ಡ್ ಪ್ರೆಸ್.ಆರ್ಗ್ ಬೆಸ್ಟ್. ಮುಂದಿನ ಲೇಖನದಲ್ಲಿ .ಆರ್ಗ್ ಕುರಿತು ಮಾಹಿತಿ ನೀಡುತ್ತೇನೆ.

ವೆಬ್ ಸೈಟ್ ಗೈಡ್ ನ ಈ ಹಿಂದಿನ ಲೇಖನ ಓದಿಲ್ಲದಿದ್ದರೆ ಇಲ್ಲಿದೆ ಓದಿ

ವರ್ಡ್ ಪ್ರೆಸ್ ನಲ್ಲಿದೆ ಆಕರ್ಷಕ ಪ್ಲ್ಯಾನ್ ಗಳು

ನಿಮ್ಮ ವರ್ಡ್ ಪ್ರೆಸ್ ಬ್ಲಾಗ್ ಅನ್ನು ಅಪ್ ಗ್ರೇಡ್ ಮಾಡಲು ಅಪ್ ಗ್ರೇಡ್ ಬಟನ್ ಒತ್ತಿದಾಗ ವರ್ಡ್ ಪ್ರೆಸ್ ಪ್ರೈಸಿಂಗ್ https://wordpress.com/pricing/ ವಿಭಾಗ ನಿಮಗೆ ಕಾಣಿಸುತ್ತದೆ.

ವರ್ಡ್ ಪ್ರೆಸ್ ಬೇಸಿಕ್ ಪ್ಲ್ಯಾನ್

ತಿಂಗಳಿಗೆ 200 ರೂಪಾಯಿ ಪ್ಲ್ಯಾನ್ ನಿಮ್ಮನ್ನು ಆಕರ್ಷಿಸಬಹುದು. ವರ್ಷಕ್ಕೆ 2,400 ರೂಪಾಯಿಗೆ ಬೇಸಿಕ್ ವೆಬ್ ಸೈಟ್ ನಿಮ್ಮದಾಗುತ್ತದೆ. ಈ ಯೋಜನೆಯ ಮೂಲಕ ನಿಮಗೆ ಉಚಿತವಾಗಿ ಡೊಮೈನ್ ನೇಮ್ ಸಹ ದೊರಕುತ್ತದೆ.  ಒಂದು ವರ್ಷದ ಬಳಿಕ ಡೊಮೈನ್ ಗೆ ಸುಮಾರು 800 ರೂಪಾಯಿ ಆಸುಪಾಸಿನಲ್ಲಿ ಹೆಚ್ಚುವರಿಯಾಗಿ ಪಾವತಿಸಬಹುದು.

ನೆನಪಿಡಿ, ಈ ಬೇಸಿಕ್ ಪ್ಲ್ಯಾನ್ ನಲ್ಲಿ ನಿಮಗೆ ಆಕರ್ಷಕ ಅಂಶಗಳು ಯಾವುದೂ ದೊರಕದು. ಕೆಲವು ಉಚಿತ ಥೀಮ್ ಮತ್ತು ಪ್ಲಗಿನ್ ಗಳಿಗೆ ತೃಪ್ತಿ ಪಡಬೇಕಾಗಬಹುದು. ಆರಂಭಿಕರಿಗೆ ಉತ್ತಮ ಎಂದು ವರ್ಡ್ ಪ್ರೆಸ್ ಹೇಳುತ್ತದೆ. ಆರಂಭಿಕರಿಗೆ ಒಂದು ಡೊಮೈನ್ ಹೆಸರಲ್ಲಿ ಕಡಿಮೆ ಸೌಲಭ್ಯ ಇರುವ ವೆಬ್ ಸೈಟ್ ಹೊಂದಲು ಇದು ಸೂಕ್ತವಾಗಬಹುದು. ಇದರಲ್ಲಿ ವರ್ಡ್ ಪ್ರೆಸ್ ನ ಜಾಹೀರಾತುಗಳು ಕಾಣಿಸಿಕೊಳ್ಳುವುದಿಲ್ಲವೆಂದು ಖುಷಿಪಡಬಹುದು. 6 ಜಿಬಿ ಸಂಗ್ರಹ ಸಾಮರ್ಥ‍್ಯ ಇರುವುದು ಉತ್ತಮ ವಿಷಯ. (ನೆನಪಿಡಿ: ಕರ್ನಾಟಕ ಬೆಸ್ಟ್ ಈ ಪ್ಲ್ಯಾನ್ ರೆಕಮಂಡ್ ಮಾಡುವುದಿಲ್ಲ, ಯಾಕೆಂದರೆ, ಇದರಲ್ಲಿ ಬಹುತೇಕ ಸೌಲಭ್ಯಗಳ ಕೊರತೆ ಇದೆ. ನಮಗೆ ಬೇಕಾದ ಥೀಮ್, ಪ್ಲಗಿನ್ ಹೊರಗಡೆಯಿಂದ ಇನ್ ಸ್ಟಾಲ್ ಮಾಡುವ ಸ್ವಾತಂತ್ರ್ಯವೂ ಇಲ್ಲ.). ಆದರೆ, ವೆಬ್ ಸೈಟ್ ವಿನ್ಯಾಸ ಹೇಗೆ ಬೇಕಾದರೂ ಇರಲಿ, ಒಂದು ಕಡಿಮೆ ದರದ ವೆಬ್ ಸೈಟ್ ಇರಲಿ ಎನ್ನುವವರಿಗೆ ಇದು ಸೂಕ್ತವಾಗಬಹುದು. ಇದರಲ್ಲಿ ಜೆಟ್ ಪ್ಯಾಕ್ ಬೇಸಿಕ್ ಫೀಚರ್ ಗಳು ದೊರಕುತ್ತವೆ. ಜೆಟ್ ಪ್ಯಾಕ್ ಕುರಿತು ಇನ್ನೊಂದು ಬಾರಿ ಹೇಳುತ್ತೇನೆ.

ವರ್ಡ್ ಪ್ರೆಸ್ ಪ್ರೀಮಿಯಂ ಆಯ್ಕೆ

ತಿಂಗಳಿಗೆ 350ರಂತೆ ವರ್ಷಕ್ಕೆ ಸುಮಾರು 4 ಸಾವಿರದ ಇನ್ನೂರು ರೂಪಾಯಿಗೆ ವರ್ಡ್ ‍ಪ್ರೆಸ್ ವೆಬ್ ಸೈಟ್ ನಿಮ್ಮದಾಗಿಸಿಕೊಳ್ಳಬಹುದು. ಇಲ್ಲಿ ನಿಮಗೆ ಅನ್ ಲಿಮಿಟೆಡ್ ಪ್ರೀಮಿಯಂ ಥೀಮ್ ಗಳು ದೊರಕುತ್ತವೆ. ನಿಮಗೆ ಇಷ್ಟವಾಗುವ ಯಾವುದಾದರೂ ಥೀಮ್ ಗಳನ್ನು ವರ್ಡ್ ಪ್ರೆಸ್ ನೊಳಗೆ 3-4 ಸಾವಿರ ರೂ. ನೀಡಿ ಖರೀದಿಸಬಹುದು. (ಈ ರೀತಿ ಖರೀದಿಸಿದಾಗ ನಿಮ್ಮ ವೆಬ್ ಸೈಟ್ ಖರ್ಚು ಸುಮಾರು 7 ಸಾವಿರ ರೂ. ದಾಟುತ್ತದೆ). ಇದರಲ್ಲಿ ಖುಷಿ ಪಡುವ ಸಂಗತಿಯೆಂದರೆ ನಿಮಗೆ ಜೆಟ್ ಪ್ಯಾಕ್ ಜೊತೆ ವರ್ಡ್ ಆ್ಯಡ್ ಸೌಲಭ್ಯ ದೊರಕುತ್ತದೆ. ನಿಮ್ಮ ವೆಬ್ ಸೈಟ್ ತಿಂಗಳಿಗೆ ಒಳ್ಳೆಯ ಪುಟ ಸಂಖ್ಯೆ ಹೊಂದಿದ್ದರೆ ಕೊಂಚ ಹಣ ಸಂಪಾದಿಸಬಹುದು. ಪುಟ ಸಂಖ್ಯೆ ಲಕ್ಷಗಳಲ್ಲಿದ್ದರೆ ಕೊಂಚವಾದರೂ ಅನುಕೂಲ. ಇಲ್ಲವಾದರೆ ಆದಾಯ 100 ಡಾಲರ್ ತಲುಪಲು(ಸುಮಾರು 5-7 ಸಾವಿರ ರೂ) ಹಲವು ವರ್ಷ ಬೇಕಾಗಬಹುದು. ವಿಡಿಯೋಪ್ರೆಸ್ ಸಹ ಇಲ್ಲಿ ಬೆಂಬಲ ನೀಡುತ್ತದೆ . ಇದಕ್ಕಿಂತ ಹೆಚ್ಚು ಫೀಚರ್ ಗಳನ್ನು ವರ್ಡ್ ಪ್ರೆಸ್ ಹೊರಗಡೆ ವರ್ಡ್ ಪ್ರೆಸ್ ವೆಬ್ ಸೈಟ್ ರಚಿಸಿ ನಾನು ಪಡೆದುಕೊಂಡಿದ್ದೇನೆ. ಆ ಕೌಶಲ ಕಲಿಯಲು ನೀವು ನನ್ನ ಮುಂದಿನ ಲೇಖನಗಳನ್ನು ಓದಬೇಕು.

ವರ್ಡ್ ಪ್ರೆಸ್ ಬಿಸ್ನೆಸ್ ಪ್ಲ್ಯಾನ್ ಗಳು

ನಿಮಗೆ ವರ್ಡ್ ಪ್ರೆಸ್ ವೆಬ್ ಸೈಟ್ ನ ನಿಜವಾದ ಅನುಭೂತಿ ಸಿಗಬೇಕಾದರೆ ವರ್ಡ್ ಪ್ರೆಸ್ ಬಿಸ್ನೆಸ್ ಪ್ಲ್ಯಾನ್ ಖರೀದಿಸಬೇಕು. ಇದಕ್ಕೆ ವರ್ಷಕ್ಕೆ ಸುಮಾರು 10 ಸಾವಿರ ರೂ. ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಬಹುದು (ನೆನಪಿಡಿ: ಥೀಮ್ ಖರೀದಿಗೆ ಹೆಚ್ಚುವರಿ ಹಣ ಪಾವತಿಸಬೇಕು, ಇಲ್ಲವಾದರೆ ಅದರಲ್ಲಿ ಲಭ್ಯವಿರುವ ಉಚಿತ ಥೀಮ್ ಗಳಿಗೆ ತೃಪ್ತಿಪಡಬೇಕಾಗಬಹುದು).

ಈ ಪ್ಲ್ಯಾನ್ ನಲ್ಲಿ ದೊರಕುವ ಬಹುತೇಕ ಸೌಲಭ್ಯವನ್ನು ನಾನು 2 ವರ್ಷದ ಹಿಂದೆ (ಡೊಮೈನ್ ಹೆಸರಿಗೆ 800 ರೂಪಾಯಿ, ಹೋಸ್ಟಿಂಗ್ ಗೆ 3 ಸಾವಿರ ರೂ. ನೀಡಿ ಕೇವಲ 4 ಸಾವಿರ ರೂ.ಗೆ ನನ್ನದಾಗಿಸಿಕೊಂಡಿದ್ದೆ. ಈ ಸ್ಕಿಲ್ ಮುಂದೆ ಹೇಳಿಕೊಡುತ್ತೇನೆ.).

ನಿಮಗೆ ವರ್ಡ್ ಪ್ರೆಸ್ ಹೆಚ್ಚು ತ್ರಾಸ ಕೊಡದಂತೆ ನಿರ್ವಹಿಸಬೇಕಾದರೆ ಬಿಸ್ನೆಸ್ ಯೋಜನೆ ಖರೀದಿಸಬಹುದು. ಇದರಲ್ಲಿ ವರ್ಡ್ ಪ್ರೆಸ್ ನ ಎಲ್ಲಾ ಸೌಲಭ್ಯ ದೊರಕುತ್ತವೆ. ಸುಮಾರು 20 ಸಾವಿರ ರೂಪಾಯಿಗೆ ನೀವೇ ನಿಮಗೆ ಇಷ್ಟವಾಗುವಂತಹ ವೆಬ್ ಸೈಟ್ ರಚಿಸಿಕೊಳ್ಳಬಹುದು. ಆದರೆ, ಕೆಲವೊಂದು ಮಿತಿಗಳು ಇಲ್ಲೂ ಇವೆ. ಹೊರಗಡೆಯಿಂದ ಖರೀದಿಸಿದಾಗ ಇಂತಹ ಮಿತಿಗಳೂ ಇರುವುದಿಲ್ಲ. ಆದರೆ, ವರ್ಡ್ ಪ್ರೆಸ್ ಸರ್ವರ್ ನಲ್ಲಿ ಸುರಕ್ಷಿತವಾಗಿರುವ ಭಾವನೆಯಿಂದ ಈ ಪ್ಲ್ಯಾನ್ ಗಳನ್ನು ಬಳಸಬಹುದು.

ವರ್ಡ್ ಪ್ರೆಸ್.ಕಾಂ ಒಳಿತುಗಳು

  • ಸುಲಭವಾಗಿ ಬೇಸಿಕ್ ವೆಬ್ ಸೈಟ್ ರಚಿಸಬಹುದು.
  • ಅಪ್ ಡೇಟ್, ಬ್ಯಾಕಪ್, ನಿರ್ವಹಣೆ ಇತ್ಯಾದಿಗಳ ಕುರಿತು ಚಿಂತೆ ಮಾಡಬೇಕಿಲ್ಲ.

ವರ್ಡ್ ಪ್ರೆಸ್.ಕಾಂ ಅವಗುಣಗಳು

  • ನಿಮಗೆ ಬೇಕಾದ ಎಲ್ಲಾ ಪ್ಲಗಿನ್ ಗಳನ್ನು ಬಳಸಲು ಅವಕಾಶವಿಲ್ಲ
  • ನಿಮಗೆ ಶೇಕಡ 100ರಷ್ಟು ವೆಬ್ ಸೈಟ್ ಮೇಲೆ ನಿಯಂತ್ರಣ ಇರುವುದಿಲ್ಲ. ನಿಮಗೆ ತೋಚಿದಂತೆ ವೆಬ್ ಸೈಟ್ ಅನ್ನು .ಕಾಂನಲ್ಲಿ ಮಾಡಲಾಗುವುದಿಲ್ಲ.
  • ಹೊರಗಿನ ಜಾಹೀರಾತುಗಳನ್ನು ಅಳವಡಿಸಿಕೊಳ್ಳಲು ಬೆಂಬಲ ಸಮರ್ಪಕವಾಗಿಲ್ಲ. ವರ್ಡ್ ಆ್ಯಡ್ ಗಳಿಗೆ ತೃಪ್ತಿಪಡಬೇಕಾಷ್ಟೇ.
  • ಬಿಸ್ನೆಸ್ ಪ್ಲ್ಯಾನ್ ಹೊರತುಪಡಿಸಿ ಬೇರೆ ಯಾವುದೇ ಪ್ಲ್ಯಾನ್ ಗಳಲ್ಲಿ ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿಲ್ಲ.
  • ಇಕಾಮರ್ಸ್, ಮೆಂಬರ್ಷಿಪ್ ಇತ್ಯಾದಿಗಳಿಗೆ ವರ್ಡ್ ಪ್ರೆಸ್.ಕಾಂ ಸೂಕ್ತವಲ್ಲ. ವರ್ಡ್ ಪ್ರೆಸ್. ಆರ್ಗ್ ಗೆ ಹೋಲಿಸಿದರೆ ಇಂತಹ ತುಂಬಾ ಅವಗುಣಗಳನ್ನು ಪಟ್ಟಿಮಾಡಬಹುದು.

ಈ ಪ್ಲ್ಯಾನ್ ಗಳನ್ನು ಈಗಲೇ ಖರೀದಿಸಬೇಡಿ. ಯಾಕೆಂದರೆ ನಿಮಗೆ ನಿಮ್ಮ ವೆಬ್ ಸೈಟ್ ಕುರಿತು ಸಂಪೂರ್ಣ ನಿಯಂತ್ರಣ ಬೇಕಿದ್ದರೆ ವರ್ಡ್ ಪ್ರೆಸ್ ಕಾಂಗೆ ಬದಲಾಗಿ ವರ್ಡ್ ಪ್ರೆಸ್.ಆರ್ಗ್ ಗೆ ಹೋಗಬೇಕು.

ನಾನು ಮೇಲೆ ತಿಳಿಸಿದ ಎಲ್ಲಾ ಆಯ್ಕೆಗಳು ವರ್ಡ್ ಪ್ರೆಸ್.ಕಾಂನವು. ಇದಕ್ಕಿಂತಲೂ ಒಳ್ಳೆಯ ಅವಕಾಶ ವರ್ಡ್ ಪ್ರೆಸ್.ಆರ್ಗ್ ನಲ್ಲಿವೆ. ಕರ್ನಾಟಬೆಸ್ಟ್.ಕಾಂ ನಿರ್ಮಿಸಿರುವುದು ವರ್ಡ್ ಪ್ರೆಸ್ ಆರ್ಗ್ ನಲ್ಲಿ. ನಿಮಗೂ ಇದು ಸೂಕ್ತವೆನ್ನುವುದು ನನ್ನ ನಂಬಿಕೆ.

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಆರ್ಗ್ ಯಾಕೆ ಬೆಸ್ಟ್?

ಡೊಮೈನ್‌, ಹೋಸ್ಟಿಂಗ್‌ ಖರೀದಿಗೆ ಬೆಸ್ಟ್‌ ತಾಣ Tintuhost. tintuhost.comನಲ್ಲಿ ಇತರೆ ತಾಣಗಳಂತೆ ಮೋಸ, ವಂಚನೆ ಇರುವುದಿಲ್ಲ. ಇತರೆ ತಾಣಗಳಲ್ಲಿ ೯೯ ರೂಪಾಯಿಗೆ ಖರೀದಿಸಿ ಇತ್ಯಾದಿ ಆಫರ್‌ಗಳು ಕಾಣಿಸುತ್ತವೆ. ಆದರೆ, ರಿನೀವಲ್‌ ಸಮಯದಲ್ಲಿ ಅದರ ದರ ಹಲವು ಪಟ್ಟು ಹೆಚ್ಚಿರುತ್ತದೆ. ಅಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಇರುವ ಸರ್ವರ್‌ ದರ tintuhost.comನಲ್ಲಿ ಆರು ಸಾವಿರ ರೂ.ಗೆ ದೊರಕುತ್ತದೆ. ಹೀಗಾಗಿ ಕರ್ನಾಟಕ ಮೂಲದ tintuhost.comನಲ್ಲಿ ಡೊಮೈನ್‌, ಹೋಸ್ಟಿಂಗ್‌ ಇತ್ಯಾದಿ ಸೇವೆಗಳನ್ನು ಖರೀದಿಸಿ. serverhug ವೆಬ್‌ ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್‌ ಮಾಡಿ.