ಡಿಜಿಟಲ್ ನ್ಯೂಸ್ ಮೀಡಿಯಾ ನೋಂದಣಿ ಮಾಡಿಕೊಳ್ಳುವುದು ಹೇಗೆ?

By | 28/05/2021

ಈ ಲೇಖನವನ್ನು ಆಡಿಯೋ ರೂಪದಲ್ಲಿ ಇಲ್ಲಿ ಕೇಳಿರಿ

(ಸೂಚನೆ: ಕರ್ನಾಟಕ ಬೆಸ್ಟ್‌ ಬ್ಲಾಗ್‌ ಮೂಲಕ ಡಿಜಿಟಲ್‌ ನ್ಯೂಸ್‌ ಪೋರ್ಟಲ್‌ ಮಾಲೀಕರಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ಈ ಈ ಸಂಕ್ಷಿಪ್ತ ಮಾಹಿತಿ ಪ್ರಕಟಿಸಲಾಗಿದೆ. ಈ ಲೇಖನದಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿರಬಹುದು. ಸರಿಯಾದ ಮಾಹಿತಿಯನ್ನು ಕೇಂದ್ರ ಸರಕಾರದ Ministry of Information and Broadcasting ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬೇಕು).

ಕನ್ನಡದಲ್ಲಿ ಈಗ ನೂರಕ್ಕೂ ಹೆಚ್ಚು ನ್ಯೂಸ್‌ ಪೋರ್ಟಲ್‌ಗಳು ಇವೆ. ಬಹುತೇಕವು ನೋಂದಣಿಯಾಗಿರದೆ ಇರುವಂತಹದ್ದೇ ಆಗಿದೆ. ಏಕವ್ಯಕ್ತಿ ಅಥವಾ ಟೀಮ್‌ ಆಗಿ ಹೆಚ್ಚಿನ ನ್ಯೂಸ್‌ ವೆಬ್‌ಸೈಟ್‌ಗಳು ಇವೆ. ಇವರೆಲ್ಲರಿಗೂ ನಮ್ಮ ಡಿಜಿಟಲ್‌ ಪೇಪರ್‌ ಅನ್ನು ನೋಂದಾಯಿಸಿಕೊಳ್ಳುವುದು ಹೇಗೆ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇದಕ್ಕಾಗಿ ಸೂಕ್ತ ವ್ಯವಸ್ಥೆಯೂ ಇರಲಿಲ್ಲ.

ಸೋಷಿಯಲ್‌ ಮೀಡಿಯಾ, ಡಿಜಿಟಲ್‌ ಮೀಡಿಯಾಗಳು ಫೇಕ್‌ನ್ಯೂಸ್‌, ಕಾನೂನು ಬಾಹಿರ ಕಂಟೆಂಟ್‌ಗಳನ್ನು ಪ್ರಕಟಿಸುತ್ತಿರುವುದು ಹೆಚ್ಚಾಗಿರುವುದರಿಂದ ಡಿಜಿಟಲ್‌ ಮಾಧ್ಯಮಗಳಿಗೂ ಒಂದು ನೀತಿ ಜಾರಿಯಾಗಿದೆ. ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಡಿಜಿಟಲ್‌ ನ್ಯೂಸ್‌ ಮೀಡಿಯಾಗಳು ತಮ್ಮ ಮೀಡಿಯಾ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು. ಅದಕ್ಕೆ ಸಂಬಂಧಪಟ್ಟ ಫಾರ್ಮ್‌ ವಿವರವನ್ನು ಕರ್ನಾಟಕಬೆಸ್ಟ್‌ ಬ್ಲಾಗ್‌ನಲ್ಲಿ ನೀಡಲಾಗಿದೆ.

ಪ್ರತಿಯೊಂದು ನ್ಯೂಸ್‌ ವೆಬ್‌ಸೈಟ್‌ಗಳೂ ಕುಂದುಕೊರತೆ ಇತ್ಯರ್ಥ, ದೂರು ಸ್ವೀಕೃತಿ ಇತ್ಯಾದಿಗಳಿಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಅದಕ್ಕಾಗಿ ಚೀಫ್‌ ಕಂಪ್ಲಯೆನ್ಸ್‌ ಆಫೀಸರ್‌, ನೋಡೆಲ್‌ ಸಂಪರ್ಕಾಧಿಕಾರಿ, ರೆಸಿಡೆಂಟ್‌ ಗ್ರೀವಿಯನ್ಸ್‌ ಆಫೀಸರ್‌ ಹುದ್ದೆಗಳನ್ನು ಸೃಷ್ಟಿಸಬೇಕು. ಜೊತೆಗೆ ಈ ಆಫೀಸರ್‌ಗಳ ಹೆಸರನ್ನೂ ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.

ನ್ಯೂಸ್‌ ವೆಬ್‌ಸೈಟ್‌ ಮಾಲೀಕರು ತಮ್ಮ ನ್ಯೂಸ್‌ ಪೋರ್ಟಲ್‌ನ ವಿವರವನ್ನು ಮತ್ತು ತಾವು ನೇಮಕ ಮಾಡಿದ ಆಫೀಸರ್‌ಗಳ ಹೆಸರನ್ನು ಫಾರ್ಮ್‌ನಲ್ಲಿ ತುಂಬಿ ಇಮೇಲ್‌ ಮೂಲಕ ಕಳುಹಿಸಲು ಇದೀಗ ಅವಕಾಶ ನೀಡಲಾಗಿದೆ. ನಿಮ್ಮ ನ್ಯೂಸ್‌ ವೆಬ್‌ಸೈಟ್‌ ನೋಂದಣಿಯಾಗುವ ಮೊದಲ ಹೆಜ್ಜೆ ಇದಾಗಿದ್ದು, ವೆಬ್‌ಸೈಟ್‌ ನಿಷೇಧ ಇತ್ಯಾದಿ ಕಾನೂನು ಕ್ರಮಗಳಿಂದ ಪಾರಾಗಲೂ ಇದರಿಂದ ಸಾಧ್ಯವಿದೆ. ಭವಿಷ್ಯದಲ್ಲಿ ಸರಕಾರವು ಡಿಜಿಟಲ್‌ ನ್ಯೂಸ್‌ ಪೋರ್ಟಲ್‌ಗಳಿಗೆ ಜಾಹೀರಾತು ನೀಡಿದಾಗಲೂ ಇಂತಹ ನೋಂದಣಿಯಾದ ವೆಬ್‌ಸೈಟ್‌ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳುವುದು ಹೇಗೆ?

೧. ಮಿನಿಸ್ಟ್ರಿ ಆಫ್‌ ಇನ್‌ಫಾರ್ಮೆಷನ್‌ ಆಂಡ್‌ ಬ್ರಾಡ್‌ಕಾಸ್ಟಿಂಗ್‌ ವೆಬ್‌ಸೈಟ್‌ಗೆ ಹೋಗಿ. ಮೆನುವಿನಲ್ಲಿ ಡಿಜಿಟಲ್‌ ಮೀಡಿಯಾ ಕ್ಲಿಕ್‌ ಮಾಡಿ,

೨. ಡಿಜಿಟಲ್‌ ಮೀಡಿಯಾ ವಿಭಾಗದಲ್ಲಿ ಇಂಪಾರ್ಟೆಂಟ್‌ ಕಮ್ಯುನಿಕೇಷನ್‌ ವಿಭಾಗವನ್ನು ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಫಾರ್ಮ್‌ ದೊರಕುತ್ತದೆ. ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕವೂ ನೇರವಾಗಿ ಫಾರ್ಮ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

೩. ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಂಡು ಡಿಜಿಟಲ್‌ ಮೀಡಿಯಾಗಳು ಅಪೆಂಡಿಕ್ಸ್‌ ೨ರಲ್ಲಿ ನೀಡಲಾದ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಬಳಿಕ ಸ್ಕ್ಯಾನ್‌ ಮಾಡಿ ಅದೇ ಫಾರ್ಮ್‌ನಲ್ಲಿ ನೀಡಿರುವ ಇಮೇಲ್‌ ವಿಳಾಸಗಳಿಗೆ ಹದಿನೈದು ದಿನಗಳ ಒಳಗೆ ಕಳುಹಿಸಬೇಕು.

ಈಗಲೇ ನಿಮ್ಮ ನ್ಯೂಸ್‌ ವೆಬ್‌ಸೈಟ್‌ ಅನ್ನು ನೋಂದಣಿ ಮಾಡಿಕೊಳ್ಳಿ. ನಮೂನೆ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ.

Ministry of Information and Broadcasting Website Link:

Download Digital Media Registration Form here:

(ಡಿಜಿಟಲ್‌ ವೆಬ್‌ಸೈಟ್‌ ನೋಂದಣಿ ಕುರಿತು ಈ ಬ್ಲಾಗ್ ಬರಹಕ್ಕೆ ಪೂರಕ ಮಾಹಿತಿಯನ್ನು kannadapress.com ಸಂಪಾದಕರಾದ ಶ್ರೀವತ್ಸ ನಾಡಿಗ್‌ ನೀಡಿದ್ದಾರೆ)

ವೆಬ್‌ಡಿಸೈನ್‌ ಕಲಿಯಲು ಬಯಸುವವರಿಗೆ ಕರ್ನಾಟಕ ಬೆಸ್ಟ್‌ ಬ್ಲಾಗ್‌ನಲ್ಲಿ ವಿಶೇಷ ಮಾರ್ಗದರ್ಶಿ ಪ್ರಕಟಿಸಲಾಗಿದೆ. ತಪ್ಪದೇ ಓದಿ. ಕರ್ನಾಟಕಬೆಸ್ಟ್‌ ಬ್ಲಾಗ್‌ನಲ್ಲಿ ಪ್ರಕಟವಾಗಿರುವ ಇತರೆ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *