ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್?

Photo by rawpixel on Unsplash

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಮಾರ್ಗದರ್ಶಿಯ ಎರಡನೇ ಅಧ್ಯಾಯವಾಗಿ “ಯಾಕೆ ವರ್ಡ್ ಪ್ರೆಸ್ ಬೆಸ್ಟ್?’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಈಗಾಗಲೇ ಪೀಠಿಕೆಯಲ್ಲಿ ಈ ಕುರಿತು ಒಂದಿಷ್ಟು ಅಂಶಗಳು ನಿಮಗೆ ತಿಳಿದುಬಂದಿರಬಹುದು. ಜಗತ್ತಿನಲ್ಲಿರುವ ಒಟ್ಟಾರೆ ವೆಬ್ ಸೈಟ್ ಗಳಲ್ಲಿ ಸುಮಾರು ಶೇಕಡ 30ರಷ್ಟು ಈಗ ವರ್ಡ್ ಪ್ರೆಸ್ಟ್ ಮೂಲಕ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಮುಂದೊಂದು ದಿನ ಸರ್ವಂ ವರ್ಡ್ ಪ್ರೆಸ್ ಮಯ ಆದರೂ ಆಗಬಹುದು.

ನಿಮ್ಮ ಆಸಕ್ತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಉದ್ದೇಶದಿಂದ ವರ್ಡ್ ಪ್ರೆಸ್ ವೆಬ್ ಸೈಟ್ ಯಾಕೆ ಬೆಸ್ಟ್ ಎಂಬ ವಿಷಯವನ್ನು ಸಣ್ಣ ಸಣ್ಣ ಪಾಯಿಂಟ್ ಗಳ ರೂಪದಲ್ಲಿ ಇಲ್ಲಿ ನೀಡಲಾಗಿದೆ.

 • ಇದು ತುಂಬಾ ಸರಳ ಯೂಸರ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಹೊಂದಿದೆ. ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡಿದ  ತಕ್ಷಣ ಇದನ್ನು ಬಳಸಬಹುದು.
 • ತಾಂತ್ರಿಕ ಜ್ಞಾನವಿಲ್ಲದವರೂ ಇದನ್ನು ಬಳಕೆ ಮಾಡಬಹುದು.
 • ವರ್ಡ್ ಪ್ರೆಸ್ ವೆಬ್ ಸೈಟ್ ರಚಿಸಲು ಕೋಡಿಂಗ್, ಪ್ರೋಗ್ರಾಮಿಂಗ್ ಜ್ಞಾನವೂ ಇರಬೇಕೆಂದಿಲ್ಲ.
 • ಇದರ ಬಳಕೆಯೂ ಸುಲಭ. ಬ್ಲಾಗಿಗೆ ಪೋಸ್ಟ್ ಮಾಡಿದಂತೆ ಕಂಟೆಂಟ್ ಪೋಸ್ಟ್ ಮಾಡಬಹುದು.
 • ಜಾವಾಸ್ಕ್ರಿಪ್ಟ್, ಪಿಎಚ್ ಪಿ ಇತ್ಯಾದಿಗಳ ಜ್ಞಾನ ಇಲ್ಲದಿದ್ದರೂ ಈ ವರ್ಡ್ ಪ್ರೆಸ್ ವೆಬ್ ಸೈಟ್ ಸೆಟಪ್ ಮಾಡಬಹುದು.
 • ಇತ್ತೀಚಿನ ಆವೃತ್ತಿಗಳಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದು.
 • ಎಲ್ಲಕ್ಕಿಂತ ಮುಖ್ಯವಾಗಿ ಇದು ಕಡಿಮೆ ಖರ್ಚು ಉಂಟುಮಾಡುತ್ತದೆ. ನೂರಾರು ಪುಟಗಳ ವೆಬ್ ಸೈಟ್ ಅನ್ನು ಸುಮಾರು 10 ಸಾವಿರ ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.
 • ಸಾಕಷ್ಟು ಉಚಿತ ಪ್ಲಗಿನ್ ಮತ್ತು ಥೀಮ್ ಗಳು ಲಭ್ಯ ಇವೆ. ಉಚಿತ ಥೀಮ್ ಬಳಸಿದರೆ ವೆಬ್ ಸೈಟ್ ನ ಕೊನೆಗೆ ಥೀಮ್ ವಿನ್ಯಾಸ ಮಾಡಿದವರಿಗೆ ಒಂದು ಲಿಂಕ್ ನೀಡಿದಾರಾಯ್ತು.
 • ಪ್ರೀಮಿಯಂ ಥೀಮ್ ಅಥವಾ ಪ್ಲಗಿನ್ ಗಳು ದುಬಾರಿಯಲ್ಲ. 3ರಿಂದ 5 ಸಾವಿರ ರೂ.ಗೆ ಅತ್ಯುತ್ತಮ ವಿನ್ಯಾಸದ ರೆಡಿಮೆಡ್ ಥೀಮ್ ದೊರಕುತ್ತದೆ.
 • ಇ ಕಾಮರ್ಸ್ ವೆಬ್ ಸೈಟ್ ಗಳನ್ನು ವರ್ಡ್ ಪ್ರೆಸ್ ನಲ್ಲಿರುವ ವು-ಕಾಮರ್ಸ್ ಮೂಲಕ ಸರಳವಾಗಿ ರಚಿಸಿಕೊಳ್ಳಬಹುದು.
 • ಒಂದು ವೆಬ್ ಸೈಟ್ ಅನ್ನು ಎಷ್ಟು ಬಳಕೆದಾರರು ಸಹ ಬಳಸಬಹುದು. ಎಷ್ಟು ಲೇಖಕರನ್ನು, ಅಡ್ಮಿನ್ ಗಳು, ಎಡಿಟರ್ ಗಳನ್ನು ಬೇಕಾದರೂ ಸೇರಿಸಬಹುದು.
 • ಇತರೆ ವೆಬ್ ಸೈಟ್ ಗಳಿಗೆ ಹೋಲಿಸಿದರೆ ವರ್ಡ್ ಪ್ರೆಸ್ ವೆಬ್ ಸೈಟ್ ನಿರ್ವಹಣೆ ಮತ್ತು ಮೇಂಟೆನ್ಸ್ ತುಂಬಾ ಕಡಿಮೆ ಖರ್ಚು. ವರ್ಷಕ್ಕೊಮ್ಮೆ ಹೋಸ್ಟಿಂಗ್, ಡೊಮೈನ್ ರಿನಿವಲ್ ಮಾಡಿಕೊಂಡರೆ ಸಾಕು.
 • ಬ್ಲಾಗಿಂಗ್ ವೆಬ್ ಸೈಟ್ ರಚಿಸುವುದು ತುಂಬಾ ಸುಲಭ. ಯಾವುದೇ ಕೋಡಿಂಗ್ ಬೇಕಿಲ್ಲ.
 • ವೆಬ್ ಸೈಟ್ ಸ್ಪೀಡ್ ಸಹ ಉತ್ತಮವಾಗಿರುತ್ತದೆ. ಕಡಿಮೆ ಹಣದ ಹೋಸ್ಟಿಂಗ್ ಅಥವಾ ಷೇರಿಂಗ್ ಹೋಸ್ಟಿಂಗ್ ಕೊಂಚ ನಿಧಾನಗತಿಯದ್ದಾಗಿರುತ್ತದೆ. ವೇಗ ಹೆಚ್ಚಿಸಿಕೊಳ್ಳಲು ಬೇಕಾದ ಕ್ಯಾಚಿ, ಸಿಡಿಎನ್ ಪ್ಲಗಿನ್ ಗಳೂ ಲಭ್ಯ ಇವೆ.
 • ವರ್ಡ್ ಪ್ರೆಸ್ ಓಪನ್ ಸೋರ್ಸ್ ಸಾಫ್ಟ್ ವೇರ್. ಮುಕ್ತ ತಂತ್ರಾಂಶವಾಗಿರುವುದರಿಂದ ಸಾಕಷ್ಟು ಹೊಸ ಹೊಸ ಫೀಚರ್ ಗಳನ್ನು ಕಂಡುಹಿಡಿಯುತ್ತಿರುತ್ತಾರೆ.
 • ಏನಾದರೂ ವೆಬ್ ಸೈಟ್ ನಲ್ಲಿ ಬದಲಾವಣೆ ಮಾಡಬೇಕಿದ್ದರೆ ವೆಬ್ ಡಿಸೈನರ್ ಗಾಗಿ ಕಾಯಬೇಕಿಲ್ಲ. ಸಣ್ಣಪುಟ್ಟ ಬದಲಾವಣೆಗಳನ್ನು ಯಾವುದೇ ತೊಂದರೆ ಇಲ್ಲದೆ ನಾವೇ ಮಾಡಿಕೊಳ್ಳಬಹುದು.
 • ವೆಬ್ ಸೈಟ್ ನ ಬ್ಯಾಕೆಂಡ್ ತುಂಬಾ ಸರಳವಾಗಿದೆ. ಯಾರೂ ಬೇಕಾದರೂ ಸುಲಭವಾಗಿ ಕಲಿಯಬಹುದು. ಇತರೆ ಸಿಎಂಎಸ್ ಗಳಲ್ಲಿ ಬ್ಯಾಕೆಂಡ್ ತುಂಬಾ ಕ್ಲಿಷ್ಟವಾಗಿರುತ್ತದೆ.
 • ಒಂದೇ ಅಡ್ಮಿನ್ ಪ್ಯಾನೇಲ್ ಮೂಲಕ ಹತ್ತು ಹಲವು ವೆಬ್ ಸೈಟ್ ಗಳನ್ನು ನಿರ್ವಹಿಸಬಹುದಾಗಿದೆ.
 • ಎಚ್ ಟಿಎಂಎಲ್ ಎಡಿಟ್ ಮಾಡುವ ಸಾಫ್ಟ್ ವೇರ್ ಅಗತ್ಯವಿಲ್ಲ. ಇದರ ಕೋಡಿಂಗ್ ಎಡಿಟ್ ಮಾಡಲು ಹೋಗದಿರುವುದು ಒಳಿತು. ಕೋಡಿಂಗ್ ಗೊತ್ತಿದ್ದವರೂ ಮಾತ್ರ ವರ್ಡ್ ಪ್ರೆಸ್ ಕೋಡಿಂಗ್ ವಿಭಾಗಕ್ಕೆ ಕೈ ಹಾಕಬೇಕು.
 • ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡುವುದು ತುಂಬಾ ಸುಲಭ. ನೀವು ಎಲ್ಲಿಂದ ಹೋಸ್ಟಿಂಗ್ ಖರೀದಿಸುವಿರೋ ಅಲ್ಲಿನ ಸೌಲಭ್ಯದ ಪ್ರಕಾರ ಕೆಲವೇ ನಿಮಿಷಗಳಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಬ್ಲೂ ಹೋಸ್ಟ್ ನಲ್ಲಿ ಕೆಲವೇ ನಿಮಿಷದಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಸೌಲಭ್ಯ ಇದೆ.
 • ನಿಮ್ಮ ವೆಬ್ ಸೈಟ್ ನಲ್ಲಿ ವಿವಿಧ ಸೌಲಭ್ಯ ನೀಡಲು ಸಾಕಷ್ಟು ವಿಡ್ಜೆಟ್ ಗಳು ವರ್ಡ್ ಪ್ರೆಸ್ ನಲ್ಲಿ ಲಭ್ಯ ಇವೆ.
 • ಆರ್ ಎಸ್ ಎಸ್ ಫೀಡ್ ವರ್ಡ್ ಪ್ರೆಸ್ ನಲ್ಲಿಯೇ ಇದೆ.
 • ಫೋಟೊ ಅಥವಾ ಫೈಲ್ ಗಳನ್ನು ಅಪ್ಲೋಡ್ ಮಾಡುವುದು ಸಹ ಸುಲಭ.
 • ಪ್ಲಗಿನ್ ಅಥವಾ ಥೀಮ್ ಆಕ್ಟಿವೇಟ್ ಅಥವಾ ಡಿಆಕ್ಟಿವೇಟ್ ಮಾಡುವುದು ತುಂಬಾ ಸುಲಭ.
 • ನಮ್ಮ ಅವಶ್ಯಕತೆಗೆ ತಕ್ಕಂತೆ ಪ್ಲಗಿನ್ ಗಳು ದೊರಕುತ್ತವೆ. ನೀವು ಇ-ಕಾಮರ್ಸ್ ತಾಣ ನಿರ್ಮಿಸಲು ಬಯಸಿದರೆ ವು-ಕಾಮರ್ಸ್ ಇದೆ. ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾ ನಿರ್ಮಿಸಲು ಬಯಸಿದರೆ ಬಿಬಿಪ್ರೆಸ್ ಇದೆ. ಕ್ವಿಜ್ ವಿಭಾಗ ನಿರ್ಮಿಸಲು ಬಯಸಿದರೆ ಕ್ವಿಜ್ ಪ್ಲಗಿನ್ ಗಳು ಇವೆ. ಕರ್ನಾಟಕ ಬೆಸ್ಟ್ ನ ಕ್ವಿಜ್ ವಿಭಾಗಕ್ಕೆ ಭೇಟಿ ನೀಡಿ.
 • ನಿಮಗೆ ಮೊದಲ ಪುಟವನ್ನು ನಿಮ್ಮ ಇಷ್ಟದ ಪ್ರಕಾರ ನಿರ್ಮಿಸಬೇಕಾದರೆ ಪೇಜ್ ವಿನ್ಯಾಸ ಮಾಡುವ ಸಾಕಷ್ಟು ಪ್ಲಗಿನ್ ಗಳು ವರ್ಡ್ ಪ್ರೆಸ್ ನಲ್ಲಿ ಲಭ್ಯ ಇವೆ.
 • ಯೂಟ್ಯೂಬ್ ವಿಡಿಯೋಗಳನ್ನು ಸಹ ಸುಲಭವಾಗಿ ಎಂಬೆಡ್ ಮಾಡಬಹುದು.
 • ಇತ್ತೀಚೆಗೆ ವರ್ಡ್ ಪ್ರೆಸ್ ನಲ್ಲಿ ಗುಟೆನ್ ಬರ್ಗ್ ಅಪ್ಡೇಟ್ ಬಂದಿದ್ದು, ಕಲರ್ ಕಲರ್ ಬಾಕ್ಸ್ ವಿನ್ಯಾಸ, ಮೊದಲ ಅಕ್ಷರ ದೊಡ್ಡದಾಗಿಸುವುದು ಸೇರಿದಂತೆ ಹೊಸ ಫೀಚರ್ ಗಳು ಬಂದಿದೆ. ಗುಟೆನ್ ಬರ್ಗ್ ಅಪ್ಡೇಟ್ ಕುರಿತು ಕರ್ನಾಟಕ ಬೆಸ್ಟ್ ನಲ್ಲಿ ನಾನು ಬರೆದ ಲೇಖನವನ್ನು ಇಲ್ಲಿ ಓದಿರಿ.
 • ನೂರಾರು ಉಚಿತ ಪ್ಲಗಿನ್ ಗಳಿವೆ. ಹಣ ಪಾವತಿಸಿ ಖರೀದಿಸಬಹುದಾದ ಪ್ಲಗಿನ್ ಗಳೂ ಇವೆ.
 • ನಿಯಮಿತವಾಗಿ ವರ್ಡ್ ಪ್ರೆಸ್ ಸಾಫ್ಟ್ ವೇರ್ ಅಪ್ಡೇಟ್ ಆಗುತ್ತಿರುತ್ತದೆ.
 • ವೈರಸ್, ಮಾಲ್ವೇರ್ ಗಳ ಕುರಿತು ಕಠಿಣ ನಿಗಾ ವ್ಯವಸ್ಥೆ ಇದೆ. ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಸುಲಭವಾಗಿ ಹ್ಯಾಕ್ ಆಗದು. ಸೆಕ್ಯುರಿಟಿ ಹೆಚ್ಚಿಸುವ ನೂರಾರು ಪ್ಲಗಿನ್ ಗಳು ಇವೆ. ನಾನು ಶಿಫಾರಸು ಮಾಡುವುದು ವರ್ಡ್ ಫಿಯೆನ್ಸ್.
 • ಸ್ಪ್ಯಾಮ್ ಕಮೆಂಟ್ ಇತ್ಯಾದಿಗಳಿಂದ ಪಾರಾಗಲು ಅಕಿಸ್ಮಿತ್ ನಂತಹ ಪ್ಲಗಿನ್ ಗಳು ಇವೆ.
 • ಎಸ್ ಎಸ್ ಎಲ್ ಸರ್ಟಿಫಿಕೇಟ್ ಅಳವಡಿಕೆ ಸುಲಭ. ಆದರೆ ಇಂತಹ ಎಸ್ ಎಸ್ ಎಲ್ ಸರ್ಟಿಫಿಕೇಟ್ ಗೆ ಇಂತಿಷ್ಟು ಹಣ ಪಾವತಿಸಬೇಕು. ನನ್ನಂತವರಿಗೆ ಅದು ದುಬಾರಿಯಾಗಿ ಕಾಣಿಸುತ್ತದೆ. ಆದರೆ, ಅದಕ್ಕೆ ಉಚಿತ ಪ್ಲಗಿನ್ ಗಳು ದೊರಕುತ್ತವೆ. ನಾನು ಉಚಿತ ಪ್ಲಗಿನ್ ಬಳಸಿದ್ದೇನೆ. ನಿಮಗೆ ಇಂತಹ ಉಚಿತ ಪ್ಲಗಿನ್ ಗಳ ಅವಶ್ಯಕತೆ ಇದ್ದರೆ ನನ್ನಿಂದ ಮಾಹಿತಿ ಪಡೆಯಬಹುದು. ಉಚಿತವಾಗಿಯೇ ಮಾಹಿತಿ ಹಂಚಿಕೊಳ್ಳುತ್ತೇನೆ.
 • ಬ್ಯಾಕಪ್ ಸಹ ಸುಲಭ. ವರ್ಡ್ ಪ್ರೆಸ್ ಸೇರಿದಂತೆ ಎಲ್ಲಾ ಮಾದರಿಯ ವೆಬ್ ಸೈಟ್ ಗಳು ಯಾವಾಗ ಕ್ರ್ಯಾಷ್ ಆಗುತ್ತವೆ ಎಂದು ಹೇಳಲಾಗದು. ಇಂತಹ ಸಮಯದಲ್ಲಿ ನಮ್ಮಲ್ಲಿರುವ ಬ್ಯಾಕಪ್ ಗಳು ನೆರವಾಗುತ್ತವೆ.
 • ಕೆಲವೊಂದು ಪುಟಗಳನ್ನು ಹೈಡ್ ಮಾಡಬಹುದು. ಅವಶ್ಯಕತೆ ಇದ್ದಾಗ ಮಾತ್ರ ಪ್ರಕಟಿಸಬಹುದು.
 • ಎಸ್ ಇಒ ಇಂದಿನ ಅವಶ್ಯಕತೆ. ವರ್ಡ್ ಪ್ರೆಸ್ ನಲ್ಲಿ ಯೋಸ್ಟ್ ಎಸ್ ಇಒ ಸೇರಿದಂತೆ ವಿವಿಧ ಪ್ಲಗಿನ್ ಗಳ ನೆರವಿನಿಂದ ಸುಲಭವಾಗಿ ಎಸ್ ಇಒ ಬರೆಯಬಹುದು. ಎಸ್ ಇಒ ಸಮರ್ಪಕವಾಗಿದ್ದರೆ ಮಾತ್ರ ನಿಮ್ಮ ವೆಬ್ ಸೈಟ್ ಗೂಗಲ್ ನಲ್ಲಿ ಉತ್ತಮ ರ್ಯಾಂಕ್ ಪಡೆಯುತ್ತದೆ.
 • ವರ್ಡ್ ಪ್ರೆಸ್ ವೆಬ್ ಸೈಟ್ ಮೊಬೈಲ್ ನಲ್ಲಿಯೂ ಚೆನ್ನಾಗಿ ಕಾಣಿಸುತ್ತದೆ. ಇದು ರೆಸ್ಪಾನ್ಸಿವ್ ವಿನ್ಯಾಸ ಹೊಂದಿದ್ದು, ಮೊಬೈಲ್, ಸ್ಮಾರ್ಟ್ ಫೋನ್, ಟ್ಯಾಬ್, ಕಂಪ್ಯೂಟರ್ ಎಲ್ಲದಕ್ಕೂ ತಕ್ಷಣ ಹೊಂದಿಕೊಳ್ಳುತ್ತದೆ.
 • ಎಲ್ಲಾ ಬ್ರೌಸರ್ ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ  ಬೆಸ್ಟ್ ಗೈಡ್: ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ?

ಉಸಪ್ಪ… ಹೀಗೆ ಇಂತಹ ನೂರಾರು ವರ್ಡ್ ಪ್ರೆಸ್ ಗುಣಗಳನ್ನು ಪಟ್ಟಿ ಮಾಡಬಹುದು. ಇಷ್ಟು ಸಾಕು ಅಲ್ಲವೇ, ಮುಂದಿನ ಅಧ್ಯಯನದಲ್ಲಿ ಹೊಸ ಪಾಠದೊಂದಿಗೆ ಬರುತ್ತೇನೆ. ವರ್ಡ್ ಪ್ರೆಸ್ ನಲ್ಲಿ ವೆಬ್ ಸೈಟ್ ಕಲಿಯಲು ಇಂತಹ ಆರಂಭಿಕ ಥಿಯರಿ ಪಾಠಗಳನ್ನು ನೀವು ಸಹಿಸಿಕೊಳ್ಳಲೇಬೇಕು. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಬರೆಯಿರಿ.

ವೆಬ್ ಸೈಟ್ ರಚನೆಯ ಮುಂದಿನ ಲೇಖನ ಬ್ಲಾಗರ್ ಮೂಲಕ ಬ್ಲಾಗ್ ರಚಿಸುವುದಾಗಿದೆ. ಬ್ಲಾಗ್ ರಚಿಸಲು ಕಲಿಯುವುದರಿಂದ ವೆಬ್ ಸೈಟ್ ರಚನೆಗೆ ಸಂಬಂಧಪಟ್ಟ ಸಾಕಷ್ಟು ಮೂಲಭೂತ ಅಂಶಗಳನ್ನು ಕಲಿಯಬಹುದಾಗಿದೆ.

ಮುಂದಿನ ಲೇಖನ ಓದಿ:

ಬ್ಲಾಗರ್ ಮೂಲಕ ಬ್ಲಾಗ್ ರಚಿಸುವುದು ಹೇಗೆ

ಹಿಂದಿನ ಲೇಖನ ಓದಿ: ಕರ್ನಾಟಕ ಬೆಸ್ಟ್ ವೆಬ್ ಸೈಟ್ ಗೈಡ್