Tag Archives: ನೆನಪು

ಕಿರುಚಿತ್ರ: ಮರೆಯದೇ ನೋಡಿ ‘ಮಾಸದ ನೆನಪು’

‘ ನೆನಪು’ಈ ಹೆಸರು ಕೇಳುತ್ತಲೇ ಎಲ್ಲರ ಮನದಲ್ಲಿ ಇದರ ಕುರಿತು ಸಾಲು ಸಾಲು ಭಾವಗಳೇ ಹೊರಹೊಮ್ಮುತ್ತದೆ. ಇವುಗಳಿಗೆ ಯಾವತ್ತೂ ಸಾವಿಲ್ಲ. ಇವುಗಳಿಗೆ ಅಳಿಸುವ, ನಗಿಸುವ, ಛಲವುಕ್ಕಿಸುವ, ಎಲ್ಲವನ್ನೂ ಅವಡುಗಚ್ಚಿ ಸಹಿಸುವ ಶಕ್ತಿ ಕೂಡ ಇದೆ. ಇವುಗಳಲ್ಲಿ ಎಲ್ಲಕ್ಕಿಂತ ಅತಿಮಧುರವಾದ ನೆನಪೆಂದರೆ ಅದು ಬಾಲ್ಯದ ನೆನಪು. ಈ ಬಾಲ್ಯದ ನೆನಪುಗಳನ್ನೇ ಇಟ್ಟುಕೊಂಡು ಬೈಲ್ಮನಿ ಕ್ರಿಯೇಷನ್ಸ್ ನವರು ‘ಮಾಸದ ನೆನೆಪು’ ಎಂಬ ಕಿರುಚಿತ್ರವೊಂದನ್ನು ಹೊರತಂದಿದ್ದಾರೆ. ಪ್ರಾರಂಭದಲ್ಲಿ ಇದು ನಮ್ಮ ಬಾಲ್ಯದ ನೆನಪುಗಳನ್ನು ಒಂದಷ್ಟು ಕಣ್ಮುಂದೆ ತರಿಸಿ ನಗು ಮೂಡಿಸಿದರೆ ಕೊನೆಗೆ ಕಣ್ಣಂಚನ್ನು ಒದ್ದೆ ಮಾಡಿ… Read More »

ಕವಿತೆ: ಬಂದು ಬಿಡು ನೀನೊಮ್ಮೆ!

ಬಂದು ಬಿಡು ನೀನೊಮ್ಮೆ ನಾ ಕರೆಯುವ ಮೊದಲೇ ಒಲವ ಸೆಲೆ ಬತ್ತುವುದರೊಳಗೆ *** ಬಂದು ಬಿಡು ನೀನೊಮ್ಮೆ ನೆನಪುಗಳು ಕರಗುವ ಮೊದಲೇ ಕನಸುಗಳು ಕಮರುವುದರೊಳಗೆ *** ಬಂದು ಬಿಡು ನೀನೊಮ್ಮೆ ಮಾತು ಸಾಯುವ ಮೊದಲೇ ಮೌನ ಅಪ್ಪಿಕೊಳ್ಳುವುದರೊಳಗೆ *** ಬಂದು ಬಿಡು ನೀನೊಮ್ಮೆ ನಗು ಮಾಸುವ ಮೊದಲೇ ಅಳು ಕಾಡುವುದರೊಳಗೆ *** ಬಂದು ಬಿಡು ನೀನೊಮ್ಮೆ ಉಸಿರು ನಿಲ್ಲುವ ಮೊದಲೇ ದೇಹ ಮಣ್ಣಾಗುವುದರೊಳಗೆ

ಜೋರು ಮಳೆಗೆ ಹಾಗೆ ಸುಮ್ಮನೆ…

By | 12/08/2012

ನಾಲ್ಕು ದಿನಗಳಿಂದ ಬಿಡದೆ ಜಡಿಮಳೆ ಸುರಿಯುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದರೂ ಬಿಡದೆ ಬೆಂಗಳೂರಿನಿಂದ ಊರ ಬಸ್ ಹತ್ತಿದೆ. ಕಂಪನಿಯ ವಾರ್ಷಿಕ, ತ್ರೈಮಾರ್ಸಿಕ, ಮಾಸಿಕ, ಪಾಕ್ಷಿಕ ಮುಗಿಯದ ಗೋಲುಗಳ ಗೋಳಿನಿಂದ ತಲೆಯಂತೂ ಚಿಟ್ಟುಹಿಡಿದಿತ್ತು. ಊರಲ್ಲಿ ಬಸ್ ಇಳಿದಾಗ ನನ್ನ ಸ್ವಾಗತಿಸಿದ್ದು ಬಿರುಮಳೆಯೇ. ಬಾ ಮಳೆಯೇ ಬಾ… ಹಾಡು ಗುನುಗುತ್ತ ಒದ್ದೆಮುದ್ದೆಯಾಗಿ ಓಡಿ ಮನೆ ತಲುಪಿದೆ. ಎಷ್ಟೊಂದು ಹಿತವೆನಿಸಿತು ಗೊತ್ತ? ನಮ್ಮೂರ ಮಳೆ ಒಂಚೂರು ಜಾಸ್ತಿ ಸ್ಪೆಷಲ್ ಅಂತ ಅಂದುಕೊಂಡೆ. *** ಹೊಸ ಟಿವಿಯಲ್ಲಿ ಹಳೆ ಚಾನಲುಗಳು ಬೋರು ಹೊಡೆಸಿತ್ತು. ಸೀದಾ ಅಪ್ಪನ… Read More »

ಗೆಳತಿ ಮುಂದೊಂದು ಜನ್ಮವಿದ್ದರೆ

By | 17/10/2011

ಮುಂದೊಂದು ಜನ್ಮವಿದ್ದರೆ ನಮ್ಮೂರ ನದಿ ತೀರದಲ್ಲಿ ಜೊತೆಯಾಗಿ ಆಡೋಣ ಗೆಳತಿ ನನ್ನ ಅಂಗಿಗೆ ನಿನ್ನ ಶಾಲ ಕಟ್ಟಿ ಬಿಡದಂತೆ ಕೈಹಿಡಿದು ಜೊತೆಯಾಗಿ ನಡೆಯೋಣ ಗೆಳತಿ ಮತ್ತೊಂದು ಜನ್ಮವಿದ್ದರೆ ಹಾರಂಗಿ ತೀರದಲ್ಲಿ ಹೂವಾಗಿರೋಣ ದಿನದ ಬದುಕು ಮುಗಿಸೋಣ ಗೆಳತಿ ಮತ್ತೂ ಒಂದು ಜನ್ಮವಿದ್ದರೆ ಪಯಶ್ವಿನಿ, ಕುಮಾರಧಾರ ತೀರದಲ್ಲಿ ಪ್ರೀತಿ ಮನೆಕಟ್ಟೋಣ ಗೆಳತಿ ಕಬಿನಿ, ಕಾಳಿ, ಕಾವೇರಿ ತುಂಗಾ, ವೇದಾ, ಶರಾವತಿ, ಭದ್ರೆ ಎಲ್ಲಾದರೂ ಸರಿ, ಜೊತೆಯಾಗಿರೋಣ ಬಾ ಎಂದರೆ ನದಿ ಬಿಟ್ಟು ಬದುಕೋಣ ಬೇಡವೆಂದರೆ ನದಿಯೊಳಗೆ ಬದುಕೋಣ ನದಿತೀರದಲ್ಲೇ ಹುಟ್ಟಿಬರೋಣ ಗೆಳತಿ ಪ್ರತಿಜನ್ಮ… Read More »