Tag Archives: Praveen Chandra

praveen chandra puttur praveen puttur praveen chandra jouranlist, blogger, kannada writer, praveen

ಪುಸ್ತಕ ಪರಿಚಯ: ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

By | 01/08/2018

ಇತ್ತೀಚೆಗೆ ನಾನು ಓದಿ ಮುಗಿಸಿದ ಪುಸ್ತಕ ಎಸ್.ಎನ್. ಸೇತುರಾಮ್ ರಚಿಸಿದ “ನಾವಲ್ಲ” ಎಂಬ ಕಥಾ ಸಂಕಲನ. ದೊಡ್ಡ ಪುಸ್ತಕವನ್ನು ಒಂದೆರಡೇ ದಿನದಲ್ಲಿ ಓದಿ ಮುಗಿಸುವ ನನಗೆ ಈ ಆರು ಕತೆಗಳ ಪುಸ್ತಕವನ್ನು ಓದಿ ಮುಗಿಸಲು ಭರ್ತಿ ಆರು ದಿನ ಬೇಕಾಯಿತು. ತಡವಾಗಿರುವುದಕ್ಕೆ ಕಾರಣ “ಇದರಲ್ಲಿರುವ ಒಂದೊಂದು ಕತೆಯೂ ಮನಸ್ಸಿನ ಮೇಲೆ ಬೀರುವ ಪರಿಣಾಮ, ಚಿಂತನೆಗೆ ಹಚ್ಚುವ ಪರಿ, ಮೂಡಿಸುವ ಭಾವ ಇತ್ಯಾದಿಗಳು”. ನಾನು ಓದಿದ ಅತ್ಯುತ್ತಮ ಕಥಸಂಕಲನವಿದು. ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ… Read More »

ಕನ್ನಡ ಪುಸ್ತಕ ಖರೀದಿಸಲು ಇರುವ 10+ ಆನ್ ಲೈನ್ ಪುಸ್ತಕದಂಗಡಿಗಳು

By | 31/07/2018

ಕನ್ನಡ ಪುಸ್ತಕ ಖರೀದಿಸಲು ಇರುವ ಆನ್‌ಲೈನ್‌ ಅಂಗಡಿಗಳ ಕುರಿತು ಮಾಹಿತಿ ನೀಡುವ ಈ ಲೇಖನಕ್ಕೆ ಸಾಕಷ್ಟು ಜನರು ಗೂಗಲ್‌ ಹುಡುಕಾಟದ ಮೂಲಕ ಬರುತ್ತಿದ್ದಾರೆ. ಕನ್ನಡ ಪುಸ್ತಕದ ಕುರಿತು ಹೆಚ್ಚು ಜನರು ಹುಡುಕುತ್ತಿದ್ದಾರೆ ಎನ್ನುವುದು ಖುಷಿಯ ಸಂಗತಿ. ಇಲ್ಲಿ ಯಾವುದಾದರೂ ಹೊಸ ಪುಸ್ತಕದ ಶಾಪ್‌ ಕುರಿತು ಮಾಹಿತಿ ನೀಡಲು ಬಯಸುವವರು ಕಾಮೆಂಟ್‌ನಲ್ಲಿತಿಳಿಸಬಹುದು. ಪುಸ್ತಕದಂಗಡಿಗೆ ಹೋಗಲು ಸಮಯದ ಲಭ್ಯತೆ ಇಲ್ಲದವರಿಗೆ ಆನ್ ಲೈನ್ ಪುಸ್ತಕದಂಗಡಿಗಳು ಆಸರೆಯಾಗಬಲ್ಲವು. ಇಂಗ್ಲಿಷ್ ಭಾಷೆಯ ಪುಸ್ತಕದಂಗಡಿಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇ-ಪುಸ್ತಕ ತಾಣಗಳು ಕಡಿಮೆ ಇಲ್ಲವೆಂದು ಹೇಳುವಂತೆ ಇಲ್ಲ. ಯಾಕೆಂದರೆ, ಕನ್ನಡ ಪುಸ್ತಕ… Read More »

ಬೆಸ್ಟ್ ತುಳು ಸಿನಿಮಾ: ಕಾಡುವ “ಪಡ್ಡಾಯಿ” ಕಡಲು

By | 22/07/2018

ಗಿರಿರಾಜ್ ನಿರ್ದೇಶನದ “ಸುಗಂಧದ ಸೀಮೆಯಾಚೆ” ನೋಡಿದಾಗ ಅದರಲ್ಲಿ ಸುಗಂಧ(ಸೆಂಟ್)ವನ್ನು ಬಳಸಿಕೊಂಡ ರೀತಿ ತುಂಬಾ ಇಷ್ಟವಾಗಿತ್ತು. ಅಲ್ಲಿ ಅತ್ತರಿನ ಪರಿಮಳದ ಸುತ್ತ ನೆತ್ತರಿನ ಕಲೆಯಿತ್ತು. ಆದರೆ, ಬೆಂಗಳೂರಿನ ಇತ್ತೀಚೆಗೆ (ಬೆಂಗಳೂರಿನಲ್ಲಿರುವುದರಿಂದ ನೋಡುವುದು ತಡವಾಯಿತು) ಸುಚಿತ್ರಾ ಸಿನಿಮಾದಲ್ಲಿ ನೋಡಿದ ತುಳು ಸಿನಿಮಾ “ಪಡ್ಡಾಯಿ”ಯಲ್ಲಿಯೂ ಮೀನಿನ ಬೆವರಿನ ಜೊತೆಗೆ ಅತ್ತರಿನ ಘಾಟು ಇತ್ತು. ಮಾಧವ ಮೀನು ಹಿಡಿಯುವಲ್ಲಿ ಪರಿಣಿತ. ಆತನಿಗೆ ಕಡಲ ಗುಳಿಗ ಎಂಬ ಹೆಸರೂ ಇದೆ. ಆತ ನೀರಿನಲ್ಲಿ ಮೀನುಗಳ ಜಾಡು ಹಿಡಿದು ಬಲೆ ಬೀಸುವಲ್ಲಿ ಸಾಕಷ್ಟು ಪರಿಣಿತ ಎಂಬ ಕಾರಣಕ್ಕೆ ಈ ಹೆಸರು.… Read More »

ಕನ್ನಡದಲ್ಲಿಯೂ ಲಭ್ಯವಿರುವ ಕರಿಯರ್ ಮತ್ತು ಶಿಕ್ಷಣ ಆ್ಯಪ್‍ ಗಳು

By | 20/07/2018

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಕನ್ನಡ ಭಾಷೆಯಲ್ಲಿ ಲಭ್ಯವಿರುವ ಆ್ಯಪ್‍ಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಆ್ಯಪ್‍ಗಳು, ಇಂಟರ್‍ನೆಟ್ ತಾಣಗಳು ಲಭ್ಯ ಇವೆ. ಆದರೆ, ಕನ್ನಡದಲ್ಲಿ ಓದಲು ಬಯಸುವವರಿಗೆ ಇಂತಹ ಅವಕಾಶಗಳ ಲಭ್ಯತೆ ಕೊಂಚ ಕಡಿಮೆ ಇದೆ ಎಂದು ಹೇಳಬಹುದು. ಆದರೆ, ತೀರಾ ಕಡಿಮೆ ಏನಿಲ್ಲ.  ನೀವು ಸ್ಮಾರ್ಟ್‍ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಹುಡುಕಿದರೆ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡುವ ಆ್ಯಪ್‍ಗಳು ಸಾಕಷ್ಟು ದೊರಕುತ್ತವೆ. ಇಲ್ಲಿ ನೀಡಲಾದ ಕೀವರ್ಡ್ ಅನ್ನು… Read More »

ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

By | 15/07/2018

*  ಪ್ರವೀಣ ಚಂದ್ರ “ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ’ ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. “ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ” ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ. “ಇವತ್ತು ಡೇಟ್ ಎಷ್ಟು?’ ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  “ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು’ ಎಂದಿತ್ತು. ಸಮಯ… Read More »

ಟೆಸ್ಟ್ ರೈಡ್: ಜುಪೀಟರ್ ಸ್ಕೂಟರ್ ಮತ್ತು ಟಿವಿಎಸ್ “ಫ್ಯಾಕ್ಟರಿ ಟೂರ್” ಅನುಭವ

By | 11/07/2018

ವಾಹನ ವೆಬ್ ತಾಣ ಡ್ರೈವ್ ಸ್ಪಾರ್ಕ್.ಕಾಂನಲ್ಲಿ “ಕನ್ನಡ ಸಂಪಾದಕ”ನಾಗಿ ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಹೊಸ ಕಾರು, ಬೈಕ್ ಬಿಡುಗಡೆ ಸಮಾರಂಭಗಳಿಗೆ ಹೋಗುವ ಅವಕಾಶ ದೊರಕುತ್ತಿತ್ತು. ನಂತರ ವಿಜಯನೆಕ್ಸ್ಟ್ ನಿಯತಕಾಲಿಕೆಯಲ್ಲಿ ವಾಹನ ಪುಟದ ಉಸ್ತುವಾರಿ ದೊರಕಿದಾಗಲೂ ಇಂತಹ ಅವಕಾಶ ಸಾಕಷ್ಟು ದೊರಕುತ್ತಿತ್ತು. ಆದರೂ, ನನಗೊಂದು ಆಸೆಯಿತ್ತು. ವಾಹನಗಳನ್ನು ಫ್ಯಾಕ್ಟರಿಯೊಳಗೆ ಹೇಗೆ ನಿರ್ಮಿಸುತ್ತಾರೆ? ಆಟೋಮೇಷನ್ ಇತ್ಯಾದಿ ಇತ್ತೀಚಿನ ತಂತ್ರಜ್ಞಾನಗಳೇನು? ಉದ್ಯೋಗಿಗಳು ವಾಹನ ನಿರ್ಮಾಣದ ಕೆಲಸವನ್ನು ಹೇಗೆ ಮಾಡುತ್ತಾರೆ? ಇದನ್ನೆಲ್ಲ ಕಣ್ಣಾರೆ ನೋಡಬೇಕು. ಇಂತಹ ಆಸೆಯನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಇಂಡಿಬ್ಲಾಗರ್ ಒದಗಿಸಿತು. ಕನ್ನಡ, ತಮಿಳು,… Read More »