Tag Archives: karnataka films

ಬೆಸ್ಟ್ ತುಳು ಸಿನಿಮಾ: ಕಾಡುವ “ಪಡ್ಡಾಯಿ” ಕಡಲು

By | 22/07/2018

ಗಿರಿರಾಜ್ ನಿರ್ದೇಶನದ “ಸುಗಂಧದ ಸೀಮೆಯಾಚೆ” ನೋಡಿದಾಗ ಅದರಲ್ಲಿ ಸುಗಂಧ(ಸೆಂಟ್)ವನ್ನು ಬಳಸಿಕೊಂಡ ರೀತಿ ತುಂಬಾ ಇಷ್ಟವಾಗಿತ್ತು. ಅಲ್ಲಿ ಅತ್ತರಿನ ಪರಿಮಳದ ಸುತ್ತ ನೆತ್ತರಿನ ಕಲೆಯಿತ್ತು. ಆದರೆ, ಬೆಂಗಳೂರಿನ ಇತ್ತೀಚೆಗೆ (ಬೆಂಗಳೂರಿನಲ್ಲಿರುವುದರಿಂದ ನೋಡುವುದು ತಡವಾಯಿತು) ಸುಚಿತ್ರಾ ಸಿನಿಮಾದಲ್ಲಿ ನೋಡಿದ ತುಳು ಸಿನಿಮಾ “ಪಡ್ಡಾಯಿ”ಯಲ್ಲಿಯೂ ಮೀನಿನ ಬೆವರಿನ ಜೊತೆಗೆ ಅತ್ತರಿನ ಘಾಟು ಇತ್ತು. ಮಾಧವ ಮೀನು ಹಿಡಿಯುವಲ್ಲಿ ಪರಿಣಿತ. ಆತನಿಗೆ ಕಡಲ ಗುಳಿಗ ಎಂಬ ಹೆಸರೂ ಇದೆ. ಆತ ನೀರಿನಲ್ಲಿ ಮೀನುಗಳ ಜಾಡು ಹಿಡಿದು ಬಲೆ ಬೀಸುವಲ್ಲಿ ಸಾಕಷ್ಟು ಪರಿಣಿತ ಎಂಬ ಕಾರಣಕ್ಕೆ ಈ ಹೆಸರು.… Read More »