Monthly Archives: August 2018

ಸಿಹಿ ಪ್ರಿಯರಿಗೆ ಸವಿಯಾದ ಸೌದಿ ಅರೇಬಿಯಾ ಡೆಸಾರ್ಟ್ ರೆಸಿಪಿ

By | 22/08/2018

ಸಿಹಿ ತಿನಿಸು ಎಂದರೆ, ಯಾರಿಗೆ ಪ್ರಿಯವಲ್ಲ ಹೇಳಿ. ಕೆಲವರಿಗೆ  ಊಟವಾದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ಖಾರದ ಜತೆ ಏನಾದರೂ ಸಿಹಿ ಬೇಕೆ ಬೇಕು. ಅದರಲ್ಲೂ ಹಬ್ಬ ಹರಿದಿನಗಳ ದಿನದಲ್ಲಿ  ಅಥವಾ ಮಕ್ಕಳ ಹುಟ್ಟುಹಬ್ಬದ ದಿನದಲ್ಲಿ ತಾಯಂದಿರೂ ಏನಾದರು ಒಂದು ಸಿಹಿ ಖಾದ್ಯ ಮಾಡಬೇಕು ಅದರಲ್ಲೂ ಈಗಿನ ಮಕ್ಕಳ ಬಾಯಿ ರುಚಿಗಾಗಿ ವಿಭಿನ್ನವಾದದ್ದನ್ನು ಮಾಡಬೇಕು ಎಂಬ ಹಂಬಲ ತಾಯಂದಿರದ್ದಾಗಿರುತ್ತದೆ. ಹಾಗಾಗಿ ಸಮಯ ಸಿಕ್ಕಾಗ ನೀವು ಈ ರುಚಿಕರವಾದ ಸೌದಿ ಅರೇಬಿಯಾ ಡೆಸಾರ್ಟ್ ಅನ್ನು ಮಾಡಬಹುದು.… Read More »

ಪಟಾಫಟ್ ಮಾಡಿ, ಬಾಯಲ್ಲಿ ನೀರೂರಿಸುವ ಹುಣಸೆ ತೊಕ್ಕು

By | 20/08/2018

ಹುಣಸೆ ಹಣ್ಣಿನಿಂದ ಏನೇ ಅಡುಗೆ ಮಾಡಿದರೂ ಹುಳಿಹುಳಿಯಾಗಿಸವಿಸವಿಯಾಗಿ ಇರುತ್ತದೆ. ಕರ್ನಾಟಕದಲ್ಲಿ ಬಹುತೇಕರು ಹುಣಸೆ ಹಣ್ಣಿನ ತೊಕ್ಕು ಮಾಡುತ್ತಾರೆ. ಇದು ಅತ್ಯಂತ ಸರಳವಾಗಿ ಮಾಡಬಹುದಾದ ಅಡುಗೆ. ಹುಣಸೆ ತೊಕ್ಕು ಮಾಡಲು ಏನೇನು ಬೇಕು? ಮೊದಲಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂದು ನೋಡೋಣ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಅತ್ಯಲ್ಪ. ಮೊದಲಿಗೆ ಕೊಂಚ ಹುಣಸೆಕಾಯಿ ತೆಗೆದುಕೊಳ್ಳಿ. ಹಸಿಮೆನಸಿನ ಕಾಯಿ ನಾಲ್ಕೈದು ಇರಲಿ. ಕೊಂಚ ಅರಸಿಣಪುಡಿ, ಚಿಟಿಕೆ ಇಂಗು ಸಿದ್ಧವಾಗಿಟ್ಟುಕೊಳ್ಳಿ. ಉಪ್ಪು ರುಚಿಗೆ ತಕ್ಕಷ್ಟು. ಮೊದಲು ಸ್ವಲ್ಪ ಉಪ್ಪು ಹಾಕಿ. ರುಚಿ ನೋಡಿಕೊಂಡು ಮತ್ತೆ ಉಪ್ಪು ಹಾಕಬಹುದು.… Read More »

ಕರ್ನಾಟಕದಲ್ಲಿ ನೋಡಬಹುದಾದ 100+ ಪ್ರೇಕ್ಷಣಿಯ ಸ್ಥಳಗಳು

By | 18/08/2018

ಕರ್ನಾಟಕದಲ್ಲಿ ನೋಡಲು, ಆನಂದಿಸಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಶಿದ್ಧ ದೇವಾಲಯಗಳಿವೆ. ಚಾರಣಕ್ಕೆ ಹೋಗಲು ಬೆಟ್ಟ ಗುಡ್ಡಗಳಿವೆ. ಜಲಪಾತಗಳಿವೆ. ಅರಣ್ಯ ಸೊಬಗಿದೆ. ಮೃಗಾಲಯಗಳಿವೆ. ಅಂದವಾದ ನಗರಗಳು, ಪಟ್ಟಣಗಳು ಇವೆ. ಇಂತಹ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ  ಈ ಸ್ಥಳಗಳ ವಿವರವಾದ ಮಾಹಿತಿಯನ್ನು ಕರ್ನಾಟಕ ಬೆಸ್ಟ್ ನಲ್ಲಿ ಪ್ರಕಟಿಸಲಾಗುತ್ತದೆ. ಬೆಂಗಳೂರು ನಗರ- ಉದ್ಯಾನನಗರಿ ಮೈಸೂರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಚಿಕ್ಕಮಗಳೂರು- ಕಾಫಿ ನಾಡಿನ ಬೆರಗು ಮಡಿಕೇರಿ- ಕೂರ್ಗ್ ಹಂಪಿ ಶಿವನಸಮುದ್ರ ಬಾದಾಮಿ ಬೀದರ್ ಬೇಳೂರು ಗೋಕರ್ಣ ಇರುಪ್ಪು ಜಲಪಾತ ಜೋಗ… Read More »

ಕರ್ನಾಟಕದ ವಿವಿಧ ಸರ್ಕಾರಿ ವೆಬ್ ಸೈಟ್ ಗಳ ವಿವರ ಮತ್ತು ವಿಳಾಸ

By | 14/08/2018

ವಿವಿಧ ಸರ್ಕಾರಿ ಕೆಲಸ ಕಾರ್ಯಗಳು, ಮಾಹಿತಿಗಳು, ಅಧಿಸೂಚನೆಗಳನ್ನು ಪಡೆಯಲು ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು. ಆದರೆ, ಎಲ್ಲಾ ವೆಬ್ ಸೈಟ್ ವಿವರಗಳ ವಿಳಾಸ ಎಲ್ಲರಿಗೂ ತಿಳಿದಿರುವುದಿಲ್ಲ. ಗೂಗಲ್ ನಲ್ಲಿ ಹುಡುಕಿದರೆ ಎಲ್ಲವೂ ದೊರಕುತ್ತದೆ ಎಂದು ಹೇಳುವಂತೆ ಇಲ್ಲ. ಹೀಗಾಗಿ ಕರ್ನಾಟಕದ ವಿವಿಧ ಇಲಾಖೆಗಳ ವೆಬ್ ಸೈಟ್ ವಿಳಾಸಗಳನ್ನು ಕರ್ನಾಟಕ ಬೆಸ್ಟ್ ಇಲ್ಲಿ ನೀಡಿದೆ.

ವರ್ಡ್ ಪ್ರೆಸ್ ವೆಬ್ ಸೈಟಿನಲ್ಲಿ ಇನ್ಮುಂದೆ ಗುಟೆನ್ ಬರ್ಗ್ ಎಡಿಟರ್ ಹವಾ

By | 10/08/2018

ಈಗಾಗಲೇ ಜಗತ್ತಿನ ಬಹುತೇಕ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕ ರಚನೆಯಾಗುತ್ತಿವೆ. ಕೋಡಿಂಗ್ ಗೊತ್ತಿಲ್ಲದವರೂ ವೆಬ್ ಸೈಟ್ ಹೊಂದಲು ವರ್ಡ್ ಪ್ರೆಸ್ ನಿಂದ ಸಾಧ್ಯವಾಗುತ್ತದೆ. ಕಳೆದ ಹಲವು ವರ್ಷಗಳಿಂದ ವೆಬ್ ಸೈಟ್ ಬಳಸುತ್ತಿರುವ ನನಗೂ ವರ್ಡ್ ಪ್ರೆಸ್ ಅಚ್ಚುಮೆಚ್ಚು. ಮುಂದಿನ ದಿನಗಳಲ್ಲಿ ವರ್ಡ್ ಪ್ರೆಸ್ ನಲ್ಲಿ ಮಾಹಿತಿಗಳನ್ನು ವಿನೂತನವಾಗಿ ವಿನ್ಯಾಸ ಮಾಡಿ ಹಾಕಬಹುದು. ಯಾಕೆಂದರೆ, ಇನ್ನೊಂದಿಷ್ಟು ಸಮಯ ಕಳೆದ ಬಳಿಕ ವರ್ಡ್ ಪ್ರೆಸ್ ಗುಟೆನ್ ಬರ್ಗ್‍ ಎಡಿಟರ್ ಎಂಬ ಹೊಸ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದೆ. ನಿಮಗೆ ಗೊತ್ತೆ, ಕರ್ನಾಟಕಬೆಸ್ಟ್.ಕಾಂ ಈಗಾಗಲೇ ಗುಟೆನ್… Read More »

ಮಹಾಭಾರತದಿಂದ ಉದ್ಯೋಗಿಗಳು ಏನು ಕಲಿಯಬಹುದು?

By | 10/08/2018

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ ಮಹಾಭಾರತ ಮತ್ತು ಮ್ಯಾನೇಜ್ಮೆಂಟ್ ಪಾಠಗಳ ಕುರಿತು ಒಂದು ಪುಟ್ಟ ಲೇಖನ ದೊರಕಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನವನ್ನು ವಿಸ್ತರಿಸಿ ಬರೆಯಲಾಗಿದೆ ಮತ್ತು ಒಂದಿಷ್ಟು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಭಾರತದ ಧಾರ್ಮಿಕ, ತಾತ್ವಿಕ, ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದಲ್ಲಿ ಹಲವು ಪಾಠಗಳು ಅಡಗಿವೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರು ಮಹಾಭಾರತ ಬೋಧಿಸುವ ತತ್ವಗಳನ್ನು `ಕರಿಯರ್ ಪಾಠ’ವಾಗಿ ಸ್ವೀಕರಿಸಬಹುದು.  ಗಮನ ಕೇಂದ್ರಿಕರಿಸಿದರೆ ಯಶಸ್ಸು ಗುರು  ದ್ರೋಣಾಚಾರ್ಯರಿಂದ ಪಾಂಡವರು ಮತ್ತು ಕೌರವವರು ಅಸ್ತ್ರ ವಿದ್ಯೆ ಅಥವಾ ಬಿಲ್ವಿದ್ಯೆ ಕಲಿಯುತ್ತಿರುತ್ತಾರೆ.… Read More »