Tag Archives: Karnataka recipes

ಕಡಿಮೆ ಅವಧಿಯಲ್ಲಿ ಮಾಡಿ ರುಚಿಕರ ಅಕ್ಕಿರೊಟ್ಟಿ

By | 22/08/2018

ಅಕ್ಕಿರೊಟ್ಟಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವಾ?. ಆದರೆ ಮಾಡೋದಕ್ಕೆ ತುಂಬಾ ಕಷ್ಟವೆಂದು ಸುಮ್ಮನಾಗುತ್ತೇವೆ. ಹೆಚ್ಚಿನ ಜನರಿಗೆ ಈ ಅಕ್ಕಿ ರೊಟ್ಟಿ ಮಾಡುವುದೆಂದರೆ ಒಂದು ದೊಡ್ಡ ಯಜ್ಞ ಮಾಡಿದವರ ಹಾಗೇ ಮುಖ ಮಾಡುತ್ತಾರೆ. ಯಾಕೆಂದರೆ ಈ ಅಕ್ಕಿ ರೊಟ್ಟಿಯನ್ನು ಮಾಡುವುದಕ್ಕೆ ಬಹಳ ಸಮಯ ಬೇಕಾಗುತ್ತದೆ ಎಂದು ಇದರ ಉಸಾಬರಿಗೆ ಹೋಗುವುದಿಲ್ಲ. ಇನ್ನು ಈ ರೊಟ್ಟಿ ಹದ ತಪ್ಪಿ ದಪ್ಪಗಾದರೆ ಮತ್ತೆ ತಿನ್ನುವುದಕ್ಕೆ ಕಷ್ಟ. ಹಾಗಾಗಿ ತೆಳು ಮಾಡುವುದು ಒಂದು ಕಷ್ಟವಾದರೆ ಹೆಚ್ಚಿನ ಸಮಯ ಹಿಡುತ್ತದೆ ಎನ್ನುವುದು ಇನ್ನೊಂದು ಸಮಸ್ಯೆ. ಇದಕ್ಕೆಲ್ಲಾ… Read More »

ಬೆಸ್ಟ್ ರೆಸಿಪಿ: ಗರಿಗರಿಯಾಗಿ ಮಾಡಿ ಅವಲಕ್ಕಿ ಚೂಡಾ

By | 22/08/2018

ಮಳೆ ಧೋ ಎಂದು ಸುರಿಯುತ್ತಿರುತ್ತದೆ, ಇಲ್ಲವೇ, ತಣ್ಣಗಿನ ಗಾಳಿ ಬೀಸುತ್ತಿರುತ್ತದೆ. ಈ ಸಮಯದಲ್ಲಿಯೇ ಬಾಯಾಡಿಸುವ ಚಪಲ ಉಂಟಾಗುತ್ತದೆ. ಅಂಗಡಿಯಿಂದ ಚಿಪ್ಸ್, ಮುರುಕು ಏನಾದರೂ ತಂದು ತಿನ್ನೋಣವೆಂದರೆ ಆರೋಗ್ಯ ಕೆಡುವ ಭಯ. ಹೇಗೆ ಮಾಡಿರುತ್ತಾರೋ, ಯಾವ ಎಣ್ಣೆಯಲ್ಲಿ ಮಾಡಿರುತ್ತಾರೋ ಎಂಬ  ಆತಂಕ. ಹಾಗಾಗಿ ಮನೆಯಲ್ಲಿಯೇ ಕಡಿಮೆ ಸಮಯದಲ್ಲಿ ತಯಾರಿಸಿ ಸಾಕಷ್ಟು ದಿನ ಇಟ್ಟುಕೊಳ್ಳುವಂತಹ ತಿಂಡಿಯಲ್ಲಿ ಅವಲಕ್ಕಿ ಚೂಡಾವೋ ಒಂದು. ಎಷ್ಟೇ ಬಗೆಯ ತಿಂಡಿಗಳಿದ್ದರೂ, ಅವಲಕ್ಕಿ ಚೂಡಾವೆಂದರೆ ಎಲ್ಲರ ಬಾಯಲ್ಲೂ ನೀರಾಡುತ್ತದೆ. ಚಹಾದ ಜೊತೆಗೆ ಅವಲಕ್ಕಿಯ ಚೂಡವಿದ್ದರೆ ಅದರ ಸ್ವಾದ ಸವಿದವನಿಗೆ ಗೊತ್ತು. ಇದನ್ನು… Read More »

ಪಟಾಫಟ್ ಮಾಡಿ, ಬಾಯಲ್ಲಿ ನೀರೂರಿಸುವ ಹುಣಸೆ ತೊಕ್ಕು

By | 20/08/2018

ಹುಣಸೆ ಹಣ್ಣಿನಿಂದ ಏನೇ ಅಡುಗೆ ಮಾಡಿದರೂ ಹುಳಿಹುಳಿಯಾಗಿಸವಿಸವಿಯಾಗಿ ಇರುತ್ತದೆ. ಕರ್ನಾಟಕದಲ್ಲಿ ಬಹುತೇಕರು ಹುಣಸೆ ಹಣ್ಣಿನ ತೊಕ್ಕು ಮಾಡುತ್ತಾರೆ. ಇದು ಅತ್ಯಂತ ಸರಳವಾಗಿ ಮಾಡಬಹುದಾದ ಅಡುಗೆ. ಹುಣಸೆ ತೊಕ್ಕು ಮಾಡಲು ಏನೇನು ಬೇಕು? ಮೊದಲಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂದು ನೋಡೋಣ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಅತ್ಯಲ್ಪ. ಮೊದಲಿಗೆ ಕೊಂಚ ಹುಣಸೆಕಾಯಿ ತೆಗೆದುಕೊಳ್ಳಿ. ಹಸಿಮೆನಸಿನ ಕಾಯಿ ನಾಲ್ಕೈದು ಇರಲಿ. ಕೊಂಚ ಅರಸಿಣಪುಡಿ, ಚಿಟಿಕೆ ಇಂಗು ಸಿದ್ಧವಾಗಿಟ್ಟುಕೊಳ್ಳಿ. ಉಪ್ಪು ರುಚಿಗೆ ತಕ್ಕಷ್ಟು. ಮೊದಲು ಸ್ವಲ್ಪ ಉಪ್ಪು ಹಾಕಿ. ರುಚಿ ನೋಡಿಕೊಂಡು ಮತ್ತೆ ಉಪ್ಪು ಹಾಕಬಹುದು.… Read More »