Category Archives: Inspirational stories

ಸ್ಫೂರ್ತಿದಾಯಕ: ವಾಟ್ಸ್ಆ್ಯಪ್ ಸ್ಥಾಪಕ ಜಾನ್ ಕೋಮ್ ಯಶೋಗಾಥೆ

By | 12/07/2021

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್‌ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್‌ ಕೊಟ್ಟು ಫೇಸ್‌ಬುಕ್‌ ಖರೀದಿಸಿತ್ತು. ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‌ಆ್ಯಪ್‌ ಅನ್ನು ಆರಂಭಿಸಿದ್ದು ಜಾನ್‌ ಕೋಮ್‌. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್‌ ಕೋಮ್‌ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ… Read More »

ಶ್ರೀರಾಮನಿಂದ ಕಲಿಯಬಹುದಾದ ಜೀವನಪಾಠಗಳು

By | 10/08/2020

ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿಪೂಜೆ ನಡೆದಿದೆ. ಶರಾಮಾಯಣದ ಪ್ರಕಾರ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯನೀತಿಗಳಿಂದ ಕೂಡಿದ್ದವೆಂದು ಹೇಳಲಾಗಿದೆ. ಮಹಾವಿಷ್ಣುವಿನ 7ನೇ ಅವತಾರವಾದ ಶ್ರೀರಾಮಚಂದ್ರನಿಂದ ಕಲಿಯಬಹುದಾದ ಪಾಠಗಳು ಇಲ್ಲಿವೆ. ಬಿಟ್ಟುಕೊಡಬೇಡಿ ಗುರಿ ಸಾಧನೆಗೆ ಕೆಲವು ದಿನಗಳು, ತಿಂಗಳುಗಳು ಅಥವಾ ಹಲವು ವರ್ಷಗಳು ಬೇಕಾಗಬಹುದು. ಅದನ್ನು ಸಾಸಲು ನಿರಂತರ ಪ್ರಯತ್ನವಿರಲಿ. ಗುರಿಯತ್ತ ಲಕ್ಷ್ಯವಿರಲಿ. ಸೀತೆಯನ್ನು ರಾವಣನಿಂದ ಕಾಪಾಡಲು ರಾಮ ಹಲವು ವರ್ಷ ನಿರಂತರ ಪ್ರಯತ್ನ ಮಾಡಿರುವ ಕತೆಯಿಂದ ಇದನ್ನು ತಿಳಿದುಕೊಳ್ಳಬಹುದು. ನಮ್ರತೆ ಇರಲಿ ನಾಯಕತ್ವ ಹೊಂದಲು ಬಯಸುವವರು ಮರೆಯದೆ ಮಾನವಿಯತೆ ಮತ್ತು… Read More »

Inspirational Stories: ಹೊಂದಾಣಿಕೆ ಕೊರತೆ, ಅತ್ತೆಗೆ ವಿಷ ಕೊಟ್ಟ ಸೊಸೆ

By | 06/10/2019

ನೀತಾ ಇತ್ತೀಚೆಗೆ ಮದುವೆಯಾಗಿದ್ದಳು. ಮನೆಯಲ್ಲಿ ಗಂಡ ಮತ್ತು ಅತ್ತೆ ಇದ್ದರು. ಕೆಲವು ದಿನಗಳ ಬಳಿಕ ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಕಷ್ಟವಾಯಿತು. ನೀತಾ ಆ‘ುನಿಕ ಹುಡುಗಿ. ಅತ್ತೆ ಸಹಜವಾಗಿ ಹಳೆಯ ಕಾಲದವರು. ನೀತಾ ತುಂಬಾ ಕೋಪಿಷ್ಠೆ. ಅತ್ತೆಯನ್ನು ದ್ವೇಷಿಸಲು ಆರಂಭಿಸಿದಳು. ಗಂಡನೊಂದಿಗೆ ಚೆನ್ನಾಗಿರಬೇಕಾದರೆ ಈ ಅತ್ತೆ ಸಹವಾಸ ತಪ್ಪಬೇಕು ಎಂದುಕೊಂಡಳು. ಬೇರೆ ಮನೆ ಮಾಡುವಂತೆ ಇಲ್ಲ. ಅತ್ತೆಯನ್ನು ಹೊರಗೆ ಹಾಕುವಂತೆಯೂ ಇಲ್ಲ. ಇತ್ತೀಚೆಗೆ ಗಂಡನೂ ಅತ್ತೆ ಪರವಾಗಿ ಮಾತನಾಡುತ್ತಿದ್ದಾನೆ. ಏನು ಮಾಡುವುದು? ತುಂಬಾ ಯೋಚನೆ ಮಾಡಿದಳು. ಆಕೆಗೆ ತನ್ನ ತಂದೆಯ ನೆನಪು ಬಂತು.… Read More »

ಸೂರ್ತಿದಾಯಕ: ವಾಲ್ಟ್ ಡಿಸ್ನಿ ಬದುಕಿನ ಕತೆ

By | 12/01/2019

ಅನಿಮೇಟರ್, ಕಾರ್ಟೂನಿಸ್ಟ್, ನಿರ್ದೇಶಕ, ಉದ್ಯಮಿಯಾಗಿ ವಾಲ್ಟ್ ಡಿಸ್ನಿ ಫೇಮಸ್. ಆತ 20ನೇ ಶತಮಾನದ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಸುಮಾರು 22 ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈಗ ವಾಲ್ಟ್ ಡಿಸ್ನಿ ಕಂಪನಿಯು ಹಲವು ಬಿಲಿಯನ್ ಡಾಲರ್ ವಹಿವಾಟಿನ ಬೃಹತ್ ಕಂಪನಿಯಾಗಿದೆ. ಆದರೆ, ವಾಲ್ಟ್ ಡಿಸ್ನಿಗೆ ಯಶಸ್ಸು ಸಡನ್ ಆಗಿ ಬಂದಿರುವುದಲ್ಲ. ಆತನಿಗೆ ಹೆಜ್ಜೆಹೆಜ್ಜೆಗೂ ಸೋಲು, ಅಪಮಾನಗಳು ಎದುರಾಗುತ್ತಿದ್ದವು. ಸೇನೆಗೆ ಸೇರಬೇಕೆಂಬ ಉದ್ದೇಶದಿಂದ 1917ರಲ್ಲಿ ವಾಲ್ಟ್ ಡಿಸ್ನಿಯು ಶಾಲೆಯನ್ನು ಅರ್ಧಕ್ಕೆ ಬಿಟ್ಟರು. ಆದರೆ, ಸೇನೆಗೆ ಸೇರಲು ವಯಸ್ಸು ಆಗಿಲ್ಲವೆಂಬ ಕಾರಣ ನೀಡಿ ಆತನನ್ನು ಸೇರಿಸಲಿಲ್ಲ.… Read More »

Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು

By | 04/01/2019

ನಮ್ಮ ಬದುಕು ಯಾವುದೋ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಅದನ್ನು ಸರಿಯಾದ ದಿಕ್ಕಿನತ್ತ ತಿರುಗಿಸಲು ನಾವು ಆಲೋಚನೆ ಮಾಡಬೇಕು. ಕೆಲವೊಮ್ಮೆ ಯಾರಾದರೂ ನಮಗೆ ದಿಕ್ಕು ತೋರಿಸಬಹುದು. ಯಾರೋ ಹೇಳಿದ ಮಾತುಗಳು ನಮಗೆ ಸ್ಫೂರ್ತಿ ತರಬಹುದು. ಇನ್ನು ಕೆಲವೊಮ್ಮೆ ಯಾರಾದರೂ ಹೇಳಿದ ಕತೆ ನಮಗೆ ಹೊಸ ದಿಕ್ಕು ತೋರಿಸಬಹುದು. ಸ್ಫೂರ್ತಿದಾಯಕ ಕತೆಗಳು ತುಂಬಾ ಪವರ್ ಫುಲ್. ಒಂದು ಪುಟ್ಟ ಕತೆಯ ಹಿಂದೆ ದೊಡ್ಡ ಪಾಠ ಇರುತ್ತದೆ. ಇಂಟರ್ನೆಟ್ ನಲ್ಲಿ ಇಂತಹ ಸಾಕಷ್ಟು ಸ್ಫೂರ್ತಿದಾಯಕ ಕತೆಗಳಿವೆ. ಅವುಗಳಲ್ಲಿ ನನಗೆ ಆಲ್ ಟೈಂ ಫೇವರಿಟ್ ಆದ ಹತ್ತು ಕತೆಗಳನ್ನು… Read More »

Moral Story: ಡೇವಿಡ್ ಮತ್ತು ಗೋಲಿಯಾಥ್ (ಸಂಗ್ರಹ)

By | 03/12/2018

ಶಿವ್ ಖೇರಾ ಬರೆದ “ಯು ಕ್ಯಾನ್ ವಿನ್’ ಪುಸ್ತಕದಲ್ಲಿ ಓದಿದ ಕತೆಯಿದು. ಈ ಕತೆಯನ್ನು ಈ ಹಿಂದೆ ಬೇರೆಲ್ಲೋ ಓದಿದ್ದೆ. ಯಾವ ಕ್ಲಾಸ್ ಪಠ್ಯ ಪುಸ್ತಕದಲ್ಲಿ ಎನ್ನುವುದು ನೆನಪಿಲ್ಲ. ಈ ಪುಟ್ಟ ಕತೆಯು ದೊಡ್ಡದಾದ ವ್ಯಕ್ತಿತ್ವ ವಿಕಸನ ಪಾಠ ಹೊಂದಿದೆ. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಡೇವಿಡ್ ಮತ್ತು ಗೋಲಿಯಾಥ್ ಒಂದು ಊರಿನಲ್ಲಿ ದೈತ್ಯನಿದ್ದ. ದೈತ್ಯನೆಂದರೆ ತುಂಬಾ ಬೃಹತ್ ಗಾತ್ರದ ಶಕ್ತಿಶಾಲಿ ವ್ಯಕ್ತಿ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಆ ಊರಿನವರು ಆತ ಕೊಡುವ ಹಿಂಸೆಯಿಂದ ತತ್ತರಿಸಿದ್ದರು. ಆತನಿಗೆ ಭಯಪಟ್ಟು ಬದುಕುತ್ತಿದ್ದರು. ಒಂದು ದಿನ… Read More »