Category Archives: Articles

benefits of registry in female name: ಆಸ್ತಿ ಖರೀದಿಗೆ ಸಾಲ ಪಡೆಯಲು ಬಯಸುವ ಮಹಿಳೆಯರಿಗೆ ಸಲಹೆ

By | 08/03/2020

ಮನೆ ಖರೀದಿಸುವ ಮಹಿಳೆಯರು ಗೃಹಸಾಲ ಬಡ್ಡಿದರ ಕಡಿತ, ಮುದ್ರಾಂಕ ಶುಲ್ಕ ಕಡಿತ, ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮನೆಯ ಮಹಿಳಾ ಸದಸ್ಯರ ಹೆಸರಿನಲ್ಲಿ ಪ್ರಾಪರ್ಟಿ ಖರೀದಿಸುವುದು ಅಥವಾ ಪ್ರಾಪರ್ಟಿ ಖರೀದಿಸುವಾಗ ಮಹಿಳೆಯರನ್ನು ಜಂಟಿ-ಪಾಲುದಾರರನ್ನಾಗಿ ಮಾಡಿಕೊಳ್ಳುವುದರಿಂದಲೂ ಹಲವು ಪ್ರಯೋಜನಗಳು ಇವೆ. ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗಸ್ಥ ಪುರುಷರು, ಮಹಿಳೆಯರು ಸ್ವಂತ ಪ್ರಾಪರ್ಟಿ ಹೊಂದಲು ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ವಿಶೇಷವಾಗಿ ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌, ವಿಲ್ಲಾ ಖರೀದಿಸಿ ಬಾಡಿಗೆ ಮನೆಯಿಂದ ಮುಕ್ತಿ ಪಡೆಯುವುದು ನಗರದ ಬಹುತೇಕ ಮಹಿಳೆಯರ ಬಯಕೆಯಾಗಿರುತ್ತದೆ. ಒಂದೋ ತಾವು ಉಳಿತಾಯ… Read More »

Happiness: ಸಂತೋಷದಿಂದ ಕೆಲಸ ಮಾಡುವುದು ಹೇಗೆ?

By | 30/06/2019

ನೀವು ಬ್ಯಾಂಕಿಗೆ ಹೋದಾಗ ಅಲ್ಲಿ ಸದಾ ಗಿಜಿಗಿಡುವ ಗ್ರಾಹಕರಿಂದ ಹಣ ಪಡೆದು ರಸೀದಿ ನೀಡುವ ಕ್ಯಾಷಿಯರ್‌ಗಳನ್ನು ಗಮನಿಸಿ. ಅವರ ಮುಂದೆ ಜನರು ಕ್ಯೂ ನಿಂತಿರುತ್ತಾರೆ. ಎಲ್ಲರೂ ಕೈಯಲ್ಲಿ ನೋಟುಗಳನ್ನು ಹಿಡಿದುಕೊಂಡಿರುತ್ತಾರೆ. ಅಲ್ಲಿ ಕೂತ ಕ್ಯಾಷಿಯರ್‌ಗಳಿಗೆ ನಿಜಕ್ಕೂ ಟೆನ್ಷನ್ ಇರುತ್ತದೆ. ಹಣದ ಲೆಕ್ಕ ತಪ್ಪಬಾರದು. ಕಂಪ್ಯೂಟರ್‌ನಲ್ಲಿ ದಾಖಲಿಸುವಲ್ಲಿ ಒಂದು ಸೊನ್ನೆ ಹೆಚ್ಚುಕಮ್ಮಿಯಾದರೂ ಹಲವು ಸಾವಿರ ರೂ. ಹೆಚ್ಚು ಕಮ್ಮಿಯಾಗಬಹುದು. ಲಕ್ಷ ಇದ್ದದ್ದು ಕೋಟಿ ಎಂದು ದಾಖಲಾಗಬಹುದು. ಇಂತಹ ಟೆನ್ಷನ್‌ನಲ್ಲಿ ಕೆಲಸ ಮಾಡುವ ಬಹುತೇಕ ಕ್ಯಾಷಿಯರ್‌ಗಳ ಮುಖ ಸದಾ ಗಂಟಿಕ್ಕಿಕೊಂಡೇ ಇರುತ್ತದೆ. ಆದರೆ, ಕೆಲವರು… Read More »

ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವಂತಿದ್ದರೆ…

By | 25/05/2019

ಕನ್ನಡಿಗರ ಹೋರಾಟದ ಫಲವಾಗಿ ಕೆಲವು ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿದೆ. ಆದರೂ, ಕೇಂದ್ರ ಸರಕಾರದ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತೆ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಡಿಆರ್‌ಡಿಒ ೨೫೦ಕ್ಕೂ ಹೆಚ್ಚು ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ವಿದ್ಯಾರ್ಹತೆಯಾಗಿದೆ. ಕರ್ನಾಟಕದ ಬಹುತೇಕ ಗ್ರಾಮೀಣ ಭಾಗದ ಯುವಕರು ಹೆಚ್ಚಾಗಿ ಐಟಿಐ ಓದಿರುತ್ತಾರೆ. ಅವರಲ್ಲಿ ಬಹುತೇಕರ ಇಂಗ್ಲಿಷ್‌ ಜ್ಞಾನ ಅತ್ಯುತ್ತಮವಾಗಿರುವುದಿಲ್ಲ ಅಥವಾ ಸಮರ್ಥವಾಗಿ ಪರೀಕ್ಷೆ ಬರೆಯುವಷ್ಟು ಇರುವುದಿಲ್ಲ. ಆದರೆ, ಈ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಂಗ್ಲಿಷ್‌ ಮತ್ತು… Read More »

ಹ್ಯಾಕರ್‌ಗಳಿದ್ದಾರೆ ಎಚ್ಚರ

By | 01/09/2010

ಇಂದು ಇಮೇಲ್‌ ತೆರೆದವನಿಗೆ ಶಾಕ್‌ ಕಾದಿತ್ತು. ಯಾವುದೇ ಇಮೇಲ್‌ ತೆರಯುವ ಮುನ್ನ ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆ ಎಂಬ ಅಲರ್ಟ್‌ ಕಾಣಿಸತೊಡಗಿತ್ತು. ನೀವು ಕೊನೆಯಬಾರಿ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಲಾಗ್‌ಇನ್‌ ಆಗಿದ್ದಿರಿ ಎಂಬ ಸೂಚನೆಯಿತ್ತು. ಎಲ್ಲಿಯ ಅಮೆರಿಕ? ಎಲ್ಲಿಯ ಬೆಂಗಳೂರು?. ಆ ಅಲರ್ಟ್‌ ತೆರೆದು ನೋಡಿದವನಿಗೆ ಆಶ್ಚರ್ಯವಾಯಿತು. ಕಳೆದ ಎರಡು ದಿನಗಳಲ್ಲಿ ಎರಡು ಬಾರಿ ಯುಎಸ್‌ಎ ಮತ್ತು ಇಂಗ್ಲೆಂಡ್‌ನಿಂದ ನನ್ನ ಇಮೇಲ್‌ ಖಾತೆಗೆ ಯಾರೋ ಪ್ರವೇಶಿಸಿದ್ದರು. ಸದ್ಯ ನಾನು ಕನಸಿನಲ್ಲೂ ಅಮೆರಿಕ ಮತ್ತು ಇಂಗ್ಲೆಂಡ್‌ಗೆ ಹೋಗಿ ಬಂದ ನೆನಪಾಗಲಿಲ್ಲ. ಹ್ಯಾಕಿಂಗ್‌ ವಿಷಯ ನನಗೆ… Read More »