Happiness: ಸಂತೋಷದಿಂದ ಕೆಲಸ ಮಾಡುವುದು ಹೇಗೆ?

Image Credit: www.happyzozo.com

ನೀವು ಬ್ಯಾಂಕಿಗೆ ಹೋದಾಗ ಅಲ್ಲಿ ಸದಾ ಗಿಜಿಗಿಡುವ ಗ್ರಾಹಕರಿಂದ ಹಣ ಪಡೆದು ರಸೀದಿ ನೀಡುವ ಕ್ಯಾಷಿಯರ್‌ಗಳನ್ನು ಗಮನಿಸಿ. ಅವರ ಮುಂದೆ ಜನರು ಕ್ಯೂ ನಿಂತಿರುತ್ತಾರೆ. ಎಲ್ಲರೂ ಕೈಯಲ್ಲಿ ನೋಟುಗಳನ್ನು ಹಿಡಿದುಕೊಂಡಿರುತ್ತಾರೆ. ಅಲ್ಲಿ ಕೂತ ಕ್ಯಾಷಿಯರ್‌ಗಳಿಗೆ ನಿಜಕ್ಕೂ ಟೆನ್ಷನ್ ಇರುತ್ತದೆ. ಹಣದ ಲೆಕ್ಕ ತಪ್ಪಬಾರದು. ಕಂಪ್ಯೂಟರ್‌ನಲ್ಲಿ ದಾಖಲಿಸುವಲ್ಲಿ ಒಂದು ಸೊನ್ನೆ ಹೆಚ್ಚುಕಮ್ಮಿಯಾದರೂ ಹಲವು ಸಾವಿರ ರೂ. ಹೆಚ್ಚು ಕಮ್ಮಿಯಾಗಬಹುದು. ಲಕ್ಷ ಇದ್ದದ್ದು ಕೋಟಿ ಎಂದು ದಾಖಲಾಗಬಹುದು. ಇಂತಹ ಟೆನ್ಷನ್‌ನಲ್ಲಿ ಕೆಲಸ ಮಾಡುವ ಬಹುತೇಕ ಕ್ಯಾಷಿಯರ್‌ಗಳ ಮುಖ ಸದಾ ಗಂಟಿಕ್ಕಿಕೊಂಡೇ ಇರುತ್ತದೆ. ಆದರೆ, ಕೆಲವರು ಮಾತ್ರ ಎಷ್ಟೇ ಜನರು ಇರಲಿ, ಕೆಲಸದಲ್ಲಿ ವೇಗವನ್ನು ಕಾಯ್ದುಕೊಂಡು ಪ್ರತಿಯೊಬ್ಬ ಗ್ರಾಹಕರ ಜೊತೆ ನಗುಮುಖದಿಂದಲೇ Happiness ಸಂವಹನ ನಡೆಸುತ್ತಾರೆ.

How to Work in Happiness?


ನೀವು ಕೆಲಸ ಮಾಡುವ ಕಚೇರಿಗಳಲ್ಲಿಯೂ ಗಮನಿಸಿರಿ. ಅಲ್ಲಿ ಕೆಲವರು ಕೆಲಸ ಎಷ್ಟೇ ಇದ್ದರೂ ನಗುನಗುತ್ತಾ ನಿರ್ವಹಿಸುತ್ತಾ ಇರುತ್ತಾರೆ. ಬ್ಯುಸಿ ಶೆಡ್ಯೂಲ್ ನಡುವೆಯೂ ನಗೆ ಚಟಾಕಿ ಹಾರಿಸುತ್ತ ಇರುತ್ತಾರೆ. ಆದರೆ, ಅಷ್ಟೇ ಕೆಲಸ ಇದ್ದವರು ಅಥವಾ ಅದಕ್ಕಿಂತ ಕಡಿಮೆ ಕೆಲಸ ಇದ್ದವರೂ ಸದಾ ಮುಖ ಗಂಟಿಕ್ಕಿಕೊಂಡು, ಆಫೀಸ್‌ನ ಸಮಸ್ತ ಜವಾಬ್ದಾರಿಯನ್ನೂ ತಾವೇ ಹೊತ್ತವರಂತೆ ಕೆಲಸ ಮಾಡುತ್ತಿರುತ್ತಾರೆ. ನಿಮಗೀಗ ಆಫೀಸ್‌ನಲ್ಲಿ ಸಂತೋಷವಾಗಿ ಕೆಲಸ ಮಾಡುವವರು ಮತ್ತು ಸಂತೋಷವಾಗಿರದ ಉದ್ಯೋಗಿಗಳ ನಡುವಿನ ವ್ಯತ್ಯಾಸ ಗೊತ್ತಾಗಿರಬಹು. ನಿಮಗೂ ಆಫೀಸ್‌ನಲ್ಲಿ ಸದಾ ಸಂತೋಷವಾಗಿರಬೇಕೆಂದು ಅನಿಸಿರಬಹುದು.

ಸಂತೋಷ ಎಂದರೆ ಏನು?

ಮಾಡುವ ಕೆಲಸದಲ್ಲಿ ಅರ್ಥವಿರಲಿ

1983ರಲ್ಲಿ ಪೆಪ್ಸಿಕೊ ಕಂಪನಿಯ ಉದ್ಯೋಗ ಬಿಟ್ಟು ತನ್ನ ಆಪಲ್ ಕಂಪನಿಯ ಸಿಇಒ ಆಗುವಂತೆ ಸ್ಟೀವ್ ಜಾಬ್ಸ್ ಅವರು ಜಾಬ್ ಸ್ಕೂಲೆ ಅವರಿಗೆ ಮನವೋಲಿಸುವ ಸಂದರ್ಭರ್ದಲ್ಲಿ ಒಂದು ಪ್ರಶ್ನೆ ಕೇಳಿದ್ದರು. ‘ನೀನು ನಿನ್ನ ಮುಂದಿನ ‘ವಿಷ್ಯವನ್ನು ಸಕ್ಕರೆ ನೀರು ಮಾರಾಟ ಮಾಡುತ್ತ ಇರಬೇಕೆಂದು ಬಯಸುವೆಯಾ? ಅಥವಾ ಈ ಜಗತ್ತಿನಲ್ಲಿ ಏನಾದರೂ ಬದಲಾವಣೆ ಮಾಡಲು ಬಯಸುವೆಯಾ?’ ಎಂದು ಸ್ಟೀವ್ ಜಾಬ್ಸ್ ಪ್ರಶ್ನಿಸಿದ್ದರು.
ತಾನು ಮಾಡುವ ಕೆಲಸದ ಕುರಿತು ಅರ್ಥವನ್ನು ಹುಡುಕಲು ಸ್ಕೂಲೆ ಅವರಿಗೆ ಈ ಪ್ರಶ್ನೆ ಪ್ರೇರೇಪಿಸಿತ್ತು. ‘ಸಂತೋಷವಾಗಿದ್ದುಕೊಂಡು ಕೆಲಸ ಮಾಡುವವರು ಇತರರಿಗಿಂತ ಹೆಚ್ಚು ಉತ್ಪಾದಕತೆಯನ್ನು ಹೊಂದಿರುತ್ತಾರೆ’ ಎಂದು ವಾರ್ಟನ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ಆಡಂ ಗ್ರಾಂಟ್ ಹೇಳುತ್ತಾರೆ.

ಕಚೇರಿಯ ಸುಂದರ ವಾತಾವರಣ

ನೀವು ಆಫೀಸ್‌ನಲ್ಲಿ ಕುಳಿತುಕೊಳ್ಳುವ ಸ್ಥಳ ಹೇಗಿದೆ ಎಂದು ಪರಿಶೀಲಿಸಿ. ಮೊದಲಿಗೆ ನಿಮ್ಮ ಕ್ಯಾಬಿನ್ ಅಥವಾ ಕುಳಿತುಕೊಳ್ಳುವ ಸ್ಥಳವನ್ನು ನೀಟಾಗಿಟ್ಟುಕೊಳ್ಳಿ ‘ನೀವು ಕೆಲಸದ ಸ್ಥಳದಲ್ಲಿ ಸಂತೋಷವಾಗಿರಬೇಕಾದರೆ ಆಫೀಸ್‌ನಲ್ಲಿ ನಿಮಗೆ ಕೊಂಚ ಸ್ಥಳ ಮಾಡಿಕೊಳ್ಳಿ. ನೀವು ಕೆಲಸ ಮಾಡುವ ಸ್ಥಳವನ್ನು ಕಂಪನಿಯ ನೀತಿಯ ಅನುಮತಿ ಪಡೆದು ಅಲಂಕಾರಿಸಿಕೊಳ್ಳಿ. ಇದರಿಂದ ನೀವು ಆಫೀಸ್‌ನಲ್ಲಿ ಆರಾಮವಾಗಿ ಮತ್ತು ರಿಲಾಕ್ಸ್ ಆಗಿ ಕೆಲಸ ಮಾಡಬಹುದು’ ಎಂದು ಬ್ಯಾಲೆನ್ಸ್ ಟೀಮ್ ಸಂಸ್ಥೆಯ ಸ್ಥಾಪಕರಾದ ಜೆನಿಫರ್ ಸ್ಟಾರ್ ಹೇಳುತ್ತಾರೆ. ಗುಡ್‌ ಮಾರ್ನಿಂಗ್‌ ಇಮೇಜ್‌ ಬೇಕಿದ್ದರೆ ಈ ಲಿಂಕ್‌ಗೆ ಬನ್ನಿ

ಇದನ್ನೂ ಓದಿ  ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವಂತಿದ್ದರೆ...

ಅತ್ಯುತ್ತಮ ಸ್ನೇಹಿತರೊಬ್ಬರು ಇರಲಿ

ಹೋಸ್ಟಿಂಗ್ ಸ್ಟಾರ್ಟ್‌ಅಪ್ ಹೋಸ್ಟ್ ಅ‘್ಯಯನದ ಪ್ರಕಾರ ‘ಆಫೀಸ್‌ನಲ್ಲಿ ಒಬ್ಬರನ್ನು ನಿಮ್ಮ ಅತ್ಯುತ್ತಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮೂಲಕ ಸಂತೋಷವಾಗಿರಬಹುದು. ನಿಮ್ಮ ಕೆಲಸದ ದಕ್ಷತೆ ಹೆಚ್ಚಲು ನಿಮಗಿಂತ ಕೊಂಚ ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು’ ಎಂದು ಹೋಸ್ಟ್‌ನ ಸ್ಥಾಪಕರಾದ ಕ್ರಿಸ್ಟಿನೆ ರಿಯೊರ್ಡಾನ್ ಹೇಳುತ್ತಾರೆ. ‘ನಿಮಗೆ ಆಫೀಸ್‌ನಲ್ಲಿ ಒಳ್ಳೆಯ ಸ್ನೇಹಿತರಿದ್ದರೆ ಕೆಲಸವು ಹೆಚ್ಚು ಸಂತೋಷದಾಯಕ, ವೌಲ್ಯಯುತ ಮತ್ತು ತೃಪ್ತಿದಾಯಕವಾಗಿರುತ್ತದೆ’ ಎಂದು ಅವರು ಹೇಳುತ್ತಾರೆ.

ನಗು ಇರಲಿ

ಮುಖದಲ್ಲಿ ಪುಟ್ಟ ನಗು ಇದ್ದರೆ ನಿಮ್ಮ ಕೆಲಸದಲ್ಲಿ ಸಂತೋಷ ಉಂಟಾಗುತ್ತದೆ. ನಿಮ್ಮ ಮುಖದಲ್ಲಿ ಇರುವ ನಗು ನಿಮ್ಮ ಮಿದುಳಿಗೆ ಇನ್ನಷ್ಟು ಸಂತೋಷವಾಗಿರುವಂತೆ ಪ್ರೇರೇಪಿಸುತ್ತದೆ. ನಗು ಸಾಂಕ್ರಾಮಿಕ. ನೀವು ನಗುನಗುತ್ತಾ ಕೆಲಸ ಮಾಡಿದರೆ ನಿಮ್ಮ ಸುತ್ತಮುತ್ತಲು ಇರುವವರಿಗೂ ನಗು ಹರಡುತ್ತದೆ.

ವೈಯಕ್ತಿಕ ಸಮಸ್ಯೆಗಳನ್ನು ಮನೆಯಲ್ಲಿ ಬಿಟ್ಟುಬನ್ನಿ

ನಿಮ್ಮ ವೈಯಕ್ತಿಕ ಜೀವನ ಗೊಂದಲದಿಂದ ಕೂಡಿದ್ದರೆ, ಅದು ಭಾವನಾತ್ಮಕವಾಗಿ ಕಾಡುತ್ತಿರುತ್ತದೆ. ‘ಭಾವನೆಯು ನಿಮ್ಮನ್ನು ಕುಂಠಿತಗೊಳಿಸುತ್ತದೆ ಮತ್ತು ಒತ್ತಡ ಹೆಚ್ಚಿಸುತ್ತದೆ’ ಎಂದು ಜೂಲಿ ಮಾರ್ಗನ್‌ಸ್ಟೆನ್ ಹೇಳುತ್ತಾರೆ. ಅವರು ಟೈಮ್ ಮ್ಯಾನೇಜ್‌ಮೆಂಟ್ ಫ್ರಂ ದಿ ಇನ್‌ಸೈಡ್ ಔಟ್‌ನ ಲೇಖಕರು. ‘ನೀವು ನಿಮ್ಮ ವೈಯಕ್ತಿಕ ದುಃಖವನ್ನು ಆಫೀಸ್‌ಗೆ ತಂದರೆ ನಿಮಗೆ ಒತ್ತಡ ಹೆಚ್ಚುತ್ತದೆ. ಇದರಿಂದ ಕೆಲಸ ಮುಗಿಯುವುದೇ ಇಲ್ಲವೆಂಬ ‘ಾವನೆ ಬರುತ್ತದೆ ಮತ್ತು ಇದು ನಿಮ್ಮ ಉತ್ಪಾದಕತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳುತ್ತಾರೆ. ‘ಆಫೀಸ್‌ನದ್ದು ಆಫೀಸಿಗೆ, ಮನೆಯದ್ದು ಮನೆಗೆ’ ಎಂಬ ನೀತಿಯನ್ನು ಪಾಲಿಸಲು ಪ್ರಯತ್ನಿಸಿರಿ.

ಭವಿಷ್ಯದ ದೃಷ್ಟಿಕೋನವಿರಲಿ

ಜಿಯೊಫ್ರೆ ಜೇಮ್ಸ್ ಎಂಬ ಉದ್ಯೋಗ ತಜ್ಞರ ಪ್ರಕಾರ, ‘ನೀವು ಮಾಡುವ ಕೆಲಸವು ನಿಮ್ಮ ‘ಭವಿಷ್ಯದ ದೀರ್ಘಕಾಲೀನ ಯೋಜನೆಗಳು ಮತ್ತು ಗುರಿಗಳನ್ನು ಈಡೇರಿಸಲು ಪೂರಕವಾಗಿರಲಿ. ಇದರಿಂದ ನಿಮ್ಮ ಗುರಿಯನ್ನು ಸಾಸಲು ಪ್ರೇರೇಪಣೆ ದೊರಕುತ್ತದೆ’ ಎನ್ನುತ್ತಾರೆ. ಅಂದರೆ, ನೀವು ಮಾಡುವ ಕೆಲಸವು ಕೇವಲ ತಿಂಗಳಾಂತ್ಯದಲ್ಲಿ ದೊರಕುವ ವೇತನವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಇರದೆ, ಭವಿಷ್ಯದ ಗುರಿ ಸಾ‘ನೆಗೆ ಪೂರಕವಾಗಿರಲಿ.

ಧನ್ಯವಾದ ತಿಳಿಸಿ

ಇತರರಿಂದ ಏನಾದರೂ ಸಹಾಯವಾದಗ ‘ಥ್ಯಾಂಕ್ಯೂ’ ಎಂದು ತಿಳಿಸಿ. ನಿಮಗೂ ಇತರರು ‘ನ್ಯವಾದ ತಿಳಿಸುತ್ತಾರೆ. ಇಂತಹ ವರ್ತನೆಗಳನ್ನು ಸ್ವೀಕರಿಸುವಾಗ ನಮ್ಮ ಭಾವನೆ ಉತ್ತಮಗೊಳ್ಳುತ್ತದೆ. ಇದರಿಂದ ಇತರರಿಗೂ ಸಂತೋಷವಾಗುತ್ತದೆ, ನಮಗೂ ಸಂತೋಷವಾಗುತ್ತದೆ. ಇದೇ ಸಂತೋಷವೆಂದರೆ.

ಉಸಿರಾಡುತ್ತ ಇರಿ

ಜೀವಂತವಾಗಿರಬೇಕಾದರೆ ಪ್ರತಿಯೊಬ್ಬರೂ ಉಸಿರಾಡುತ್ತಲೇ ಇರಬೇಕಾಗುತ್ತದೆ. ಆದರೆ, ಕೆಲಸದ ನಡುವೆ ಆಗಾಗ ಆಳವಾದ ಉಸಿರಾಟ ನಡೆಸುವುದು ನಮ್ಮ ದೇಹವನ್ನು ಕ್ರಿಯಾಶೀಲಗೊಳಿಸುತ್ತದೆ. ನಮ್ಮ ಮುಖದ ಸ್ನಾಯುಗಳು ಬಿಗಿ ಕಳೆದುಕೊಳ್ಳುತ್ತವೆ ಎಂದು ಶರೊನ್ ಶಾಲ್ಜ್‌ಬರ್ಗ್ ಹೇಳುತ್ತಾರೆ. ಆಕೆ, ಇನ್‌ಫಾರ್ಮ್ಸ್ ಬಿಸ್ನೆಸ್ ಇನ್‌ಸೈಡರ್‌ನ ರಿಯಲ್ ಹ್ಯಾಪಿನೆಸ್ ಅಟ್ ವರ್ಕ್ ಎಂಬ ಪುಸ್ತಕದ ಲೇಖಕಿ.

ಆರೋಗ್ಯಕಾರಿ ಆಹಾರ ಸೇವನೆ

‘ಉತ್ತಮ ಪಥ್ಯಕ್ರಮ ಪಾಲಿಸುವುದು ಮತ್ತು ಅತ್ಯುತ್ತಮ ಆಹಾರ ಸೇವನೆ ಮಾಡುತ್ತ ಇರುವುದರಿಂದ ಕೆಲಸದ ಸ್ಥಳದಲ್ಲಿ ನಿಮಗೆ ಹೆಚ್ಚು ಶಕ್ತಿ ದೊರಕುತ್ತದೆ. ಇದು ಉತ್ಪಾದಕತೆ ಹೆಚ್ಚಿಸಲು ನೆರವಾಗುತ್ತದೆ. ಹಾಗಂತ, ಹೊಟ್ಟೆ ಬಿರಿಯುವಂತೆ ತಿನ್ನಬೇಡಿ. ಆರೋಗ್ಯಕಾರಿ ಆಹಾರವನ್ನು ದೇಹಕ್ಕೆ ಸೇರಿಸುತ್ತ ಎನರ್ಜಿ ಹೆಚ್ಚಿಸಿಕೊಳ್ಳಿ’ ಎಂದು ಹೆಲ್ತ್ ಆಂಡ್ ನ್ಯೂಟ್ರಿಷಿಯನಲ್ ಸಲಹೆಗಾರರಾದ ಶಿರ್ಲೆ ವಿಯಾಸ್ ಹೇಳುತ್ತಾರೆ. ನಿಮ್ಮ ಊಟದಲ್ಲಿ ಮೊಸರು, ಶತಾವರಿ, ಜೇನು, ಚೆರ್ರಿ ಟೊಮೆಟೊ ಇರುವಂತೆ ನೋಡಿಕೊಳ್ಳಿ.

ಇದನ್ನೂ ಓದಿ  ಹ್ಯಾಕರ್‌ಗಳಿದ್ದಾರೆ ಎಚ್ಚರ

ಮಲ್ಟಿಟಾಸ್ಕ್ ಮಾಡಬೇಡಿ

ಒಂದೇ ಸಮಯದಲ್ಲಿ ಹಲವು ಕೆಲಸ ಮಾಡಬೇಡಿ. ‘ಮಲ್ಟಿ ಟಾಸ್ಕಿಂಗ್ ಮಾಡುವುದರಿಂದ ಅದು ಉಳಿಸುವ ಸಮಯಕ್ಕಿಂತ ಹೆಚ್ಚು ಸಮಯ ವ್ಯರ್ಥವಾಗುತ್ತದೆ’ ಎಂದು ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯ ಸೈಕಾಲಜಿ ಪ್ರೊಫೆಸರ್ ಕ್ಲೈಫೋಡ್ ನಾಸ್ ಹೇಳುತ್ತಾರೆ. ಈ ರೀತಿ ಮಾಡುವುದರಿಂದ ಏಕಾಗ್ರತೆ ಮತ್ತು ಕ್ರಿಯಾಶೀಲತೆಯೂ ಕುಂಠಿತವಾಗುತ್ತದೆ ಎಂದು ಅವರು ಹೇಳುತ್ತಾರೆ.

ಗುಡ್‌ ಮಾರ್ನಿಂಗ್‌ ಚಿತ್ರಗಳು ಇಲ್ಲಿವೆ.