Category Archives: ವಾಸ್ತುಶಾಸ್ತ್ರ

ವಾಸ್ತು ಪ್ರಕಾರ ಯಾವ ದಿಕ್ಕಿಗೆ ಮಲಗಬೇಕು? ನಿದ್ದೆಗೂ ಇದೆಯೇ ವಾಸ್ತು ನಿಯಮ?

By | 12/10/2021

ಹೊಸ ಮನೆಗೆ ಪ್ರವೇಶ ಮಾಡಿದ ಬಳಿಕ ಬೆಡ್‍ರೂಂನಲ್ಲಿ ಯಾವ ದಿಕ್ಕಿಗೆ ಬೆಡ್ ಜೋಡಿಸಬೇಕು? ಯಾವ ದಿಕ್ಕಿಗೆ ತಲೆಯಿಟ್ಟು ನಿದ್ದೆ ಮಾಡಬೇಕು? ಇತ್ಯಾದಿ ಗೊಂದಲಗಳು ಬಹುತೇಕರಲ್ಲಿ ಇರುತ್ತದೆ. ಸ್ಥಳಾವಕಾಶ ನೋಡಿಕೊಂಡು ಬೇಕಾಬಿಟ್ಟಿ ಬೆಡ್ ಜೋಡಿಸಿ ಮಲಗುವುದಕ್ಕಿಂತ ವಾಸ್ತುಪ್ರಕಾರ ಬೆಡ್ ಇಟ್ಟು, ಸರಿಯಾದ ದಿಕ್ಕಿಗೆ ತಲೆಯಿಟ್ಟು ಮಲಗುವುದು ಶ್ರೇಯಸ್ಕರ ಎಂದು ವಾಸ್ತುಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ ಎದ್ದು ಉಲ್ಲಾಸದಿಂದ ದಿನವನ್ನು ಆರಂಭಿಸಬೇಕಾದರೆ ರಾತ್ರಿಯ ನಿದ್ದೆ ಚೆನ್ನಾಗಿರಬೇಕು. ರಾತ್ರಿ ನಿದ್ರಾ ಹೀನತೆಯಿಂದ ಬಳಲುವವರು ತಮ್ಮ ಆರೋಗ್ಯದ ಸಮಸ್ಯೆ, ತಮ್ಮ ಕೆಲಸ ಕಾರ್ಯಗಳ ರೀತಿಯ ಜೊತೆಗೆ ಮಲಗುವ ದಿಕ್ಕಿನ… Read More »

ಲಾಫಿಂಗ್ ಬುದ್ಧನ ಮೂಲಕ ಮನೆ, ಆಫೀಸ್, ಬಿಸ್ನೆಸ್ ಸ್ಥಳಗಳಲ್ಲಿ ಸಮೃದ್ಧಿ, ಸಂತೋಷ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

By | 13/09/2021

ಸುದ್ದಿಜಾಲ ಫೆಂಗ್‍ಶುಯಿ ವಾಸ್ತು ಸಲಹೆ ಬಹಳಷ್ಟು ಜನರು ತಮ್ಮ ಬದುಕಿನ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಿಸಿಕೊಳ್ಳುವ ಸಲುವಾಗಿ ವಿವಿಧ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇವುಗಳು ತಮ್ಮ ಅದೃಷ್ಟವನ್ನು ಹೆಚ್ಚಿಸಬಹುದು ಎನ್ನುವ ನಂಬಿಕೆ. ವಾಸ್ತುಶಾಸ್ತ್ರ ಅಥವಾ ಫೆಂಗ್‍ಶುಯಿ ಪ್ರಕಾರವೂ ಕೆಲವೊಂದು ವಸ್ತುಗಳಿಗೆ ವಿಶೇಷ ಮಹತ್ವವಿದೆ. ಅವುಗಳಲ್ಲಿ ಲಾಫಿಂಗ್ ಬುದ್ಧನಿಗೆ ವಿಶೇಷ ಸ್ಥಾನ. ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ನಗುವ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. ಆಫೀಸ್, ಮನೆ, ಹೋಟೆಲ್, ರೆಸ್ಟೋರೆಂಟ್ ಮುಂತಾದ ಕಡೆ ಲಾಫಿಂಗ್ ಬುದ್ಧನ ಪುಟ್ಟ ಪ್ರತಿಮೆಯನ್ನು ಇಟ್ಟಿರುವುದನ್ನು… Read More »

ವಾಸ್ತು ಸಲಹೆ: ನಿಮ್ಮ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲಾಗಿದೆಯೇ?

By | 09/08/2021

ಸುದ್ದಿಜಾಲ.ಕಾಂನ ವಾಸ್ತುಸಲಹೆ ವಿಭಾಗದಲ್ಲಿ ಈಗಾಗಲೇ ಕೆಲವು ವಾಸ್ತು ಸಲಹೆ ನೀಡಲಾಗಿದ್ದು, ಇಂದು ಮನೆಯ ಮೆಟ್ಟಿಲಿನ ವಾಸ್ತು ಕುರಿತು ತಿಳಿದುಕೊಳ್ಳೋಣ. ಯಾವುದೇ ವಾಸ್ತು ಸಲಹೆ ಅನುಸರಿಸುವ ಮೊದಲು ವಾಸ್ತುತಜ್ಞರ ಅಭಿಪ್ರಾಯ ಕೇಳಲು ಮರೆಯಬೇಡಿ. ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಸುಖಶಾಂತಿ, ನೆಮ್ಮದಿಯ ಬದುಕಿಗೆ ವಾಸ್ತುವಿನ ಕೊಡುಗೆ ಅಪರೂಪ. ಮನೆಯೊಂದರ ಪ್ರವೇಶದ್ವಾರ, ಕೊಠಡಿಗಳ ವಾಸ್ತುವಿನ ಬಗ್ಗೆ ಸಾಮಾನ್ಯವಾಗಿ ಗಮನ ನೀಡುತ್ತಾರೆ. ಆದರೆ, ಕೆಲವೊಮ್ಮೆ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲು ಮರೆಯುತ್ತಾರೆ. ಮನೆಯ ಎಲ್ಲಾವಾಸ್ತು ಸಮಸ್ಯೆಗಳ ಮೂಲವೇ ಮೆಟ್ಟಿಲಿನಲ್ಲಿದೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ. ಹೀಗಾಗಿ,… Read More »

ಸಂತೋಷದ ಬದುಕಿಗೆ ಲಿವಿಂಗ್ ಕೊಠಡಿಯ ವಾಸ್ತು ಹೇಗಿರಬೇಕು?

By | 27/07/2021

ನಿಮ್ಮ ಮನೆಯಲ್ಲಿಸುಖ ಶಾಂತಿ ನೆಲೆಸಬೇಕಿದ್ದರೆ ಮನೆಯ ಸಂಪೂರ್ಣ ವಾಸ್ತು ಅತ್ಯುತ್ತಮವಾಗಿರಬೇಕು. ಅದರಲ್ಲಿಯೂ ಮನೆಯ ಲೀವಿಂಗ್‌ ರೂಂ ವಾಸ್ತು ಸರಿಯಾಗಿರಬೇಕು. ಲೀವಿಂಗ್‌ ರೂಂ ಹೇಗಿರಬೇಕು? ಯಾವ ದಿಕ್ಕಿನಲ್ಲಿರಬೇಕು? ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಾಸ್ತುಶಾಸ್ತ್ರದಲ್ಲಿಒಂದಿಷ್ಟು ನೀತಿನಿಯಮಗಳು ಇವೆ. ಈ ರೀತಿಯಿದ್ದರೆ ಮನೆಯಲ್ಲಿಸುಖ, ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳು ಉತ್ತಮವಾಗಿರುತ್ತವೆಯೆಂದು ವಾಸ್ತು ತಜ್ಞರುಗಳು ಹೇಳುತ್ತಾರೆ.