ವಾಸ್ತು ಸಲಹೆ: ನಿಮ್ಮ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲಾಗಿದೆಯೇ?

By | 09/08/2021

ಸುದ್ದಿಜಾಲ.ಕಾಂನ ವಾಸ್ತುಸಲಹೆ ವಿಭಾಗದಲ್ಲಿ ಈಗಾಗಲೇ ಕೆಲವು ವಾಸ್ತು ಸಲಹೆ ನೀಡಲಾಗಿದ್ದು, ಇಂದು ಮನೆಯ ಮೆಟ್ಟಿಲಿನ ವಾಸ್ತು ಕುರಿತು ತಿಳಿದುಕೊಳ್ಳೋಣ. ಯಾವುದೇ ವಾಸ್ತು ಸಲಹೆ ಅನುಸರಿಸುವ ಮೊದಲು ವಾಸ್ತುತಜ್ಞರ ಅಭಿಪ್ರಾಯ ಕೇಳಲು ಮರೆಯಬೇಡಿ.

ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಸುಖಶಾಂತಿ, ನೆಮ್ಮದಿಯ ಬದುಕಿಗೆ ವಾಸ್ತುವಿನ ಕೊಡುಗೆ ಅಪರೂಪ. ಮನೆಯೊಂದರ ಪ್ರವೇಶದ್ವಾರ, ಕೊಠಡಿಗಳ ವಾಸ್ತುವಿನ ಬಗ್ಗೆ ಸಾಮಾನ್ಯವಾಗಿ ಗಮನ ನೀಡುತ್ತಾರೆ. ಆದರೆ, ಕೆಲವೊಮ್ಮೆ ಮನೆಯ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲು ಮರೆಯುತ್ತಾರೆ. ಮನೆಯ ಎಲ್ಲಾವಾಸ್ತು ಸಮಸ್ಯೆಗಳ ಮೂಲವೇ ಮೆಟ್ಟಿಲಿನಲ್ಲಿದೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ. ಹೀಗಾಗಿ, ಮನೆ ಕಟ್ಟುವಾಗ ಮೆಟ್ಟಿಲನ್ನು ವಾಸ್ತು ಪ್ರಕಾರ ಕಟ್ಟಲು ಮರೆಯಬೇಡಿ.

yellow concrete house
Photo by Thgusstavo Santana on Pexels.com

ವಾಸ್ತು ಸಲಹೆ: ಮೆಟ್ಟಿಲಿನ ಮೂರು ಅಗತ್ಯ ಅಂಶಗಳು

ವಾಸ್ತುಶಾಸ್ತ್ರ ಪ್ರಕಾರ ಮೆಟ್ಟಿಲು ಇರುವ ಸ್ಥಳ, ಮೆಟ್ಟಿಲಿನ ಆಕಾರ ಮತ್ತು ಅವುಗಳ ಬಣ್ಣದ ಕುರಿತು ಹೆಚ್ಚಿನ ಗಮನ ನೀಡಬೇಕು. ಮೆಟ್ಟಿಲು ಸರಾಗವಾಗಿ ಏರುವಂತೆ ಇರಬೇಕು. ಹೆಚ್ಚು ದಣಿವು ಉಂಟು ಮಾಡಬಾರದು.

ವಾಸ್ತು ಸಲಹೆ: ಯಾವ ದಿಕ್ಕಿನಲ್ಲಿ ಮೆಟ್ಟಿಲರಬೇಕು?

exterior of residential house with green plants
Photo by Maria Orlova on Pexels.com

ಮೆಟ್ಟಿಲುಗಳು ಇಂತಹದ್ದೇ ದಿಕ್ಕಿನಲ್ಲಿ ಇದ್ದರೆ ಶ್ರೇಯಕರ ಎನ್ನಲಾಗುತ್ತದೆ. ಸರಿಯಾದ ದಿಕ್ಕಿನಲ್ಲಿಮೆಟ್ಟಿಲಿದ್ದರೆ ಮಾತ್ರ ಮನೆಯಲ್ಲಿರುವ ಸಮಸ್ತರ ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆಯೆಂದು ಹೇಳಲಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿಮೆಟ್ಟಿಲಿದ್ದರೆ ಶುಭಕರ. ಎಲ್ಲಾದರೂ ನಿಮಗೆ ಆಗ್ನೇಯ ದಿಕ್ಕಿನಲ್ಲಿಮೆಟ್ಟಿಲು ನಿರ್ಮಿಸುವ ಅವಕಾಶ ದೊರಕದೆ ಇದ್ದರೆ ದಕ್ಷಿಣ ದಿಕ್ಕು ಅಥವಾ ಪೂರ್ವ ದಿಕ್ಕಿನಲ್ಲಿಮೆಟ್ಟಿಲು ನಿರ್ಮಿಸಬಹುದು. ಪೂರ್ವದಿಂದ ಪಶ್ಚಿಮಕ್ಕೆ ಏರುವಂತೆ ಮೆಟ್ಟಿಲು ಇದ್ದರೆ ತುಂಬಾ ಒಳ್ಳೆಯದು ಎಂದು ವಾಸ್ತುತಜ್ಞರಾದ ಮಹೇಶ್ವರ ರಾವ್‌ ಅವರು ಸುದ್ದಿಜಾಲ.ಕಾಂಗೆ ಹೇಳಿದ್ದಾರೆ.

ಎಷ್ಟು ಮೆಟ್ಟಿಲಿರಬೇಕು? ಸಂಖ್ಯೆಯ ಮಹತ್ವ

ಸಮ ಸಂಖ್ಯೆಯಲ್ಲಿಮೆಟ್ಟಿಲಿರಬೇಕೋ ಅಥವಾ ಬೆಸ ಸಂಖ್ಯೆಯಲ್ಲಿಮೆಟ್ಟಿಲಿರಬೇಕೋ ಎಂಬ ಸಂದೇಹ ಬಹುತೇಕರಲ್ಲಿಇರುತ್ತದೆ. ಆದರೆ, ವಾಸ್ತು ಪ್ರಕಾರ ಮೆಟ್ಟಿಲುಗಳ ಒಟ್ಟು ಸಂಖ್ಯೆ ಬೆಸ ಸಂಖ್ಯೆಯೇ ಆಗಿರಬೇಕು.

ಮೆಟ್ಟಿಲಿನ ಕೆಳಗೆ ನೋಡಿ

photo of blooming pink flowers under tree branches
Photo by Olga Lioncat on Pexels.com

ಅಡುಗೆ ಕೋಣೆ, ಪೂಜೆ ಕೋಣೆ ಇರುವಲ್ಲಿಮೆಟ್ಟಿಲುಗಳು ಆರಂಭಗೊಳ್ಳದಂತೆ, ಕೊನೆಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಮೆಟ್ಟಿಲ ಕೆಳಗೆ ಈ ಕೋಣೆಗಳು ಬರದಂತೆ ಎಚ್ಚರವಹಿಸಬೇಕು. ಮೆಟ್ಟಿಲ ಕೆಳಭಾಗದಲ್ಲಿಯಾವುದೇ ವಸ್ತುಗಳನ್ನು ಇರಿಸಬಾರದು. ಕೆಲವರ ಮನೆಯ ಲಾಕರ್‌ ಮೆಟ್ಟಿಲ ಕೆಳಗಿನ ಕೋಣೆಯಲ್ಲಿಇರುತ್ತದೆ. ಈ ರೀತಿ ಇರದಂತೆ ನೋಡಿಕೊಳ್ಳಿ. ಅದೇ ರೀತಿ, ಕಸದ ಡಬ್ಬಿ, ಶೂ ರಾರ‍ಯಕ್‌ ಇತ್ಯಾದಿಗಳನ್ನು ಮನೆಯ ಮೆಟ್ಟಿಲ ಕೆಳಗೆ ಇರಿಸುವುದು ಅಮಂಗಳಕರ ಎನ್ನಲಾಗುತ್ತದೆ.

ಮೆಟ್ಟಿಲು ಯಾವ ಬಣ್ಣದಲ್ಲಿದೆ?

ಮೆಟ್ಟಿಲಿಗೆ ತಿಳಿಯಾದ ಬಣ್ಣದ ಬಳಕೆ ಸೂಕ್ತ. ಕಪ್ಪು ಅಥವಾ ಕೆಂಪು ಬಣ್ಣವನ್ನು ಮೆಟ್ಟಿಲಿಗೆ ಬಳಸಿದರೆ ಒಳಿತಾಗದು.

ಮೆಟ್ಟಿಲಿಗೆ ಹಾನಿಯಾಗಿದೆಯೇ?

young woman on stairs in modern building
Photo by Rachel Claire on Pexels.com

ಮೆಟ್ಟಿಲುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಮುರಿದ ಮೆಟ್ಟಿಲುಗಳು, ಹಾನಿಗೊಂಡ ಮೆಟ್ಟಿಲುಗಳು ಹತ್ತಲು ಅಥವಾ ಇಳಿಯಲು ಸುರಕ್ಷಿತವೂ ಅಲ್ಲ, ವಾಸ್ತು ಪ್ರಕಾರ ಸರಿಯೂ ಅಲ್ಲ. ಮೆಟ್ಟಿಲಿನ ಆರೋಗ್ಯ ಸರಿಯಿದ್ದರೆ ಮನೆಮಂದಿಯ ಆರೋಗ್ಯವೂ ಸರಿ ಇರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಮೆಟ್ಟಿಲುಗಳ ಅಂತರವೆಷ್ಟಿದೆ?

ಹಳಗೆಗಳನ್ನು ಅಥವಾ ಮಾರ್ಬಲ್‌ ಇತ್ಯಾದಿಗಳನ್ನು ಬಳಸಿ ಮೆಟ್ಟಿಲು ನಿರ್ಮಿಸಿರಬಹುದು. ವಾಸ್ತುಶಾಸ್ತ್ರದ ಪ್ರಕಾರ ಮೆಟ್ಟಿಲುಗಳ ಕೆಳಗೆ ಕತ್ತಲೆ ಇರಬಾರದು. ಮೆಟ್ಟಿಲುಗಳು ಕತ್ತಲೆಯಲ್ಲಿಇರಬಾರದು.  ಮೆಟ್ಟಿಲುಗಳ ಅಳತೆಯೂ ಸಮರ್ಪಕವಾಗಿರಬೇಕು.

ಮನೆಯವರ ಆರೋಗ್ಯಕ್ಕೂ ಮೆಟ್ಟಿಲಿಗೂ ಸಂಬಂಧವಿದೆ ಎನ್ನುತ್ತಾರೆ. ಹೀಗಾಗಿ ಮೆಟ್ಟಿಲನ್ನು ವಾಸ್ತುಪ್ರಕಾರವಾಗಿ ಕಟ್ಟಲು ಆದ್ಯತೆ ನೀಡಿ. ದೇವರ ಕೋಣೆ, ಅಡುಗೆ ಕೋಣೆ ಮುಂತಾದ ಕೋಣೆಯ ಮೇಲೆ ಅಥವಾ ಕೆಳಗೆ ಮೆಟ್ಟಿಲು ಬರದಂತೆ ಎಚ್ಚರವಹಿಸಿ. ಮೆಟ್ಟಿಲಿನ ಸಂಖ್ಯೆಯ ಬಗ್ಗೆಯೂ ಗಮನ ನೀಡಿ. 3, 5, 7 ಇತ್ಯಾದಿ ಬೆಸ ಸಂಖ್ಯೆಗಳಲ್ಲಿಮೆಟ್ಟಿಲನ್ನು ನಿರ್ಮಿಸಬೇಡಿ. ಮೆಟ್ಟಿಲನ್ನು ಹೇಗೆ ಬೇಕಾದರೂ ನಿರ್ಮಿಸಬಹುದು ಎಂಬ ಮನೋಭಾವ ಬೇಡ. ಮೆಟ್ಟಿಲು ಎನ್ನುವುದು ಕಡೆಗಣಿಸುವ ಸಂಗತಿಯಲ್ಲ. ಮೆಟ್ಟಿಲು ನಿರ್ಮಿಸುವಾಗ ಸುರಕ್ಷತೆಯ ಕಡೆಗೂ ಗಮನ ನೀಡಿರಿ. ಮನೆಯ ಹಿರಿಯರು, ಕಿರಿಯರು ಸೇರಿದಂತೆ ಎಲ್ಲರಿಗೂ ಏರಲು ಮತ್ತು ಇಳಿಯಲು ಸೂಕ್ತವಾಗುವಂತೆ ಇರಲಿ.

white concrete stairways outside the building
Photo by Scott Webb on Pexels.com

ಹೊಸ ಮನೆ ನಿರ್ಮಿಸುವಾಗ ಈ ಮೇಲಿನ ಅಂಶಗಳು ನೆನಪಿನಲ್ಲಿರಲಿ. ಇದು ಸುದ್ದಿಜಾಲ.ಕಾಂ ಆಶಯ.

Leave a Reply

Your email address will not be published. Required fields are marked *