ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಕಲಿಯಲು ಆಫ್ ಲೈನ್ ಟೂಲ್

ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ರಚನೆ ಮಾಡುವುದನ್ನು ಕಲಿಯಲು ಹಲವು ಸುಲಭ ಉಪಾಯಗಳಿವೆ. ಇವುಗಳಲ್ಲಿ ಕೆಲವು ನನಗೆ ತಿಳಿದಿವೆ. ಅವುಗಳಲ್ಲಿ ಒಂದು ಉಪಾಯವನ್ನು ಇಲ್ಲಿ ನೀಡುತ್ತಿದ್ದೇನೆ. ವರ್ಡ್ ಪ್ರೆಸ್ ವೆಬ್ ಸೈಟ್ ರಚಿಸಲು ಡೊಮೈನ್ ಹೆಸರು ಮತ್ತು ಹೋಸ್ಟಿಂಗ್ ಖರೀದಿಸಬೇಕು ಎಂದಿದ್ದೆ. ಆದರೆ, ನೀವು ಕಲಿಯುವ ಉದ್ದೇಶ ಹೊಂದಿದ್ದು, ಈಗಲೇ ಖರೀದಿಗೆ ಹಣ ನೀಡಲು ಬಯಸದೆ ಇದ್ದರೆ ಇಲ್ಲೊಂದು ಟೂಲ್ ಇದೆ. ಇದು ನಿಮಗೆ ನಿಜವಾದ ವರ್ಡ್ ಪ್ರೆಸ್ ವೆಬ್ ಸೈಟ್ ರಚನೆ ಅನುಭವವನ್ನೇ ನೀಡುತ್ತದೆ. ಜೊತೆಗೆ, ಇಲ್ಲಿ ನೀವು ನಿರ್ಮಿಸಿದ ವೆಬ್ ಸೈಟ್ ಅನ್ನು ಬಳಿಕ ನಿಮ್ಮ ಹೋಸ್ಟಿಂಗ್, ಡೊಮೈನ್ ಗೆ ಜೋಡಿಸಬಹುದು.

ಯಾಕೆ ಆಫ್ ಲೈನ್ ಟೂಲ್?

ಒಂದು ವೆಬ್ ಸೈಟ್ ವಿನ್ಯಾಸ ಮಾಡುವುದು ಎಂದರೆ ಸಾಕಷ್ಟು ಮಾರ್ಪಾಡುಗಳನ್ನು ಮಾಡುತ್ತಿರಬೇಕು. ಈ ರೀತಿ ಮಾಡುವಾಗ ಕೋಡಿಂಗ್, ಸಾಫ್ಟ್ ವೇರ್, ಪ್ರೋಗ್ರಾಂಗಳಲ್ಲಿ ಸಾಕಷ್ಟು ಏರುಪೇರಾಗುತ್ತದೆ. ನೀವು ಹೋಸ್ಟಿಂಗ್ ಖರೀದಿಸಿ ಅಲ್ಲಿಯೇ ವೆಬ್ ಸೈಟ್ ವಿನ್ಯಾಸ ಮಾಡಿದರೆ ವೆಬ್ ಸೈಟ್ ಕ್ರ್ಯಾಷ್ ಸಹ ಆಗಬಹುದು. ಇದರ ಬದಲು ನಿಮ್ಮ ಕಂಪ್ಯೂಟರ್ ನ ಡೆಸ್ಕ್ ಟಾಪ್ ನಲ್ಲಿ ವೆಬ್ ಸೈಟ್ ವಿನ್ಯಾಸ ಮಾಡಿ, ಪೂರ್ಣಗೊಂಡ ಬಳಿಕ ನಿಜವಾದ ಸರ್ವರ್ ಗೆ ಅಪ್ಲೋಡ್ ಮಾಡುವುದು ಸೂಕ್ತ. ವರ್ಡ್ ಪ್ರೆಸ್ ಕಲಿಕೆಗೂ ಇಂತಹ ಟೂಲ್ ಉಪಯೋಗಕಾರಿ.

ಏನಿದು ಟೂಲ್?

ನಾನು ಪರಿಚಯಿಸಲಿರುವ ಟೂಲ್ ಮೂಲಕ ವೆಬ್ ಸೈಟ್ ರಚಿಸಲು ಇಂಟರ್ನೆಟ್ ಬೇಕಿಲ್ಲ. ಹೋಸ್ಟಿಂಗ್ ಬೇಕಿಲ್ಲ. ಡೊಮೈನ್ ಹೆಸರು ಬೇಕಿಲ್ಲ. ಇದನ್ನು ನಿರ್ಮಿಸಿದ್ದು ಹನೀಫ್ ಪುತ್ತೂರು. ಇಂತಹ ಅನೇಕ ಟೂಲ್ ಗಳು ಇರಬಹುದು. ಆದರೆ, ನಾನು ಮಾತ್ರ ಕಲಿತಿರುವುದು ಇದರಲ್ಲಿ. ಹೀಗಾಗಿ, ನೀವೂ ಇದನ್ನೇ ಬಳಸಿ. ಬೇರೆ ಬಳಸಿದರೆ ಅದರ ಒಳಿತು ಕೆಡುಕು ಮಾಹಿತಿ ನನಗೆ ಗೊತ್ತಿಲ್ಲ.

ಮೊದಲಿಗೆ ಗಿತ್ ಹಬ್ ನಿಂದ ಪೋರ್ಟೆಬಲ್ ವರ್ಡ್ ಪ್ರೆಸ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿರಿ.

ಪೋರ್ಟೆಬಲ್ ವರ್ಡ್ ಪ್ರೆಸ್ ಫೀಚರ್ ಗಳು

  • ಯಾವುದೇ ಇನ್ ಸ್ಟಾಲ್ ಮಾಡುವ ಅಗತ್ಯವಿಲ್ಲ.
  • ಯಾವುದೇ ಡೇಟಾಬೇಸ್ ಕಾನ್ಫಿಗರ್ ಮಾಡಬೇಕಿಲ್ಲ.
  • ಇದನ್ನು ಯುಎಸ್ ಬಿ ಮೂಲಕವೂ ರನ್ ಮಾಡಬಹುದು, ಪೆನ್ ಡ್ರೈವ್ ನಲ್ಲಿಯೂ ಕೊಂಡೊಯ್ಯಬಹುದು.
  • ಸ್ಯಾಂಪಲ್ ವೆಬ್ ಸೈಟ್ ಕಂಟೆಂಟ್ ಸಹ ಲಭ್ಯವಿದೆ.
  • ಯಾವುದೇ ವೈರಸ್/ಸ್ಪೈವೇರ್ ಇಲ್ಲ
  • ಶೇಕಡ 100ರಷ್ಟು ಉಚಿತ. ಮುಕ್ತ ತಂತ್ರಾಂಶವಾಗಿದ್ದು, ಯಾರೂ ಬೇಕಾದರೂ ಡೌನ್ ಲೋಡ್ ಮಾಡಿ ಬಳಸಬಹುದು.

ಪೋರ್ಟ್ ಪ್ರೆಸ್ ಅನ್ನು ಹೇಗೆ ಡೌನ್ ಲೋಡ್ ಮಾಡುವುದು? ಯಾವ ರೀತಿ ಬಳಸುವುದು ಎಂಬ ಮಾಹಿತಿ ಇಲ್ಲಿದೆ. ಡೌನ್ ಲೋಡ್ ಮಾಡಿ ಕಲಿಯಿರಿ. download here

ನೆನಪಿಡಿ, ನೀವು ರಚಿಸಿದ ವೆಬ್ ಸೈಟ್ ನಿಮಗೆ ಮಾತ್ರ ಕಾಣಿಸುತ್ತದೆ. ಅಂದರೆ, ನಿಮ್ಮ ಕಂಪ್ಯೂಟರ್ ನಲ್ಲಿ ಮಾತ್ರ ಕಾಣಿಸುತ್ತದೆ. ಎಲ್ಲರಿಗೂ ಕಾಣಿಸಬೇಕಾದರೆ ಹೋಸ್ಟಿಂಗ್ ಮತ್ತು ಡೊಮೈನ್ ಗೆ ಜೋಡಿಸಬೇಕು.

ಇದು ವರ್ಡ್ ಪ್ರೆಸ್ ಕಲಿಕೆಗೆ ಅತ್ಯುತ್ತಮ ಟೂಲ್. ಇಲ್ಲಿ ನೀವು ನಿಮಗೆ ಬೇಕಾದ ಪ್ಲಗಿನ್, ಥೀಮ್ ಇತ್ಯಾದಿಗಳನ್ನು ಅಳವಡಿಸಿ, ನಿಮಗೆ ಬೇಕಾದಂತೆ ವೆಬ್ ಸೈಟ್ ರಚಿಸಿಕೊಳ್ಳಬಹುದು. ಪರಿಪೂರ್ಣ ವೆಬ್ ಸೈಟ್ ರಚನೆಯಾದ ಬಳಿಕ ಡೊಮೈನ್, ಹೋಸ್ಟಿಂಗ್ ಖರೀದಿಸಿದಾರಾಯ್ತು.

ಮುಂದಿನ ಪೋಸ್ಟ್: ವರ್ಡ್ ಪ್ರೆಸ್ ಇನ್ ಸ್ಟಾಲ್ , ಸೆಟ್ಟಿಂಗ್ ಇತ್ಯಾದಿ ವಿವರ

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಮುಖ್ಯ ಉಪಸಂಪಾದಕ (ಪ್ರಿನ್ಸಿಪಾಲ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯುಸರ್‌). ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ