ನಿಮ್ಮ ಬಿಸ್ನೆಸ್ ಅನ್ನು ಹೆಚ್ಚು ಜನರಿಗೆ ತಲುಪಿಸುವುದು ಹೇಗೆ?

By | 06/05/2021

ಪ್ರತಿಯೊಬ್ಬರೂ ಬಿಸ್ನೆಸ್‌ ಮೂಲಕ ಸ್ವಾವಲಂಬಿಯಾಗಲು ಬಯಸುತ್ತಾರೆ. ಸಣ್ಣ ಬಿಸ್ನೆಸ್‌ ಇರಲಿ, ದೊಡ್ಡ ಬಿಸ್ನೆಸ್‌ ಇರಲಿ, ಉದ್ಯಮಿಗಳಿಗೆ ಅವರದ್ದೇ ಆದ ಗೌರವ ಇರುತ್ತದೆ. ಊರಿನಲ್ಲಿ ಪುಟ್ಟ ಗೂಡಂಗಡಿ, ಚಹಾದಂಗಡಿ, ಜೆರಾಕ್ಸ್‌ ಅಂಗಡಿಯಿಂದ ದೊಡ್ಡ ಕಂಪನಿಗಳವರೆಗೆ ವಿವಿಧ ಬಗೆಯ ಬಿಸ್ನೆಸ್‌ ಮಾಡುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಎಲ್ಲಾ ಬಿಸ್ನೆಸ್‌ಗಳಿಗೂ ಪ್ರಮುಖ ಸಮಸ್ಯೆ ಮತ್ತು ಸವಾಲು ಎಂದರೆ ಹೆಚ್ಚು ಗ್ರಾಹಕರನ್ನು ತಲುಪುವುದು.

ಮೊದಲಾದರೆ ಆನ್‌ಲೈನ್‌ ಜಗತ್ತು ಈಗಿನಂತೆ ಇರಲಿಲ್ಲ. ನಿಜ ಹೇಳಬೇಕೆಂದರೆ ಆನ್‌ಲೈನ್‌ ಕಲ್ಪನೆಯೇ ಇರಲಿಲ್ಲ. ಪತ್ರಿಕೆ, ಟೀವಿ, ರೇಡಿಯೋ ಜಾಹೀರಾತುಗಳೇ ಗ್ರಾಹಕರನ್ನು ತಲುಪಲು ವೇದಿಕೆಗಳು ಆಗಿದ್ದವು. ಈಗ ಫೇಸ್‌ಬುಕ್‌ ಜಾಹೀರಾತು, ವಾಟ್ಸಪ್‌ ಸ್ಟೇಟಸ್‌, ಬಿಸ್ನೆಸ್‌ ಲಿಸ್ಟಿಂಗ್‌ಗಳೇ ನಿಮ್ಮ ವ್ಯವಹಾರವನ್ನು ಹೆಚ್ಚು ಗ್ರಾಹಕರನ್ನು ತಲುಪಲು ವೇದಿಕೆಗಳಾಗಿವೆ. ಇವುಗಳಲ್ಲಿ ಬಿಸ್ನೆಸ್‌ ಲಿಸ್ಟಿಂಗ್‌ ಎನ್ನುವುದು ಇತ್ತೀಚೆಗೆ ಹೆಚ್ಚು ಮಹತ್ವ ಪಡೆದುಕೊಂಡಿವೆ.

ಆನ್‌ಲೈನ್‌ನಲ್ಲಿ ಲಿಸ್ಟಿಂಗ್‌ ಮಾಡುವುದು ಯಾಕೆ?

ಯಾರಾದರೂ ಏನಾದರೂ ಸೇವೆ ಅಥವ ಪ್ರಾಡಕ್ಟ್‌ ಬೇಕಿದ್ದರೆ ಗೂಗಲ್‌ನಲ್ಲಿ ಹುಡುಕುತ್ತಾರೆ. ಆಗ ಅಲ್ಲಿ ಗೂಗಲ್‌ ಲಿಸ್ಟಿಂಗ್ ಮತ್ತು ಇತರೆ ಲಿಸ್ಟಿಂಗ್‌ ಮಾಹಿತಿಗಳು ಬರುತ್ತವೆ. ಉದಾಹರಣೆಗೆ ಬೆಂಗಳೂರಿನ ಬನಶಂಕರಿಯಲ್ಲಿ ಒಳ್ಳೆಯ ಟ್ರೇನಿಂಗ್‌ ಸೆಂಟರ್‌ ಎಲ್ಲಿದೆ ಎಂದು ಹುಡುಕುತ್ತಾರೆ ಎಂದಿರಲಿ. ಆಗ ತಕ್ಷಣ ಗೂಗಲ್‌ ವಿವಿಧ ಲಿಸ್ಟಿಂಗ್‌ ತಾಣದಲ್ಲಿದ್ದ ಮಾಹಿತಿಯನ್ನು ಹುಡುಕುವವರ ಮುಂದೆ ಇಡುತ್ತದೆ. ನಿಮ್ಮ ಬಿಸ್ನೆಸ್‌ ಲಿಸ್ಟ್‌ ಆಗಿದ್ದರೆ ಗ್ರಾಹಕರು ನಿಮ್ಮ ಬಿಸ್ನೆಸ್‌ ಮಾಹಿತಿ ಪಡೆಯುತ್ತಾರೆ. ನಿಮಗೆ ಆ ಗ್ರಾಹಕರಿಂದ ಕರೆಯೂ ಬರಬಹುದು ಅಥವಾ ನಿಮ್ಮ ಬಿಸ್ನೆಸ್‌ ಹುಡುಕಿಕೊಂಡು ನಿಮ್ಮಲ್ಲಿಗೇ ಗ್ರಾಹಕರು ಬರಬಹುದು.

ಆನ್‌ಲೈನ್‌ನಲ್ಲಿ ಬಿಸ್ನೆಸ್‌ ಲಿಸ್ಟಿಂಗ್‌ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಆರಂಭದ ಕೆಲವು ತಿಂಗಳು ಉಚಿತ ನೀಡಿ ಆಮೇಲೆ ಪ್ರೀಮಿಯಂ ದರ ವಿಧಿಸುವ ಲಿಸ್ಟಿಂಗ್‌ ಕಂಪನಿಗಳು ಸಾಕಷ್ಟಿವೆ. ಕರ್ನಾಟಕದ ಜನರಿಗೆ ಕರ್ನಾಟಕ ಬಿಜ್‌ ಮೂಲಕ ಲಿಸ್ಟ್‌ ಮಾಡುವ ಅವಕಾಶವಿದೆ. ಕರ್ನಾಟಕ ಬಿಜ್‌ಗೆ ತೆರಳಿ ಅಲ್ಲಿ ಸಬ್‌ಮಿಟ್‌ ಲಿಸ್ಟಿಂಗ್‌ ಎಂದಿರುವಲ್ಲಿ ಕ್ಲಿಕ್‌ ಮಾಡಬೇಕು. ನಂತರ ನಿಮ್ಮ ಬಿಸ್ನೆಸ್ ಮಾಹಿತಿ, ಫೋನ್‌ ನಂಬರ್‌, ಸೋಷಿಯಲ್‌ ಮೀಡಿಯಾ ಲಿಂಕ್ಸ್‌, ವಿಳಾಸ ಇತ್ಯಾದಿಗಳನ್ನು ನೀಡಬೇಕು.

ಉಪಯುಕ್ತ ಟಿಪ್ಸ್‌: ಸಾಧ್ಯವಿರುವಷ್ಟು ವಿವರವಾಗಿ ನಿಮ್ಮ ಬಿಸ್ನೆಸ್‌ ಮಾಹಿತಿ ಬರೆದರೆ ಹೆಚ್ಚು ಪ್ರಯೋಜನ ಪಡೆಯಬಹುದು. ಗೂಗಲ್‌ ಅಥವಾ ಇತರೆ ಸರ್ಚ್‌ ಎಂಜಿನ್‌ಗಳಲ್ಲಿ ನಿಮ್ಮ ಬಿಸ್ನೆಸ್‌ ಮಾಹಿತಿ ದೊರಕಬಹುದು.

ನೆನಪಿಡಿ: ಕರ್ನಾಟಕ ಬಿಜ್‌ನಲ್ಲಿ ಲಿಸ್ಟ್‌ ಮಾಡಿದ ತಕ್ಷಣ ನಿಮಗೆ ಫಲಿತಾಂಶ ದೊರಕುವುದಿಲ್ಲ. ಆ ಪುಟದಲ್ಲಿ ನೀವು ನೀಡಿದ ಮಾಹಿತಿಯು ಯಾವಾಗ ಬೇಕಾದರೂ ಗೂಗಲ್‌ ಸರ್ಚ್‌ನಲ್ಲಿ ದೊರಕಬಹುದು ಅಥವಾ ಕರ್ನಾಟಕ ಬಿಜ್‌ನ ಸೋಷಿಯಲ್‌ ಮೀಡಿಯಾಗಳ ಮೂಲಕ ಜನರನ್ನು ತಲುಪಬಹುದು.

ಕರ್ನಾಟಕ ಬಿಜ್‌ನಲ್ಲಿ ಲಿಸ್ಟ್‌ ಆದ ಬಿಸ್ನೆಸ್‌ಗಳ ಕೆಳಗೆ ಗ್ರಾಹಕರು ವಿಮರ್ಶೆ ಬರೆಯುವ ಅವಕಾಶವಿದೆ. ರೇಟಿಂಗ್‌ ಸಹ ನೀಡಬಹುದು. ಬಳಕೆದಾರರಿಗೆ ನಿಮ್ಮ ಸಂಸ್ಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಇಂತಹ ವಿಮರ್ಶೆಗಳು, ರೇಟಿಂಗ್‌ಗಳು ಸಹಕರಿಸುತ್ತವೆ.

ನೀವು ಯಾವುದೇ ಬಗೆಯ ಬಿಸ್ನೆಸ್‌ ಹೊಂದಿರಿ. ಅದನ್ನು ತಪ್ಪದೇ ಕರ್ನಾಟಕ ಬಿಜ್‌ನಲ್ಲಿ ಲಿಸ್ಟ್‌ ಮಾಡಿ.

ಕರ್ನಾಟಕ ಬಿಜ್‌ನಲ್ಲಿ ನಿಮ್ಮ ಬಿಸ್ನೆಸ್‌ ಲಿಸ್ಟಿಂಗ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬಿಸ್ನೆಸ್‌ಗೆ ಸ್ವಂತ ವೆಬ್ಸೈಟ್‌ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *